*ನಾಗೇಶ್ ಜೆ. ನಾಯಕ
ಈ ಜಗತ್ತು ಎಲ್ಲ ಗುಣಗಳಿಂದ ಕೂಡಿದ ಮನುಜರಿಂದ ತುಂಬಿದೆ. ಅನ್ಯಾಾಯಗಳನ್ನು ಮೆಟ್ಟಿಿ ನಿಲ್ಲುವ ಧೀಮಂತ, ಧೀರೋಧಾತ್ತ ವ್ಯಕ್ತಿಿಗಳು ಇದ್ದಂತೆ, ಅನ್ಯಾಾಯ, ಅಕ್ರಮಗಳನ್ನು ಎಸಗುವ, ಕ್ರೂರಾತಿಕ್ರೂರ ವ್ಯಕ್ತಿಿಗಳು ಈ ಭೂಮಿಯಲ್ಲಿದ್ದಾಾರೆ. ದೀನ-ದಲಿತರ ನೋವಿಗೆ ಸ್ಪಂದಿಸುವ, ನೊಂದವರ ಹೆಗಲು ತಬ್ಬಿಿ ಜೊತೆ ನೀಡುವ, ಅಸಹಾಯಕರ ಆಸರೆಗೆ ಅನುಗಾಲ ಮಿಡಿಯುವ ಜೊತೆಗಾರರಿದ್ದಂತೆ, ದಬ್ಬಾಾಳಿಕೆ ಮಾಡುವ, ದೌರ್ಜನ್ಯವೆಸಗಿ ಅಟ್ಟಹಾಸಗೈಯುವ, ಮಾನವೀಯತೆಯನ್ನು ಮರೆತು ರಾಕ್ಷಸರಂತೆ ವರ್ತಿಸುವ ಜನರೂ ಈ ಧರಣಿಯಲ್ಲಿದ್ದಾಾರೆ. ಒಂದು ಕಡೆ ಒಳಿತಿನ ಪ್ರತಿನಿಧಿಗಳಂತೆ ಸಕಲರಿಗೂ ಲೇಸನ್ನೇ ಬಯಸುವ ಹೂವಿನಂತಹ ಮನಸ್ಸಿಿನ ಮಂದಿಯಿರುವಂತೆ, ಕೆಡುಕುಗಳ ವಾರಸುದಾರರಂತೆ ವರ್ತಿಸುತ್ತ ಎಲ್ಲರ ಬದುಕಿಗೆ ಕಂಟಕರಾಗಿರುವ ಅನಿಷ್ಠ ಸಂತಾನಗಳಿಗೂ ಈ ನೆಲ ಸಾಕ್ಷಿಯಾಗಿದೆ. ಈ ಭೂಮಿಯ ಮೇಲೆ ಕೆಡುಕು ಮಾಡದ, ಇತರರಿಗೆ ನೋವು ನೀಡದ, ಅನ್ಯಾಾಯಗಳನ್ನು ಮಾಡದ ವ್ಯಕ್ತಿಿಗಳು ಇಲ್ಲದ ದಿನಗಳೇ ಇಲ್ಲ. ಬೆಳಕಿರುವಲ್ಲಿ ಕತ್ತಲೆಯಿರುತ್ತದಲ್ಲವೇ? ಹಾಗೆಯೇ ಒಳಿತಿನ ಹಿಂದೆ ತಾಮಸ ಗುಣಗಳ ಜನರೂ ಇದ್ದೇ ಇರುತ್ತಾಾರೆ. ಆದರೆ ಲೋಕಕ್ಕೆೆ ಒಳಿತನ್ನು ಉಂಟು ಮಾಡುವ, ಅನ್ಯಾಾಯಗಳನ್ನು ಮೆಟ್ಟಿಿ ನಿಲ್ಲುವ ವ್ಯಕ್ತಿಿಗಳ ಸಂಖ್ಯೆೆ ದ್ವಿಿಗುಣವಾಗಬೇಕಿದೆ.
ಹತ್ತು ತಲೆಯ ರಾವಣನಿದ್ದ ಘಳಿಗೆಯಲ್ಲಿಯೇ ಅವನನ್ನು ಸಂಹರಿಸಲು ಮರ್ಯಾದಾ ಪುರುಷೋತ್ತಮ ರಾಮ ಅವತರಿಸಿದ್ದ. ಸೂಜಿಮೊನೆಯಷ್ಟು ಭೂಮಿಯನ್ನು ಬಿಟ್ಟು ಕೊಡದ ದುರ್ಯೋಧನ ಬದುಕಿದ್ದ ಸಂದರ್ಭದಲ್ಲಿಯೇ, ಅವನ ತೊಡೆ ಮುರಿದು ತಕ್ಕ ಪಾಠ ಕಲಿಸಲು ಜಗಜಟ್ಟಿಿ ಭೀಮ ಹುಟ್ಟಿಿದ್ದ. ಎಲ್ಲೆೆಲ್ಲಿ ಅನ್ಯಾಾಯ, ಕ್ರೂರತೆಗಳು ಭೂಮಿಯನ್ನು ಆವರಿಸಿದಾಗಲೆಲ್ಲ ಅವುಗಳನ್ನು ಮೆಟ್ಟಿಿ ನಿಲ್ಲಲು, ದುಷ್ಟಶಕ್ತಿಿಗಳನ್ನು ಸಂಹರಿಸಲು ಶಿಷ್ಟಶಕ್ತಿಿಯೊಂದು ಅವತರಿಸಿದ್ದನ್ನು ನಾವು ಕಾಣುತ್ತೇವೆ. ಹಾಗಿದ್ದ ಮೇಲೆ ಅರಾಜಕತೆ, ಅನ್ಯಾಾಯಕ್ಕೆೆ ಕೊನೆಗಾಲವಂತೂ ಕಟ್ಟಿಿಟ್ಟ ಬುತ್ತಿಿ. ಆದರೆ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ ಭೂಮಿಯು ಯಾವತ್ತಿಿಗೂ ದುಷ್ಟ ವ್ಯಕ್ತಿಿಗಳಿಂದ ಮುಕ್ತವಾಗಿಲ್ಲ. ಇಂದು ದುಷ್ಟಶಕ್ತಿಿಯನ್ನು ಮಟ್ಟ ಹಾಕಲು ಭೀಮನಂತಹ, ರಾಮನಂತಹ ಜನರ ಅವಶ್ಯಕತೆ ಇದೆ. ನಮಗೆ ಅನ್ಯಾಾಯವನ್ನು ಮೆಟ್ಟಿಿ ನಿಲ್ಲಲು ಆಗದಿದ್ದರೂ, ನ್ಯಾಾಯಕ್ಕಾಾಗಿ ಹೋರಾಡುವ ಜನರಿಗೆ ಬೆಂಬಲ ನೀಡುವ ಮನಸ್ಸು ಮಾಡಬೇಕಿದೆ. ಪ್ರಸ್ತುತ ದಿನಮಾನದಲ್ಲಿ ನಾವು ಮಾಡಬೇಕಾದ ಅಗತ್ಯ ಕಾರ್ಯವೆಂದರೆ ಇದೇ. ಒಳ್ಳೆೆಯದನ್ನು ಮಾಡಲಿಕ್ಕೆೆ ನಮಗೆ ಸಾಧ್ಯವಾಗದೇ ಹೋದರೂ ಯಾರು ಒಳ್ಳೆೆಯದನ್ನು ಮಾಡುತ್ತಾಾರೋ ಅವರಿಗೆ ಬೆಂಬಲ ಕೊಡುವ, ಅವರ ಕಾರ್ಯಕ್ಕೆೆ ಬಲ ತುಂಬುವ ಮಹತ್ಕಾಾರ್ಯವನ್ನು ಮಾಡುತ್ತ ಸಮಾಜದಿಂದ ದುಷ್ಟ ಶಕ್ತಿಿಗಳು ನಿರ್ನಾಮವಾಗಲು ನೆರವು ನೀಡಬೇಕು.
ನಾವು ಅನ್ಯಾಾಯದ ವಿರುದ್ಧ ಕಹಳೆಯೂದದಿದ್ದರೂ ಸರಿ, ಕಹಳೆ ಊದುವವರ ಬೆಂಬಲಕ್ಕೆೆ ಸದಾ ಸಿದ್ಧರಾಗಿರೋಣ. ಅಳಿಲು ರಾಮನ ನೆರವಿಗೆ ಧಾವಿಸಿ ಪುಟ್ಟ ಸೇವೆಗೈದಂತೆ, ನಮ್ಮ ಸಹಾಯವೂ ಸಮಾಜದ ನಿರ್ಮಾಣಕ್ಕೆೆ ಮೀಸಲಾಗಿರಲಿ.