Sunday, 15th December 2024

ಅಸ್ತಿತ್ವದಲ್ಲಿ ನಂಬಿಕೆ

*ಹನುಮಂತ. ಮ ದೇಶಕುಲಕರ್ಣಿ

ಅರ್ಥಪೂರ್ಣ ಕಥೆಗಳನ್ನು ಹೇಳುವ ಮೂಲಕ, ಜನಸಾಮಾನ್ಯರಿಗೆ ಅಧ್ಯಾಾತ್ಮದ ಮಾಡಿಸಿಕೊಡುವಲ್ಲಿ ಪರಮಹಂಸರು ಸಿದ್ಧ ಹಸ್ತರು. ಪುಟ್ಟ ಪುಟ್ಟ ಕಥೆಗಳೇ ಸಾಧನೆಯ ಮೆಟ್ಟಿಿಲುಗಳಾಗುವ ಪರಿ ಅವರ ಮಾತಿನಲ್ಲಿ ಕಾಣಬಹುದು.

ರಾಮಕೃಷ್ಣ ಪರಮಹಂಸರು ಶ್ರದ್ಧಾಾಭಕ್ತಿಿಗೆ ಹೆಚ್ಚಿಿನ ಒತ್ತು ನೀಡಿ ಬೋಧಿಸುತ್ತಿಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ.

ಅಧ್ಯಾಾತ್ಮ ಸಾಧನೆಗೆ ಎಲ್ಲಕ್ಕಿಿಂತ ಮುಖ್ಯವಾಗಿ ಬೇಕಾದುದು ಶ್ರದ್ಧೆೆ. ಸ್ವತಃ ನಿಮ್ಮ ಮೇಲಿನ ಶ್ರದ್ಧೆೆ ಹಾಗೂ ಯಾರ /ಯಾವುದರ ಧ್ಯಾಾನಿಸುತ್ತೀರೋ ಅದರ /ಅವರ ಮೇಲಿನ ಶ್ರದ್ಧೆೆ. ಶಿಶುಸಹಜವಾದ ಶ್ರದ್ಧೆೆ ಮತ್ತು ಸರಳತೆಯಿಂದ ಭಗವಂತನನ್ನು ಕೂಡಾ ಹೊಂದಬಹುದು.

ಒಮ್ಮೆೆ ಒಬ್ಬ ವ್ಯಕ್ತಿಿಯು, ಸಾಧುವೊಬ್ಬರನ್ನು ಕಂಡು ತನಗೆ ಉಪದೇಶ ನೀಡಬೇಕೆಂದು ಕೇಳಿಕೊಂಡನು. ಅದಕ್ಕೆೆ ಆ ಸಾಧುವು ‘ದೇವರನ್ನು ಹೃತ್ಪೂರ್ವಕವಾಗಿ ಪ್ರೀತಿಸು’ ಎಂದರು. ಈ ಉಪದೇಶ ಆತನಿಗೆ ಸಮಾಧಾನ ಕೊಡಲಿಲ್ಲ. ‘ನಾನು ದೇವರನ್ನು ನೊಡಿಯೇ ಇಲ್ಲ. ಅದರ ವಿಚಾರವಾಗಿ ನನಗೇನೂ ತಿಳಿದಿಲ್ಲ. ಇನ್ನು ಪ್ರೀತಿಸುವುದು ಹೇಗೆ!?’ ಎಂದು ಮರು ಪ್ರಶ್ನಿಿಸಿದನು.

ಅದಕ್ಕೆೆ ಆ ‘ನೀನು ನಿನ್ನ ಜೀವನದಲ್ಲಿ ಅತಿಯಾಗಿ ಪ್ರೀತಿಸುವುದು ಯಾರನ್ನು?’ ಎಂದು ಕೇಳಿದರು. ‘ನನಗೆ ಯಾರೂ ಇಲ್ಲ. ಕುರಿ ಕಾಯುವುದೇ ನನ್ನ ವೃತ್ತಿಿ. ನನ್ನ ಬಳಿ ಒಂದು ಕುರಿ ಇದೆ. ನಾನು ಅದನ್ನು ಇನ್ನಿಿಲ್ಲದಂತೆ ಪ್ರೀತಿಸುತ್ತೇನೆ’ ಎಂದ ಆ ವ್ಯಕ್ತಿಿ.

‘ಸರಿ, ಹಾಗಾದರೆ ಅದನ್ನೇ ಹೃತ್ಪೂರ್ವಕವಾಗಿ ಪ್ರೀತಿಸು. ದೇವರು ಅದರಲ್ಲೂ ಇರುವನು ಎಂದು ತಿಳಿದು ಪ್ರೀತಿಸು’ ಎಂದರು ಸಾಧು. ಅದನ್ನು ಕೇಳಿದ ವ್ಯಕ್ತಿಿಯು ಅಂದಿನಿಂದಲೇ ಮೊದಲುಗೊಂಡು ತನ್ನ ಕುರಿಯಲ್ಲಿ ಭಗವಂತನನ್ನು ಭಾವಿಸುತ್ತಾಾ ಆರಂಭಿಸಿದನು. ಕುರಿಯನ್ನು ಪ್ರೀತಿಸುವುದರ ಜತೆಯಲ್ಲೇ, ಮನಃಪೂರ್ವಕವಾಗಿ ಆರಾಧಿಸತೊಡಗಿದನು. ದಿನದ ಪ್ರತಿ ಕ್ಷಣವನ್ನೂ ಕುರಿಯ ಧ್ಯಾಾನಕ್ಕೆೆ ಮೀಸಲಿಟ್ಟನು, ಕುರಿಯಲ್ಲೇ ದೈವತ್ವವನ್ನು ಕಂಡುಕೊಳ್ಳಲು ಪ್ರಯತ್ನಿಿಸಿದನು. ಸಾಧನೆಯು ಮುಂದುವರಿಯಿತು. ಕ್ರಮೇಣ ಸಾಧನೆಯ ಅರ್ಥ ಆತನಿಗೆ ಅರಿವಾಗತೊಡಗಿತು. ಮುಂದೆ ಆತನ ಸಾಧನೆಗೆ ಕುರಿಯ ಆಧಾರವೂ ಬೇಕಾಗಲಿಲ್ಲ. ಅದು ಹಾಗೆಯೇ ಯಶಸ್ವಿಿಯಾಗಿ ಮುಂದುವರಿಯಿತು.

ಒಮ್ಮೆೆ ನಮಗೆ ಅಸ್ತಿಿತ್ವದಲ್ಲಿ ನಂಬಿಕೆ ಹುಟ್ಟಿಿದರೆ ಸಾಕು, ಅನಂತರದಲ್ಲಿ ನಾಮ – ರೂಪಗಳ ಆಸರೆಯೇ ಬೇಕಾಗುವುದಿಲ್ಲ. ಭಕ್ತಿಿ – ವಿವೇಕ – ಅವಶ್ಯಕತೆಯೂ ಬೇಕಾಗುವುದಿಲ್ಲ. ನಮ್ಮ ಶ್ರದ್ಧೆೆ, ನಂಬಿಕೆಗಳೇ ನಮ್ಮನ್ನು ಆಧ್ಯಾಾತ್ಮಿಿಕ ಉನ್ನತಿಗೆ ಏರಿಸುವವು.