Wednesday, 11th December 2024

ದೀಪಾವಳಿಗೆ ಮುಗಿಲ್ ಪೇಟೆ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನುರವಿಚಂದ್ರನ್ ನಾಯಕನಾಗಿ ನಟಿಸಿರುವ ಮುಗಿಲ್ ಪೇಟೆ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ದೀಪಾವಳಿ ಹಬ್ಬಕ್ಕೆ ಭರ್ಜರಿಯಾಗಿ ತೆರೆಗೆ ಬರಲಿದೆ. ಮುಗಿಲ್ ಪೇಟೆ ಅದ್ದೂರಿಯಾಗಿ ಮೂಡಿಬಂದಿದ್ದು, ಸಿನಿಪ್ರಿಯರಿಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸ ಲಿದೆ.

ಈ ಚಿತ್ರದ ಟ್ರೇಲರ್ ಮಿಲಿಯನ್‌ಗಟ್ಟಲೆ ವೀಕ್ಷಣೆ ಕಂಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಮುಗಿಲ್ ಪೇಟೆಯಲ್ಲಿ ನವಿರಾದ ಪ್ರೇಮಕಥೆಯಿದೆ. ಜರ್ನಿಯಲ್ಲಿ ಸಾಗುವ ಕಥೆ ಇದಾಗಿದೆ. ಚಿತ್ರದ ನಾಯಕ ಬಹು ವರ್ಷಗಳ ನಂತರ ತನ್ನೂರಿಗೆ ತೆರಳುತ್ತಾನೆ. ಆ ಸಂದರ್ಭ ಆಗುವ ಆನಂದ, ನಿಸರ್ಗ ರಮಣೀಯ ತಾಣದಲ್ಲಿ ಸಿಗುವ ಆಹ್ಲಾದ, ಆ ನಡುವೆಯೇ ನಾಯಕಿಯ ಭೇಟಿ, ಇಬ್ಬರ ನಡುವೆ ಚಿಗುರುವ ಪ್ರೀತಿ ಹೀಗೆ ಚಿತ್ರದ ಕಥೆ ಸಾಗುತ್ತದೆ.

ಮನು ರವಿಚಂದ್ರನ್‌ಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ಕಯಾದು ಪರ ಭಾಷೆಯ ನಟಿಯಾದರೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಇದೆ. ಕನ್ನಡ ಚಿತ್ರದಲ್ಲಿ ನಟಿಸುತ್ತಿರು ವುದು ಸಂತಸ ತಂದಿದೆ ಎನ್ನುತ್ತಾರೆ ಕಯಾದು. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹಲವು ಕಲಾವಿದರು ಮುಗಿಲ್ ಪೇಟೆಯಲ್ಲಿ ಅಭಿನಯಿಸಿದ್ದಾರೆ.

ಭರತ್.ಎಸ್.ನಾವುಂದ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ ಅಡಚಣೆಗಾಗಿ ಕ್ಷಮಿಸಿ ಚಿತ್ರ ನಿರ್ದೇಶಿಸಿದ್ದ ಭರತ್‌ಗೆ ಇದು ಎರಡನೇ ಚಿತ್ರವಾಗಿದೆ. ಆರು ಸುಮಧುರ ಹಾಡು ಗಳಿರುವ ಈ ಚಿತ್ರಕ್ಕೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ನೀಡಿದ್ದಾರೆ.

ರವಿವರ್ಮ ಅವರ ಛಾಯಾಗ್ರಹಣ ಮುಗಿಲ್ ಪೇಟೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅರ್ಜುನ್ ಕಿಟ್ಟು ಸಂಕಲನ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ, ಮೋಹನ್ ನೃತ್ಯ ನಿರ್ದೇಶನ, ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.