Sunday, 15th December 2024

ಯೋಚನೆ ಸಮೃದ್ಧವಾಗಿರಲಿ

ಮಹಾದೇವ ಬಸರಕೋಡ

ಒಳ್ಳೆಯದನ್ನು ಯೋಚಿಸುತ್ತಾ ಇದ್ದರೆ, ಒಳ್ಳೆಯದೇ ಅರಸಿ ಬರುತ್ತದೆ. ಇದು ಜಗದ ನಿಯಮ.

ನಮ್ಮ ಯೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದರೂ, ನಮ್ಮ ಯೋಚನೆಗಳನ್ನು ಸಮೃದ್ಧವಾಗಿಸಿಕೊಳ್ಳುವುಲ್ಲಿ, ದೊಡ್ಡ ಕನಸು ಕಾಣುವಲ್ಲಿ ಜಿಪುಣತನ ತೋರುತ್ತವೆ. ವಿಧಿಯನ್ನು ಹಳಿಯುತ್ತ ವ್ಯರ್ಥ ಕಾಲಹರಣ ಮಾಡುತ್ತೇವೆ. ವೈಫಲ್ಯಗಳನ್ನೇ ಕಲ್ಪಿಸಿಕೊಳ್ಳುತ್ತ, ಕ್ರಮೇಣ ಅರಿವಿದಲ್ಲದಂತೆ ಅವುಗಳ ಆಹಾರವಾಗಿ ಬಿಡುತ್ತೇವೆ. ಇದು ನಮ್ಮ ಬದುಕನ್ನು ನಿರಾಸೆಯ ಸುಳಿಗೆ ತಳ್ಳಿಬಿಡುತ್ತದೆ.

ನಮಗೆಲ್ಲ ಗೊತ್ತಿರುವ ಪುರಾತನ ಕಥೆಯಿದು. ಬಿರುಬೇಸಿಗೆಯ ದಿನ. ಯುವಕನೊಬ್ಬ ಬಿಸಿಲಿನಲ್ಲಿ ನಡೆದು ತುಂಬ ಬಳಲಿದ್ದ. ಒಂದಷ್ಟು ನೆರಳು ನೀರು ಅರಸಿದ. ಸ್ವಲ್ಪ ದೂರದಲ್ಲಿ ಮರ ಕಂಡಿತು. ಅದರ ಕೆಳಗೆ ನಿಂತ. ಮನಸ್ಸಿಗೆ ಸಮಾಧಾನವಾಯಿತು. ನೀರು ಸಿಕ್ಕರೆ ಬಾಯಾರಿಕೆ ನೀಗಬಹುದು ಎಂದುಕೊಂಡ.

ತಕ್ಷಣದಲ್ಲಿಯೇ ನೀರು ಪ್ರತ್ಯಕ್ಷ! ನೀರಿನ ದಾಹವಾರಿಸಿಕೊಂಡ. ಒಂದಷ್ಟು ಆಹಾರವಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುವಷ್ಟರಲ್ಲಿ ಆಹಾರ ದೊರೆಯಿತು. ಮಲಗಲು ಹಾಸಿಗೆ ಇದ್ದರೆ ಅದೆಷ್ಟು ಒಳ್ಳೆಯದಾಗುತ್ತಿತ್ತು ಎಂದುಕೊಂಡ. ಆ ಕ್ಷಣವೇ ಹಾಸಿಗೆ ಕೂಡ ಪ್ರತ್ಯಕ್ಷ. ಗಾಳಿ ಬೀಸಲು ಒಬ್ಬಳು ಸುಂದರಿ ಇದ್ದರೆ ಅದೆಂಥ ಸುಖ ಎಂದುಕೊಂಡ ಮರುಕ್ಷಣ. ಕೈಯಲ್ಲಿ ಚಾಮರ ಹಿಡಿದು ಸುಂದರಿಯೊಬ್ಬಳು ಗಾಳಿ ಬೀಸತೊಡಗಿದಳು. ಒಂದಷ್ಟು ನಿದ್ದೆಗೆ ಜಾರಬೇಕು ಎನ್ನುವಷ್ಟರಲ್ಲಿ ಅದೇನು ವಿಚಿತ್ರ ನಾನು ಅಂದುಕೊಂಡಂತೆ ಎಲ್ಲವೂ ಸಾಕಾರಗೊಳ್ಳುತ್ತಿದೆ. ಇದೇನು ಅಸುರ ಶಕ್ತಿಯ ಫಲವೇ?

ಯಾವುದಾರರೂ ಅಂತಹ ಅಸುರ ಬಂದು ನನ್ನನ್ನು ನುಂಗಿದರೆ ಎಂದುಕೊಂಡ. ಅದು ಕೂಡ ಘಟಿಸಿಯೇ ಬಿಟ್ಟಿತು! ಮರುಕ್ಷಣ ನೋವಿನಿಂದ ಕಿರುಚಿಕೊಂಡ. ತನ್ನ ಭ್ರಮೆಯಿಂದ ಹೊರಬಂದ. ಆ ಕ್ಷಣಕ್ಕೆ ಅವನಿಗೆ ಅರಿವಾಗಿತ್ತು. ನಮ್ಮ ಯೋಚನೆಗಳು ಒಳ್ಳೆಯದಾಗಿದ್ದರೆ ಒಳ್ಳೆಯದು, ಕೆಟ್ಟದ್ದಾಗಿದ್ದರೆ ಅದರ ಫಲವೂ ಕೂಡ ಕೆಟ್ಟದ್ದೇ ಆಗಿರುತ್ತದೆ ಎಂಬ ಸಂಗತಿ ಅನುಭವಕ್ಕೆ ಬಂದಿತ್ತು.  ಕಥೆ ಕಾಲ್ಪನಿಕವಾದರೂ ಅದರಿಂದ ಹೊರ ಬಂದ ಸಂದೇಶ ಪರಿಣಾಮಕಾರಿ.

ನಮ್ಮ ಆಲೋಚನೆಗಳು ಸಮೃದ್ಧವಾದಷ್ಟು ಬದುಕು ಕೂಡ ಸಮೃದ್ಧವಾಗುತ್ತದೆ. ನಾವು ಜನರನ್ನು ಒಳ್ಳೆಯವರೆಂದು ಭಾವಿಸಿದರೆ, ಮುಕ್ತ ಮನಸ್ಸಿನಿಂದ ನಡೆದರೆ ಅದು ವಾಸ್ತವವನ್ನು ರೂಪಿಸುತ್ತದೆ. ಆಗ ಸಹಜವಾಗಿಯೇ ಜನರು ಕೂಡ ನಮ್ಮ ಬಗ್ಗೆ ಒಳ್ಳೆಯದನ್ನೇ ಯೋಚಿಸಿತ್ತಾರೆ. ನಾವು ಅತ್ಯುತ್ತಮವಾದುದಕ್ಕೆ ಅರ್ಹರೆಂದು
ಭಾವಿಸಿದರೆ, ನಮ್ಮಲ್ಲಿ ಸಹಜವಾಗಿಯೇ ಅಂತಹದೊಂದು ಭಾವ ಮೂಡುತ್ತದೆ. ಅದು ವರ್ತನೆಯಲ್ಲಿಯೂ ತೋರುತ್ತದೆ. ಇದು ಉತ್ತಮ ಬದುಕಿಗೆ ತಳಪಾಯ ವಾಗುತ್ತದೆ. ನಾವು ಯಾವುದರ ಬಗೆಗೆ ಗಮನ ಹರಿಸುತ್ತೇವೆಯೋ ಅದು ವಽಸುತ್ತದೆ. ನಮ್ಮ ಆರೋಗ್ಯವನ್ನು ಮೆಚ್ಚಿಕೊಳ್ಳುವುದರಿಂದ, ನಮ್ಮ ಕುಟುಂಬ ದವರನ್ನು ಒಳ್ಳೆಯವರೆಂದು ಭಾವಿಸುವುದರಿಂದ, ಬದುಕು ನಮಗೆ ನೀಡಿದ ಕೊಡುಗೆಗೆಳನ್ನು ಕೊಂಡಾಡುವುದರಿಂದ, ನಾವು ಮಾಡುವ ಕೆಲಸವನ್ನು ಗೌರವಿ ಸುವದರಿಂದ ನಮ್ಮ ಗ್ರಹಿಕೆಯೇ ಬದಲಾಗುತ್ತದೆ.

ನಾವು ಆಶಾವಾದಿಯಾಗಿದ್ದರೆ ಅವಕಾಶಗಳು ಬರುತ್ತವೆ. ನಾವು ಸಮೃದ್ಧಿ ಕುರಿತು ಯೋಚಿಸುತ್ತಿದ್ದರೆ, ಮಾತನಾಡುತ್ತಿದ್ದರೆ ಖಂಡಿತವಾಗಿ ಯೂಯಶಸ್ಸು ದೊರೆಯುತ್ತದೆ. ಯಶಸ್ವಿ ಜನರು ಮಾತ್ರ ಇತರೆ ಯಶಸ್ವಿ ಜನರನ್ನು ಬಹುಬೇಕ ಆಕರ್ಷಿಸುತ್ತಾರೆ ಎಂಬುದು ಅನುಭವೇದ್ಯ. ಹಾಗಾಗಿ ನಾವು ಯಾವಾಗಲೂ ದೊಡ್ಡದಾಗಿ ಯೋಚಿಸಲು ಪ್ರಾರಂಭಿಸಬೇಕು. ಇದು ನಮ್ಮ ಯಶಸ್ವಿ ಬದುಕಿನ ಮೊದಲ ಹೆಜ್ಜೆ.