Sunday, 22nd September 2024

ಆಧ್ಯಾತ್ಮವೇ ಉಸಿರು ಸರಳತೆಯೇ ಜೀವನ

ಶ್ರೀ ಸಿದ್ದೇಶ್ವರ ಸ್ವಾಮೀಜಿ
*ಮೌಲಾಲಿ ಕೆ ಆಲಗೂರ, ಬೋರಗಿ

ಸಮಾಜದಲ್ಲಿ ಸಮಾನತೆಯನ್ನು ಜನರಲ್ಲಿ ಪರಿಸರ ಕಾಳಜಿಯನ್ನು ಹುಟ್ಟಿಿಸಿ, ಅಧ್ಯಾಾತ್ಮ ಪಥವನ್ನು ಅನುಸರಿಸಲು ಪ್ರೋೋತ್ಸಾಾಹಿಸುತ್ತಿಿರುವ ವಿಜಯಪುರದ ಸಿದ್ದೇಶ್ವರ ಸ್ವಾಾಮೀಜಿಯವರು, ನಮ್ಮ ನಡುವಿನ ವಿರಳಾತಿವಿರಳ ಅನುಭಾವಿಗಳಲ್ಲಿ ಒಬ್ಬರು.

ಕರ್ನಾಟಕದಲ್ಲಿ ಅಧ್ಯಾಾತ್ಮ ಪರಂಪರೆಯನ್ನು ಅನುಸರಿಸುತ್ತಿಿರುವ ಸಾವಿರಾರು ಸ್ಥಾಾವರಗಳಿವೆ. ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಿಸುವ ಮಠ, ಮಂದಿರ, ಮಸೀದಿ, ಚರ್ಚ್‌ಗಳು ಪ್ರಸ್ತುತ ದಿನಗಳಲ್ಲಿ ತುಸು ವಿರಳ. ತುಮಕೂರಿನ ಸಿದ್ದಗಂಗಾ ಮಠ, ಗದುಗಿನ ವೀರೇಶ್ವರ ಪುಣ್ಯಾಾಶ್ರಮ, ಧರ್ಮಸ್ಥಳದ ಮಂಜುನಾಥ ದೇವಸ್ಥಾಾನ, ಚಿತ್ರದುರ್ಗ ಮುರಘಾ ಮಠ, ಉಡುಪಿಯ ಪೇಜಾವರ ಹುಬ್ಬಳ್ಳಿಿಯ ಶಿವಯೋಗಿ ಸಿದ್ದಾರೂಢ ಮಠ ಹೀಗೆ ಕೆಲವು ಮಠ, ಮಂದಿರಗಳು ಸಮಾಜದಲ್ಲಿ ಮೇಲು ಕೀಳು ಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನ ನಡೆಸಿವೆ. ಲಿಂಗ ತಾರತಮ್ಯ, ಶೋಷಣೆ, ಅಸ್ಪಶ್ಯತೆ, ಅಸಮಾನತೆ, ಅಂಧಕಾರ ಅಳಿಸಿ, ಬಸವ, ಕನಕ, ಚೌಡಯ್ಯ, ಅಲ್ಲಮ, ಶರೀಫ, ಅಕ್ಕಮಹಾದೇವಿ ಸೇರಿದಂತೆ ಅನೇಕ ಸಾಧು, ಸಂತ, ಶರಣರು ನಡೆದು ಬಂದ ಸನ್ಮಾಾರ್ಗದ ದಾರಿಯಲ್ಲಿ ಸಾಗುತ್ತ ಅವರು ಸಾರಿದ, ಸಮಾನತೆ ಭಾವೈಕ್ಯತೆ ಸಮಾಜವನ್ನು ಕಟ್ಟಲು ಶ್ರಮಿಸುತ್ತಿಿವೆ. ಅಲ್ಲದೇ ಸಮಾಜದ ಸಾಮಾಜಿಕ ಪರಿವರ್ತನೆಗಾಗಿ

ಇಂತಹ ಶ್ರೇಷ್ಠ ಮಠಗಳ, ಪುಣ್ಯಾಾಶ್ರಮಗಳ ಸಾಲಿಗೆ ವಿಜಯಪುರದ ಜ್ಞಾನ ಯೋಗಾಶ್ರಮವು ಸೇರುತ್ತದೆ. ಐತಿಹಾಸಿಕ ಗುಮ್ಮಟ ನಗರಿ ಎಂದೇ ಖ್ಯಾಾತಿ ಪಡೆದ ವಿಜಯಪುರ ಜಿಲ್ಲೆ ಧಾರ್ಮಿಕ ಪುಣ್ಯ ಕ್ಷೇತ್ರವೂ ಹೌದು. ಇಲ್ಲಿನ ಜ್ಞಾನ ಯೋಗಾಶ್ರಮ ನಾಡಿನ ಪ್ರಸಿದ್ಧ ಆಧ್ಯಾಾತ್ಮಿಿಕ, ಸಾಮಾಜಿಕ, ಶೈಕ್ಷಣಿಕ, ತಾಣಗಳಲ್ಲಿ ಒಂದಾಗಿದೆ. ನಡೆದಾಡುವ ದೇವರ ಸ್ವರೂಪಿ, ವಾಗ್ಮಿಿ, ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಾಮೀಜಿಗಳು ಈ ಜ್ಞಾನ ಯೋಗಾಶ್ರಮ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು ಹೋಗುತ್ತಿಿದ್ದಾರೆ. ನಿಸ್ವಾಾರ್ಥ ಸೇವೆ, ಗುರು ಸಮಾನತೆ, ಸರಳ ಜೀವನ, ಅಕ್ಷರ ದಾಸೋಹ, ಶ್ರೀಗಳ ಮೂಲ ಉದ್ದೇಶವಾಗಿದೆ. ಆಸೆಯೇ ದುಃಖಕ್ಕೆೆ ಮೂಲ ಕಾರಣ ಎಂದು ಅರಿತಿರುವ ಸಿದ್ದೇಶ್ವರ ಸ್ವಾಾಮೀಜಿಗಳು ಸಿದಾ, ಸಾದಾ, ಸರಳ, ಸುಂದರ ಅಧ್ಯಾಾತ್ಮದ ಜೀವನ ನಡೆಸುತಿದ್ದಾರೆ. ಹಣ ಮತ್ತು ವಸ್ತುಗಳ ಮೇಲೆ ಆಸೆ ಹುಟ್ಟ ಬಾರದು ಎಂದು ತಾವು ಧರಿಸುವ ಉಡುಪುಗಳಿಗೆ ಜೇಬು ಕೂಡಾ ಇಟ್ಟಿಿಲ್ಲ. ಅಧ್ಯಾಾತ್ಮವೇ ಉಸಿರಾಗಿಸಿಕೊಂಡಿರುವ ಶ್ರೀಗಳು ಪ್ರವಚನದ ಮೂಲಕ ಜನರನ್ನು ಸನ್ಮಾಾರ್ಗದ ದಾರಿಯಲ್ಲಿ ಸಾಗಲು ಪ್ರಯತ್ನಿಿಸುತ್ತಿಿದ್ದಾರೆ.
ಉನ್ನತ ಅಧ್ಯಯನ

ಸಿದ್ದೇಶ್ವರ ಸ್ವಾಾಮೀಜಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ 1941ನೆ ಇಸವಿಯ 24ನೇ ಅಕ್ಟೋೋಬರ್‌ರಂದು ಜನ್ಮ ತಾಳಿದರು. ಚಿಕ್ಕ ವಯಸ್ಸಿಿನಲ್ಲೇ ಅಪಾರವಾದ ಜ್ಞಾನ ಮತ್ತು ದಿವ್ಯ ಶಕ್ತಿಿಯನ್ನು ಹೊಂದಿದ್ದ ಇವರನ್ನು ಕಂಡು ಆಗಿನ ಜ್ಞಾನ ಯೋಗಾಶ್ರಮದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು, ತಾವು ಮಾಡುವ ಪುರಾಣ, ಪ್ರವಚನ, ಆಧ್ಯಾಾತ್ಮಿಿಕ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿಿದ್ದರು. ಇದರಿಂದ ಮತ್ತಷ್ಟು ಪ್ರಭಾವಿತರಾದ ಸಿದ್ದೇಶ್ವರರು ಧರ್ಮಗಳ ಗ್ರಂಥ ಅಧ್ಯಾಾಯ ಮಾಡಿ ಅಧ್ಯಾಾತ್ಮದ ಬಗ್ಗೆೆ ಸಮಗ್ರವಾಗಿ ಓದಿ ತಿಳಿದುಕೊಂಡರು. ಅಲ್ಲದೇ ವಿದ್ಯಾಾಭ್ಯಾಾಸದಲ್ಲಿಯೂ ಪ್ರತಿಭಾನ್ವಿಿತರಾದ ಇವರು ಕರ್ನಾಟಕ ವಿಶ್ವವಿದ್ಯಾಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿ, ಕೊಲ್ಲಾಪುರದ ವಿ.ವಿ. ಯಲ್ಲಿ ತತ್ವಶಾಸ್ತ್ರದ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದರು.

ಸಿದ್ದೇಶ್ವರ ಶ್ರೀಗಳು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಿಷ್, ಮರಾಠಿ ಪಂಚ ಭಾಷೆಗಳಲ್ಲಿ ಪ್ರವಚನ ನೀಡುತ್ತಾಾರೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಪ್ರವಚನ ನೀಡುವ ಸಿದ್ದೇಶ್ವರ ಶ್ರೀಗಳಿಗೆ ಕಾರ್ಯಕ್ರಮಕ್ಕೆೆ ಆಹ್ವಾಾನ ನೀಡಬೇಕಾದರೆ ತಿಂಗಳುಗಟ್ಟಲೆ ಹೆಸರು ನಮೂದಿಸಬೇಕು. ಇವರ ಪ್ರವಚನವಿದೆ ಎಂದರೆ ಸಾಕು ಸುತ್ತ ಮುತ್ತಲಿನ ಗ್ರಾಾಮಗಳ ಜನರು ಸಾವಿರ ಸಾವಿರ ಸಂಖ್ಯೆೆಯಲ್ಲಿ ಸೇರುತ್ತಾಾರೆ. ಇವರು ನೀಡುವ ಪ್ರವಚನದ ಶೈಲಿ, ಪದಗಳ ಬಳಕೆ ಪ್ರಸ್ತುತ ಸಮಾಜದಲ್ಲಿ ವಾಸ್ತವ ಸಂಗತಿಗಳ ಕುರಿತು ನೀಡುವ ನಿದರ್ಶನ ಮತ್ತು ಅಧ್ಯಾಾತ್ಮ ಸದ್ವಿಿಚಾರ, ಸದ್ಗುಣ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ನಾಡು, ನುಡಿ, ನೆಲ, ಜಲ, ದೇಶ, ಭಾಷೆ ರಾಷ್ಟ್ರ ಪ್ರೇಮ, ಪರೋಪಕಾರ ಮತ್ತು ಮಾನವೀಯ ಮೌಲ್ಯಗಳ ಕುರಿತು ನೀಡುವ ಸಂದೇಶಗಳ ಮಾತುಗಳು ಮುತ್ತಾಾಗಿ ಕೇಳುಗರ ಮನ ಮೌನ ವಹಿಸುವಂತೆ ಮಾಡುತ್ತವೆ. ಅಲ್ಲದೆ ಜೀವನಕ್ಕೆೆ ನವ ಚೈತನ್ಯ, ಬದುಕಿಗೆ ಹೊಸ ಉತ್ಸಾಾಹ ನೀಡುತ್ತವೆ.

ಪರಿಸರ ಕಾಳಜಿ
ನಾವುಗಳು ಈ ಸುಂದರ ಜಗತ್ತಿಿನ ಯಾತ್ರಿಿಕರು. ನಮ್ಮ ಯಾತ್ರೆೆ ಮುಗಿಸಿಕೊಂಡು ಹೋಗುವವರಿಗೂ ಬದುಕನ್ನು ಪ್ರೀತಿಸಲು ಅದನ್ನು ಸಂತಸ ಮತ್ತು ಉತ್ಸಾಾಹದಿಂದ ಇಡಲು, ಸೃಷ್ಟಿಿಕರ್ತ ನಿಸರ್ಗದಲ್ಲಿ ಗಾಳಿ, ನೀರು, ಆಹಾರ, ಮಳೆ, ಬೆಳೆ ಹೀಗೆ ಎಲ್ಲಾ ರೀತಿಯ ಸಕಲ ಸಿರಿ ಸಂಪತ್ತು ನೀಡಿದ್ದಾನೆ. ಇದೆಲ್ಲವನ್ನೂ ನಾವು ಭಾಗ್ಯವಂತರು, ಪುಣ್ಯವಂತರು. ಹೀಗಿದ್ದರೂ ತೃಪ್ತರಾಗದ ನಾವುಗಳು ನಮ್ಮ ಸ್ವಾಾರ್ಥ ಸಾಧನೆಗಾಗಿ ಸುಂದರ ಪ್ರಕೃತಿ ದುರುಪಯೋಗಕ್ಕೆೆ ಬಳಸಿಕೊಂಡು ಪರಿಸರ ವಿನಾಶದ ಜೊತೆಗೆ ನಮ್ಮ ಯಾತ್ರೆೆಯ ದಿನಗಳನ್ನು ಪೂರ್ಣಗೊಳಿಸದೆ ನಮ್ಮ ಅವನತಿಗೆ ಕಾರಣರಾಗುತಿದ್ದಾರೆ. ಆದ್ದರಿಂದ ಇಂದಿನ ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಣೆ ಮಾಡಬೇಕಾದ ಅಗತ್ಯವಿದೆ ಎನ್ನುವ ಸಿದ್ದೇಶ್ವರ ಸ್ವಾಾಮೀಜಿಗಳು, ಭೂಮಿಯ ಮೇಲೆ ಮನುಷ್ಯ ಒಬ್ಬನೇ ಬುದ್ದಿಜೀವಿ, ಸಂಗಜೀವಿಯಾಗಿದ್ದಾನೆ. ಆದ್ದರಿಂದ ಮನುಷ್ಯ ಸಮಾಜದಲ್ಲಿ ಹೃದಯವಂತಿಕೆಯಿಂದ ಬಾಳಿ ಬದಕಬೇಕು. ಅಲ್ಲದೇ ಉಳಿದ ಇತರೆ ಕೇಡನ್ನು ಬಯಸದೆ ಸಂತೋಷ ನೀಡುವ ಗುಣ ಬೆಳೆಸಿಕೊಳ್ಳಬೇಕು.

ನಾನು ನನ್ನದು ಎಂಬ ಅಹಂ ಭಾವ ತೊರೆದು, ನಾವು ನಮ್ಮವರು ಎನ್ನುವ ಮನೋಭಾವ ಬೆಳೆಸಿಕೊಂಡು ಸಮಾಜದ ಸರ್ವ ಜನರ ಜೊತೆಗೆ ನಮ್ಮ ನಡೆ, ನುಡಿ, ಶುದ್ಧವಾಗಿ ಇಟ್ಟುಕೊಂಡು, ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ನಮಗೆ ಧರ್ಮದ ದರ್ಶನವಾಗುತ್ತದೆ ಎಂಬ ಶ್ರೀಗಳ ಪ್ರವಚನದ ಸಾರ, ಪರಿಸರ ಕುರಿತಾದ ಕಾಳಜಿ ಜನರ ಮನ ತಟ್ಟುತ್ತದೆ. ಸಿದ್ದೇಶ್ವರ ಶ್ರೀಗಳ ಸಾಮಾಜಿಕ ಕಳಕಳಿಯ ಸ್ತುತ್ಯಾಾರ್ಹ ಕಾರ್ಯಗಳನ್ನು ಕೇಂದ್ರ ಸರ್ಕಾರದ ನಾಲ್ಕನೆಯ ಅತ್ಯುತ್ತಮ ನಾಗರಿಕ ಪ್ರಶಸ್ತಿಿಯಾದ ಪದ್ಮಶ್ರೀ ಪ್ರಶಸ್ತಿಿ ಘೋಷಿಸಿತ್ತು, ಅಲ್ಲದೇ ಕರ್ನಾಟಕ ವಿಶ್ವ ವಿದ್ಯಾಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿತ್ತು. ಆದರೆ ಇಂತಹ ಅನೇಕ ಪ್ರಶಸ್ತಿಿ, ಪುರಸ್ಕಾಾರಗಳು ಸಿದ್ದೇಶ್ವರ ಶ್ರೀಗಳು ವಿನಮ್ರವಾಗಿಯೇ ನಿರಾಕರಿಸಿದ್ದಾರೆ. ‘ನಾನೊಬ್ಬ ಸರಳ ವ್ಯಕ್ತಿಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾಾತ್ಮಿಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ನನ್ನ ಉದ್ದೇಶ. ಹಾಗಾಗಿ ಪ್ರಶಸ್ತಿಿಗಳ ಅವಶ್ಯತೆಯು ನನಗಿಲ್ಲ. ಅಧ್ಯಾಾತ್ಮ, ಆದರ್ಶ ಮತ್ತು ನೈತಿಕತೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನನ್ನ ಧರ್ಮ’ ಎಂದು ಹೇಳಿ ಗೌರವ ಪೂರ್ವಕ ಭಾವನೆಯಿಂದ ಹಿಂತಿರುಗಿದ್ದಾರೆ. ಇಂದಿನ ಸಮಾಜದಲ್ಲೂ ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿಿತ್ವ ಹೊಂದಿರುವ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಾಮೀಜಿಗಳ ಆಧ್ಯಾಾತ್ಮಿಿಕ ಬದುಕು ಪ್ರಸ್ತುತ ಸಮಾಜಕ್ಕೆೆ ಅಗತ್ಯ, ಆದರ್ಶ, ಅನುಕರಣೀಯ ಮತ್ತು ಮಾದರಿಯಾಗಿದೆ.