Saturday, 14th December 2024

ಜೋಧಪುರದ ಉಮೇದ್‌ ಭವನ್‌

ಮಂಜುನಾಥ್‌ ಡಿ.ಎಸ್

ನೀಲಿ ನಗರ ಜೋಧಪುರದ ಹೊರವಲಯದ ಚಿತ್ತರ್ ಹಿಲ್‌ನಲ್ಲಿರುವ ಉಮೇದ್ ಭವನ ವಸ್ತುಸಂಗ್ರಹಾಲಯ ತನ್ನದೇ ಆದ
ವಿಶೇಷತೆಯಿಂದ ಕೂಡಿದೆ. ಭಾರತದ ಭವ್ಯ ಅರಮನೆಗಳ ಸಾಲಿನಲ್ಲಿ ಕಡೆಯದಾದ ಹಾಗು

ವಿಶ್ವದ ಅತಿ ದೊಡ್ಡ ಅರಮನೆಗಳಲ್ಲಿ ಒಂದಾದ ಉಮೇದ್ ಭವನದ ಒಂದು ಭಾಗವಾ ಗಿದೆ ಈ ಸಂಗ್ರಹಾಲಯ. ಸರ್ದಾರ್ ಸರ್ಕಾರಿ ಮ್ಯೂಸಿಯಂ, ಜೋಧಪುರ ಮ್ಯೂಸಿಯಂ, ಜೋಧಪುರ ಸ್ಟೇಟ್ ಮ್ಯೂಸಿಯಂ, ಮುಂತಾದ ಹೆಸರುಗಳಿಂದಲೂ ಗುರುತಿಸಲ್ಪಡುವ ಈ ಸಂಗ್ರಹಾಲಯದಲ್ಲಿ ನಾಲ್ಕು ಮುಖ್ಯ ವಿಭಾಗಗಳಿವೆ. 18,000 ಚದರಡಿ ವಿಸ್ತೀರ್ಣದ, ನವೀಕೃತ ಸಂಗ್ರಹಾ ಲಯವನ್ನು ರಾಜಾಸ್ಥಾನದ ಮುಖ್ಯಮಂತ್ರಿಗಳಾಗಿದ್ದ ವಸುಂಧರಾ ರಾಜೆಯವರು 2018ರ ಜೂನ್ 22ರಂದು ಉದ್ಘಾಟಿಸಿದರು.

ಲೈಫ್ ಸ್ಟೈಲ್ ಗ್ಯಾಲರಿಯು, 1918ರಿಂದ 1947ರಲ್ಲಿ ಮರಣಿಸುವ ತನಕ ಜೋಧಪುರ ವನ್ನಾಳಿದ ಮಹಾರಾಜ ಉಮೇದ್ ಸಿಂಘ್ ಅವರ ಜೀವನಕ್ರಮವನ್ನು ಬಿಂಬಿಸುವ ದರ್ಶಿಕೆಗಳಿಂದ ಕೂಡಿದೆ. ಅಂದು ಬಳಕೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ಕುಸುರಿ ಕಲೆಗಳಿಂದ ಅಲಂಕೃತವಾದ ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು, ಚಾರಿತ್ರಿಕ ಮಹತ್ವದ ಚಿತ್ರಗಳು, ಗ್ರಾಮಫೋನ್ ರೆಕಾರ್ಡ್, ಮಹಾರಾಜರಿಗೆ ಸಂದ ಪಾರಿತೋಷಕ ಗಳು, ಶಿಕಾರಿಯ ದೃಶ್ಯಗಳು, ಮುಂತಾದುವುಗಳನ್ನು ಈ ವಿಭಾಗದಲ್ಲಿ
ವೀಕ್ಷಿಸಬಹುದು.

ಲೆಗೆಸಿ ಕಂಟಿನ್ಯೂಸ್ ವಿಭಾಗದಲ್ಲಿ ಈಗಿನ ರಾಜವಂಶಸ್ಥರ ಹಾಗು ಅವರ ಆಸಕ್ತಿಗಳನ್ನು ಕುರಿತ ವಿವಿರಗಳಿವೆ. ಲಕ್ಷಕ್ಕೂ ಅಧಿಕ ನಾಣ್ಯ ಸಂಗ್ರಹ ಇತರ ವಿಭಾಗಗಳಲ್ಲಿ ನೂರಾರು ಪುರಾತನ ಶಿಲ್ಪಗಳು, ಶಿಲಾಶಾಸನಗಳು, ಯುದ್ಧಕವಚಗಳು, ಶಸ್ತ್ರಾಸ್ತ್ರಗಳು, ಕರಕುಶಲ ವಸ್ತುಗಳು, ಪಿಂಗಾಣಿ ಮತ್ತು ಗಾಜಿನ ಪರಿಕರಗಳು, ವಸ್ತ್ರಗಳು, ಭಾವಚಿತ್ರಗಳು, ಸಾವಿರಾರು ಸೂಕ್ಷ್ಮ ಕಲಾಕೃತಿಗಳು
ಹಾಗೂ ಒಂದು ಲಕ್ಷಕ್ಕೂ ಅಧಿಕ ನಾಣ್ಯಗಳು ಪ್ರದರ್ಶಿತಗೊಂಡಿವೆ. ಮುಖ್ಯ ಹಜಾರದಲ್ಲಿ ಯುದ್ಧದ ದೃಶ್ಯವನ್ನು ಬಿಂಬಿಸುವ ದೊಡ್ಡ ಭಿತ್ತಿಚಿತ್ರವಿದೆ.

ಈ ವರ್ಣಚಿತ್ರವನ್ನು ಮೆಚ್ಚದ ವೀಕ್ಷಕರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಪುರಾತನ ಗಡಿಯಾರಗಳು ಈ ಸಂಗ್ರಹಾಲ
ಯದ ವಿಶೇಷತೆ. ಇಲ್ಲಿ ಪ್ರದರ್ಶಿತಗೊಂಡಿರುವ ನಾನಾ ಗಾತ್ರಗಳ, ಅನೇಕ ಬಗೆಯ, ವಿವಿಧ ಆಕೃತಿಗಳ ಅಸಂಖ್ಯಾತ ಗಡಿಯಾರ ಗಳು ಗಮನ ಸೆಳೆಯುತ್ತವೆ. ಉಗಿಬಂಡಿ, ಹಡಗು, ಪಿಟೀಲು, ಲೈಟ್ ಹೌಸ್, ಕಮಲ, ಹೀಗೆ ಹತ್ತು ಹಲವು ಮಾದರಿಯ ಚಿತ್ತಾಕರ್ಷಕ ಗಡಿಯಾರಗಳನ್ನು ಇಲ್ಲಿ ನೋಡಬಹುದು. ಅನತಿ ದೂರದಲ್ಲಿ, ಮಹಾರಾಜರು ಬಳಸುತ್ತಿದ್ದ ಹಳೆಯ ಮಾದರಿಯ ವಿವಿಧ ಕಾರುಗಳನ್ನು ಪ್ರದರ್ಶಿಸಲಾಗಿದೆ.