Sunday, 15th December 2024

ಮೂಗಿನಿಂದ ಶಹನಾಯಿ ವಾದನ

ಸುರೇಶ ಗುದಗನವರ

ಮೂಲತಃ ಗೋಕಾಕದವರಾದ ಕಾಡೇಶ ಕುಮಾರ ಅವರು ಸಪ್ಟೆೆಂಬರ್ 21, 1955ರಂದು ಜನಿಸಿದರು. ಇವರ ಹೆಸರು ಕಾಡಪ್ಪಾ. ನಂತರ ಸಂಗೀತ ಲೋಕದಲ್ಲಿ ಜಿ.ಕೆ.ಕಾಡೇಶಕುಮಾರ ಎಂದು ಪ್ರಸಿದ್ಧಿಯಾಗಿರುವದು ವಿಶೇಷ. ತಂದೆ ಬಸವಣ್ಣೆಪ್ಪ, ತಾಯಿ ಸರಸ್ವತಿ.

ಗೋಕಾಕದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಓದಿದ ಕಾಡೇಶ, ಸಂಗೀತದ ಹುಚ್ಚು ಹಿಡಿಸಿಕೊಂಡದ್ದ ರಿಂದ, ಓದನ್ನು ಮುಂದುವರೆಸಲಿಲ್ಲ. ಅವರು ಬಾಲ್ಯದಲ್ಲಿಯೇ ಹಾರ್ಮೋನಿಯಂ ಗಿಟಾರ್, ಕೀ ಬ್ೋಗಳ ನುಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಗೋಕಾಕದ ನಾಡು ರಂಗಭೂಮಿ ಕಲೆಗೆ ಪ್ರಸಿದ್ಧ. ಕಾಡೇಶ ಅವರು ಸಂಗೀತ ಸಂಯೋಜನೆ, ಗಾಯನ, ನಟನೆ ಮುಂತಾದ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ಕಳೆದ 50 ವರ್ಷಗಳಿಂದ ಕಠಿಣ ಪರಿಶ್ರಮದೊಂದಿಗೆ ಸಂಗೀತದೊಂದಿಗೆ ಬಹುಮುಖ ಕಲಾವಿದರಾಗಿ ಗೋಕಾಕದ ಹೆಸರನ್ನು ನಾಡಿನಲ್ಲಿ ಪಸರಿಸಿದ್ದಾರೆ. ಅವರು ಜಾನಪದಗೀತೆ, ಭಾವಗೀತೆ, ಭಕ್ತಿಗೀತೆ, ಹಾಗೂ ಚಿತ್ರಗೀತೆಗಳನ್ನು ಹಾಡುವದಲ್ಲದೇ ಶಹನಾಯಿ ಸ್ವರ ಮಾಧುರ್ಯವನ್ನು ಮೂಗಿನಿಂದ ನುಡಿಸುವದು, ಗಿಟಾರ್‌ನ್ನು ಬೆನ್ನು ಹಿಂದೆ ಹಿಡಿದು ನುಡಿಸುವದು ಮತ್ತು ಕೀಬೋರ್ಡ್ ಹಣೆಯಿಂದ ನುಡಿಸುವ ವಿಶೇಷ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗೆ ಹಲವು ಪ್ರತಿಭೆಗಳನ್ನು ಒಳ ಗೊಂಡಿರುದಕ್ಕೆ ಸಕಲ ಕಲಾ ವಲ್ಲಭರಾಗಿ ಕಾಡೇಶ ಕುಮಾರ ಗುರುತಿಸಿಕೊಂಡಿದ್ದಾರೆ.

ದಾಖಲೆ ಪುಸ್ತಕಗಳಲ್ಲಿ

ಜಿ.ಕೆ.ಕಾಡೇಶಕುಮಾರ ಅವರು ಮೂಗಿನಿಂದ ಶಹನಾಯಿ ಮತ್ತು ಬೆನ್ನ ಹಿಂದೆ ನುಡಿಸುವ ಗಿಟಾರ್ ಕಲೆಗಳು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸಳಲ್ಲಿ ದಾಖಲಾಗಿವೆ. ಅವರು ಕವಿಗಳ ಗೀತೆಗಳನ್ನು ಸುವರ್ಣ ಕರ್ನಾಟಕ ಸಂಭ್ರಮದ ಅನೇಕ ಕಾರ್ಯಕ್ರುಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ.

ಕಾಡೇಶಕುಮಾರವರು ಬೆಂಗಳೂರಿನಲ್ಲಿ ಡಾ.ರಾಜಕುಮಾರ ಅವರ ಸಮ್ಮುಖದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಲ್ಲದೇ ಇತ್ತೀಚಿಗೆ ಕುವೈತ, ದುಬೈ ಹಾಗೂ ಸಿಂಗಾಪೂರದಲ್ಲಿಯೂ ಕೂಡಾ ಸಂಗೀತ ಕಾರ್ಯಕ್ರಮ ನೀಡಿರುವದು ವಿಶೇಷ. ಚಂದನ, ಉದಯ, ಸುವರ್ಣ, ಕಸ್ತೂರಿ, ಟಿವ್ಹಿ-9 ಹಾಗೂ ಝೀ ಟಿವ್ಹಿಯಲ್ಲಿ ಮೂಡಿಬರುವ ಶಭಾಷ ಇಂಡಿಯಾ ಮತ್ತು ಸೋನಿ ಟಿವ್ಹಿ ಯಲ್ಲಿ ಮೂಡಿಬರುವ ಎಂಟರ್ ಟೇನ್‌ಮೆಂಟ್ ಕೆ ಲಿಯೇ ಕುಛ್ ಭಿ ಕರೇಗಾ ಕಾರ್ಯಕ್ರಮಗಳಲ್ಲಿ ಕಲೆಯನ್ನು ಪ್ರದರ್ಶಿಸಿದ್ದಾರೆ.

ಕಳೆದ 20 ವರ್ಷಗಳಿಂದ ಗೋಕಾಕದಲ್ಲಿ ಗುಂಪು ಕಲಾವಿದರ ಬಳಗ ಕಟ್ಟಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಏರ್ಪಡಿಸಿ ಜನಮಾನಸರಾಗಿದ್ದಾರೆ. ಅವರು ಈ ವೇದಿಕೆಯ ಅಡಿಯಲ್ಲಿ ದ.ರಾ.ಬೇಂದ್ರೆ, ಕುವೆಂಪು, ಡಿ.ಎಸ್.ಕರ್ಕಿ, ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಜನ್ಮ ದಿನಾಚರಣೆ ಹಾಗೂ ಚಿತ್ರರಂಗದ ಹಿನ್ನಲೆ ಗಾಯಕರಾದ ಪಿ.ಬಿ.ಶ್ರಿ ೀನಿವಾಸ, ಲತಾ  ಮಂಗೇ ಶ್ಕರ, ಮೊಹಮ್ಮದ ರಫಿ, ಕಿಶೋರಕುಮಾರ, ಸಿ.ಅಶ್ವತ್ಥ, ಭೀಮಸೇನ ಜೋಶಿ, ಡಾ.ರಾಜಕುಮಾರ, ವಿಷ್ಣುವರ್ಧನ, ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕ ಹಿರಿಯ ಕಲಾವಿದರ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಲ್ಲದೇ ಅವರು ಪಠ್ಯಪುಸ್ತಕ ದಲ್ಲಿರುವ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ, ಜಿಲ್ಲೆಯಲ್ಲಿರುವ ಶಾಲೆ ಕಾಲೇಜುಗಳಿಗೆ ಹೋಗಿ, ಹಾಡುವದಲ್ಲದೇ ಮಕ್ಕಳಿಗೆ ಸಂಗೀತ ವನ್ನು ಕಲಿಸಿಕೊಟ್ಟಿದ್ದಾರೆ.

ಕೇರಳದ ಕಾಸರಗೋಡಿನ ಕನ್ನಡ ಸಾಹಿತ್ಯ ಸಮ್ಮೇಳನ, ಗೋವಾದ ಕನ್ನಡ ಸಮ್ಮೇಳನ, ಬೆಂಗಳೂರಿನಲ್ಲಿ ಜರುಗಿದ ಅಂತ ರಾಷ್ಟ್ರೀಯ ಮ್ಯಾಜಿಕ್ ಸಮ್ಮೇಳನ ಮುಂತಾದ ಸಮ್ಮೇಳನಗಳಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ಮೂಗಿನಿಂದ ಶಹನಾಯಿ ನುಡಿಸಿ ಮೋಡಿ ಮಾಡಿದ್ದಾರೆ.

ಏಕ ವ್ಯಕ್ತಿ ಸಂಗೀತ
ವಿಶೇಷವಾಗಿ ಒಂದು ಸಂಗೀತ ಕಾರ್ಯಕ್ರಮ ನಡೆಯಬೇಕಾದರೆ, ಕಡಿಮೆ ಎಂದರೂ ನಾಲ್ಕು ಅಥವಾ ಐದು ಜನ ಕಲಾವಿ
ದರು ಇರುತ್ತಾರೆ. ಇತ್ತೀಚಿಗೆ ಅವರು ಏಕ ವ್ಯಕ್ತಿ ಸಂಗೀತ ಪ್ರದರ್ಶನ ನೀಡುವದರಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ ಅವರು ಒಬ್ಬರೇ ಕಾರ್ಯಕ್ರಮ ನೀಡುವದು ವಿಶೇಷ. ಕಳೆದ ಜೂನ್ 16, 2019ರಲ್ಲಿ ಗೋಕಾಕದ ಗೆಳೆಯರ ಬಳಗವು ಕಲಾವಿದ ಜಿ.ಕೆ.ಕಾಡೇಶ ಕುಮಾರವರ ಸಾಧನೆಯನ್ನು ಮನಗಂಡು ಅಭಿನಂದನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಏರ್ಪಡಿಸಿರುವದು ಶ್ಲಾಘ ನೀಯವಾದುದು.

ರಂಗಭೂಮಿ ಹಾಗೂ ಚಿತ್ರ ಕಲಾವಿದೆ ಜಯಲಕ್ಷ್ಮೀ ಪಾಟೀಲರವರು ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆ ಉಳಿಸಿ ಬೆಳೆಸಿ ದಂತಾಗುತ್ತದೆ. ಕಲಾವಿದರು ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತಾರೆ ಎಂದು ತಿಳಿಸಿ, ಕಾಡೇಶಕುಮಾರವರ ಕಲೆಯನ್ನು ಕೊಂಡಾಡಿ ದರು. ಈ ಸಂದರ್ಭದಲ್ಲಿ ಕಾಡೇಶ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಂಡಿರುವದು ವಿಶೇಷವಾಗಿದೆ. ಕಲಾವಿದ ಜಿ.ಕೆ.ಕಾಡೇಶಕುಮಾರ ಅವರಿಗೆ ಸಂಗೀತವೇ ಆಸ್ತಿ.

ಇಂತಹ ವಿಶೇಷ ಹತ್ತು ಹಲವು ಪ್ರತಿಭೆಗಳನ್ನು ಒಳಗೊಂಡರೂ ಸರ್ಕಾರದಿಂದ ಯಾವದೇ ಮನ್ನಣೆಗೆ ಪಾತ್ರರಾಗದಿರುವದು  ನಿಜಕ್ಕೂ ಬೇಸರದ ಸಂಗತಿ. ಕಾಡೇಶಕುಮಾರ ಅಂತಹ ಅಪರೂಪದ ಕಲಾವಿದರನ್ನು ಸರ್ಕಾರ ಪರಿಗಣಿಸಿ ಗೌರವಿಸುವ ಅವತ್ಯ ವಿದೆ. ಆಗ ಈ ರೀತಿಯ ಅಪರೂಪದ ಕಲಾವಿದರನ್ನು ಗುರುತಿಸಿದಂತಾಗುತ್ತದೆ.