*ಬೇಲೂರು ರಾಮಮೂರ್ತಿ
ನಮಗೆ ಲಭ್ಯವಿರುವುದನ್ನು ನಮ್ಮಿಿಂದ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿದರ್ಶನದಂತಿದೆ ಚಂದ್ರಹಾಸನ ಕಥೆ.
ಕೇರಳ ದೇಶದ ಅರಸನಿಗೆ ಮೂಲಾನಕ್ಷತ್ರದಲ್ಲಿ ಒಬ್ಬ ಮಗ ಹುಟ್ಟುತ್ತಾಾನೆ. ಅದರಿಂದ ಕೇಡಾಗುತ್ತದೆ ಎಂದು ಜ್ಯೋೋತಿಷಿಗಳು ಹೇಳಿದ ಕೆಲವೇ ದಿವಸಗಳಲ್ಲಿ ಶತೃರಾಜರು ಕೇರಳ ದೇಶವನ್ನು ಮುತ್ತಿಿ ರಾಜನನ್ನು ಕೊಲ್ಲುತ್ತಾಾರೆ. ಮುಂದಿನ ಬದುಕಿಗೆ ಹೆದರಿ ರಾಣಿ ಆತ್ಮಹತ್ಯೆೆ ಮಾಡಿಕೊಳ್ಳುತ್ತಾಾಳೆ. ರಾಜ್ಯ ಶತೃದೇಶದ ವಶವಾಗುತ್ತದೆ. ಆ ಸಮಯದಲ್ಲಿ ದಾಸಿಯೊಬ್ಬಳು ಈ ಮಗುವನ್ನು ಜೋಪಾನ ಪಕ್ಕದ ಕುಂತಳ ರಾಜ್ಯಕ್ಕೆೆ ಕರೆದುಕೊಂಡು ಹೋಗಿ ಬೆಳೆಸುತ್ತಾಾಳೆ. ಕ್ರಮೇಣ ಈ ಮಗು ಕುಂತಳ ರಾಜ್ಯದ ಜನರ ಅಚ್ಚುಮೆಚ್ಚಿಿನ ಕೂಸಾಗುತ್ತದೆ. ಆಟವಾಡುವಾಗ ಮಗುವಿಗೆ ಸಿಕ್ಕಿಿದ ಸಾಲಿಗ್ರಾಾಮ ಶಿಲೆಯೊಂದನ್ನು ಮಗು ಯಾವಾಗಲೂ ತನ್ನ ಬಾಯಲ್ಲಿ ಇಟ್ಟುಕೊಂಡಿರುತ್ತದೆ.
ಕುಂತಳ ದೇಶದ ರಾಜನಿಗೆ ಮಕ್ಕಳಿರಲಿಲ್ಲ. ಒಮ್ಮೆೆ ಅವನು ಏರ್ಪಡಿಸಿದ ಸಂತರ್ಪಣೆಗೆ ಈ ಮಗು ತನ್ನ ಸಾಕಿದವರ ಜೊತೆ ಹೋಗಿತ್ತು. ಮಗುವಿನ ಲಕ್ಷಣ ನೋಡಿ ಈ ಮಗು ಮುಂದೆ ಚರ್ಕವರ್ತಿಯಾಗುತ್ತಾಾನೆ ಎಂದು ಜ್ಯೋೋತಿಷಿಗಳು ಭವಿಷ್ಯ ನುಡಿದರು. ಮಂತ್ರಿಿಯನ್ನು ಕರೆದು ಈ ಮಗುವನ್ನು ರಕ್ಷಿಸು ಎಂದು ಆಜ್ಞೆ ಮಾಡುತ್ತಾಾನೆ. ಮಂತ್ರಿಿ ತನ್ನ ಹೆಸರಿನಂತೆಯೇ ದುಷ್ಟಬುದ್ಧಿಿಯವನು. ಹೇಗೂ ರಾಜನಿಗೆ ಮಕ್ಕಳಿಲ್ಲ. ಹೀಗಾಗಿ ತನ್ನ ಮಗನನ್ನೇ ಉತ್ತರಾಧಿಕಾರಿಯನ್ನಾಾಗಿ ಮಾಡುವ ಸಂಚು ರೂಪಿಸಿದ್ದವನಿಗೆ ಬಹಳ ನಿರಾಸೆಯಾಯಿತು. ಅದಕ್ಕೆೆ ಅವನು ಚಂಡಾಲರನ್ನು ಕರೆದು ಈ ಮಗುವನ್ನು ಕಾಡಿಗೆ ಕರೆದುಕೊಂಡು ಹೋಗಿ ಕೊಂದುಬಿಡಿ ಎಂದು ಹೇಳುತ್ತಾಾನೆ.
ಸಣ್ಣ ಮಗು ಕಾಡಿನಲ್ಲಿ ಪ್ರಾಾಣಿಗಳ ಕೈಗೆ ಸಿಕ್ಕು ನರಳುವುದು ಬೇಡ ಅನಿಸಿತು. ಮಗುವಿನ ಬಾಯಲ್ಲಿ ಸಾಲಿಗ್ರಾಾಮ ಶಿಲೆ ಅದು ಸದಾ ಕೃಷ್ಣನಾಮವನ್ನು ಎಡೆಬಿಡದೇ ಜಪಿಸುತ್ತಿಿದ್ದುದರಿಂದ ಮಗುವನ್ನು ಕರೆದುಕೊಂಡು ಹೋದ ಚಂಡಾಲರು ಮಗುವಿನ ಲಕ್ಷಣವನ್ನು ನೋಡಿ, ಅದನ್ನು ಕೊಲ್ಲಲು ಮನಸ್ಸು ಬಾರದೇ ಅದರ ಆರನೇ ಕಾಲ್ಬೆೆರಳನ್ನು ಮಾತ್ರ ಕತ್ತರಿಸಿ ತೆಗೆದುಕೊಂಡು ಹೋಗಿ ದುಷ್ಟ ಬುದ್ಧಿಿಗೆ ತೋರಿಸಿ ಮಗುವನ್ನು ಕೊಂದೆವೆಂದು ಹೇಳುತ್ತಾಾರೆ. ಮುಂದೆ ಕುಳಿಂದನೆಂಬ ಬೇಡರ ರಾಜ್ಯದ ಅರಸು ಕಾಡಿಗೆ ಬಂದಿದ್ದಾಾಗ ಈ ಮಗು ಅವನ ಕಣ್ಣಿಿಗೆ ಬಿದ್ದು ಮಕ್ಕಳಿಲ್ಲದ ಅವನಿಗೆ ಸ್ವರ್ಗವನ್ನು ತೋರಿಸಿತು. ಮಗುವನ್ನು ಅರಮನೆಗೆ ಕರೆದುಕೊಂಡು ಹೋಗಿ ತೋರಿಸಿ ಮಗುವಿಗೆ ಚಂದ್ರಹಾಸನೆಂದು ನಾಮಕರಣ ಮಾಡಿದರು. ಮುಂದೆ ಚಂದ್ರಹಾಸನು ಬೇಡರ ರಾಜ್ಯಕ್ಕೆೆ ಅಧಿಪತಿಯಾದ.