ಹನುಮಂತ. ಮ. ದೇಶಕುಲಕರ್ಣಿ
ಪೂಜ್ಯ ಸ್ಥಾನದಲ್ಲಿರುವ ಎತ್ತುಗಳೇ ಸ್ವಾಮಿಗಳ ರೂಪದಲ್ಲಿ, ಮೂಕಪ್ಪ ಸ್ವಾಮಿ ಎಂಬ ಹೆಸರಿಗೆ ಭಾಜನರಾಗಿ, ಭಕ್ತರ
ಮನೋಗತಗಳನ್ನು ಈಡೇರಿಸುವ ವಿಸ್ಮಯವನ್ನು ಗುಡ್ಡದ ಮಲ್ಲಾಪುರದಲ್ಲಿ ಇಂದಿಗೂ ಕಾಣಬಹುದು.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ಶ್ರೀ ಶೈಲ ಸೂರ್ಯ ಸಿಂಹಾಸನಾ ಶಾಖಾ ಕರ್ತೃ ಗುರು ಹುಚ್ಚೇಶ್ವರ ಸ್ವಾಮಿಗಳು ಸ್ಥಾಪಿಸಿದ ಮಠಕ್ಕೆ ಮೂಕಪ್ಪ ಮಹಾಸ್ವಾಮಿಗಳು (ಬಸವ ಅಥವಾ ಎತ್ತು) ನೇ ಪೀಠಾದೀಪತಿ ಎಂದರೆ ವಿಸ್ಮಯ
ಎನಿಸಬಹುದು. ಆದರೆ ಇದು ನಿಜ.
ಈ ಮಠದಲ್ಲಿ ಸ್ಥಿರ ಮತ್ತು ಚರ ಎಂಬೆರಡು ಪಟ್ಟಗ ಳೊಂದಿಗೆ ಬಸವಣ್ಣನವರು ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ವಿಶೇಷ. ನಿಸರ್ಗದ ನಡುವೆ ಇರುವ ಗುಡ್ಡದ ಮಲ್ಲಾಪೂರದಲ್ಲಿ ನೆಲೆನಿಂತ ಶ್ರೀ ಮೂಕಪ್ಪ ಮಹಾಸ್ವಾಮಿಗಳು ಹಾಗೂ ಕತೃ ಹುಚ್ಚೇಶ್ವರರು ಮತ್ತು ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ಈ ಗ್ರಾಮದ ಆರಾದ್ಯ ದೈವ. ಮೂಕಪ್ಪ ಮಹಾಸ್ವಾಮಿಗಳು ಹಾಗೂ ಕತೃ ಹುಚ್ಚೇಶ್ವರ ದೇವಸ್ದಾನದಲ್ಲಿ ಪ್ರತಿ ದಿನವು ದಾಸೋಹ ನಡೆಯುವುದು. ವೃಷಭಗಳು (ಎತ್ತುಗಳು) ಸಮಾಜದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸು ತ್ತವೆ ಎನ್ನುವುದು ಎಂತಹವರಿಗೂ ಸೋಜಿಗದ ವಿಷಯ.
ಆದರೆ ಅವುಗಳ ಪ್ರಯತ್ನದ ಫಲವಾಗಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ಸ್ಥಾಪಿತವಾದ ದಾಸೋಹ ಮಠವೊಂದ ರಲ್ಲಿ, ಪವಾಡ ಸದೃಶ ರೀತಿಯಲ್ಲಿ ನಿತ್ಯ ಅನ್ನದಾಸೋಹ ಮುಂತಾದ ಧಾರ್ಮಿಕ ಪರಂಪರೆ ಶತಮಾನಗಳಿಂದ
ನಡೆಯು ತ್ತಿದೆ.
ನಾಲ್ಕು ಶತಮಾನಗಳ ಇತಿಹಾಸ
ಸುಮಾರು 400 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ರಾಯಚೋಟಿ ಗ್ರಾಮದಲ್ಲಿ ಶ್ರೀಶೈಲ ಶಾಖಾ ಹಿರೇಮಠದ ಮಲ್ಲಯ್ಯ ಮತ್ತು ಪಾರ್ವತಮ್ಮ ಎಂಬ ದಂಪತಿಗಳಿಗೆ ಹುಚ್ಚಪ್ಪ ಎಂಬವರು ಜನಿಸಿದರು. 8ನೇ ವಯಸ್ಸಿನಲ್ಲಿಯೇ ಧರ್ಮದೀಕ್ಷೆ ಪಡೆದು ಮಲ್ಲಿಕಾರ್ಜುನ ಶಿವಾಚಾರ್ಯರಲ್ಲಿ ಅಭ್ಯಾಸ ನಡೆಸಿದರು.
ಬಳಿಕ ಲೋಕಕಲ್ಯಾಣಕ್ಕಾಗಿ ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿ ಪಡೆದ ಶ್ರೀಗಳು ಧರ್ಮ ಜಾಗೃತಿ ಉದ್ದೇಶದಿಂದ
ದೇಶ ಸಂಚಾರ ಆರಂಭಿಸಿದರು. ಅಂತಿಮವಾಗಿ ಗುಡ್ಡದ ಮಲ್ಲಾಪುರ ಗ್ರಾಮದ ಗುಹೆಯಲ್ಲಿ ನೆಲೆಯೂರಿದ ಶ್ರೀಗಳು ಜನಸಾಮಾ ನ್ಯರ ಸಂಕಷ್ಟಗಳನ್ನು ಪರಿಹರಿಸಲು ಪ್ರಾರಂಭಿಸಿದರು.
ಎತ್ತುಗಳ ಕೈಂಕರ್ಯ
ಗುರು ಹಚ್ಚೇಶ್ವರು ಬಾಹ್ಯ ಪ್ರಪಂಚದ ಅರಿವಿಲ್ಲದಂತೆ ಧ್ಯಾನಾಸಕ್ತರಾದ್ದರಿಂದ ಹುಚ್ಚಪ್ಪ ಎಂಬ ಪಟ್ಟವನ್ನು ಪಡೆದರು. ತಮ್ಮ ಜೊತೆ ಶ್ರೀಶೈಲಕ್ಕೆ ಹೋಗುವಾಗ ಅವರ ಪೂಜಾ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಕಂಟಲೆ ಎತ್ತುಗಳನ್ನು ಬಳಸುತ್ತಿದ್ದರು. ತಮ್ಮ ಸಂಚಾರಕ್ಕೆ ಬಸವನ ಮೇಲೇರಿ ಸಂಚರಿಸುತ್ತಿದ್ದರು. ದೇಹ ಬಿಡುವ ಮುನ್ನ ಜೀವಂತ ಸಮಾಧಿಯಾಗಲು ನಿರ್ಧರಿಸಿದ ಶ್ರೀಗಳು ತಮ್ಮ ಜತೆಯಲ್ಲಿದ್ದ ವೃಷಭಗಳಿಗೆ (ಕಂಟಲೆ ಬಸವಣ್ಣ) ಕರ್ಣದಲ್ಲಿ ಷಟ್‌ಸ್ಥಲ ಬ್ರಹ್ಮೋಪದೇಶದೊಂದಿಗೆ ಗುರು ದೀಕ್ಷೆ ನೀಡುವ ಮೂಲಕ ಉತ್ತರಾಧಿಕಾರದ ಧರ್ಮದಂಡವನ್ನು ನೀಡಿರುವುದಾಗಿ ಪ್ರತೀತಿ.
ತಮ್ಮೆರಡು ‘ಕಂಟಲೆ ಬಸವನ‘ ಮೇಲೇರಿ ಸುತ್ತಲಿನ ಗ್ರಾಮಗಳಿಗೆ ಸಂಚರಿಸಿ ಭಕ್ತರು ನೀಡಿದ ಕಾಣಿಕೆಯಿಂದ ಮಠದಲ್ಲಿ ಮಹಾ ದಾಸೋಹವನ್ನು ಆರಂಭಿಸಿದರು. ತಪಸ್ವಿ ಅಜ್ಜಯ್ಯಸ್ವಾಮಿ ನಂತರ ಹುಚ್ಚೇಶ್ವರ ಶಿವಯೋಗಿಗಳಾಗಿ ಜೀವಂತ ಸಮಾಧಿಯಾ
ದರು. ಇದಕ್ಕಿಂತ ಮೊದಲು ತಮ್ಮೊಂದಿಗಿದ್ದ ಕಂಟಲೆ ಬಸವನಿಗೆ ಕರ್ಣದಲ್ಲಿ ಶಟಸ್ಥಲ ಬ್ರಹ್ಮೋಪದೇಶ ಹಾಗೂ ದೀಕ್ಷಾ ಸಂಸ್ಕಾರ ವನ್ನು ನೀಡಿ ತಮ್ಮ ಉತ್ತರಾಧಿಕಾರಿತ್ವದ ಧರ್ಮದಂಡವನ್ನು ನೀಡಿದರು. ಹೀಗಾಗಿ ಜಗತ್ತಿನ ಬೇರೆಲ್ಲೂ ಕಾಣದ ಒಂದು ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದಂತಾಗಿದೆ.
ಅಂದಿನಿಂದಲೂ ವೃಷಭಮೂರ್ತಿಗಳಾದ ಮೂಕಪ್ಪ ಶಿವಯೋಗಿಗಳು ಈ ಕ್ಷೇತ್ರದ ಅಧಿಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಿಕ್ಷೆಯ ಜೋಳಿಗೆಯಿಂದ ಸಂಗ್ರಹಿಸಿದ ಧಾನ್ಯಗಳಲ್ಲಿ ನಿತ್ಯದಾಸೋಹ ನಡೆಯುತ್ತಿದೆ.
ವೃಷಭರೂಪಿ ಶಿವಯೋಗಿ
‘‘ಮೂಕಪ್ಪ ಶಿವಯೋಗಿ’’ಗಳು ಯಾವುದೇ ಧರ್ಮ ಹಾಗೂ ಜಾತಿಯನ್ನದೆ ಗೋಗರ್ಭದಲ್ಲಿ ಜನ್ಮತಾಳಿದ ಕರು ತಾಯಿಯ ಹಾಲು ಸೇವಿಸದೆ ಇರುತ್ತದೆ ಎನ್ನಲಾಗಿದೆ. ನವಜಾತ ಕರು ತಾಯಿ ಹಾಲು ಸ್ವೀಕರಿಸದಿರುವ ಕರುವೇ ಸಾಕ್ಷಾತ್ ಮೂಕಪ್ಪ ಶಿವಯೋಗಿ ಗಳು. ವಿಸ್ಮಯವೆಂದರೆ 8 ರಿಂದ 10 ದಿನಗಳ ಕಾಲ ಹಾಲನ್ನು ಕುಡಿಯದೇ ಇದ್ದರೂ ಕರು ಮೂತ್ರ ವಿಸರ್ಜನೆಯನ್ನು ಮಾಡು ತ್ತದೆ!.
ಇಂತಹ ಸುದ್ದಿ ಪಡೆವ ಧರ್ಮಾಧಿಕಾರಿಗಳು ಅಲ್ಲಿಗೆ ತೆರಳಿ ಪೂಜಾ ವಿಧಿವಿಧಾನಗಳ ನಡೆಸಿದ ಬಳಿಕವೇ ಕರು ಹಾಲು ಸೇವಿಸು
ತ್ತದೆ. ಕೆಲ ದಿನಗಳ ಬಳಿಕ ಕರುವಿನ ರೂಪದಲ್ಲಿರುವ ಮೂಕಪ್ಪ ಸ್ವಾಮಿಗಳನ್ನು ಶ್ರೀಮಠಕ್ಕೆ ಕರೆತಂದು ಪಟ್ಟಾಭಿಷೇಕ ಮಾಡಲಾ ಗುತ್ತದೆ. ದಿನನಿತ್ಯ ಮೂಕಪ್ಪ ಶಿವಯೋಗಿಗಳು ತ್ರಿಕಾಲಪೂಜೆಯ ಬಳಿಕ ಪ್ರಸಾದ ಸ್ವೀಕರಿಸುವುದು ವಾಡಿಕೆ. ಈ ಪರಂಪರೆ ಇಂದಿಗೂ ನಡೆದು ಬಂದಿದೆ. ಮಠವು ಸರ್ವಧರ್ಮಗಳ ಸಂಗಮವಾಗಿದೆ.
ಈ ಹಿಂದಿನ ಮೂಕಪ್ಪ ಸ್ವಾಮಿಗಳ ನಂತರ (ಅವರು 20.3.2020ರಂದು ಸ್ವರ್ಗಸ್ಥರಾದರು) ಈಗ ಹೊಸದಾಗಿ ಇಬ್ಬರು ಬಸವಣ್ಣ ನವರನ್ನು ನೇಮಕ ಮಾಡಲಾಗುತ್ತದೆ. ಹೊಸದಾಗಿ ಇಂಥ ಪವಾಡ ವೆಸಗುವ ಬಸವಣ್ಣನೇ ಇಲ್ಲಿ ಪೀಠಾಧಿಕಾರಿ. ಇಲ್ಲಿಯವರೆಗೆ 35 ಸ್ವಾಮಿಗಳ ನೇಮಕ ಮಾಡಲಾಗಿದೆ.
ಪ್ರತಿವರ್ಷ ಇಲ್ಲಿ ಶಿವರಾತ್ರಿಯಾದ ನಂತರ ಷಪ್ಠಿ ತಿಥಿಯಿಂದ ಸಪ್ತಮಿಯವರೆಗೆ ರಥೋತ್ಸವ ನಡೆಯುತ್ತದೆ. ಇಲ್ಲಿ ಪ್ರತಿ ಅಮವಾಸ್ಯೆಯಂದು ಸಂತಾನ ಭಾಗ್ಯ ಬೇಕಾದವರಿಗೆ ಮೂಕಪ್ಪ ಸ್ವಾಮಿಗಳು ಬೆನ್ನ ಮೇಲೆ ಕಾಲಿಟ್ಟು ಆಶಿರ್ವಾದ ಮಾಡುತ್ತಾರೆ.
11 ಅಮವಾಸ್ಯೆ ನಡೆದುಕೊಂಡರೆ ಮಕ್ಕಳಾಗುತ್ತವೆ ಮತ್ತು ಕನ್ಯೆಯರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆ. ಕೆಲವು ಭಕ್ತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ದರ್ಶನ ಭಾಗ್ಯ ಪಡೆಯುವ ಪದ್ಧತಿಯು ಇದೆ. ವಿಜಯದಶ ಮಿಯಂದು
ಬನ್ನಿ ಮಹಾಕಾಳಿ ಪೂಜೆಯನ್ನು ಮೂಕಪ್ಪ ಸ್ವಾಮಿಗಳ ನೇತೃತ್ವದಲ್ಲಿ ಮಾಡಲಾಗುತ್ತದೆ. ಎಲ್ಲ ಜನರು ಪ್ರಥಮ ಬನ್ನಿಯನ್ನು ಮೂಕಪ್ಪ ಸ್ವಾಮಿಗಳ ಪಾದಕ್ಕೆ ಇಟ್ಟು ಆಶಿರ್ವಾದ ಪಡೆಯುವರು.
ಹಲವು ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಮೂಕಪ್ಪ ಸ್ವಾಮಿಗಳು ಕಲಿಯುಗದ ದೇವರಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವ ದೈವರಾಗಿದ್ದಾರೆ. ಸಾಕ್ಷಾತ್ ಭಗವಂತನೇ ಧರೆಗಿಳಿದಂತೆ ಮೂಕಪ್ಪ ದೇವರನ್ನು ಈ ಭಾಗದ ಜನತೆ ಆರಾಧಿಸುವುದು ಶತಮಾನ ಗಳಿಂದ ಮುಂದುವರಿದುಕೊಂಡು ಬಂದಿದೆ.
ಎತ್ತುಗಳ ಸಂಚಾರಿ ಕೈಂಕರ್ಯ
ವಿಶ್ವದಲ್ಲೇ ವಿಶಿಷ್ಟ ಎನಿಸಿರುವ ಈ ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದ ಮೂಕಪ್ಪ ಶಿವಯೋಗಿಗಳು (ಎತ್ತುಗಳು) ಮಠದಲ್ಲಿ ನಿತ್ಯ ಅನ್ನದಾಸೋಹ ಆರಂಭಿಸಿದರು. ಭಕ್ತರ ಮನೆಯಲ್ಲಿ ತಂಗುವ ಶ್ರೀಗಳು (ಎತ್ತುಗಳು) ಅವರ ಇಷ್ಟಾರ್ಥಗಳನ್ನು ಈಡೇರಿಸಿ ಸಂಕಷ್ಟ ಪರಿಹರಿಸುತ್ತಾರೆ. ಅವರು ನೀಡುವ ಕಾಣಿಕೆಯಿಂದ ಅನ್ನದಾಸೋಹ ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗಾಗಿ ರಾಜ್ಯದಲ್ಲಷ್ಟೇ ಅಲ್ಲ, ಸಮೀಪದ ಆಂಧ್ರ, ಗೋವಾ, ಮಹಾ ರಾಷ್ಟ್ರ ಹಾಗೂ ಕೇರಳಗಳಲ್ಲಿಯೂ ಭಕ್ತ ಸಮೂಹವನ್ನು ಶ್ರೀಗಳು ಹೊಂದಿದ್ದಾರೆ.