Thursday, 12th December 2024

ಉಪ್ಪಿಯ ಲಗಾಮ್‌ ಹಿಡಿದ ಹರಿಪ್ರಿಯಾ

ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಮಹೂರ್ತ ಆಚರಿಸಿಕೊಂಡಿದ್ದ ’ಲಗಾಮ್’ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್‌ನಿಂದ ನಡೆಸಲು ಚಿತ್ರತಂಡವು ಯೋಜನೆ ಹಾಕಿಕೊಂಡಿತ್ತು. ಆದರೆ ಕರೋನಾ ಮಹಾಮಾರಿಯಿಂದ ಎಲ್ಲವು ಬದಲಾಗಿದೆ.

ಇದರ ಮಧ್ಯೆ ಉಪೇಂದ್ರ ಅವರೊಂದಿಗೆ ಪೋಟೋ ಶೂಟ್ ಮುಗಿಸಿಕೊಂಡಿದ್ದು ಖುಷಿಯಾಗಿದೆ ಎಂದು ನಾಯಕಿ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಉಪ್ಪಿಯ ’ಲಗಾಮ್’ ಹಿಡಿದ ಹರಿಪ್ರಿಯಾ ಚಿತ್ರದಲ್ಲಿ ತನಿಖಾ ಪತ್ರಕರ್ತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಉಳಿದಿದ್ದ ಹರಿಪ್ರಿಯಾ ತಮ್ಮ ಪಾತ್ರಕ್ಕೆ ಅಗತ್ಯ ತಯಾರಿ ನಡೆಸಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಭ್ರಷ್ಟಚಾರದ ವಿರುದ್ದ ಹೇಗೆ ಹೋರಾಡುತ್ತಾನೆ. ಸಾಮಾಜಿಕ ಪಿಡುಗುಗಳಿಗೆ ಹೇಗೆ ಲಗಾಮ್ ಹಾಕುತ್ತಾನೆ ಎಂಬುದು ಚಿತ್ರದ ಒನ್‌ಲೈನ್ ಸ್ಟೋರಿಯಾಗಿದ್ದು, ಅದನ್ನು ಸಸ್ಪೆನ್ಸ್, ಥ್ರಿಲ್ಲರ್ ಬೆರೆಸಿ ತೆರೆಗೆ ತರಲಾಗುತ್ತಿದೆ.

ಇಲ್ಲಿಯವರೆಗೂ ರೀಮೇಕ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಕೆ.ಮಾದೇಶ್ ಲಗಾಮು ಚಿತ್ರದ ಮೂಲಕ ಪ್ರಥಮ ಬಾರಿಗೆ ಸ್ವಮೇಕ್ ಚಿತ್ರಕ್ಕೆ
ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಆರ್.ಗೌಡ ಲಗಾಮ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಈ ಐದು ಹಾಡುಗಳಿಗೂ ಸಾಧುಕೋಕಿಲ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಜೇಶ್ ಕಟೆ ಛಾಯಾಗ್ರಹಣ್ಟ, ಕೆ.ಸುರೇಶ್ ಗೋಸ್ವಾಮಿ ಕಥೆ, ಎಂ.ಎಸ್.ರಮೇಶ್ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಲಗಾಮ್ ಸಿದ್ಧಗೊಳ್ಳಲಿದೆ. ಸರಕಾರದ ಮಾರ್ಗಸೂಚಿಯಂತೆ ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.