Saturday, 14th December 2024

ತೆರೆಯಲ್ಲಿ ಮಾಸ್ಟರ್ ಮೈಂಡ್

ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಸ್ಟರ್ ಮೈಂಡ್ ಎನ್ನುವ ಮೂವತ್ತೆರಡು ನಿಮಿಷದ ಚಿತ್ರವೊಂದನ್ನು ಸಿದ್ದಪಡಿಸಿದ್ದಾರೆ. ಈ ಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಎ.ವಿ.ಸುರೇಶ್ ಮೈಂಡ್ ಗೇಮ್‌ಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಸಿಂಹಬಲ ಮತ್ತು ಮಾಸ್ಟರ್ ಮೈಂಡ್ ಎನ್ನುವ ಇಬ್ಬರು ರೌಡಿಗಳ ರಾಜಕೀಯ ದೊಂಬರಾಟ ಮತ್ತು ಜಿದ್ದಾಜಿದ್ದಿ ಚಿತ್ರದ ಕಥೆಯಲ್ಲಿದೆ. ಜತೆಗೆ ಮಹಿಳಾ ಪ್ರಧಾನ ಅಂಶಗಳು ಮಿಶ್ರಣಗೊಂಡಿವೆ.

ಕ್ಲೈಮಾಕ್ಸ್‌ನಲ್ಲಿ ಮುಂದಿನ ಭಾಗವೂ ಮೂಡಿಬರುವಂತೆ ಚಿತ್ರಕಥೆಯನ್ನು ಹಣೆಯಲಾಗಿದೆ. ತಾರಾಗಣದಲ್ಲಿ ಅನಂತು ವಾಸುದೇವ್, ಹಿಮಾಮೋಹನ್, ಬಲರಾಂ, ಎ.ವಿ.ಸುರೇಶ್, ನಿಹಾಲ್‌ಗೌಡ, ಸದಾನಂದಗೌಡ, ಕುಶಾಲ್ ಮುಂತಾದವರು ನಟಿಸಿದ್ದಾರೆ.

ಸಂಗೀತ ಲಲಿತ್‌ಕ್ರಿಶ್, ಛಾಯಾಗ್ರಹಣ ಸಾವದ್.ಎಂ, ಸಂಕಲನ ಹರೀಶ್, ಕೃಷ್ಣ ಅವರದ್ದಾಗಿದೆ. ಬೆಂಗಳೂರು, ದೇವನಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅಶೋಕ್.ಎನ್.ಶಿಂದೆ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.