Saturday, 7th September 2024

ಹೀರೋ ಆಗಿ ಬಂದ ಕೌಬಾಯ್ ಕೃಷ್ಣ

ಪ್ರಶಾಂತ್ ಟಿ.ಆರ್

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಿಕ್ಕಿ, ಕಿರಿಕ್ ಪಾರ್ಟಿಯಂತಹ ಹಿಟ್ ಚಿತ್ರಗಳನ್ನು
ನೀಡಿದ ನಿರ್ದೇಶಕ ರಿಷಬ್‌ಶೆಟ್ಟಿ,  ನಟನೆಯಲ್ಲೂ ರಂಜಿಸಿದವರು.

ಉಳಿದವ ಕಂಡಂತೆ, ಲೂಸಿಯ, ಕಥಾಸಂಗಮ, ಹೀಗೆ ಹಲವು ಚಿತ್ರಗಳಲ್ಲಿ ನಟನಾಗಿಯೂ ಗಮನ ಸೆಳೆದರು. ವಿಭಿನ್ನ ಚಿತ್ರಕಥೆಯ ಬೆಲ್‌ಬಾಟಂ ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರನಾಗಿ ಮನೋಜ್ಞವಾಗಿ ಅಭಿನಯಿಸಿ, ಪ್ರೇಕ್ಷಕರ ಮನಸೆಳೆದರು.

ಆ ಬಳಿಕ ಅವನೇ ಶ್ರೀಮನ್ನಾರಾಯಣನ ಜತೆ ಸೇರಿ, ಕೌಬಾಯ್‌ಕೃಷ್ಣನಾಗಿಯೂ ಕಾಣಿಸಿಕೊಂ ಡರು. ಆ ನಂತರ ಎಲ್ಲಿ ನಮ್ಮ ರಿಷಬ್‌ಶೆಟ್ಟಿ,  ಈಗ ಏನು ಮಾಡುತ್ತಿದ್ದಾರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ
ಉಳಿದಿದ್ದಾರೆ ಎಂಬ ಪ್ರಶ್ನೆಯೂ ಸಿನಿಪ್ರಿಯರನ್ನು ಕಾಡಿತ್ತು. ಕರೋನಾ ನಡುವೆಯೇ ರಿಷಬ್ ಶೆಟ್ಟಿ ಸರ್‌ಪ್ರೈಸ್
ನೀಡಿದ್ದಾರೆ. ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ. ರಿಷಬ್‌ಶೆಟ್ಟಿ ಸಿನಿಮಾಗಳು ಎಂದರೆ ಅಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅವರ ನಟಿಸಿದ, ನಿರ್ದೇಶಿಸಿದ ಸಿನಿಮಾಗಳು ಸಂಪೂರ್ಣ ಮನರಂಜನೆಯಿಂದ
ಕೂಡಿದ್ದು, ಸಿನಿಮಾ ನೋಡೋದೆ ಒಂಥರಾ ಆನಂದ ಅನ್ನಿಸುತ್ತದೆ. ಈಗ ಅಂತಹದ್ದೇ ಮತ್ತೊಂದು ಹೊಸ
ಸಿನಿಮಾವನ್ನು ಹೊತ್ತು ನಮ್ಮ ಮುಂದೆ ಬರುತ್ತಿದ್ದಾರೆ.

ಅದು ಹೀರೋ ಆಗಿ. ಹೌದು, ರಿಷಬ್‌ಶೆಟ್ಟಿ ಹೀರೋ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದೇ ವಾರದಲ್ಲಿ ಕಥೆ ಅಂತಿಮಗೊಳಿಸಿದ ರಿಷಬ್, ಅನ್‌ಲಾಕ್ ಪ್ರಕ್ರಿಯೆ ಶುರುವಾಗುತ್ತಿದ್ದಂತೆ, ಚಿತ್ರೀಕರ
ಣಕ್ಕೆ ಅಣಿಯಾಗಿ, ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದ್ಯ ಚಿತ್ರ ಪೋಸ್‌ಟ್‌ ಪ್ರೊಡಕ್ಷನ್ ಹಂತ ದಲ್ಲಿದೆ. ಹಿರೋ ಚಿತ್ರದ ಫಸ್‌ಟ್‌‌ಲುಕ್ ಹಾಗೂ ಪೋಸ್ಟರ್ ಬಿಡುಗಡೆಯಾಗಿದ್ದು, ವಿಭಿನ್ನವಾಗಿದೆ. ಸಖತ್ ಕ್ಯೂರಿ ಯಾಸಿಟಿ ಮೂಡಿಸಿದೆ. ಚಿತ್ರದ ಶೀರ್ಷಿಕೆ ಹೀರೋ.

ಹಾಗಾದರೆ ಇದು ನಾಯಕನ ಕಥೆಯೇ ಅಥವಾ ನಾಯಕನಾಗಲು ಬಯಸಿದ ಯುವಕನ ಯಶೋಗಾಥೆಯೇ ಎಂದು ನಿಮಗೆ ಆಶ್ಚರ್ಯ ಆಗಬಹುದು. ಖಂಡಿತಾ ಇಲ್ಲ. ಇದು ಕೇಶವಿನ್ಯಾಸಗಾರನೊಬ್ಬನ ಸುತ್ತ ಸುತ್ತುವ ಕಥೆ. ಇದಕ್ಕೆ ಪೂರಕವೆಂಬಂತೆ, ಪೋಸ್ಟರ್‌ನಲ್ಲಿ ಹೀರೋ ಕುತ್ತಿಗೆಯಲ್ಲಿ ಕತ್ತರಿ, ತಲೆಯ ಮೇಲೆ ರೇಸರ್
ಚಿತ್ರವೂ ಇದೆ.

ಹೊಸಪ್ರತಿಭೆಗೆ ಪ್ರೋತ್ಸಾಹ

ರಿಷಬ್‌ಶೆಟ್ಟಿ ಪ್ರತಿಭೆ ಇದ್ದವರಿಗೆ ಪ್ರೋತ್ಸಾಹಿಸಿ, ಅವಕಾಶ ನೀಡುವಲ್ಲಿ ಸಿದ್ಧಹಸ್ತರು. ಅಂತೆಯೇ ರಿಷಬ್, ಹೀರೋ ಚಿತ್ರವನ್ನು ತಮ್ಮ ರಿಷಬ್‌ಶೆಟ್ಟಿ ಫಿಲ್‌ಮ್ಸ್‌ ಬ್ಯಾನರ್‌ನಲ್ಲಿಯೇ ನಿರ್ಮಾಣ ಮಾಡಿದ್ದು, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನವ ಪ್ರತಿಭೆ ಭರತ್‌ರಾಜ್‌ಗೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಉಳಿ ದಂತೆ ನಟ ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಆ ಪಾತ್ರ ಏನು ಎಂಬುದನ್ನು ಎಲ್ಲೂ ಬಿಟ್ಟುಕೊಡದೆ ಗೌಪ್ಯವಾಗಿಟ್ಟುಕೊಂಡಿದೆ ಚಿತ್ರತಂಡ. ಇನ್ನು ಗಾಲವಿಲಕ್ಷ್ಮಣ್ ನಾಯಕಿ ಯಾಗಿ ಕಾಣಿಸಿಕೊಂಡಿದ್ದಾರೆ.

ಮಂಜುನಾಥ್ ಗೌಡ ಸೇರಿದಂತೆ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೂ ಅಜನೀಶ್
ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ವಿಕ್ರಂಮೋರ್ ಅವರ ಸಾಹಸ ಈ ಚಿತ್ರಕ್ಕಿದ್ದು, ಸಾಹಸದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ಹಾಗಾದರೆ ರಿಷಬ್ ಆಕ್ಷನ್ ಸನ್ನಿವೇಶಗಳು ಹೇಗಿರಲಿವೆ ಎಂಬುದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಹುಮ್ಮಸ್ಸುತಂದ ಚೊಚ್ಚಲ ಚಿತ್ರ

ನಿರ್ದೇಶಕ ಭರತ್‌ರಾಜ್‌ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಹಾಗಾಗಿ ನಿರೀಕ್ಷೆಯೂ ಹೆಚ್ಚಾಗಿದೆ. ಚಿತ್ರ ನಿರ್ದೇಶನದಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಈ ಹಿಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಕಥಾಸಂಗಮ ಚಿತ್ರದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿದ ಅನುಭವ ಭರತ್‌ರಾಜ್ ಗಿದೆ. ಜುಲೈನಲ್ಲಿಯೇ ಚಿತ್ರದ ಚಿತ್ರೀಕರಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಲೊಕೇಶನ್ ಕೂಡ ಅಂತಿಗೊಳಿಸಿದ್ದರು. ಸರಕಾರದ ನಿಯಗಳನ್ನು ಪಾಲಿಸಿ,ಚಿತ್ರತಂಡದ ಎಲ್ಲರೂ ಕೆಲವು ದಿನಗಳ ಕಾಲ ಕ್ವಾರಂಟೈನ್ ಆಗಿ, ಬಳಿಕ ಚಿತ್ರೀಕರಣ ಆರಂಭಿಸಿದ್ದಾರೆ. ಕಥೆಗೆ ತಕ್ಕಂತೆ, ಚಿಕ್ಕಮಗಳೂರು, ಹಾಸನದ ಕೆಲವೆಡೆ 50 ದಿನಗಳ ಕಾಲ ಚಿತ್ರೀರಣ ನಡೆದಿದೆ.

ಕಾಮಿಡಿ ಕಥೆ
ಪೋಸ್ಟರ್‌ನಲ್ಲಿ ನಾಯಕನ ಮುಖದಲ್ಲಿ ರಕ್ತದ ಕಲೆಗಳು ಕಂಡುಬರುತ್ತವೆ. ಒಂದಿಬ್ಬರು ಓಡುತ್ತಿದ್ದಾರೆ. ಇದನ್ನು ಗಮನಿಸಿದೆರ ಇದು, ಥ್ರಿಲ್ಲರ್, ಸಸ್ಪೆನ್‌ಸ್‌, ಕ್ರೈಂ ಕಥೆಯ ಚಿತ್ರವೇ ಎಂದು ಭಾಸವಾಗಬಹುದು ಖಂಡಿತಾ ಇಲ್ಲ. ಕುತ್ತಿಗೆಯಲ್ಲಿ ಕತ್ತರಿ ಇದ್ದಾಗ ನಗುತ್ತಿರುವ ನಾಯಕ. ಆಗಲೇ ತಿಳಿಯುತ್ತದೆ ಇದು ಪಕ್ಕಾ ಕಾಮಿಡಿ ಕಥೆಯ ಚಿತ್ರ ಅಂತ. ಜತೆಗೆ ಆಕ್ಷನ್, ಸೆಂಟಿಮೆಂಟ್, ಲವ್ ಹೀಗೆ ಮನರಂಜನೆಗೆ ಪೂರಕವಾದ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಇದನ್ನು ಹ್ಯೂಮರಸ್ಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ ಚಿತ್ರತಂಡ. ಕೇಶ ವಿನ್ಯಾಸಕಾರನೊಬ್ಬ ತನ್ನ ಜೀವನದಲ್ಲಿ ಏನೆಲ್ಲಾ ಕನಸುಗಳನ್ನು ಹೊತ್ತಿರುತ್ತಾನೆ.

ತಾನೇ ಹೆಣೆದ ಕಥೆಯಲ್ಲಿ ಆತನೇ ಹೇಗೆ ನಾಯಕನಾಗುತ್ತಾನೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. ಇದರ ಜತೆಗೆ ಮತ್ತಷ್ಟು ಕುತೂಹಲಭರಿತ ಅಂಶಗಳು, ಸನ್ನಿವೇಶಗಳು ಚಿತ್ರದಲ್ಲಿವೆಯಂತೆ. ಮೂರು ಮುಖ್ಯ ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಅದೆಲ್ಲವನ್ನು ಚಿತ್ರದಲ್ಲಿಯೇ ನೋಡಬೇಕು ಎನ್ನುತ್ತಾರೆ ರಿಷಬ್ ಶೆಟ್ಟಿಿ

Leave a Reply

Your email address will not be published. Required fields are marked *

error: Content is protected !!