Sunday, 24th November 2024

ನುಲಿಯ ಚಂದಯ್ಯ

*ಎಸ್.ಜಿ.ಗೌಡರ

ಲಿಂಗನಿಷ್ಠೆೆಗಿಂತ ಕಾಯಕನಿಷ್ಠೆೆಯೇ ಮೇಲು ಎಂದು ಸಾರಿದ ನುಲಿಯ ಚಂದಯ್ಯನ ವಚನಗಳಲ್ಲಿ ಗುರು, ಲಿಂಗ, ಜಂಗಮ ಸ್ವರೂಪ, ಮಾಹಿತಿಗಳು ಅದಕ್ಕಿಿಂತಲೂ ಹೆಚ್ಚಾಾಗಿ ಕಾಯಕ ನಿಷ್ಠೆೆ, ಜಂಗಮ ದಾಸೋಹಗಳ ಕುರಿತ ವಿವರ ದೊರೆಯುವುದು.

ಗುರು, ಲಿಂಗ, ಚಂಗಮ ತತ್ತ್ವವನ್ನು ಜಗತ್ತಿಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನೂಲಿಯ ಚಂದಯ್ಯ. ಬಸವಣ್ಣನ ವಿನೂತನ ವಿಚಾರ ಧಾರೆಗೆ, ಸಮಾಜೋಧಾರ್ಮಿಕ ಚಿಂತನೆಗೆ ಆಕರ್ಷಿತನಾಗಿ ಕಲ್ಯಾಾಣಕ್ಕೆೆ ಬಂದು ಕಾಯಕ ಜೀವಿಯಾಗಿ ದಾಸೋಹ ಮಾಡುತ್ತ ಬದುಕಿದ ಶ್ರೇಷ್ಠ ಕಾಯಕ ಜೀವಿ. ದೇವರಿಗೆ ಕಾಯಕ ಪ್ರತಿಫಲದ ಪ್ರಜ್ಞೆಯ ಪಾಠ ಮಾಡಿದ ಶ್ರೇಷ್ಠ ಅನುಭಾವಿ. ಜಂಗಮದಲ್ಲಿ ಅಧಿಕ ಭಕ್ತಿಿ, ಜಂಗಮ ಸೇವೆಯೇ ಲಿಂಗಪೂಜೆ ಎಂಬ ತತ್ವ ಅರಿತು ಬದುಕಿದ ನೂಲಿಯ ಚಂದಯ್ಯ ದಲಿತ ವರ್ಗದ ವಚನಕಾರ. ಲಿಂಗನಿಷ್ಠೆೆಗಿಂತಲೂ ಕಾಯಕ ನಿಷ್ಠೆೆ ಮುಖ್ಯ ಎಂದು ಸಾರಿದ ಶ್ರೇಷ್ಠ ಅನುಭಾವಿ.

ಚಂದಯ್ಯನ ತಂದೆ, ತಾಯಿ, ಗುರು ಯಾರು ಎಂಬ ಮಾಹಿತಿ ಚರಿತ್ರಾಾಕಾರರಿಗೆ ಲಭ್ಯವಾಗಿಲ್ಲ. ಫ.ಗು.ಹಳಕಟ್ಟಿಿಯವರು ವಿಜಯಪುರ ಜಿಲ್ಲೆೆಯ ಶಿವಣಗಿ ನುಲಿಯ, ಚಂದಯ್ಯನ ಗ್ರಾಾಮ ಎಂದು ಗುರುತಿಸಿದ್ದಾಾರೆ. ಅರಣ್ಯದಲ್ಲಿ ಬೆಳೆದ ಹುಲ್ಲಿನಿಂದ ಹಗ್ಗ ಹೊಸೆದು ಮಾರಿ ಬಂದ ಹಣದಿಂದ ಜೀವನ ನಡೆಸುತ್ತಿಿದ್ದ. ಬಸವಣ್ಣರಿಂದ್ಕ ಪ್ರಭಾವಿತನಾಗಿ ಕ್ರಿಿ.ಶ 1160ರಲ್ಲಿ ಶಿವಣಗಿಯಿಂದ ಕಲ್ಯಾಾಣಕ್ಕೆೆ ಬಂದು ಹಗ್ಗ ಹೊಸೆಯುವ ಕಾಯಕ ಮಾಡುತ್ತ ಶರಣನಾಗಿ ಮಹಾಮನೆಯ ಅನುಭವ ಮಂಟಪದ ಚರ್ಚೆಗಳಲ್ಲಿ ಪಾಲ್ಗೊೊಂಡು ವಚನ ರಚಿಸಿದ್ದಾಾನೆ.

ಪುರಾಣ ಕಾವ್ಯಗಳಲ್ಲಿ ಚಂದಯ್ಯನ ಬದುಕಿನ ಘಟನೆಗಳು ಕಂಡು ಬರುತ್ತವೆ. ಶೂನ್ಯ ಚಂಪಾದನೆ, ಶಿವತತ್ವ ಚಿಂತಾಮಣಿ, ಬಸವ ಪುರಾಣ ಗ್ರಂಥಗಳಲ್ಲಿ ವಿಸ್ತಾಾರವಾಗಿಯೂ, ಗುರುರಾಜ ಚರಿತೆ, ರಾಘವಾಂಕ ಚರಿತ್ರೆೆ, ಚನ್ನಬಸವ ಪುರಾಣ ಮುಂತಾದ ಕೃತಿಗಳಲ್ಲಿ ಸೂಚ್ಯವಾಗಿಯೂ ಚಂದಯ್ಯನ ಅರಿವು, ಕಾಯಕದ ವಿವರ ಇದೆ.

ಹಿಂಬಾಲಿಸಿದ ಲಿಂಗ
ಕಲ್ಯಾಾಣ ಪಟ್ಟಣದಲ್ಲಿ ನುಲಿಯ ಚಂದಯ್ಯನೆಂಬ ಶರಣನು ಅರಣ್ಯದಿಂದ ಮೆದುಹುಲ್ಲು, ಮರದ ತೊಗಟೆಗಳನ್ನು ತಂದು ಅದರಿಂದ ಹಗ್ಗ ಹೊಸೆದು ಹಸು ಕಟ್ಟುವ ಹಗ್ಗಳನ್ನು ಮಾಡಿ ತೆಲೆಯ ಮೇಲೆ ಹೊತ್ತು ಕಲ್ಯಾಾಣ ಪಟ್ಟಣದಲ್ಲಿ ಮಾರಾಟ ಮಾಡಿ ಬಂದ ದ್ರವ್ಯದಿಂದ ದಾಸೋಹ ಮಾಡುತ್ತ ಮಹಾಶರಣನಾಗಿದ್ದ. ಒಂದು ದಿನ ಹುಲ್ಲು ಕೊಯ್ಯುತ್ತಿಿದ್ದ ಚಂದಯ್ಯನನ್ನು ಪರೀಕ್ಷಿಸಲು ಅವನ ಇಷ್ಟಲಿಂಗ ಜಾರಿ ಕೆಳಗೆ ಬೀಳುತ್ತದೆ. ಅದನ್ನು ತಿಳಿದ ಚಂದಯ್ಯ ಲಿಂಗವನ್ನು ಎತ್ತಿಿಕೊಳ್ಳದೆ ಮುನ್ನಡೆಯುತ್ತಾಾನೆ. ಆಗ ಲಿಂಗವು ಪುರುಷರೂಪ ಧರಿಸಿ ‘ನಾನು ಬಂದೆನು ಚಂದಯ್ಯ’ ಎಂದು ಹಿಂಬಾಲಿಸುತ್ತದೆ. ‘ಮೊದಲೇಕೆ ಹೋದಿರಿ ಈಗಲೇಕೆ ಬಂದೆನೆಂದಿರಿ ನಾನೊಲ್ಲೆೆ’ ಎಂದು ಹೇಳಿ ಮುನ್ನಡೆದ ಚಂದಯ್ಯನನ್ನು ಲಿಂಗವು ‘ನೀನೊಲ್ಲೆೆನೆಂದೊಡೆ ನಾ ಬಿಡೆ ತನ್ನಾಾಣೆ’ ಎಂದು ಹಿಂಬಾಲಿಸುತ್ತದೆ. ಕೊನೆಗೆ ನ್ಯಾಾಯ ಮಾಚಿದೇವರ ಕಡೆಗೆ ಹೋಗಿ ಜಂಗಮ ಸೇವೆಗೆ ನೆರವಾಗುವ ಕರಾರಿನ ಮೇಲೆ ಹುಲ್ಲನ್ನು ಚಂದಯ್ಯನ ಮನೆಗೆ ಹೊತ್ತೊೊಯ್ದುಲ್ಲದೆ ಅದನ್ನು ಹೊಸೆದು, ಮಾರಲು ತೆಗೆದುಕೊಂಡು ಹೋಗಬೇಕಾಗುತ್ತದೆ. ಲಿಂಗಯ್ಯ ಬಸವಣ್ಣನಿಂದ ಸಾವಿರ ಹೊನ್ನು ಪಡೆದು ಬಂದಾಗ ಚಂದಯ್ಯ , ಅನ್ಯಾಾಯದ ಸಂಪಾದನೆ ಸಲ್ಲದು ಎಂದು ಹಾಗದರೊಕ್ಕ ತರಲು ಹಿಂದಕ್ಕೆೆ ಕಳುಹಿಸುತ್ತಾಾನೆ. ಅಷ್ಟೆೆ ಅಲ್ಲ ಅವನನ್ನು ಅನುಭವ ಮಂಟಪಕ್ಕೆೆ ಕರೆತಂದು ನಡೆದ ಸಂಗತಿಯನ್ನೆೆಲ್ಲ ತಿಳಿಸಿ ಲಿಂಗಯ್ಯನ ಅವಶ್ಯಕತೆಯಿಲ್ಲವೆಂದು ಹೇಳುತ್ತಾಾನೆ. ಅಲ್ಲಿನ ಶರಣರು ಗುರು, ಲಿಂಗ, ಜಂಗಮಗಳು ಪರಸ್ಪರಾವಲಂಬಿಗಳು ಎಂಬುದನ್ನು ತಿಳಿಸಿ ಚಂದಯ್ಯನಿಗೆ ಲಿಂಧರಿಸಲು ಸೂಚಿಸುತ್ತಾಾರೆ.
ಯಾವ ಕಾಯಕದಲ್ಲಿ ಬಂದರೂ, ಭಾವಶುದ್ಧವಾಗಿ ಗುರು, ಲಿಂಗ, ಜಂಗಮಕ್ಕೆೆ ಮಾಡುವುದೇ ಶಿವಪೂಜೆ ಎನ್ನುವ ಆತ ಕಾಕಿಯ ‘ಕಾಯಿ ಕಾಡಿಗೆ ಸೊಪ್ಪಾಾಯಿತ್ತಾಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ’ ಎಂದಿರುವುದು ಅರ್ಥಪೂರ್ಣವಾಗಿದೆ. ಚಂದೇಶ್ವರ ಲಿಂಗ ಅಂಕಿತದಲ್ಲಿ ರಚಿತವಾದ 48 ವಚನಗಳು ಲಭ್ಯವಾಗಿವೆ.

ಮಲೆನಾಡಿನತ್ತ ಪಯಣ
ಕಲ್ಯಾಾಣದಲಾದ ರಾಜಕೀಯ ವಿಪ್ಲವದ ನಂತರ ಬಿಜ್ಜಳ ಹತ್ಯೆೆ ನಡೆಯುತ್ತದೆ. ಸೈನಿಕರು ದಂಗೆ ಏಳುತ್ತಾಾರೆ. ಬಿಜ್ಜಳ ಹತ್ಯೆೆಗೆ ಶರಣರೇ ಕಾರಣ ಎಂಬ ತಪ್ಪುು ತಿಳುವಳಿಕೆಯಿಂದ ಶರಣರನ್ನು ಕಂಡಕಂಡಲ್ಲಿ ಕೊಲ್ಲಲಾಗುತ್ತದೆ. ಕೆಲವು ಶರಣರು ಕಲಿಗಳಾಗಿ ಹೋರಾಡುತ್ತ ವಚನ ಸಾಹಿತ್ಯದ ಕಟ್ಟುಗಳನ್ನು ಹೊತ್ತು ದಿಕ್ಕು ದಿಕ್ಕಿಿಗೆ ಚದುರಿ ಹೋಗುತ್ತಾಾರೆ. ಅಲ್ಲಮಪ್ರಭು, ಅಕ್ಕಮಹಾದೇವಿ ಶ್ರೀಶೈಲದತ್ತ ತೆರಳುತ್ತಾಾರೆ. ಅಕ್ಕನಾಗಮ್ಮ, ಚನ್ನಬಸವಣ್ಣ ನೇತೃತ್ವದಲ್ಲಿ ಮತ್ತೊೊಂದು ತಂಡ ಉಳವಿಯತ್ತ ಹೊರಟು ವಚನ ಸಾಹಿತ್ಯ ಸಂರಕ್ಷಣೆ ಮಾಡುತ್ತದೆ. ಉಳವಿಯಲ್ಲಿ ನೆಲೆನಿಂತ 6 ತಿಂಗಳಲ್ಲಿ ಚನ್ನಬಸವಣ್ಣ ಲಿಂಗೈಕ್ಯನಾಗುತ್ತಾಾನೆ. ಪುತ್ರನ ಅಗಲಿಕೆಯಿಂದ ದು:ಖಿತಳಾದ ಅಕ್ಕನಾಗಮ್ಮ ಉಳವಿಯನ್ನು ತೊರೆದು ವಚನ ಸಾಹಿತ್ಯ ಸಂರಕ್ಷಣೆಯಲ್ಲಿದ್ದ ನುಲಿಯ ಚಂದಯ್ಯ ಮುಂತಾದ ಶರಣರೊಂದಿಗೆ ಬನವಾಸಿ ಮಾರ್ಗವಾಗಿ ಬಳ್ಳಿಿಗಾವಿ, ಉಡುತಡಿಯತ್ತ ಶರಣ ಧರ್ಮ ಪ್ರಸಾರ ಮಾಡುತ್ತಾಾ ಭದ್ರಾಾವತಿ ಸಮೀಪದ ತರೀಕೆರೆಗೆ ಬರುತ್ತಾಾರೆ. ಇಲ್ಲಿನ ಎಣ್ಣೆೆಹೊಳೆ ಮಠದಲ್ಲಿ ಆಶ್ರಯ ಪಡೆದು ಅಕ್ಕನಾಗಮ್ಮ, ನುಲಿಯ ಚಂದಯ್ಯ ಮುಂತಾದ ಶರಣರು ಧರ್ಮ ಪ್ರಚಾರ ಮಾಡುತ್ತಾಾ ತರೀಕೆರೆಯ ಸುತ್ತ ಸಂಚರಿಸುತ್ತಾಾರೆ. ಅಕ್ಕನಾಗಮ್ಮ ಎಣ್ಣೆೆಹೊಳೆ ಮಠದಲ್ಲಿ ಲಿಂಗಾನುಷ್ಠಾಾನ ಮಾಡುತ್ತಾಾ ಲಿಂಗೈಕ್ಯಳಾಗುತ್ತಾಾಳೆ.

ನುಲಿಯ ಚಂದಯ್ಯ ತರೀಕೆರೆ ಸಮೀಪದ ಕಲ್ಲತ್ತಗಿರಿ, ನಂದಿ ಎಂಬಲ್ಲಿ ಕೆಲವು ಕಾಲ ಇದ್ದು ಧರ್ಮ ಪ್ರಸಾರ ಮಾಡುತ್ತ ರಾಮಗಿರಿ ಸಮೀಪದ ನೂಲೇನೂರು ಎಂಬಲ್ಲಿಗೆ ಬರುತ್ತಾಾರೆ. ಅಲ್ಲಿನ ಪದ್ಮಾಾವತಿ ಎಂಬ ಶ್ರೀಮಂತೆಯಿಂದ ಒಂದು ಕೆರೆಯನ್ನು ಕಟ್ಟಿಿಸುತ್ತಾಾರೆ. ಕೆರೆಯ ಏರಿಯ ಮೇಲೆ ಆಕೆ ನುಲಿಯ ಚಂದಯ್ಯನವರಿಗೆ ಮಠವನ್ನು ನಿರ್ಮಿಸಿಕೊಡುತ್ತಾಾಳೆ. ಲಿಂಗದೀಕ್ಷೆ ನೀಡುತ್ತಾಾ ಆ ಭಾಗದ ಅನೇಕರಿಗೆ ಶರಣ ಧರ್ಮ ಬೋಧಿಸುತ್ತಾಾ, ಶಿವಾನುಭವಗೋಷ್ಠಿಿಗಳನ್ನು ನೆರವೇರಿಸುತ್ತಾಾ, ಅದೇ ಮಠದಲ್ಲಿಯೇ ಲಿಂಗೈಕ್ಯರಾದರು. ಅವರ ಕ್ರಿಿಯಾ ಸಮಾಧಿಯನ್ನು ಅಲ್ಲಿಯೇ ಮಾಡಲಾಗಿದ್ದು ಸಮಾಧಿಯು ಇಂದಿಗೂ ಇದೆ.
ನೂಲೇನೂರಿನಲ್ಲಿ ಚಂದಯ್ಯನವರು ನೆಲೆನಿಂತು ಶಿವಾನುಭವ ಗೋಷ್ಠಿಿ ನಡೆಸುತ್ತಿಿದ್ದ ವಿಷಯ ತಿಳಿಸುವ ವಿಪುಲವಾದ ಸಾಹಿತ್ಯ ಈ ಭಾಗದ ಜನಪದರಲ್ಲಿ ಇಂದಿಗೂ ಕಂಡು ಬರುತ್ತದೆ. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ಕಲಾತ್ಮಕ ಕೈಲಾಸಮಂಟಪದಲ್ಲಿರುವ ಏಳು ಶರಣರ ಚಿತ್ರಗಳಲ್ಲಿ, ನುಲಿಯ ಚಂದಯ್ಯನವರ ಚಿತ್ರದ ಕೆಳಗೆ ಅವರ ಹೆಸರು ಇರುವುದು ವಿಶೇಷ. ಬಸವಕಲ್ಯಾಾಣದಲ್ಲಿದ್ದಾಾಗ ನಿತ್ಯ ಅನುಷ್ಠಾಾನ ಮಾಡುತ್ತಿಿದ್ದ ಗವಿಯನ್ನು ನುಲಿಯ ಚಂದಯ್ಯ ಗವಿ ಎನ್ನುತ್ತಾಾರೆ.

ಸಂಸಾರವೆಂಬ ಸಾಗರದ ಮಧ್ಯದೊಳಗೆ
ಬೆಳೆದ ಹೊಡಕೆಯ ಹುಲ್ಲು ಕೊಯ್ದು
ಮತ್ತಮಾ ಕಣ್ಣ ತಗೆದು ಕಣ್ಣಿಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕಣಿಕೆಯಲ್ಲಿ ಕಾಯಕವಾಯಿತ್ತು
ಇದು ಕಾರಣ ಚಂದೇಶ್ವರ ಲಿಂಗವೆಂಬ ಭಾವನೆಎನಗಿಲ್ಲ.

ಈ ವಚನದಲ್ಲಿ ಹಗ್ಗ ಹೊಸೆಯ ಬೇಕಾದರೆ ಮಾಡಿಕೊಳ್ಳಬೇಕಾದ ಸಿದ್ದತೆ, ಅನುಸರಿಸಬೇಕಾದ ಕ್ರಮವನ್ನು ತಿಳಿಸಿದ್ದಾಾನೆ.