Sunday, 24th November 2024

ವೀರಭದ್ರನ ಅವತಾರ

ಶರಣ ಮಾಚಿದೇವ

* ಗುರುಶಾಂತಗೌಡ ಬಿ, ಚಿಕ್ಕೊಪ್ಪ

 ನಮ್ಮ ನಾಡು ಕಂಡ ಶರಣರಲ್ಲಿ ಮಡಿವಾಳ ಮಾಚಿದೇವರು ವಿಶಿಷ್ಟ ಸ್ಥಾಾನ ಪಡೆದಿದ್ದಾಾರೆ. ಕಲ್ಯಾಾಣದಲ್ಲಿ ಕ್ರಾಾಂತಿಯ ತರುವಾಯ, ಬಿಜ್ಜಳನ ಸೈನಿಕರು ಶರಣರನ್ನು ಅಟ್ಟಿಿಸಿಕೊಂಡು ಹೊರಟಾಗ, ಅವರ ವಿರುದ್ಧ ಹೋರಾಡಿ ಹಲವು ಶರಣರನ್ನು ಮತ್ತು ವಚನಗಳ ಸಂಗ್ರಹವನ್ನು ರಕ್ಷಿಿಸಿದವರು ಮಾಚಿದೇವರು.

ಮಹಾನ್ ಸಂತರು, ಶರಣರು ಬಾಳಿ ಬದುಕಿದ ನಮ್ಮ ಸಂಸ್ಕೃತಿಯ ಹಿರಿಮೆ ಬಲು ಅಗಾಧವಾದದ್ದು. ಅವರು ಬದುಕಿ, ಬಾಳಿದ ನೆಲದಲ್ಲಿಯೇ ನಾವಿಂದು ಅವರ ದಿವ್ಯ ತತ್ವಾಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಧೀರ ಮತ್ತು ಸಾಹಸಿ ಎಂದೇ ಗುರುತಿಸಲ್ಪಟ್ಟಿಿರುವ ಮಡಿವಾಳ ಮಾಚಿದೇವರು 12 ನೆಯ ಶತಮಾನದ ಕಾಲಮಾನದಲ್ಲಿ ಜೀವಿಸಿದವರು. ದೀನ, ದುರ್ಬಲರ ಮೇಲೆ ನಡೆಯತ್ತಿಿದ್ದ ಅಟ್ಟಹಾಸ,ಅನ್ಯಾಾಯಗಳನ್ನು ವಿರೋಧಿಸಿ, ಅವರನ್ನು ಸಂತೈಸಿ, ಅವರ ನೋವಿಗೆ ದನಿಯಾದವರು. ಸಮಾಜದಲ್ಲಿ ಶಾಂತಿ, ಸಮಾನತೆಗಾಗಿ ಹೋರಾಡಿದ ಶರಣರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರು. ಅಧ್ಯಾಾತ್ಮ ಪಥಕ್ಕೆೆ ಅಡ್ಡಬಂದ ಆಳರಸರನ್ನು ಸಹ ಎದುರುಹಾಕಿಕೊಳ್ಳುವಲ್ಲಿ ಅವರು ಹಿಂದೆ ಮುಂದೆ ನೋಡುತ್ತಿಿರಲಿಲ್ಲ. ಅರಸನ ಸೈನಿಕರ ವಿರುದ್ಧ ಹೋರಾಡಿ, ವಚನ ಸಾಹಿತ್ಯವನ್ನು ಮತ್ತು ಶರಣರನ್ನು ರಕ್ಷಿಿಸಿದ ಕೀರ್ತಿ ಅವರದ್ದು. ಅರಸತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಸರ್ವ ಸಮಾನತೆಯನ್ನು ಸಾರಿ ಹೇಳಿದವರು.

ಇವರು ಈಗಿನ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ, ದೇವರ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ಎಂಬ ದಂಪತಿಗಳಿಗೆ ಪ್ರ.ಶ. 1120-1130ರ ನಡುವೆ ಜನಿಸಿದರು. ನಂತರದ ದಿನಗಳಲ್ಲಿ ಸಮಾಜದಲ್ಲಿ ಹೊಸ ಬದಲಾವನೆಯನ್ನು ತಂದ ಬಸವಣ್ಣನವರ ಸಂಪರ್ಕಕ್ಕೆೆ ಬಂದರು. ಬಸವಣ್ಣವರ ಅನುಭವ ಮಂಟಪದಲ್ಲಿ ತಮ್ಮದೇ ಆದ ವಿಶಿಷ್ಟ ಬುದ್ಧಿಿಮತ್ತೆೆಯ ಕಾರಣದಿಂದ ವಿಶೇಷವಾದ ಸ್ಥಾಾನಮಾನಗಳನ್ನು ಪಡೆದವರು. ಇವರನ್ನು ಎಲ್ಲರೂ ಬಸವಣ್ಣನವರ ಬಲಗೈ ಬಂಟರೆಂದೆ ಕರೆಯುತ್ತಿಿದ್ದರು. ಶರಣ ನಿಷ್ಠೆೆಯಲ್ಲಿ ಬಹು ಬಿಗುವಾಗಿದ್ದ ಮಾಚಿದೇವರು, ಆ ವಿಚಾರದಲ್ಲಿ ಬಸವಣ್ಣನವರನ್ನು ಸಹ ಟೀಕಿಸಿದ್ದುಂಟು. ಬಸವಣ್ಣನವರು ತಮ್ಮ ಯಾವುದೇ ಧಾರ್ಮಿಕ ನಿರ್ಣಯಗಳಲ್ಲಿ ಸೂಕ್ತ ಸಲಹೆ, ಸೂಚನೆಗಳನ್ನು, ಜ್ಞಾನವಂತರಾದ ಮಡಿವಾಳ ಮಾಚಿದೇವರಿಂದ ಪಡೆದುಕೊಳ್ಳುತ್ತಿಿದ್ದರು ಎನ್ನಲಾಗಿದೆ.

ರಾಜನನ್ನೇ ತಿರಸ್ಕರಿಸಿದ ಶರಣ
ಮಾಚಿದೇವರು ಕೇವಲ ಶರಣರ ಬಟ್ಟೆೆ, ಬರೆಗಳನ್ನು ಮಾತ್ರ ತೊಳೆಯುತ್ತಿಿದ್ದರಂತೆ. ಒಮ್ಮೆೆ ನಾಡಪ್ರಭು ಬಿಜ್ಜಳನು ಒತ್ತಾಾಯಪೂರ್ವಕವಾಗಿ ತನ್ನ ಬಟ್ಟೆೆಯ ಗಂಟನ್ನು ಕಳಿಸಿಕೊಟ್ಟು, ಇದನ್ನು ಶುಚಿಗೊಳಿಸುವಂತೆ ತಾಕೀತು ಮಾಡಿದನಂತೆ. ಕೋಪೋದ್ರಿಿಕ್ತರಾದ ಮಾಚಿದೇವರು ತಮ್ಮ ಉರಿಗಣ್ಣಿಿಂದ ನೋಡಲಾಗಿ, ಬಟ್ಟೆೆಯ ಗಂಟು ಸುಟ್ಟು ಬೂದಿಯಾಯಿತಂತೆ.
ಎಲ್ಲ ಶರಣರ ವಚನಗಳನ್ನು ರಕ್ಷಿಸಿಡುವಲ್ಲಿ ಮಾಚಿದೇವರ ಪಾತ್ರ ದೊಡ್ಡದು. ಶರಣರೆಲ್ಲರ ಬಟ್ಟೆೆ ಬರೆಗಳನ್ನು ಶುಚಿಗೊಳಿಸುವದಷ್ಟೇ ಅಲ್ಲದೇ ಸಮಾಜದ ಶಾಂತಿ, ಸುವ್ಯವಸ್ಥೆೆಗಂಟಿದ ಮೌಢ್ಯತೆಯ ಕೊಳೆಯನ್ನು ಶುಚಿಗೊಳಿಸಿದರು. ಹಲವು ವೀರಶೈವರ ಪ್ರಮುಖ ಗ್ರಂಥಗಳಲ್ಲಿ ಮಾಡಿವಾಳ ಮಾಚಿದೇವರು ವೀರಭದ್ರನ ಅವತಾರವೆಂದೆ ಬಿಂಬಿತವಾಗಿದ್ದರು. ಮಡಿವಾಳ ಮಾಚಿದೇವರು ವಚನಕಾರರಾಗಿದ್ದರು. ಅವರ ವಚನಗಳು ಬಹು ಜಟಿಲತೆಯಿಂದ ಕೂಡಿರುತ್ತಿಿದ್ದವು ಮತ್ತು ಯಾರೇ ಆಗಲಿ ಅವರ ಬೂಟಾಟಿಕೆಯನ್ನು ತಮ್ಮ ವಚನಗಳ ಮೂಲಕ ಖಂಡಿಸುತ್ತಿಿದ್ದರು. ಕಲಿದೇವಯ್ಯ ಮತ್ತು ಕಲಿದೇವರದೇವಾ ಎಂಬ ಅಂಕಿತದಲ್ಲಿ ಅವರು ಸುಮಾರು 400ಕ್ಕೂ ಹೆಚ್ಚಿಿನ ವಚನಗಳನ್ನು ರಚಿಸಿದ್ದು, ಈ ವಚನಗಳು ಇನ್ನೂ ಆಳವಾದ ವಿಮರ್ಶೆಗೆ ಒಳಪಟ್ಟಿಿಲ್ಲ ಎಂಬ ಭಾವನೆಯೂ ಇದೆ.

ಕಲ್ಯಾಾಣದ ಕ್ರಾಾಂತಿಯ ತರುವಾಯ ಬಿಜ್ಜಳನ ಸೈನಿಕರು ಶಿವಶರಣರೆಲ್ಲ ಅಟ್ಟಾಾಡಿಸಿಕೊಂಡು ಕೊಲ್ಲುವುದಕ್ಕೆೆ ಪ್ರಾಾರಂಭಿಸಿದರು. ಆಗ ಬಸವಣ್ಣನವರು ಕೂಡಲ ಸಂಗಮದ ಕಡೆಗೆ, ಅವರ ಬಾಮೈದರಾದ ಚನ್ನಬಸವಣ್ಣನವರ ಒಡಗೂಡಿ ಮಡಿವಾಳ ಮಾಚಿದೇವರು ಬೆಳಗಾವಿ ಜಿಲ್ಲೆಯ ಮಾರ್ಗದ ಕಡೆ ಸಾಗಿದರು. ತೊರಗಲ್ಲ ಹತ್ತಿಿರ ಬಿಜ್ಜಳನ ಸೈನಿಕರೊಡನೆ ಕಾದಾಡಿ ಉಳಿದೆಲ್ಲ ಶಿವಶರಣರನ್ನು ಕಾಪಾಡಿದವರು ಮಾಚಿದೇವರು. ಆನಂತರ ಮುರಗೋಡದಲ್ಲಿ (ಬೆಳಗಾವಿ ಜಿಲ್ಲೆ) ಮತ್ತೊೊಂದು ಭೀಕರ ಯುದ್ಧವಾಗಿ ಬಿಜ್ಜಳನ ಸೈನಿಕರೊಡನೆ ಹೋರಾಡಿ ಪ್ರಾಾಣತೆತ್ತರು ಧೀರ ಶರಣ ಮಡಿವಾಳ ಮಾಚಿದೇವರು. ಶರಣರೆಲ್ಲ ಕಂಬನಿಯ ಮಿಡಿದು ಮಹಾಶರಣನನ್ನು ನಮಸಿದರು. ಮಾಚಿದೇವರನ್ನು ಮುರಗೋಡ ಸಮೀಪದ ಕಾರಿಮನಿ ಎಂಬ ಗ್ರಾಾಮದಲ್ಲಿ ಸಮಾಧಿಯನ್ನು ಮಾಡಲಾಯಿತು. ಈಗಲೂ ಅವರ ಸಮಾಧಿ ಆ ಗ್ರಾಾಮದಲ್ಲಿದೆ. (ಜಾನಪದ ಸಾಹಿತಿಗಳು ಅನೇಕ ಸಂಶೋಧಕ ತಜ್ಞರು, ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಗುರುತಿಸಿರುವುದೂ ಉಂಟು).

ಪ್ರಚಾರವಿಲ್ಲದ ಸಮಾಧಿ
ಕರ್ನಾಟಕದಲ್ಲಿ ಬಹಳಷ್ಟು ಜನರಿಗೆ ಶ್ರೇಷ್ಠ ಶರಣ ಮಾಚಿದೇವರ ಸಮಾಧಿ ಈ ಪುಟ್ಟ ಗ್ರಾಾಮದಲ್ಲಿ ಇಲ್ಲಿರುವುದು ಗೊತ್ತಿಿಲ್ಲ. ಈ ಗ್ರಾಾಮದಲ್ಲಿ ಸಮಾಧಿ ಇದೆ ಎಂಬ ಅರಿವು ಸ್ಥಳೀಯರಿಗೆ ಇದ್ದರೂ, ಆ ವಿಚಾರವು ಹೆಚ್ಚು ಪ್ರಚಾರಕ್ಕೆೆ ಬಂದಿಲ್ಲ. ಗ್ರಾಾಮಸ್ಥರು ಸಮಾಧಿಗೆ ಸ್ಥಳೀಯ ವಾಸ್ತು ಶೈಲಿಯಲ್ಲಿ ಸರಳವಾದ ದೇವಸ್ಥಾಾನವನ್ನು ನಿರ್ಮಿಸಿದ್ದಾರೆ. ಈ ದೇವಾಲಯದ ಸನಿಹ ಕೆಲವು ಶಿಲಾಶಾಸನಗಳು ಸಹ ಇವೆ. ವರ್ಷಕ್ಕೊೊಮ್ಮೆೆ ಬಸವಜಯಂತಿಯಲ್ಲಿ ವೀರ ಮಡಿವಾಳ ಮಾಚಿದೇವರ ಜಾತ್ರೆೆಯನ್ನು ಆಚರಿಸಿಕೊಂಡು ಬರುತ್ತಿಿದ್ದಾರೆ. ಮತ್ತು ಫೆಬ್ರುವರಿ ತಿಂಗಳಿನಲ್ಲಿ ಅವರ ಜಯಂತ್ಯೋೋತ್ಸವವನ್ನು ಕಾರಿಮನಿ ಗ್ರಾಾಮಸ್ಥರು ವಿಜೃಂಭಣೆಯಿಂದ ಆಚರಿಸುತ್ತಾಾರೆ.

ಕಲ್ಯಾಾಣದಲ್ಲಿ ನಡೆದ ಕ್ರಾಾಂತಿಯಿಂದ ಮತ್ತು ಬಿಜ್ಜಳನ ಸೈನಿಕರು ಶರಣರನ್ನು ಬೆನ್ನುಹತ್ತಿಿದ್ದರಿಂದ, ಕಲ್ಯಾಾಣ ತೊರೆದು ಊರುರು ಸುತ್ತಿಿದ ಶಿವಶರಣರೆಲ್ಲ ಎಲ್ಲೆಲ್ಲಿ ವಸತಿಗೈದು ತಮ್ಮ ಲಿಂಗಪೂಜೆಯನ್ನು ಕೈಗೊಂಡರೋ, ಅಲ್ಲೆಲ್ಲಾ ಬಸವಣ್ಣನ ದೇವಸ್ಥಾಾನಗಳಿವೆ. ಅಂತೆಯೇ ಕಾರಿಮನಿ ಗ್ರಾಾಮದಲ್ಲಿ ಸಹ ಬಸವಣ್ಣನ ದೇವಸ್ಥಾಾನವಿದೆ. ಸ್ಥಳೀಯರಿಂದ ಪೂಜೆ, ಪುನಸ್ಕಾಾರಗಳನ್ನು ಮಡಿವಾಳ ಮಾಚಿದೇವರು ಪಡೆದುಕೊಳ್ಳುವರು. ಮಹಾ ಶರಣರು ಸಂಚರಿಸಿದ ಗ್ರಾಾಮವೆನ್ನುವ ಕಾರಣಕ್ಕಾಾಗಿ ಆಗಿನ ಕಾಲದಿಂದಲೂ ಪ್ರಾಾಣಿ ಹಿಂಸೆಯ ಕಾರ್ಯ ಈ ಗ್ರಾಾಮದಲ್ಲಿ ನಡೆಯುವುದಿಲ್ಲ.

ಮಾಚಿದೇವ : ಕೆಲವು ಪ್ರಸಂಗಗಳು
* ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಾಣಕ್ಕೆೆ ಬರುವವರನ್ನು ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಾಣಪುರ ಪ್ರವೇಶ ಹೊರಗಿನಿಂದ ಬರುವವರಿಗೆ ಸಿಗುತ್ತಿಿರಲಿಲ್ಲವೆಂಬುದು ಮಾಚಯ್ಯನ ಘನತೆಗೆ ಸಾಕ್ಷಿ ಎನಿಸಿದೆ.

* ’ಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ’ ಬಸವಣ್ಣನವರು ‘ಅಹಂ’ ಭಾವನೆಯಿಂದ ಮಾತನಾಡಿರುತ್ತಾಾರೆ. ಆಗ ಮಾಚಿದೇವರು ಬಸವಣ್ಣನವರಿಗೆ ‘ನೀವೊಬ್ಬರೇ ದಾನ ಮಾಡಲು ಹುಟ್ಟಿಿದ ದಾನಿಗಳು, ಉಳಿದೆಲ್ಲ ಭಕ್ತರು ಭಿಕಾರಿಗಳು, ದರಿದ್ರರೆ’ ಎಂದು ಪ್ರಶ್ನಿಿಸುತ್ತಾಾರೆ. ಮುಂದೆ ಎನ್ನ ಮಹಾನುಭಾವರ ಬಡತನದಿರವ ನಿನಗೆ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು. ಹೀಗೆ ವಿನಯ, ಇಂದ್ರಿಿಯ ನಿಗ್ರಹ, ನಿರಹಂಕಾರಗಳು ಭಕ್ತಿಿಯ ಕುರುಹು ಎಂದು ತಿಳಿಸುತ್ತ ಅಹಂಕಾರ ನಿರ್ಮೂಲನೆಗೊಳಿಸಿದರು.

*‘ಕಲ್ಯಾಾಣ ಕ್ರಾಾಂತಿ’ಯ ಸಂದರ್ಭದಲ್ಲಿ ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ಜವಾಬ್ಧಾಾರಿ ಹೊತ್ತು, ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ತಡ ಕೋಡ, ಮೂಗ ಬಸವ, ಕಾದರವಳ್ಳಿಿಯಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಸಾಹಸ, ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯ.

ಮಾಚಿದೇವರ ಒಂದು ವಚನ

ಆ ಜಾತಿ ಈ ಜಾತಿಯವರೆನಬೇಡ.
ಹದಿನೆಂಟುಜಾತಿಯೊಳಗಾವ ಜಾತಿಯಾದಡೂ ಆಗಲಿ,
ಗುರು ಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ,
ಪುನರ್ಜಾತರಾದ ಬಳಿಕ, ಭಕ್ತರಾಗಲಿ ಜಂಗಮವಾಗಲಿ,
ಗುರುವಿನ ವೇಷವಿದ್ದವರ ಗುರುವೆಂದು ನಂಬಿ,
ದಾಸೋಹವ ಮಾಡುವುದೆ ಸದಾಚಾರ.
ಗುರುವನತಿಗಳೆದು, ಗುರುವಾಜ್ಞೆಯ ಮೀರಿ,
ಗುರು ಕೊಟ್ಟ ಪಂಚಮುದ್ರೆೆಗಳ ಮೇಲೆ
ಅನ್ಯಸಮಯ ಮುದ್ರೆೆಯ ಲಾಂಛನಾಂಕಿತರಾಗಿ,
ಗುರುದ್ರೋಹಿಗಳಾಗಿ ಬಂದವರ
ಜಂಗಮವೆಂದು ಕಂಡು, ನಮಸ್ಕರಿಸಿ ಆರಾಧಿಸಿ,
ಪ್ರಸಾದವ ಕೊಂಡವಂಗೆ ನಾಯಕನರಕ ತಪ್ಪದೆಂದ
ಕಲಿದೇವಯ್ಯ