Sunday, 24th November 2024

ವೃತ್ತಾಕಾರದ ತಳಪಾಯ ಚೌಸಾತ್ ಯೋಗಿನಿ ದೇಗುಲ

*ಶಿಶಿರ್ ಮುದೂರಿ

ನಮ್ಮ ದೇಶದಲ್ಲಿ 64 ಯೋಗಿನಿಯರ ದೇಗುಲಗಳು ಹಲವು ಪ್ರದೇಶಗಳಲ್ಲಿ ಇವೆ. ಇವುಗಳಲ್ಲಿ ಮಧ್ಯಪ್ರದೇಶದಲ್ಲಿರುವ ಮೊರೇನಾ ಚೌಸಾತ್ ಯೋಗಿನಿ ದೇಗುಲವು ವಿಶಿಷ್ಟ. ವೃತ್ತಾಾಕಾರದಲ್ಲಿರುವ ಈ ದೇಗುಲವು ಭೂಕಂಪವನ್ನು ತಡೆಯುವ ವಿನ್ಯಾಾಸವನ್ನು ಹೊಂದಿದ್ದು, ಈ ವಿನ್ಯಾಾಸವನ್ನು ನಮ್ಮ ದೇಶದ ಸಂಸತ್ ಭವನ ನಿರ್ಮಿಸುವಾಗ ಅಧ್ಯಯನ ಮಾಡಲಾಗಿದೆ ಎಂಬ ತಿಳಿವಳಿಕೆ ಇದೆ. ಈಗಿನ ನಮ್ಮ ಸಂಸತ್ ಭವನವು ಮೊರೆನಾದ ಈ ಯೋಗಿನಿ ದೇಗುಲದ ವಿನ್ಯಾಾಸವನ್ನು ಹೋಲುವುದು ವಿಶೇಷ. ಅದರ ಹೊರತಾಗಿಯೂ, ಮೊರೆನಾದ ಈ ಯೋಗಿನಿ ದೇಗುಲವು ತನ್ನ ಸ್ವಂತಿಕೆಯಿಂದ ಮತ್ತು ಅಪರೂಪದ ವಾಸ್ತುವಿನಿಂದ ಸಾಕಷ್ಟು ಗಮನ ಸೆಳೆದಿದೆ. ಮೂಲತಃ ದೇಗುಲವಾಗಿದ್ದು, ಕಾಲಕ್ರಮೇಣ ಇದು ಶಿವಾಲಯವಾಗಿ ಪರಿವರ್ತನೆ ಹೊಂದಿದೆ.

ನಮ್ಮ ದೇಶದ ಲಕ್ಷಾಾಂತರ ದೇಗುಲಗಳ ಪೈಕಿ ವೃತ್ತಾಾಕಾರದ ಮತ್ತು ಅರ್ಧವೃತ್ತಾಾಕಾರದ ತಳಪಾಯ ಹೊಂದಿರುವ ದೇಗುಲಗಳು ತುಂಬಾ ಕಡಿಮೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆೆಯ ಮಿಟಾವಲಿಯಲ್ಲಿರುವ ಸುಮಾರು 100 ಅಡಿ ಎತ್ತರದ ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಈ ಶಿಲಾದೇಗುಲವು 64 ಯೋಗಿನಿಯರ ಪುಟ್ಟ ಪುಟ್ಟ ಉಪದೇಗುಲಗಳನ್ನು ಹೊಂದಿದ್ದು, ನಡುವೆ ಪ್ರಧಾನ ಗರ್ಭಗುಡಿ ಹೊಂದಿದೆ. ಬೆಟ್ಟದ ಮೇಲೆ ನಿರ್ಮಾಣಗೊಂಡಿರುವುದರಿಂದಾಗಿ, ಇಲ್ಲಿನ ಸೂರ್ಯಾಸ್ತ, ಸೂರ್ಯೋದಯಗಳೂ ಸಾಕಷ್ಟು

 

ಬಂಗಾಲದ ದೊರೆಯಿಂದ ನಿರ್ಮಾಣ

ದೇಗುಲದ ನಿರ್ಮಾಣದ ಕುರಿತಾಗಿ ದೊರೆತಿರುವ ಶಿಲಾಶಾಸನದ ಪ್ರಕಾರ, ಬಂಗಾಳದ ಪಾಲ ದೊರೆಯಾದ ದೇವಪಾಲನು (ಪ್ರಶ.1055-1075) ಈ ದೇವಾಲಯವನ್ನು ನಿರ್ಮಿಸಿದನು. ದೇಗುಲದ ಶಿಲ್ಪಿಿಗಳು ವೃತ್ತಾಾಕಾರದ ತಳಪಾಯದ ಮೇಲೆ ಈ ಶಿಲಾದೇಗುಲವನ್ನು ನಿರ್ಮಿಸಲು ನಿರ್ಧರಿಸಿದ್ದು ವಿಶೇಷ. ನಮ್ಮ ದೇಶದಲ್ಲಿ ಈ ರೀತಿಯ ವೃತ್ತಾಾಕಾರದ ದೇಗುಲಗಳು ಕೇವಲ ನಾಲ್ಕಾಾರು ಇವೆ. ಒಡಿಶಾದ ಹೀರಾಪುರ, ರಾಣಿಪುರ, ಮಧ್ಯಪ್ರದೇಶದ ಭೇಡಾಘಾಟ್ ನಲ್ಲಿ ಇಂತಹ ದೇಗುಲಗಳನ್ನು ಕಾಣಬಹುದು. ನಮ್ಮ ರಾಜ್ಯದ ಐಹೊಳೆಯ ದುರ್ಗಾ ಅರ್ಧವೃತ್ತಾಾಕಾರದ ತಳಪಾಯ ಹೊಂದಿರುವುದನ್ನು ಇಲ್ಲಿ ಗಮನಿಸಬಹುದು.

ವಾಸ್ತು
170 ಅಡಿ ವ್ಯಾಾಸ ಇರುವ ಈ ಶಿಲಾ ದೇಗುಲವು ಪರಿಪೂರ್ಣ ವೃತ್ತಾಾಕಾರದಲ್ಲಿದ್ದು, 64 ಉಪಗುಡಿಗಳನ್ನು ಹೊಂದಿದೆ. ಮತ್ತು ಮಧ್ಯದಲ್ಲಿರುವ ಗರ್ಭಗುಡಿಯಲ್ಲಿ ಶಿವನನ್ನು ಸ್ಥಾಾಪಿಸಲಾಗಿದೆ. ಹಿಂದೆ ಇಲ್ಲಿ ಯೋಗಿನಿಯ ವಿಗ್ರಹ ಇತ್ತು ಎಂದು ತಜ್ಞರು ಗುರುತಿಸಿದ್ದಾಾರೆ. ದೇಗುಲದ ಹೊರ ಭಾಗದಲ್ಲಿ ಕೆಲವು ಉಬ್ಬು ಶಿಲ್ಪಗಳಿವೆ. ಯೋಗಿನಿಯರಿಗೆ ಮೀಸಲಾಗಿದ್ದ 64 ಉಪ ಗುಡಿಗಳು ಮತ್ತು ಮಧ್ಯಭಾಗದಲ್ಲಿರುವ ಗುಡಿಯ ಮೇಲೆ ಹಿಂದೆ ಶಿಖರಗಳಿದ್ದವು ಎಂದು ಕಾಲಕ್ರಮೇಣ ಅವು ನಾಶಗೊಂಡಿವೆ. ಜ್ಯೋೋತಿಷ್ಯ ಶಾಸ್ತ್ರ ಮತ್ತು ಅಂದಿನ ಕೆಲವು ಗಣಿತದ ವಿನ್ಯಾಾಸಗಳನ್ನು ಈ ದೇಗುಲದ ವಾಸ್ತುವಿನಲ್ಲಿ ಅಳವಡಿಸಲಾಗಿದೆ ಎನ್ನಲಾಗಿದೆ.

ಬೆಟ್ಟದ ಮೇಲಿರುವ ಈ ದೇಗುಲದ ತಳದಲ್ಲಿ ಮಳೆ ನೀರಿನ ಸಂಗ್ರಹಕ್ಕಾಾಗಿ ಶಿಲಾತೊಟ್ಟಿಿಯನ್ನು ನಿರ್ಮಿಸಲಾಗಿದ್ದು, ದೇಗುಲದ ತಳದಲ್ಲಿರುವ ಜಾಲರಿಯ ಮೂಲಕ ಮಳೆ ನೀರು ಅಲ್ಲಿ ಸಂಗ್ರಹವಾಗುತ್ತಿಿತ್ತು. ಜತೆಗೆ ದೇಗುಲದ ಛಾವಣಿಯ ಮೇಲೆ ಬಿದ್ದ ನೀರು ಕೊಳವೆಗಳ ಮೂಲಕ, ದೇಗುಲದ ಅಡಿ ಇರುವ ಬಾವಿಗೆ ಹೋಗಿ ಸೇರುತ್ತಿಿತ್ತು.
ಇಂದಿಗೂ ಹಲವು ವಿಗ್ರಹಗಳಿಗೆ ಇಲ್ಲಿ ಪೂಜೆ ನಡೆಯುತ್ತಿಿದೆ. ಶತಮಾನಗಳ ಕಾಲನ ಹೊಡೆತಕ್ಕೆೆ ದೇಗುಲವು ತುಸು ನಲುಗಿದ್ದರೂ, ಇಂದಿಗೂ ಸಾಕಷ್ಟು ಉತ್ತಮ ಸ್ಥಿಿತಿಯಲ್ಲಿರುವುದು ವಿಶೇಷ. ಒಳನಾಡು ಪ್ರದೇಶದಲ್ಲಿರುವುದರಿಂದಾಗಿ, ಹೆಚ್ಚು ಪ್ರಸಿದ್ಧಿಿ ಪಡೆಯದೇ ಇದ್ದ ಈ ವೃತ್ತಾಾಕಾರದ ಅಪರೂಪದ ದೇಗುಲವು, ಈಚಿನ ವರ್ಷಗಳಲ್ಲಿ ಅಂತರ್ಜಾಲದ ಜನಪ್ರಿಿಯತೆಯಿಂದಾಗಿ ಸಾಕಷ್ಟು ವಲಯಗಳಲ್ಲಿ ಗುರುತಿಸಿಕೊಂಡಿದೆ. ಹಲವು ಕುತೂಹಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿಿದೆ.
ಎಲ್ಲಿದೆ: ಮಿಟಾವಾಲಿ ಗ್ರಾಾಮದಲ್ಲಿರುವ ಈ ದೇಗುಲವು ಮಧ್ಯಪ್ರದೇಶದ ಮೊರೆನಾ ಜಿಲ್ಲಾಾಕೇಂದ್ರದಿಂದ 15 ಕಿಮೀ ಮತ್ತು ಗ್ವಾಾಲಿಯಾರ್‌ನಿಂದ ಕಿಮೀ ದೂರದಲ್ಲಿದೆ.

ಸಂಸತ್ ಭವನಕ್ಕೆೆ ಸ್ಫೂರ್ತಿ
ದೆಹಲಿಯಲ್ಲಿರುವ ಸಂಸತ್ ಭವನ ನಿರ್ಮಾಣದ ಸಮಯದಲ್ಲಿ ಮೊರೆನಾದ ಯೋಗಿನಿ ದೇಗುಲದ ವಿನ್ಯಾಾಸದ ಕುರಿತಾದ ಚರ್ಚೆ ನಡೆದಿತ್ತು. ಸೆಸ್ಮಿಿಕ್ ವಲಯ 3ರಲ್ಲಿ ಇರುವ ಈ ದೇಗುಲವು ಸುಮಾರು 1200 ವರ್ಷಗಳ ಕಾಲ ಭೂಕಂಪನವನ್ನು ತಡೆದು ನಿಂತಿರುವುದನ್ನು ಗುರುತಿಸಿದ ವಾಸ್ತು ವಿನ್ಯಾಾಸಕಾರು, ದೆಹಲಿಯ ಸಂಸತ್ ಭವನಕ್ಕೂ ಈ ವಿನ್ಯಾಾಸ ಸೂಕ್ತ ಎಂದು ನಿರ್ಧರಿಸಿದರು. ದೆಹಲಿಯು ಸೆಸ್ಮಿಿಕ್ ವಲಯ 4ರಲ್ಲಿದೆ.