Thursday, 21st November 2024

ಇಷ್ಟಲಿಂಗದ ಮಹತ್ವ

ಮಾಲಾ ಅಕ್ಕಿಶೆಟ್ಟಿ

ಈ ಜಗತ್ತಿಿನ ಸದ್ಗುರುಗಳು, ವಿದ್ವಾಾಂಸರು, ದಾರ್ಶನಿಕರು ಹೇಳಲು ಯತ್ನಿಿಸಿರುವ ತತ್ತ್ವಾದರ್ಶಗಳನ್ನು ತನ್ನ ಒಂದು ವಚನದಲ್ಲಿಯೇ ಹಿಡಿದಿಟ್ಟಿಿರುವ ಸಾಮರ್ಥ್ಯ ಹೊಂದಿದದವರು, ಸಮಾಜೋದ್ಧಾಾರಕ ವಿಶ್ವ ಗುರು ಬಸವಣ್ಣ. ಅದಕ್ಕೆೆಂದೇ ಬಸವಣ್ಣನವರ ಈ ವಚನ ವಿಶ್ವಪ್ರಸಿದ್ಧ.

ಕಳಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ,
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಿಸಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿಿ, ಇದೇ ಬಹಿರಂಗ ಶುದ್ಧಿಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವಪರಿ….

ಕದಿಯಬೇಡ, ಕೊಲ್ಲಬೇಡ,ಸುಳ್ಳು ಮಾತನಾಡಬೇಡ, ಸಿಟ್ಟಾಾಗಬೇಡ,ಅನ್ಯರಿಗೆ ಅಸಹ್ಯಮಾಡಬೇಡ, ನಿನ್ನನ್ನೇ ಹೋಗಲಿಕೊಳ್ಳಬೇಡ, ಮತ್ತೊೊಬ್ಬರನ್ನು ಜರಿಯಬೇಡ, ಇದೇ ಅಂತರಂಗ ಶುದ್ಧಿಿ ಹಾಗೂ ಬಹಿರಂಗ ಶುದ್ಧಿಿ ಎಂದ ಬಸವಣ್ಣನ ಈ ಮಾತುಗಳಲ್ಲಿ ಜೀವನದ ಯಾವ ಮೌಲ್ಯಗಳು ಇಲ್ಲ ಹೇಳಿ. ಈ ಒಂದೇ ಒಂದು ವಚನ ಸಾಕು ಬಸವಣ್ಣನ ಸಾಮಾಜಿಕ ಉದ್ಧಾಾರದ ಕಳಕಳಿಯನ್ನು ಮನಗಾಣಲು. ಹುಟ್ಟಿಿನಿಂದ ಸಾಯುವವರೆಗೆ ಅಳವಡಿಸಿಕೊಳ್ಳಬೇಕಾದ ಅತಿ ಮುಖ್ಯವಾದ ಮಾನವೀಯ ವೌಲ್ಯಗಳನ್ನು ಬಸವಣ್ಣ ಈ ವಚನದಲ್ಲಿ ಸಾರುತ್ತಾಾನೆ. ಇದೊಂದೇ ಸಾಕು ಬಸವಣ್ಣನ ಗಣ ವ್ಯಕ್ತಿಿತ್ವ ಮತ್ತು ವೆಚಾರಿಕತೆಯನ್ನು ತೂಗಿ ತೂಗಿ ನೋಡಲು. ಎಲ್ಲರ ಏಳ್ಗೆೆಯನ್ನು ಬಯಸಿದ ಶರಣರು ತಮ್ಮ ಜೀವನದ ಅನುಭವಗಳನ್ನೇ ಬಂಡವಾಳ ಮಾಡಿಕೊಂಡು ಬಸವಣ್ಣನ ನೇತೃತ್ವದಲ್ಲಿ ವಚನಗಳು ಎಂಬ ರೂಪ ಕೊಟ್ಟು ಶರಣ ಸಂವಿಧಾನವನ್ನು ಮನುಕುಲಕ್ಕೆೆ ನೀಡಿದರು.

ಧರ್ಮ ಎಂಬುದು ಮಾನವನ ಅವಶ್ಯಕತೆಗಳಲ್ಲಿ ಒಂದು ಎಂದು ಮನಗಂಡ ಬಸವಣ್ಣ ತನ್ನ ಒಳಿತನ್ನಷ್ಟೇ ಬಯಸದೇ ಇಡೀ ಸಮಾಜದ ಒಳಿತನ್ನು ಬಯಸಿದರು. ಸಾಮಾನ್ಯ ವ್ಯಕ್ತಿಿಯೂ ಸಹ ಆಧ್ಯಾಾತ್ಮಿಿಕ ಅನುಭವಗಳನ್ನು ಪಡೆಯುವ ಸಕಲ ಅನುಕೂಲಗಳನ್ನು ಮಾಡಿಕೊಡಲು ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಸಕಲ ಚರಾಚರಗಳ ಅಭಿವೃದ್ಧಿಿ ಅದರ ಧ್ಯೇಯ ವಾಕ್ಯವಾಗಿತ್ತು. ಅಷ್ಟಾಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಾಕ್ಷಿ, ಮಂತ್ರ,ಪ್ರಸಾದ, ಪಾದೋದಕ, ಷಟ್ ಸ್ಥಲಗಳಾದ ಭಕ್ತಸ್ಥಲ, ಮಹೇಶಸ್ಥಲ, ಪ್ರಸಾದಿಸ್ಥಲ, ಪ್ರಾಾಣಲಿಂಗಿಸ್ಥಲ, ಶರಣಸ್ಥಲ, ಐಕ್ಯಸ್ಥಲ, ಹಾಗೂ ಪಂಚಾಚಾರ, ಲಿಂಗಾಚಾರ, ಸದಾಚಾರ, ಶಿವಾಚಾರ ಗಣಾಚಾರ ಮತ್ತು ಭೃತ್ಯಾಾಚಾರಗಳು ಪ್ರತಿ ಲಿಂಗಾಯತನೂ ಅನುಸರಿಸಬೇಕಾದ ಜೀವಾಳಗಳು ಎಂದಿದ್ದಾರೆ ಬಸವಣ್ಣನವರು.

ಸಾಕಾರ ರೂಪವಾದ ಇಷ್ಟಲಿಂಗವು ನಿರಾಕಾರವಾದ ಶಿವನನ್ನು ಒಲಿಸಿಕೊಳ್ಳಲಿಕ್ಕೆೆ ಒಂದು ಮಾರ್ಗ ಹಾಗೂ ಪ್ರತಿಯೊಬ್ಬ ಲಿಂಗಾಯತ ಇಷ್ಟಲಿಂಗವನ್ನು ಧರಿಸಿ ಪೂಜಿಸಬೇಕೆಂದು ಬಸವಣ್ಣನ ಒತ್ತಾಾಸೆಯಾಗಿತ್ತು. ಇಷ್ಟಲಿಂಗದಲ್ಲಿ ಬ್ರಹ್ಮಾಾಂಡವೇ ಅಡಗಿದೆ ಮತ್ತು ಅದರ ಪೂಜೆಯು ಮನಸ್ಸಿಿನ ಏಕಾಗ್ರತೆಯನ್ನು ಸೂಚಿಸುತ್ತದೆ. ಇದು ದೃಷ್ಟಿಿ ಯೋಗವನ್ನು ಹೊಂದಿದ್ದು, ಇಂದಿನ ವಿಜ್ಞಾನ ಒಪ್ಪುುತ್ತದೆ. ಇಷ್ಟಲಿಂಗದ ನಿರೀಕ್ಷಣೆಯ ಮುದ್ರೆೆಯನ್ನು ಶಾಂಭವಿ ಮುದ್ರೆೆ ಎನ್ನುವರು. ಇಂದು ಮಕ್ಕಳ ಏಕಾಗ್ರ ಶಕ್ತಿಿಗಾಗಿ ಪಾಲಕರು ಹೆಣಗುತ್ತಿಿರುವಾಗ ಇಷ್ಟಲಿಂಗದ ಪೂಜೆ ಬಹಳ ಔಚಿತ್ಯವಾಗಿದೆ. ಸತ್ಯ, ಸದಾಚಾರ, ಸದ್ವರ್ತನೆಗಳು ಲಿಂಗಪೂಜೆಯ ಸಾಧನಗಳಾಗಿವೆ. ವಿಪರ್ಯಾಸವೆಂದರೆ ಇಂದು ಕೆಲವು ಲಿಂಗಾಯತರೇ ಇಷ್ಟಲಿಂಗವನ್ನು ಪೂಜಿಸುವುದಿರಲಿ, ಧರಿಸಲೂ ಕೂಡ ಹಿಂಜರಿಯುತ್ತಾಾರೆ. ದೇವರ ಕೋಣೆಯ ಜಗಲಿಯ ಮೇಲೆ ಇಷ್ಟಲಿಂಗವು ಆರಾಮಾಗಿ ರಾರಾಜಿಸುತ್ತದೆ.

ಗುರುವಿನ ಗುರು
ಗುರುವಿನ ಗುರು ಜಂಗಮ ಎಂದು ಚನ್ನಬಸವಣ್ಣ ಹೇಳುತ್ತಾಾರೆ. ಜಂಗಮನ ಮುಖ್ಯ ಉದ್ದೇಶ ಲಿಂಗಾಯತ ಧರ್ಮದ ಉದಾತ್ತ ಗುಣ, ವಿಚಾರಗಳನ್ನು ಎಲ್ಲರಿಗೂ ತಲುಪಿಸುವುದು ಜೊತೆಗೆ ಜಂಗಮರಿಗೆ ದಾಸೋಹ ಮಾಡಬೇಕೆಂದು ಬಸವ ತತ್ತ್ವ ಸಾರುತ್ತದೆ. ತೆರಿಗೆಯನ್ನು ಸಲ್ಲಿಸುವುದು ಹೇಗೆ ಅನಿವಾರ್ಯವೂ ಹಾಗೆ ಸತ್ಯ ಶುದ್ಧ ಕಾಯಕದಿಂದ ಬಂದ ಧನವನ್ನು ದಾಸೋಹಕ್ಕಾಾಗಿ ವಿನಿಯೋಗಿಸಬೇಕು.

ಸತ್ ಪದಾರ್ಥಗಳನ್ನು ಶಿವನಿಗೆ ಅರ್ಪಿಸಿ ಪಡೆಯುವ ಪದಾರ್ಥವೇ ಪ್ರಸಾದ. ಬಾಯಿಯ ರುಚಿಗೆ ಅನ್ನವನ್ನು ಸ್ವಿಿಕರಿಸಿದೇ, ಶಿವ ನೀಡಿದ ಪ್ರಸಾದವೆಂದು ಸ್ವೀಕರಿಸಬೇಕು. ಬಾಯಿಗೆ ತುತ್ತು ಅನ್ನ ಸಿಗದ ಜನರಿಗೆ ಶುದ್ಧ ಪ್ರಸಾದವನ್ನು ನೀಡಿರೆಂದು ಹೇಳುತ್ತಾಾರೆ. ಪಾದೋದಕ ಗುರು ಲಿಂಗ ಜಂಗಮಕ್ಕೆೆ ಸಂಬಂಧಿಸಿದ ಆಗರವಾಗಿದೆ.

ವಿಭೂತಿಯ ಪರಿಶುದ್ಧತೆಯ ಸಂಕೇತ ಹಾಗೂ ಪ್ರಾಾಣವನ್ನು ಶುದ್ಧೀಕರಿಸುತ್ತದೆ. ರುದ್ರಾಾಕ್ಷಿಗೆ ಅಹಂಕಾರವನ್ನು ನಿರ್ನಾಮ ಮಾಡುವ ಶಕ್ತಿಿ ಇದೆ. ಅದೇ ರೀತಿ ಶರಣರು ಹೇಳಿಕೊಟ್ಟ ಸನ್ಮಾಾರ್ಗಗಳು ಮಂತ್ರಗಳಾಗಿವೆ.

ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ ರುದ್ರ ಪದವಿಯನೊಲ್ಲೆ…… ಸದ್ಭಕ್ತರ ಪಾದದನರಿದಿಪ್ಪ ಮಹಾ ಪದವಿಯ ಕರುಣಿಸಯ್ಯಾಾ……. ಎಂದು ಯಾವುದೇ ಪದವಿ ಬೇಡ ಎನ್ನಲು ಧೈರ್ಯ ಸಾಕಷ್ಟಿಿರಬೇಕು ಏಕೆಂದರೆ ನಮಗೆ ಎಲ್ಲದರಲ್ಲೂ ಪದವಿಬೇಕು. ಸತ್ಕಾಾರ್ಯಗಳನ್ನು ಮಾಡುವುದು ಪದವಿಯ ಆಸೆಗಾಗಿ. ಆದರೆ ಬಸವಣ್ಣ ಸದ್ಭಕ್ತರ ಸೇವೆ ಮಾಡುವ ಪದವಿ ನೀಡಬೇಕೆಂದು ಕೇಳಿಕೊಳ್ಳುತ್ತಾಾರೆ. ಜನಸೇವೆಯೇ ಮುಖ್ಯ ಗುರಿ ಎಂದು ಪದವಿಯನ್ನು ಅತಿ ಸೂಕ್ಷ್ಮವಾಗಿ ತಮ್ಮದಾಗಿಸಿಕೊಂಡ ಅನೇಕ ರಾಜಕಾರಣಿಗಳು ಹಾಗೂ ಸಮಾಜ ಸುಧಾರಕರನ್ನು ನೋಡಿದರೆ ಪದವಿಯ ಹಪಾಹಪಿ ಎಷ್ಟಿಿದೆ ಎಂದು ತಿಳಿಯುತ್ತದೆ.
ಹೀಗೆ ಮಾನವೀಯ ಮೌಲ್ಯಗಳನ್ನು ಭಿತ್ತುವ ಪ್ರಾಾಮಾಣಿಕ ಪ್ರಯತ್ನ ಮಾಡಿ, ಸದೃಢ ಸಮಾಜವನ್ನು ಕಟ್ಟಲು ಬಸವಣ್ಣ ಅವಿರತವಾಗಿ ಶ್ರಮಿಸಿದರು. ಇವರ ಈ ಮಾತುಗಳನ್ನು ಕೇವಲ ಓದಿದರೆ ಸಾಲದು, ನಿತ್ಯ ಜೀವನದಲ್ಲಿ ಅಳವಡಿಸಲು ಪ್ರಯತ್ನಿಿಸಬೇಕು. ಅಂದಾಗ ಮಾತ್ರ ಬಸವಣ್ಣನ ಕ್ರಾಾಂತಿಕಾರಿ ಧಾರ್ಮಿಕ ಚಿಂತನೆಗಳು ಫಲಪ್ರದವಾಗುತ್ತವೆ.