Sunday, 22nd September 2024

ಮುರಗೋಡದ ಶಿವಚಿದಂಬರ ಕ್ಷೇತ್ರ

*ಸುರೇಶ ಗುದಗನವರ

ಬೆಳಗಾವಿ ಜಿಲ್ಲೆೆಯ ಮುರಗೋಡದ ಕೆಂಗೇರಿ ಕ್ಷೇತ್ರದಲ್ಲಿ ಲಿಂಗರೂಪದಲ್ಲಿರುವ ಶಿವಚಿದಂಬರರು ಪವಾಡ ಪುರುಷರು ಎಂದೇ ಹೆಸರಾಗಿದ್ದು, ಅಪಾರ ಜನಸಮೂಹವನ್ನು ಇಂದಿಗೂ ಆಕರ್ಷಿಸುತ್ತಿದ್ದಾರೆ.

ಕನ್ನಡ ನಾಡು ಸಾಧು ಸಂತರಿಗೆ ತವರು ಮನೆ. ನೂರಾರು ಸಂತರು, ಶರಣರು ನಮ್ಮ ನಾಡಿನಲ್ಲಿ ಜನಿಸಿದ್ದಾಾರೆ. ಅಂಥವರಲ್ಲಿ ಶ್ರೀ ಶಿವಚಿದಂಬರೇಶ್ವರರು ಅಗ್ರಗಣ್ಯರು. 17ನೆಯ ಶತಮಾನದಲ್ಲಿ ಧರ್ಮ ಅವನತಿಯತ್ತ ಸಾಗಿದಾಗ, ಲೋಕದ ಉದ್ಧಾಾರಕ್ಕಾಾಗಿ ಶ್ರಮಿಸಿದ ಚಿದಂಬರ ಮಹಾಸ್ವಾಾಮಿಗಳ ಸೇವೆ ಅವಿಸ್ಮರಣೀಯವಾದುದು.

ಬೆಳಗಾವಿ ಜಿಲ್ಲೆೆಯ ಸವದತ್ತಿಿ ತಾಲೂಕಿನ ಮುರಗೋಡದಲ್ಲಿ ಶ್ರೀ ಚಿದಂಬರ ಕ್ಷೇತ್ರವು ಪ್ರಸಿದ್ಧಿಿ ಪಡೆದಿದೆ. ಮುರಗೋಡದ ಕೆಂಗೇರಿ ಕ್ಷೇತ್ರದಲ್ಲಿ ಶಿವಚಿದಂಬರರು ಲಿಂಗರೂಪದಲ್ಲಿ ಇಂದಿಗೂ ಭಕ್ತರಿಗೆ ದರ್ಶನ ನೀಡುತ್ತಿಿದ್ದಾಾರೆ. ಪೂರ್ಣಬ್ರಹ್ಮ ಸರ್ವೇಶ್ವರಾವತಾರ ಎಂದು ವರ್ಣಿತರಾದ ಶಿವಚಿದಂಬರ ಮಹಾಸ್ವಾಾಮಿಜಿಯವರ ಲೀಲೆಗಳು ಮತ್ತು ಪವಾಡಗಳು ಬದುಕಿಗೆ ನವ ಚೈತ್ಯನ್ಯ ನೀಡಿವೆ. ಸಮಾನತೆ, ಐಕ್ಯತೆ, ಆಧ್ಯಾಾತ್ಮಿಿಕತೆಯ ತಿರುಳನ್ನು ಭಕ್ತರ ಮನದಲ್ಲಿ ಬಿತ್ತಿಿದ ಮಹಾನ ಚೇತನ ಚಿದಂಬರ ಜಯಂತಿ ಉತ್ಸವ ಕಾರ್ಯಕ್ರಮಗಳು ನಾಡಿನಾದ್ಯಂತ ನಡೆಯಲಿವೆ.

ಬಾಲ್ಯದಲ್ಲೇ ಲೀಲೆ ತೋರಿದ ಚಿದಂಬರ
ಮಾರ್ತಾಂಡ ದೀಕ್ಷಿತರು ಸವದತ್ತಿಿ ತಾಲೂಕಿನ ಬೆಟಸೂರ ಗ್ರಾಾಮದ ಲಕ್ಷ್ಮೀದೇವಿಯನ್ನು 1749ರಲ್ಲಿ ವಿವಾಹವಾದರು. ಅವರಿಗೆ 9 ವರ್ಷಗಳು ಗತಿಸಿದರೂ ಸಂತಾನ ಭಾಗ್ಯವಾಗಲಿಲ್ಲ. ಮಾರ್ತಾಂಡ ದೀಕ್ಷಿತರು ಸೊಗಲ ಕ್ಷೇತ್ರದಲ್ಲಿ ಹಾಗೂ ತಮಿಳುನಾಡಿನ ಆಕಾಶ ಚಿದಂಬರ ಕ್ಷೇತ್ರದಲ್ಲಿ ಕಠೋರ ತಪಸ್ಸು ದಂಪತಿಗಳಿಗೆ ಭಗವಂತನು ಪ್ರತ್ಯಕ್ಷನಾದನು. ತಪಸ್ಸಿಿನ ಫಲದಿಂದ ನವ್ಹೆೆಂಬರ್ 20, 1758ರಂದು ಬಹುಧಾನ್ಯನಾಮ ಸಂವತ್ಸರ ಕಾರ್ತಿಕ ವದ್ಯ ಷಷ್ಠಿಿ ಸೋಮವಾರ ಮುರಗೋಡದಲ್ಲಿ ಶಿವಚಿದಂಬರರು ಜನಿಸಿದರು.

ಶಿವಚಿದಂಬರರು ಬಾಲ್ಯದಿಂದಲೇ ತಮ್ಮ ಲೀಲೆಗಳನ್ನು ತೋರಿಸಲು ಪ್ರಾಾರಂಭಿಸಿದರು. ಅವರ ತಾಯಿಗೆ ಬಾಯಿಯಲ್ಲಿ ಬ್ರಹ್ಮಾಾಂಡ ತೋರಿಸಿದರು. ಮಣ್ಣು ಸಕ್ಕರೆ ಮಾಡಿ, ಕಲ್ಲು ಪೇಡೆ ಮಾಡಿ, ಮಣ್ಣಿಿನ ಆನೆಗೆ ಜೀವ ತುಂಬಿ ನಡೆಸಿದರು. ಹೀಗೆ ಹಲವಾರು ಬಾಲ ಲೀಲೆಗಳನ್ನು ತೋರಿಸಿದರು. ಚಿದಂಬರರು. ಇವರು ತಮ್ಮ ಪವಾಡಗಳಿಂದ ನಿರ್ಜಲವಾದ ಜಲವನ್ನು ತರಿಸಿದರು. ರಾಮದುರ್ಗದ ತಾಲೂಕಿನ ಗೊಣ್ಣಾಾಗರದಲ್ಲಿ ಸೋಮಯಾಗ ಯಜ್ಞ ಮಾಡಿ ಬರಗಾಲದ ಭೂಮಿಗೆ ಮಳೆ ತರಸಿ ಫಲ ನೀಡುವಂತೆ ಮಾಡಿದರು. ಹಸಿವೆಯಿಂದ ಬಳಲುವ ಜನರಿಗೆ ಅನ್ನ ಸಂತರ್ಪಣೆ ಮಾಡಿ ಜನರನ್ನು ತೃಪ್ತಿಿಗೊಳಿಸಿದರು.

ಚಿದಂಬರರ ಸಹಜ ಲೀಲೆಗಳನ್ನು ಕಂಡು ಜನತೆ, ಧಾರ್ಮಿಕವಾಗಿ ಒಲವು ತೋರತೊಡಗಿದರು. ಮೌಢ್ಯ ಅಥವಾ ಡಂಭಾಚಾರದ ಧರ್ಮಾಚರಣೆ ಮೆಚ್ಚದ ಶಿವಚಿದಂಬರರು ಪ್ರತಿಯೊಬ್ಬರು ತಮ್ಮ ಆತ್ಮದ ಉದ್ದಾಾರಕ್ಕಾಾಗಿ ಪ್ರಯತ್ನಿಿಸಬೇಕು ಎಂದು ಉಪದೇಶಿಸಿದರು. ಶಿವಚಿದಂಬರ ಎಂದರೆ ಸಾಕು ಭಕ್ತರ ಕಷ್ಟಗಳು ಕರಗಿ ಹೋಗುವವು ಎಂದು ಅನೇಕ ಪವಾಡ ನಿದರ್ಶನಗಳ ಮೂಲಕ ಸಮಾಜಕ್ಕೆೆ ತೋರಿಸಿಕೊಟ್ಟರು. ಚಿದಂಬರರು ಜಾತಿ, ಮತ, ಪಥಗಳೆನ್ನದೆ ಬಡವ ಬಲ್ಲಿದರೆಂಬ ಬೇಧ ಮಾಡದೇ ಧರ್ಮ ಒಂದೇ ಎಂದು ಸಾರಿದರು. ಚಿದಂಬರರು ವಿವಿಧ ಗ್ರಾಾಮಗಳಲ್ಲಿ ಸದ್ಭಾಾವನಾ ಯಾತ್ರೆೆ ಕೈಗೊಂಡು ಏಕತಾ ಮನೋಭಾವ ಮತ್ತು ಸರ್ವಧರ್ಮ ಸಹಿಷ್ಣುತೆ ಜೊತೆಗೆ ವಿಶ್ವಮಾನವ ಭಾವೈಕ್ಯತೆ ಬರುವ ಉದ್ದೇಶದಿಂದ ಅನೇಕ ಲೀಲೆಗಳನ್ನು ಮಾಡುತ್ತ ಭಕ್ತರ ಮನೋಕಾಮನೆಗಳನ್ನು ಈಡೇರಿಸಿದರು.

ಶಿವಚಿದಂಬರರು 57 ವರ್ಷಗಳ ಪರ್ಯಂತರವಾಗಿ ಭಕ್ತರ ಮಧ್ಯದಲ್ಲಿ ತಮ್ಮ ಪವಾಡಗಳಿಂದ ನೊಂದಿರುವ ಸಮಾಜಕ್ಕೆೆ ಧೈರ್ಯ ತುಂಬಿ ಪ್ರಸಿದ್ಧಿಿಯಾದರು. ಅವರು 1816ರಲ್ಲಿ ಜನೆವರಿ 3ರಂದು ಅಹಂ ಬ್ರಹ್ಮಾಾಸ್ಮಿಿ ಎನ್ನುತ್ತ ಅವತಾರ ಸಮಾಪ್ತಿಿಗೊಳಿಸಿದರು. ಶಿವಚಿದಂಬರರು ಅವತಾರ ಸಮಾಪ್ತಿಿಗೊಳಿಸಿದ ಮುರಗೋಡದ ಕೆಂಗೇರಿ ಇಂದು ಪಾವನಕ್ಷೇತ್ರವಾಗಿ ಪ್ರಸಿದ್ಧಿಿಪಡೆದಿದೆ. ಈಗ ಚಿದಂಬರ ಸ್ವಾಾಮೀಜಿಯವರ ವಂಶಜರು ಕ್ಷೇತ್ರದ ಉನ್ನತಿಗಾಗಿ ಶ್ರಮಿಸುತ್ತಿಿದ್ದಾಾರೆ. ದಿವಾಕರ ದೀಕ್ಷಿತರು ಸುಬ್ರಹ್ಮಣ್ಯಪುರದಿಂದ ಚಿದಂಬರ ಲಿಂಗವನ್ನು ತಂದು ಪ್ರತಿಷ್ಠಾಾಪಿಸಿದು. ಅಂದಿನಿಂದ ನಿರಂತರ ಪೂಜೆ, ಯಜ್ಞ, ಹೋಮ, ಹವನಗಳು, ಅನ್ನದಾಸೋಹ, ಅಕ್ಷರದಾಸೋಹ, ಉತ್ಸವಗಳು ಮುಂತಾದ ಧಾರ್ಮಿಕ ವ್ಯವಸ್ಥಿಿತವಾಗಿ ನಡೆಯುತ್ತ ಬಂದಿವೆ.

ಮಾರ್ತಾಂಡ ದೀಕ್ಷಿತರು ಲೀನವಾದ ಸ್ಥಳದಲ್ಲಿ ಔದುಂಬರ ವೃಕ್ಷವು ಅಂಕುರಿತಗೊಂಡಿದೆ. ಇಲ್ಲಿ ಮಾರ್ತಾಂಡ ದೀಕ್ಷಿತರ ಪಾದುಕೆಗಳನ್ನು ಸ್ಥಾಾಪಿಸಲಾಗಿದೆ. ಅಲ್ಲದೇ ಚಿದಂಬರ ತಾಯಿಯವರಾದ ಲಕ್ಷ್ಮೀದೇವಿಯವರು ಲೀನವಾದ ಸ್ಥಳದಲ್ಲಿ ಅವರ ಪಾದುಕೆಗಳನ್ನು ಪ್ರತಿಷ್ಠಾಾಪನ ಮಾಡಲಾಗಿದೆ. ಅಲ್ಲದೇ ದತ್ತ ಪಾದುಕಾ, ಸ್ವಯಂ ಪ್ರಕಾಶ ದೀಕ್ಷಿತರ ಪಾದುಕಾಗಳನ್ನು ಪ್ರತಿಷ್ಠಾಾಪಿಸಲಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಶಾಖಾಂಬರ ದೇವಸ್ಥಾಾನ, ಯಜ್ಞಕುಂಡ ಮಂಟಪ, ಗಯಾ ತೀರ್ಥ, ಚಯನ ಯಾಗ ಕಟ್ಟೆೆ ಮತ್ತು ಅನ್ನದಾನ ಛತ್ರಗಳಿವೆ.

         ಕೆಂಪು ನೀರಿನ
ಕ್ಷೇತ್ರದಲ್ಲಿ ಗುರುಪೀಠ, ಸಭಾಮಂಟಪ ಮತ್ತು ಸೂರ್ಯ, ಮಹಾವಿಷ್ಣು, ಶಕ್ತಿಿ, ಗಣಪತಿ, ಈಶ್ವರ, ಮಾರುತಿ ಹಾಗೂ ನಂದಿ ವಿಗ್ರಹಗಳನ್ನು ಪ್ರತಿಷ್ಠಾಾಪಿಸಲಾಗಿದೆ. ಕ್ಷೇತ್ರದ ಪಕ್ಕದಲ್ಲಿ ಕೆಂಪು ನೀರಿನ ಕೆರೆಯಿದೆ. ಹೀಗಾಗಿ ಕ್ಷೇತ್ರವು ಕೆಂಗೇರಿ ಎಂದು ಪ್ರಸಿದ್ಧಿಿ ಪಡೆದಿದೆ. ಇತ್ತೀಚಿಗೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಾಮಿಜಿಯವರು ಈ ಕ್ಷೇತ್ರಕ್ಕೆೆ ಭೇಟಿ ನೀಡಿರುವದು ವಿಶೇಷ.

ಪ್ರತಿವರ್ಷವೂ ಚಿದಂಬರ ಕ್ಷೇತ್ರದಲ್ಲಿ ಅದ್ಧೂಚ್ಟಿರಿಯಾಗಿ ಏಳು ದಿನಗಳವರೆಗೆ ಉತ್ಸವ ಜರುಗುತ್ತದೆ. ಶಿವಚಿದಂಬರರ ಜಯಂತಿ ಮಹೋತ್ಸವ ಹಾಗೂ ಸಾಂಪ್ರದಾಯಿಕ ಭಜನೆ, ಭರತನಾಟ್ಯ, ಭಕ್ತಿಿ ಸಂಗೀತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಿಯಾಗಿ ಜರುಗುತ್ತವೆ. ಅಲ್ಲದೇ ಶೇಷ, ಪುಷ್ಪ, ಗರುಡ, ಮಯೂರ, ಹಂಸ, ವೃಷಭ, ಆಶ್ವ, ಗಜ ವಾಹನೋತ್ಸವಗಳು ನಡೆಯುತ್ತವೆ. ನಂತರ ಶಿವಚಿದಂಬರರ ಮಹಾರಥೋತ್ಸವವು ಅದ್ದೂರಿಯಾಗಿ ನೆರವೇರುತ್ತದೆ.
ಪಂಢರಪುರದಲ್ಲಿ ನೆಲೆ ನಿಂತ ಪಾಂಡುರಂಗರು ಮಹಾರಾಷ್ಟ್ರದವರಾಗಿ ಗುರುತಿಸಿಕೊಂಡರೆ, ಕರ್ನಾಟಕದಲ್ಲಿ ಹುಟ್ಟಿಿ ದುಷ್ಟರನ್ನು ಶಿಷ್ಟರನ್ನಾಾಗಿಸಿದ ಕೀರ್ತಿ ಶಿವಚಿದಂಬರ ಸ್ವಾಾಮಿಜಿಯವರದು. ಕ್ಷೇತ್ರಕ್ಕೆೆ ಭೇಟಿ ನೀಡಲು ಸವದತ್ತಿಿ, ಯರಗಟ್ಟಿಿ, ಬೈಲಹೊಂಗಲಗಳಿಂದ ಬಸ್ ಸೌಲಭ್ಯ ವ್ಯವಸ್ಥೆೆ ಇದೆ.