Sunday, 15th December 2024

ಹಾಡಿನ ಮೇಲೆ ಮನಸಾಗಿದೆ

ನಸಾಗಿದೆ ಚಿತ್ರದ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ.

ನಾಯಕ ಅಭಯ್‌ನನ್ನು ಪರಿಚಯಿಸುವ ಈ ಹಾಡು ಮಧುರವಾಗಿ ಮೂಡಿಬಂದಿದೆ. ಮಾನಸ ಹೊಳ್ಳ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಚಂದನವನಕೆ ಬಂದ… ಎಂಬ ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ.

ಪ್ರೀತಿ ಅನ್ನೋದು ದೈವದತ್ತವಾದ ಕೊಡುಗೆ, ಚಿತ್ರದ ನಾಯಕ ಆ ಪ್ರೀತಿಯನ್ನು ಹುಡುಕಿ ಕೊಂಡು ಹೋಗುತ್ತಾನೆ. ಆಗ ಇನ್ನೊಂದು ಪ್ರೀತಿ ಆತನಿಗೆ ಎದುರಾಗುತ್ತದೆ ಆತನ ಹುಡು ಕಾಟದಲ್ಲಿ ತಾನು ಅರಸಿಕೊಂಡು ಹೋದ ಪ್ರೀತಿ ಸಿಗುತ್ತದ ಅಥವಾ ಎದುರಾದ ಪ್ರೀತಿ ಒಲಿಯುತ್ತಾ ಎನ್ನುವುದೇ ‘ಮನಸಾಗಿದೆ’ ಚಿತ್ರದ ಕಥಾಹಂದರ.

ನನ್ನ ಪುತ್ರ ಅಭಯ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ. ಇನ್ನೂ ಎರಡು ವರ್ಷ ಆತನನ್ನು ಚಿತ್ರರಂಗಕ್ಕೆ ತರಬಾರದು ಎಂದುಕೊಂಡಿದ್ದೆ, ಆದರೆ ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ ಆತನಿಗೆ ಹೊಂದುವ ಕಥೆ ರಚಿಸಿದ್ದರು. ಹಾಗಾಗಿ ಈ ಚಿತ್ರದ ಮೂಲಕವೇ ಆತನನ್ನು ನಾಯಕನನ್ನಾಗಿ ಪರಿಚಯಿಸಲು ಚಿತ್ರ ನಿರ್ಮಾಣಕ್ಕೆ ಮುಂದಾದೆ ಎನ್ನುತ್ತಾರೆ ನಿರ್ಮಾಪಕ ಎಸ್.ಚಂದ್ರಶೇಖರ್.

ಏಪ್ರಿಲ್ 15ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಿ 3 ಹಂತದಲ್ಲಿ ಬೆಂಗಳೂರು ನಂತರ ಮಡಿಕೇರಿಯಲ್ಲಿ ಚಿತ್ರೀಕರಣ ಮಾಡುವ ಯೋಜನೆಯಿದೆ. ಚಿತ್ರರಂಗಕ್ಕೆ ಬರಬೇಕು ಎಂಬುದು ನನ್ನ ಬಹು ದಿನಗಳ ಕನಸಾಗಿತ್ತು. ಈ ಚಿತ್ರದ ಮೂಲಕ ನಟನೆಗೆ ಅಡಿ ಯಿಟ್ಟಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ನಾಯಕ ನಟ ಅಭಯ್. ಮೇಘಶ್ರೀ ಮತ್ತು ಅಧಿರಾ ನಾಯಕಿಯರಾಗಿ ನಟಿಸು ತ್ತಿದ್ದಾರೆ.

ಈಗಾಗಲೇ ಎಷ್ಟೋ ಪ್ರೇಮಕಥೆಗಳು ತೆರೆ ಮೇಲೆ ಬಂದು ಹೋಗಿವೆ. ಅದರಲ್ಲೂ ಒಂದು ವಿಭಿನ್ನವಾದ ಲವ್ ಸ್ಟೋರಿ ಇದು ಎನ್ನಬಹುದು. ಸಾಮಾನ್ಯವಾಗಿ ಎಲ್ಲಾ ಪ್ರೇಮಕಥೆ ಗಳಲ್ಲಿ ಜಾತಿ, ಅಂತಸ್ತು, ಶ್ರೀಮಂತಿಕೆ ಅಡ್ಡ ಬರುತ್ತದೆ, ಆದರೆ ಈ ಪ್ರೇಮ ಕಥೆಯಲ್ಲಿ ಮನುಷ್ಯತ್ವ ಅಡ್ಡ ಬರುತ್ತದೆ ಲವ್ ವರ್ಸಸ್ ಹ್ಯೂಮ್ಯಾನಿಟಿ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡು ತ್ತಿದ್ದೇವೆ.

ಕ್ಲಾಸ್ ಜತೆಗೆ ಮಾಸ್ ಎಲಿಮೆಂಟ್ ಇರೋ ಚಿತ್ರವಿದು ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ . ಚಿತ್ರದಲ್ಲಿ ಮೂರು ಆ್ಯಕ್ಷನ್ ದೃಶ್ಯಗಳಿದ್ದು, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬರಲಿವೆ.