Thursday, 12th December 2024

ಹಾರರ್‌ ಕಥೆಯ ಖೈಮರಾ

ಕೊರೋನ ಹಾವಳಿ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ ‘ಖೈಮರಾ’ ಕೂಡ ಒಂದು.

ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ‘ಖೈಮರಾ’ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು. ದಕ್ಷಣ ಭಾರತದ ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದ, ಪಿ.ಗೌತಮ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಪಿ.ವಾಸು ಹಾರರ್ ಜಾನರ್‌ನ ಚಿತ್ರಗಳಲ್ಲಿ ಪ್ರಸಿದ್ಧಿ ಪಡೆದವರು. ಈಗ ಅವರ ಸಹೋದರ ಕೂಡ ಹಾರರ್ ಕಥೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಆರಂಭದಲ್ಲಿಯೇ ಕುತೂಹಲ ಕೆರಳಿಸಿದೆ.

ವಿಶೇಷ ಎಂದರೆ ಈ ಚಿತ್ರದಲ್ಲಿ ಸ್ಟಾರ್ ನಟಿಯರಾದ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ ಹಾಗೂ ಛಾಯಾಸಿಂಗ್ ನಟಿಸು ತ್ತಿದ್ದಾರೆ. ಅವರ ಜತೆ ನಿರ್ಮಾಪಕ ಮತಿಯಲಗಾನ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖೈಮರಾ
ಸೈಕಲಾಜಿ  ಲ್, ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣರಂಭವಾಗಲಿದೆ. ಬೆಂಗಳೂರು, ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.