Sunday, 15th December 2024

ಸರ್‌’ಪ್ರೈಸ್ ತರಲಿದೆ ಹಾಫ್

ಈ ಹಿಂದೆ ‘ಅಟ್ಟಯ್ಯ ಹಂದಿ ಕಾಯೋಳು’ ಚಿತ್ರವನ್ನು ನಿರ್ದೇಶಿಸಿದ್ದ ಲೋಕೇಂದ್ರ ಸೂರ್ಯ. ಚೆಡ್ಡಿ ದೋಸ್ತ್ ಚಿತ್ರದಲ್ಲೂ ಪಾತ್ರ  ನಿರ್ವಹಿಸಿದ್ದಾರೆ. ಆ ಚಿತ್ರ ತೆರೆಗೆ ಬರುವ ಮೊದಲೇ ಲೋಕೇಂದ ಸೂರ್ಯ, ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು
ಆರಂಭಿಸುತ್ತಿದ್ದಾರೆ.

ಈ ಚಿತ್ರ ‘ಹಾಫ್’ ಎಂಬ ಶೀರ್ಷಿಕೆಯಲ್ಲಿ ಮೂಡಿಬರುತ್ತಿದ್ದು, ಚಿತ್ರೀಕರಣಕ್ಕೆೆ ಅಣಿಯಾಗಿದೆ. ಆರ್.ಡಿ. ಎಂಟರ್ ಪ್ರೈಸಸ್ ಬ್ಯಾನರ್‌ ನಲ್ಲಿ ಡಾ. ಆರ್. ಪವಿತ್ರಾ ರೆಡ್ಡಿ ನಿರ್ಮಿಸುತ್ತಿರುವ ‘ಹಾಫ್’ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಾಯಕನಟನಾಗಿಯೂ ಅಭಿನಯಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಬಿ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ.ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ವಸ್ತ್ರಾಲಂಕಾರ ‘ಹಾಫ್’ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಪವಿತ್ರಾ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್ ಮುಂತಾದವರ ತಾರಾಗಣವಿದೆ.

‘ಹಾಫ್’ ಚಿತ್ರದ ಶೀರ್ಷಿಕೆಯಂತೆಯೇ ಕಥೆಯೂ ಕೂಡ ವಿಭಿನ್ನ ಕಥಾಹಂದರ ಚಿತ್ರವಾಗಿದೆ. ಯಾಕಾಗಿ ಈ ಚಿತ್ರಕ್ಕೆ ಈ ಶೀರ್ಷಿಕೆ ಯನ್ನೇ ಅಂತಿಗೊಳಿಸಲಾಯಿತು ಎಂಬುದನ್ನು ಚಿತ್ರ ನೋಡಿದ ಮೇಲೆಯೇ ತಿಳಿಯುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ
ಇಬ್ಬರು ನಾಯಕಿಯರಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ನವಿರಾದ ಪ್ರೇಮಕಥೆಯೊಂದಿಗೆ ಚಿತ್ರದ ಕಥೆ ಸಾಗಲಿದೆ.