Monday, 14th October 2024

ಬೆಳ್ಳಿತೆರೆಯಲ್ಲಿ ಜಗನ್ನಾಥ ದಾಸರ ಜೀವನ ಚರಿತೆ

ಬಹು ವರ್ಷಗಳ ನಂತರ ಬೆಳ್ಳಿತೆರೆಯಲ್ಲಿ ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಸಿನಿಮಾವೊಂದು ಸಿದ್ಧಗೊಂಡಿದ್ದು, ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಕೇಳಲು ಮಧುರವಾಗಿವೆ. ಜಗನ್ನಾಥ ದಾಸರು ಚಾರತ್ರಿಕ, ಆಧ್ಯಾತ್ಮಿಕ ಕಥೆಯ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವಾಗಿದೆ. ತಮ್ಮ ಚಿತ್ರದ ಬಗ್ಗೆ ನಿರ್ದೇಶಕ ಮಧುಸೂಧನ್ ಹವಾಲ್ದಾರ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿ: ಹರಿದಾಸರ ಆಧ್ಯಾತ್ಮ ಚಿಂತನೆಯ ಚಿತ್ರ ನಿರ್ದೇಶನ ಮಾಡಲು ಕಾರಣ?
ಮಧುಸೂದನ್ ಹವಲ್ದಾರ್: ಕಳೆದ 25 ವರ್ಷಗಳಿಂದಲೂ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದೇನೆ. ಆಧ್ಯಾ ತ್ಮಿಕ ವಿಚಾರಕ್ಕೆ ಸಂಬಂಽಸಿದ ಚಿತ್ರ ಮಾಡಬೇಕು ಎಂಬ ಬಯಕೆ ಹಲವು ವರ್ಷಗಳಿಂದ ನನ್ನ ಮನ ದಲ್ಲಿತ್ತು. ಅದಕ್ಕೆ ಪೂರಕವೆಂಬಂತೆ ಜಗನ್ನಾಥದಾಸರ ಜೀವನ ಚರಿತೆ ಸಿಕ್ಕಿತು. ಅದನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ವರನಟ ಡಾ.ರಾಜಕುಮಾರ್ ನಟಿಸಿದ್ದ ಭಕ್ತ ಕನಕದಾಸ ಸಿನಿಮಾದ ಬಳಿಕ ದಾಸರ ಚಿತ್ರಗಳೆ ಬಂದಿಲ್ಲ. ಜಗನ್ನಾಥ ದಾಸರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಾಸರ ಜೀವನದ ಆದರ್ಶ, ಸರಳತೆ, ತತ್ವಗಳನ್ನು ಇಂದಿನ ಸಮಾಜಕ್ಕೆ, ಯುವ ಪೀಳಿಗೆಗೆ ಪರಿಚಯಿ ಸುವ ನಿಟ್ಟನಿಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ.

ವಿ.ಸಿ: ಕಮಿರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ದಾಸರ ಚಿತ್ರಕ್ಕೆ ಸ್ಪಂದನೆ ದೊರೆಯಲಿದೆಯೆ?
ಮಧುಸೂದನ್: ಕನ್ನಡ ಸಿನಿಮಾ ಪ್ರೇಕ್ಷಕರು ಸಹೃದಯಿಗಳಾಗಿದ್ದಾರೆ. ಎಲ್ಲರಿಗೂ ಪ್ರೋತ್ಸಾಹ ನೀಡಿದ್ದಾರೆ. ಮುಂದೆಯೂ ನೀಡುತ್ತಾರೆ. ಈ ಚಿತ್ರ ಇತಿಹಾಸ ಪುಟಕ್ಕೆ ಸೇರುವಂತದ್ದು, ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಬಳಿಕ ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಚಿತ್ರ ಮೂಡಿಬರುತ್ತಿದೆ. ಪ್ರೇಕ್ಷಕರು ಖಂಡಿತ ಸಿನಿಮಾವನ್ನು ಕೈಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ.

ವಿ.ಸಿ: ಈ ಚಿತ್ರದ ಮೂಲಕ ಸಮಾಜಕ್ಕೆ ಯಾವ ಸಂದೇಶ ನೀಡಲಿದ್ದೀರ?
ಮಧುಸೂದನ್ : ಜಗನ್ನಾಥದಾಸರು ಬಹುದೊಡ್ಡ ವಿದ್ವಾಂಸರು. ಅಂತಹವರು ವಿಜಯದಾಸರು, ಗೋಪಾಲದಾಸರ ಪ್ರೇರಣೆಯಿಂದ ಕನ್ನಡದಲ್ಲಿಯೇ ಬಹು ದೊಡ್ಡ ದಾಸ ಸಾಹಿತ್ಯ ಕೃತಿಯಾಗಿರುವ ಹರಿಕಥಾಮೃತಸಾರ ರಚಿಸಿದ್ದಾರೆ. ಈ ಕೃತಿಯಲ್ಲಿ ದಾಸರು ನಿತ್ಯ ಬದುಕಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ನಾನು, ನನ್ನದು ಎಂಬ ಅಹಂಕಾರದಿಂದ ಮನುಷ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ.

ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ, ಅನ್ಯಾಯ, ಅಧರ್ಮಗಳು ಹೆಚ್ಚಾಗುತ್ತಿದೆ. ಇತಂಹ ಮಹನೀಯರ ಆದರ್ಶ, ಸರಳ ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಬಹುದು ಎಂಬುದನ್ನು ಚಿತ್ರದ ಮೂಲಕ ಹೇಳಲಾಗುತ್ತಿದೆ. ದಾಸರ ಚಿತ್ರವನ್ನು ಕಾಟಾಚಾರಕ್ಕೆ ಮಾಡಿಲ್ಲ. ಅತ್ಯುತ್ತಮ ತಂತ್ರಜ್ಞಾನ ದೊಂದಿಗೆ ಹಂಪಿ, ಗಂಗಾವತಿ, ಆನೆಗೂಂದಿ, ಕನಕಗಿರಿ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರಿಸಲಾಗಿದೆ. ಮುಂದೆ ಆಧ್ಯಾತ್ಮಿಕ ವಿಚಾರಗಳಿಗೆ ಸಂಬಂಽಸಿದ ಮತ್ತಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡುವ ಹಂಬಲವಿದೆ.