Thursday, 12th December 2024

ದೇದೀಪ್ಯಮಾನ ಈಶ್ವರ

ಜ್ಞಾಾನದ ಹೊರತು ಸಂಕಲ್ಪವಿರುವುದು ಸಾಧ್ಯವೇ ಇಲ್ಲ. ಜ್ಞಾಾನರಹಿತ ಹಾಗೂ ಅಚೇತನವಾದ ಕಲ್ಲು, ಕಟ್ಟಿಿಗೆ ಇವುಗಳ ಸಂಕಲ್ಪ ಮಾಡುವುದು ಸಾಧ್ಯವೆ? ಹಾಗೆ ಒಂದು ವೇಳೆ ಅಕಸ್ಮಾಾತ್ ಆಗಿದ್ದಿದ್ದರೆ, ಪ್ರೇತಗಳೂ ಸಹ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗುತ್ತಿಿದ್ದವು ಕಾರ್ಯಕ್ಷಮತೆಯು ಕೇವಲ ಚೈತನ್ಯವಿರುವಂತಹ ವ್ಯಕ್ತಿಿಯಲ್ಲಷ್ಟೇ ಅಚೇತನವಾದವನಲ್ಲಿ ಇರುವುದಿಲ್ಲ. ಸಂಕಲ್ಪಶಕ್ತಿಿಯುತ ಪರಮಾತ್ಮನು ಚೈತನ್ಯ ಸ್ವರೂಪ, ಅಂದರೆ ಜ್ಞಾಾನಸ್ವರೂಪವೇ ಎಂಬುದು ಮನದಟ್ಟಾಾಗಬೇಕು. ಅವನು ಆನಂದ ಸ್ವರೂಪನೂ ಆಗಿದ್ದಾಾನೆ. ಇಂತಹ ಸರ್ವಶಕ್ತ ಪರಮಾತ್ಮನು ಇಲ್ಲವೇ ಇಲ್ಲ ಎಂದು ಕೆಲವರು ಅನುಮಾನಪಡುವುದು ಅಸಂಗತವೇ ಸರಿ. ಹಾಗೆ ಒಂದು ವೇಳೆ ಯಾರಾದರೂ ಹೇಳಿದರೆ ಅದರ ಮೇಲೆ ಯಾರದ್ದಾಾದರೂ ವಿಶ್ವಾಾಸ ಮೂಡುವುದು ಅಶಕ್ಯ.
ಎಲ್ಲರನ್ನೂ ಕಾಪಾಡುವವನು ಈಶ್ವರ. ಅವನು ದೇದೀಪ್ಯಮಾನ ಹಾಗೂ ಪ್ರಕಾಶಮಾನನಾದವನು. ಯಾವ ‘ಈಶ’ ಮತ್ತು ‘ಸೇವೆ’ ಎಂಬ ಎರಡು ಶಬ್ದಗಳಿಂದಲೂ ಪರಮಾತ್ಮನ ಅಸ್ತಿಿತ್ವ ಮತ್ತು ಸ್ವರೂಪ ತಿಳಿದು ಬರುತ್ತದೆಯೋ ಅದು ದಿವ್ಯ ಪ್ರಕಾಶ ಸ್ವರೂಪವಾಗಿದೆ.
ಒಂದು ರಾಜ್ಯವು ಸುವ್ಯವಸ್ಥಿಿತವಾಗಿರಬೇಕಾದರೆ ಆ ರಾಜ್ಯದ ಎಲ್ಲ ಪ್ರಜೆಗಳೂ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುವವರಾಗಿರಬೇಕು. ಆಡಳಿತಗಾರನು ಶತ್ರುಗಳನ್ನು ನಿಯಂತ್ರಿಿಸುವವನಾಗಿದ್ದು ಸಜ್ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಜಾಧರ್ಮ ಪಾಲಿಸುವವನಾಗಿರಬೇಕು. ಯೋಗ್ಯ ರೀತಿಯಿಂದ ತಮ್ಮ ತಮ್ಮ ಕೆಲಸಗಳಲ್ಲಿ ತನ್ನ ಪ್ರಜೆಗಳನ್ನು ತೊಡಗಿಸುವವನಿಗೇ ನಾವು ರಾಜ ಎನ್ನುತ್ತೇವೆ. ತನ್ನ ಲಹರಿಯಿಂದಲೇ ರಾಜನು ನಡೆಯುತ್ತಿಿದ್ದರೆ ಅದಕ್ಕೆೆ ರಾಜಸತ್ತಾಾತ್ಮಕ ರಾಜ್ಯವೆಂದೂ, ಪ್ರಜಾತಂತ್ರದಿಂದ ರಾಜ್ಯಭಾರಕ್ಕೆೆ ಪ್ರಜಾಸತ್ತಾಾತ್ಮಕ ರಾಜ್ಯ ಅಥವಾ ಲೋಕರಾಜ್ಯ ಎಂದು ಕರೆಯಲಾಗುತ್ತದೆ. ರಾಜ್ಯಕ್ಕೆೆ ಶಾಸಕ ಬೇಕೇ ಬೇಕು.