Sunday, 15th December 2024

ಲಂಡನ್‌ ದೆಹಲಿ ಬಸ್ ಪ್ರವಾಸ

ಪ್ರಕಾಶ್ ಕೆ.ನಾಡಿಗ್

ಈಗ ದೇಶ ವಿದೇಶ ಪ್ರವಾಸ ಮಾಡಲು ವಿಮಾನವನ್ನು ಹೊರತುಪಡಿಸಿ ಬೇರೊಂದು ಆಯ್ಕೆ ಇದೆ! ವಿವಿಧ ದೇಶ ಸುತ್ತಲು ಕೆಲವರು ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಟ್ಟರೆ ಕೆಲವರು ಬಸ್ ಪ್ರಯಾಣವನ್ನು ಇಷ್ಟಪಡುತ್ತಾರೆ. ಅಂಥವರಿಗಾಗೀಯೇ ಇದೇ ಮೇ ತಿಂಗಳಿನಿಂದ ದಿಲ್ಲಿಯಿಂದ ಲಂಡನ್‌ಗೆ ಬಸ್ ಪ್ರವಾಸ ಆರಂಭವಾಗಲಿದೆ.

ಬಸ್ಸಿನಲ್ಲೇ ಕುಳಿತು ವಿದೇಶ ಪ್ರವಾಸ ಮಾಡುವ ಆಸೆ ಇರುವ ಪ್ರವಾಸಿಗರಿ ಗಾಗಿಯೇ ಅಡ್ವೆಂಚರ್ ಓವರ್ ಲ್ಯಾಂಡ್ ಎಂಬ ಕಂಪೆನಿ ಈ ಪ್ರಯತ್ನವನ್ನು ಪ್ರಾರಂಭಿಸಿದೆ. ಸುಮಾರು 20,000 ಕಿಮೀ ದೂರದ ಈ ಪಯಣ ಸಾಕಷ್ಟು ರೋಮಾಂಚಕಾರಿ ಅನುಭವ ನೀಡಬಲ್ಲದು. 70 ದಿನಗಳ ಪ್ರವಾಸದಲ್ಲಿ ಈ ಬಸ್ 30 ದೇಶಗಳನ್ನು, ನೂರು ಪ್ರವಾಸಿ ಸ್ಥಳಗಳನ್ನು ಹಾಗೂ 18 ದೇಶಗಳನ್ನು
ನೋಡಬಹುದು.

ಯುರೋಪ್‌ನ ವಿವಿಧ ದೇಶಗಳು, ನಮ್ಮ ದೇಶದ ಪ್ರಮುಖ ಸ್ಥಳಗಳು, ಮಾಯ ಮ್ನಾರ್‌ನ ಪಗೋಡ, ಚೀನಾದ ಮಹಾಗೋಡೆ, ಮಾಸ್ಕೋ ಹಾಗೂ ಪೆರುಗ್ವೆಯನ್ನು ಹಾದು ಹೋಗಲಿದೆ ಈ ಪಯಣದ ಹಾದಿ. ಇದರಲ್ಲಿ ಪ್ರವಾಸಿಗರಿಗೆ ಆಯ್ಕೆಯೂ ಇದ್ದು ಅವರು ಪೂರ್ಣ 70 ದಿನಗಳ ಪ್ರವಾಸವನ್ನಾದರೂ ಮಾಡಬಹುದು ಅಥವಾ ಆಗ್ನೇಯ ಪೂರ್ವ ಏಷ್ಯ, ಚೈನಾ, ಮಧ್ಯ ಏಷ್ಯ ಹಾಗೂ ಯೂರೋಪ್ ಮಾತ್ರ ಕೂಡ ನೋಡಬಹುದು.

ದೆಹಲಿಯಿಂದಲೂ ಪ್ರವಾಸ ಆರಂಭಿಸಬಹುದು, ಬೇಕೆನಿಸಿದರೆ ಲಂಡನ್‌ನಿಂದ ಆರಂಭಿಸಬಹುದು. ಎಷ್ಟು ದೇಶಗಳ ದರ್ಶನ?
70 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ ಹೋಟೆಲ್ ವಾಸ, 18 ದೇಶಗಳ ವೀಸಾದ ಖರ್ಚು, ನುರಿತ ಇಂಗ್ಲೀಷ್ ಬಲ್ಲ ಗೈಡ್, ಸ್ಥಳೀಯ ಪ್ರವಾಸಿ ತಾಣಗಳ ದರ್ಶನ, ಸಸ್ಯಾಹಾರಿ ಊರು ಸೇರಿದೆ. ಆಧುನಿಕ ಬಸ್‌ನಲ್ಲಿ ಸುಖಾಸೀನ ಪ್ರಯಾಣ, ಪ್ರತಿ ಆಸನಕ್ಕೂ ಪ್ರತ್ಯೇಕ ಟಿವಿ ಹಾಗೂ ವೈಫೈ ಇರುತ್ತದೆ.

ಆರಾಮದಾಯಕ ಪ್ರವಾಸಕ್ಕಾಗಿ ಒಂದು ಭಾಗದಲ್ಲಿ ಎರಡು ಆಸನಗಳಿದ್ದರೆ ಇನ್ನೊಂದು ಭಾಗದಲ್ಲಿ ಒಂದು ಆಸನದ
ವ್ಯವಸ್ಥೆ. ಒಂದು ಬಾರಿಗೆ 20 ಪ್ರವಾಸಿಗರಿಗೆ ಮಾತ್ರ ಅವಕಾಶವಿದೆ. ಬಸ್ಸಿನ ಒಳಾಂಗಣ ವಿನ್ಯಾಸ ಹಾಗೂ ಅದರಲ್ಲಿ ಸಿಗುವ ಸೇವೆಗಳೂ ಪಂಚತಾರ ಹೋಟೆಲ್‌ನಲ್ಲಿ ಸಿಗುವ ಸೇವೆಗೆ ಸಮಾನವಾಗಿರುತ್ತವೆ ಎನ್ನುತ್ತಾರೆ ಈ ಬಸ್ಸಿನ ರೂವಾರಿಗಳಾದ ತುಷಾರ್ ಅಗ್ರವಾಲ್ ಹಾಗೂ ಸಂಜಯ್ ಮದನ್.

ದೆಹಲಿಯಿಂದ ಆರಂಭಿಸುವ ಪ್ರವಾಸವು ಮೊದಲು ಮ್ಯಾಮ್ನಾರ್ ತಲುಪುತ್ತದೆ. ಇಲ್ಲಿ ಒಂದು ವಾರ ತಂಗುವ ಪ್ರವಾಸಿಗರು ಐತಿಹಾಸಿಕ ನಗರ ಬಗಾನ್, ಪಗೋಡಾಗಳು, ಬೌದ್ಧ ಸ್ತೂಪಗಳನ್ನು ವೀಕ್ಷಿಸಿ, ಪ್ರವಾಸ ಮುಂದುವರಿಸುತ್ತಾರೆ. 15ನೇ ದಿನದಿಂದ 34ನೇ ದಿನದವರೆಗೆ ಚೀನಾದ ವೀಕ್ಷಣೆ. ಮಹಾಗೋಡೆ ಹಾಗು ಲೇಶನ್ ನಲ್ಲಿರುವ ದೈತ್ಯ ಬುದ್ಧನ ದರ್ಶನ, ಗೋಬಿ ಮರುಭೂಮಿ ಯಲ್ಲಿ ವಿಹಾರ. ಚೆಂಗಡುವಿನಲ್ಲಿರುವ ಪಾಂಡಾಗಳನ್ನು ಮತ್ತು ಮಗಾವ್ ನಲ್ಲಿರುವ ಗುಹೆಗಳನ್ನು ವೀಕ್ಷಿಸುವ ಅವಕಾಶ ಈ
ಪ್ರವಾಸದಲ್ಲಿ ಸೇರಿದೆ.

ಯುರೋಪ್‌ನುದ್ದಕ್ಕೂ ಸಂಚಾರ ಪ್ರವಾಸದ ಮೂರನೇ ಚರಣದಲ್ಲಿ ಮಧ್ಯ ಏಷ್ಯಾದಲ್ಲಿ ಪ್ರವಾಸ. ಕಜಕಿಸ್ಥಾನದ ಮಾರುಕಟ್ಟೆ
ಪ್ರದೇಶಗಳನ್ನೆಲ್ಲಾ ತೋರಿಸಿ, ರೇಷ್ಮೆ ರಸ್ತೆಯ ಮೂಲಕ ಪ್ರಾಚೀನ ನಗರವಾದ ಉಜ್ಬೇಕಿಸ್ತಾನದ ಸಮರಖಂಡ್‌ಗೆ ಕರೆದೊಯ್ಯು ತ್ತಾರೆ. 46ನೇ ದಿನ ಕ್ಯಾಸ್ಪಿಯನ್ ಸಮುದ್ರದ ಸುತ್ತಮುತ್ತ ಓಡಾಡಿ ಈಶಾನ್ಯದ ಕಡೆ ಚಲಿಸಲಾರಂಭಿಸಿ 50ನೇ ದಿನ ರಷ್ಯವನ್ನು ತಲುಪುತ್ತದೆ.

ರಷ್ಯದಲ್ಲಿ ಮೂರು ದಿನ ತಂಗುವ ಪ್ರವಾಸಿಗರು ಅಲ್ಲಿನ ತಾಣಗಳನ್ನು ವೀಕ್ಷೀಸಲಿದ್ದಾರೆ. ಪ್ರವಾಸದ ನಾಲ್ಕನೇ ಚರಣದಲ್ಲಿ ಪ್ರವಾಸಿಗರು ಲ್ಯಾಟ್‌ವಿಯ, ಪೊಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ಬೆಲ್ಜಿಯಂ ನೋಡಿ, ನಂತರ ಇಂಗ್ಲೀಷ್ ಕಾಲುವೆಯನ್ನು ಬಸ್ ಸಮೇತ ಹಡಗಿನಲ್ಲಿ ದಾಟಿ ಲಂಡನ್ ತಲುಪುವರು.

2010 ರಲ್ಲಿ ತುಷಾರ್ ಅಗ್ರವಾಲ್ ಲಂಡನ್ ನಿಂದ ದೆಹಲಿಗೆ ಒಬ್ಬರೇ ಕಾರ್ ಓಡಿಸಿಕೊಂಡು ಬಂದಿದ್ದರು. ಅದು ಈ ಬಸ್ ಪ್ರವಾಸಕ್ಕೆ ಸ್ಫೂರ್ತಿ. ಈ ಬಸ್ ತನ್ನ ಮೊದಲ ಪ್ರಯಾಣವನ್ನು ಮೇ 2021 ನಲ್ಲಿ ಪ್ರಾರಂಭಿಸಲಿದೆ. ಕರೋನಾ ಇದನ್ನು ಬಾಧಿ ಸುವ ಸಾಧ್ಯತೆ ಇದೆ. ಈ ಹಿಂದೆ 1970ರ ದಶಕದ ತನಕ ಲಂಡನ್‌ನಿಂದ ಬಸ್ ಪ್ರವಾಸ ದೆಹಲಿಯ ತನಕ ಮುಂದುವರಿಯು ತ್ತಿತ್ತು.

ಇರಾನ್ ಪ್ರದೇಶದಲ್ಲಿ ಯುದ್ಧ ಆರಂಭಗೊಂಡ ನಂತರ, ಆ ಪ್ರವಾಸ ನಿಂತು ಹೋಗಿತ್ತು. ಇಂದು ಅದನ್ನು ಹೋಲುವ ಬಸ್ ಪಯಣ ಮತ್ತೆ ಆರಂಭವಾಗುವುದರಲ್ಲಿದೆ. ಸಾಹಸ ಪ್ರಿಯರಿಗೆ ಇದೊಂದು ಅಪೂರ್ವ ಅವಕಾಶ.