ಪ್ರೀತಿ ಎಂಬ ಪದದ ಹಿಂದೆ ಅಡಗಿದೆ ಸ್ನೇಹ. ಹಾಗಾದರೆ ಸ್ನೇಹಕ್ಕೂ ಪ್ರೀತಿಗೂ ಇರುವ ಬಾಂಧವ್ಯ ಎಂತಹದ್ದು?
ಹರೀಶ್ ಪುತ್ತೂರು
ಪ್ರೀತಿ-ಪ್ರೇಮದ ಆಳ-ಅಗಲ ಹುಡುಕುವುದು ಅಷ್ಟು ಸುಲಭವಲ್ಲ. ಹುಡುಕಲೂ ಹೋಗಬಾರದು. ಪ್ರೀತಿ ಯಾವ ರೀತಿಯಲ್ಲಿ ಯಾರ ಮನದಲ್ಲಿ ಯಾವಾಗ ಹುಟ್ಟುತ್ತದೆ ಎಂದು ಹೇಳುವುದು ಕಷ್ಟದ ಕೆಲಸ. ಆದರೆ ವಯಸ್ಸಿಗೆ ಬಂದ ಮೇಲೆ ಹುಡುಗ-ಹುಡುಗಿಯ ನಡುವೆ ಅನುರಾಗ ಅರಳುವುದು, ಆಕರ್ಷಣೆ ಮೂಡುವುದು ಸಹಜ. ಪ್ರತಿ ದಿನ ನಾವು ಅನೇಕ ಪ್ರೇಮಿಗಳನ್ನು ನೋಡುತ್ತೇವೆ. ಪ್ರೀತಿಯ ಬಗ್ಗೆ ನಾವು ಮಾತನಾಡುತ್ತೇವೆ.
ಛೇಡಿಸುತ್ತೇವೆ. ಆದರೆ ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ನಾವು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಒಂದು ಗಂಡಿನ ಜೊತೆ ಹೆಣ್ಣೊಂದು ಕಂಡರೆ ಸಾಕು ಅವರು ಯಾರೆಂಬುದನ್ನು ತಿಳಿಯದೇ ಅವರನ್ನು ಪ್ರೀತಿ ಎಂಬ ಹಣೆ ಪಟ್ಟಿ ಕಟ್ಟಿ ಪ್ರೇಮದ ಮೈದಾನಕ್ಕೆ ದೂಡುವುದುಂಟು, ಕಾರಣ ನಮಗೆ ಸರಿಯಾದ ಮಾಹಿತಿ ಇಲ್ಲದಿರುವುದು. ಹೆಣ್ಣು ಗಂಡು ಜೊತೆಯಲ್ಲಿದ್ದರೆ ಸಾಕು, ಇಲ್ಲ ಮಾತನಾಡಿದರೆ ಸಾಕು ಇದನ್ನು ಪ್ರೀತಿ ಪ್ರೇಮವೆಂದೆಲ್ಲ ಹೇಳಿಬಿಡುತ್ತೇವೆ. ಇದು ನಿಜವಾದ ಪ್ರೀತಿಯೇ?
ಈ ಜಗತ್ತಿನಲ್ಲಿ ಸರಿಯಾದ ವಿವರಣೆ ಇಲ್ಲದಂತಹ, ತರ್ಕಕ್ಕೆ ನಿಲುಕದಂತಹ ಮತ್ತು ಅವರವರ ಭಾವಕ್ಕೆ ತಕ್ಕಂತೆ ಹೊಸ ವಿವರಣೆ
ಹುಟ್ಟುವಂತಹ ಪದವೇ ಪ್ರೀತಿ. ಪ್ರೀತಿ ಎನ್ನುವುದು ಕೇವಲ ಪದ ಮಾತ್ರವಲ್ಲ. ಪ್ರೀತಯ ಕುರಿತು ಗ್ರಂಥಗಳನ್ನೇ ಬರೆಯಬಹುದು.
ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವಂತಹ ‘ಪ್ರೀತಿ’, ಪ್ರೇಮಿಗಳಲ್ಲಿ ಗೆಲ್ಲುವುದು ಬಹಳ ಕಡಿಮೆ. ಇದಕ್ಕೆ ಕಾರಣ ಹುಡುಕಿದಾಗ ಸಿಗುವ ಉತ್ತರವೇ ಸ್ನೇಹ ಮತ್ತು ಪ್ರೇಮದ ಬಗ್ಗೆ ಇರುವ ತಪ್ಪು ತಿಳಿವಳಿಕೆ.
ಸ್ನೇಹ ಮತ್ತು ಪ್ರೀತಿ
ಸಾಮಾನ್ಯವಾಗಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಈ ಮಾತು ಬಹಳ ಸಹಜ. ಹುಡುಗರು ಮಾತ್ರ ಸ್ನೇಹವನ್ನು ಪ್ರೀತಿಯೆಂದು ತಿಳಿಯುತ್ತಾರೆ, ಆದರೆ ಹುಡುಗಿಯರು ಮಾತ್ರ ಪ್ರೀತಿಯನ್ನು ಸ್ನೇಹವೆಂದೇ ತಿಳಿಯುತ್ತಾರೆ. ಈ ವಾಕ್ಯ ಏತಕ್ಕಾಗಿ ಹುಟ್ಟಿಕೊಂಡಿತು ಎಂದು ಯಾರೂ ಸಹ ಯೋಚಿಸುವುದೇ ಇಲ್ಲ. ‘ಸ್ನೇಹ’ ಎಂದರೆ ಒಬ್ಬರು ಇನ್ನೊಬ್ಬರ ಸುಖ ದುಃಖಗಳಲ್ಲಿ ಭಾಗಿಯಾಗಿ ಪರಸ್ಪರ ಹಂಚಿಕೊಳ್ಳುತ್ತ ಒಳ್ಳೆಯ ಸಲಹೆಗಳನ್ನು ನೀಡುತ್ತಿರುವುದು.
ಪ್ರೀತಿಯೂ ಸಹ ಸ್ನೇಹದಂತೆಯೇ…. ಆದರೆ ಇಲ್ಲಿ ಕಷ್ಟ ಸುಖಗಳಲ್ಲಿ ಜತೆಯಾಗಿ ನಿಲ್ಲುವುದು, ಜೀವನ ನಿರ್ವಹಣೆ ಹಾಗೂ
ಉತ್ತಮ ಭವಿಷ್ಯದ ಬಗ್ಗೆೆ ಇರುವ ಯೋಚನೆಗಳಿಗೆ ಮಹತ್ವ ಹೆಚ್ಚು. ನಂತರ ಪ್ರೀತಿ ಎಂಬುದು ‘ಮದುವೆ’ ಎಂಬ ಕಾರ್ಯದಲ್ಲಿ ಹೊಸ ತಿರುವು ಪಡೆದುಕೊಂಡು ಹೊಸ ದಾರಿಯಲ್ಲಿ ಸಾಗುತ್ತದೆ.
ಪ್ರೀತಿಯ ಪರಿಯೇ ಹಾಗೆ. ಪ್ರೀತಿ ಕಣ್ಣಿನಿಂದ ಹುಟ್ಟುತ್ತದೆ ಎನ್ನುತ್ತಾರೆ. ಆದರೆ ಪ್ರೀತಿ ನಿಜಕ್ಕೂ ಹುಟ್ಟುವುದು ಹೃದಯದಿಂದ. ನಾವು ನೋಡಿಯೂ ಇರದ ವ್ಯಕ್ತಿಯ ಬಗ್ಗೆ ನಮಗೆ ನಮ್ಮ ಅಂತರಾಳದಲ್ಲೊಂದು ಒಲವು ಮೂಡುತ್ತದೆ. ಕಣ್ಣು ಕಾಣದಿದ್ದರೂ ಆ ಒಲವನ್ನು ಮನಸ್ಸು ಅರಿಯುತ್ತದೆ. ಆ ವ್ಯಕ್ತಿ ಎದುರಾಗಿ ಜೀವನಸಂಗಾತಿಯೂ ಆಗುತ್ತಾರೆ. ಆದರೆ ಹಾಗೆ ಆಗುವ ಮೊದಲು ಕಠಿಣ ಪರೀಕ್ಷೆಗಳು ಎದುರಾಗುತ್ತವೆ. ಈ ಎಲ್ಲವನ್ನೂ ಯಶಸ್ವಿಯಾಗಿ ಗೆದ್ದವರು ನಿಜವಾದ ಪ್ರೇಮಿಗಳು ಎನ್ನಿಸಿಕೊಳ್ಳುತ್ತಾರೆ.
ಆದರೆ ಇಂದಿನ ಯುವಜನತೆ ಇದನ್ನು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. ಯಾರದೋ ನೆನಪಿನಲ್ಲಿ ಈ ಹೃದಯ ಚಡಪಡಿಸುತ್ತದೆ.
ಯಾರದೋ ಕನಸಿನಲ್ಲಿ ಈ ಹೃದಯ ಕನವರಿಸುತ್ತದೆ. ಈ ಹೃದಯ ನಮ್ಮಲ್ಲಿದ್ದರೂ ಅದು ಚಡಪಡಿಸುವುದು ಇತರರಿಗಾಗಿ. ಏಕೆ ಚಡಪಡಿಸುತ್ತದೆ? ಯಾರಿಗೋಸ್ಕರ ಚಡಪಡಿಸುತ್ತದೆ? ಎಂದು ತಿಳಿದುಕೊಳ್ಳಲು ಹೊರಟಾಗ ಸಿಗುವ ಉತ್ತರವೇ ಪ್ರೀತಿ. ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ ಕೆಲ ಕಾಲ ಮಾತನಾಡಿದರೆ ಸಾಕು, ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಊರಲೆಲ್ಲಾ ಸಾರಿಕೊಂಡು ಬರುವವರು ಹೆಚ್ಚು. ಇದು ಅವರಿಬ್ಬರ ಸ್ನೇಹಕ್ಕೆ ಧಕ್ಕೆ ತರುತ್ತದೆ ಎಂದು, ‘ಡಂಗೂರಗಳು’(ಜನರು) ಯೋಚಿಸು ವುದೇ ಇಲ್ಲ.
ಇವರೆಲ್ಲಾ ಪ್ರೀತಿ ಹಾಗೂ ಸ್ನೇಹಕ್ಕೆ ಇರುವ ವ್ಯತ್ಯಾಸವನ್ನು ತಿಳಿಯಬೇಕು. ಪ್ರೀತಿ ಎಂದರೇನು? ಎಂಬ ಪ್ರಶ್ನೆ ಕೇಳುವವರು ಈ
ಭೂಮಿಯಲ್ಲಿ ಅವರ ಮನೆ ಬಿಟ್ಟು ಬೇರೆಲ್ಲೂ ಸುತ್ತಾಡದವರು ಅಂತಲೇ ಅಂದುಕೊಳ್ಳಬೇಕಿದೆ. ಜನರ ಜತೆ ಬೆರೆತವರಿಗೆ, ಸಂಬಂಧಗಳ ಜತೆ ಸಹಕರಿಸಿದವರಿಗೆ ಮಾತ್ರ ತಿಳಿದಿರುತ್ತದೆ ಪ್ರೀತಿ ಎಂದರೇನೆಂಬುದು. ಆದರೆ ಪ್ರೀತಿಗೆ ಯಾವತ್ತೂ ಕೊನೆಯಿಲ್ಲ. ಪ್ರೀತಿ ಮಾಡುವುದಕ್ಕಿಂತ ಸ್ನೇಹ
ಮಾಡುವುದೇ ಉತ್ತಮ ಎಂದು. ಆದರೆ ಕೆಲವರು ತಮ್ಮ ಸ್ನೇಹಿತ-
ಸ್ನೇಹಿತೆಯರನ್ನು ತಮ್ಮ ಪ್ರಾಾಣಕ್ಕಿಿಂತ ಹೆಚ್ಚಾಾಗಿ ಪ್ರೀತಿಸುತ್ತಾಾರೆಂದು
ಅವರಿಗೇ ತಿಳಿದಿರುವುದಿಲ್ಲ