Wednesday, 11th December 2024

ನಿನ್ನಂತಹ ಹೇಡಿ ನನಗೆ ಬೇಡ !

ಮಹಾದೇವ ಎಸ್‌.ಪಾಟೀಲ

ಮಾಡೋದೆಲ್ಲಾ ಮಾಡಿ ತಪ್ಪಾಯ್ತು, ಸಾರಿ ಇವೆಲ್ಲಾ ಗಂಡಸರಿಗೆ ಬಾಯಿ ಪಾಠ ಆಗಿ ಬಿಟ್ಟಿರುತ್ತವೆ. ಏನೇ ಕೆಲಸ ಮಾಡಬೇಕಾದ್ರು   ಮೊದಲು ವಿಚಾರ ಮಾಡಬೇಕು

‘ಏರಮಾ, ನಾ ಶಂಕರ್ ಕಣೆ.’  ದನಿ ಕೇಳಿದ ರಮಾ ಬೆರಗಾಗಿ ಮಾತನಾಡದೆ ಮೌನವಾದಳು. ’ಮತ್ಯಾಕೆ ಇವ್ನ ಕಾಟಾ ಅಂತಿಯಾ,  ಮಾತಾಡು ರಮಾ ನಾ ತಪ್ಪ ಮಾಡಿದ್ದೀನಿ ನಿಜಾ…ಆದ್ರೆ ಎನ್ ಮಾಡೋದು ನಾನು ನಿನ್ನನ್ನೆ ಮದ್ವೆ ಆಗ್ಬೇಂದ್ರೆ ನಮ್ಮ ತಂದೆ, ತಾಯಿ ಸುತರಾಮ್ ಒಪ್ತಾಯಿಲ್ಲ ಕಣೆ.’

‘ಹೌದು ಶಂಕರ್, ಅದೇನೊ ಅಂತಾರಲಾ ಕೆಲ್ಸ ಮುಗಿದ ಮ್ಯಾಲ ಹೊಲ್ಸ. ಅನ್ನೊಂಗಾಯ್ತು ನನ್ನ ಬಾಳೆ.’ ‘ಸಾರಿ ರಮಾ.’
‘ಹೀಗೆ ಮುಂಚೆ ನಿಮ್ಮಪ್ಪ, ನಿಮ್ಮವ್ಗ ಹೇಳಿ ಕೇಳಿ ಮಾಡೋಕೆ ನಿನ್ನ ಬುದ್ದಿಗೇನು ಮಸಿ ಬಳಿದಿತ್ತಾ.’ ‘ತಪ್ಪಾಯ್ತು ಕ್ಷಮಿಸು ರಮಾ.’
‘ಮಾಡೊದೆಲ್ಲಾ ಮಾಡಿ ತಪ್ಪಾಯ್ತು, ಸಾರಿ ಇವೆಲ್ಲಾ ಗಂಡಸರಿಗೆ ಬಾಯಿ ಪಾಠ ಆಗಿ ಬಿಟ್ಟಿರುತ್ತವೆ.

ಏನೇ ಕೆಲಸ ಮಾಡಬೇಕಾದ್ರು ಮೊದಲ ವಿಚಾರ ಮಾಡಬೇಕು.’ ‘ರಮಾ, ಯಾಕೆ ಕಣೆ ನಾ ಮಾಡಿರೊ ತಪ್ಪಿಗೆ ಗಂಡಸರಿಗೆಲ್ಲಾ ಉಗಳತಿ. ಪ್ರೀತಿಗಾಗಿ ತಮ್ಮ ಜೀವಾನೆ ಕೊಟ್ಟಿರುವ ಉದಾಹರಣೆಗಳಿವೆ ಗೊತ್ತಾ. ರೋಮಿಯೊ ಜೂಲಿಯಟ್ ಗಾಗಿ ತನ್ನ ಪ್ರಾಣಾನೇ ಕೊಡಲಿಲ್ವಾ. ಅದೆಷ್ಟು ಪ್ರೇಮಿಗಳ ಅಮರ ಕಥೆ ಕೇಳಿಲ್ಲಾ ಹೇಳು.’

‘ನೋಡ ಶಂಕರ್, ನಿನ್ನ ಹಾಳ ಪುರಾಣ ಕೇಳೊಕೆ ನನ್ನತಾವ ಟಾಯಿಮ್ ಇಲ್ಲ. ಪ್ರೀತಿ ಮಾಡೋಕೆ ಮೊದಲು ಎದೆಗುಂಡಿಗೆ ಗಟ್ಟಿಯಾಗಿರಬೇಕು, ಪ್ರೀತಿನಾ ಪ್ರೀತಿಸೊ ಮನಸು ಇರಬೇಕು ಕಣೊ. ಮನಸಿಲ್ದೆ ಮಾಡೊ ಪ್ರೀತಿಗೆ ನಾಯಿ ಪ್ರೀತಿ ಅಂತಾರೆ ತಿಳಿತಾ.’ ‘ರಮಾ, ನನ್ನ ನಾಯಿಗಿಯಿಗೆ ಹೋಲಿಸಬೇಡ, ಸಿಟ್ಟು ಬರುತ್ತೆ.’

‘ಹ್ಞಾಂ..ಸಿಟ್ಟು ಬರ್ದೆ ಇನ್ನೇನು ಮಾಡಿತು. ಹುಡಿಗಿರ್ನ ಪಟಾಯಿಸೋಕೆ ಹೇಳಿದ್ನೆಲ್ಲಾ ಮಾಡ್ತಿರಾ. ಯಾರ್ನಾದ್ರು ಕೊಲೆ ಮಾಡಿ ಬಾ ಅಂದ್ರು ಮಾಡ್ತಿರಿ, ಆದರೆ ಕೊನೆಗೆ ಮದುವೆ ಮಾಡ್ಕೊ ಅಂದ್ರೆ ಬಾಯಿನೆ ಬರೊಲ್ಲಾ.’ ‘ನೋಡ ರಮಾ, ಪ್ರೀತಿ ಅಂದ್ರೇನೆ ಹಾಗೆ ಹೇಳ್ದೆ ಕೇಳ್ದೆ ಹುಟ್ಟಿ ಬಿಡುತ್ತೆ, ಬಿಡಬೇಕು ಅಂದ್ರೆ ಕಷ್ಟವಾಗುತ್ತೆ, ಆದ್ರೇನು ಮಾಡೋದು.’ ‘ಹೌದು ನಂಗೊತ್ತು ಇದೆ ಡೈಲಾಗ್ ಹೇಳ್ತಿಯಂತ.

ಒಳ್ಳೆ ಮಾತಿಲೆ ಮದ್ವಿಗೆ ಒಪ್ಪಗೊಂತಿಯಾ ಇಲ್ಲಾ ನಾನೆ ನಿನ್ಗ ತಾಳಿ ಕಟ್ಲಾ.’ ‘ ಹ್ಞಾಂ ನೀನೆ ತಾಳಿ ಕಟ್ತಿಯಾ!’ ‘ಹ್ಞುಂ..ನಾನೆ ಕಟ್ತಿನಿ. ನಿನ್ಗೆ ತಂದೆ-ತಾಯಿ, ಕುಲ-ಜಾತಿ,ಮಾನ- ಮರ್ಯಾದೆ ತುಂಬಾ ಇದೆಯಲ್ಲ ಅದ್ಕೆ.’ ‘ಥೂ..ನಿನ ಗಂಡಸ್ತನಕ ಇಟ ಬೆಂಕಿ
ಹಚ್ಚ. ಹೆಣ್ಣೇನು ಕಾಯ್ತಾ ನಿಂತಿರುತ್ತಾಳೆ ಅಂತಹ ತಿಳದಿಯಾ. ಮಾಡೊದೆಲ್ಲಾ ಮಾಡಿ ಕೊನೆಗೆ ನನ್ನ ಶೀಲಾನು ಹಾಳು ಮಾಡಿದ್ಮೇಲೆ ಹೆಣ್ಣಿಗೆ ಎಲ್ಲಿ ಇರುತ್ತೆ ಮರ್ಯಾದೆ.

ಮರ್ಯಾದಾ ಪುರುಷೊತ್ತಮರಂತೆ ಏನೂ ಹಾಗಿಲ್ಲ ಅನ್ನುವರಂತೆ ಕಾಮದ ವಾಸನೆಯಲ್ಲಿ ತಿರಗುವುದಿಲ್ಲ ಹೆಣ್ಣು. ನೀನೆ ಹೇಳು ನೀನು ಓದಿದ್ದೀಯಾ ನಾಕಕ್ಷರಾನು ಕಲ್ತಿದ್ದೀಯಾ.’ ‘ನೋಡು ರಮಾ,ಆಗಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ. ಈ ಮಾತು ಕೇಳ್ರಿ ಚನ್ನಾಗಿ ಹೇಳ್ತಿರಾ, ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ರೂ ಹೊಟ್ಟಿಗೆ ಅನ್ನಾನೇ ತಿನ್ನೋದು ಅರ್ಥ ಆಯ್ತಾ. ನಿನ್ನ ಕಷ್ಟ
ಅರ್ಥವಾಗುತ್ತೆ ಕಣೆ, ಆದ್ರೇನು ಮಾಡೋದು ಅವಸರವೇ ಅಪಘಾತಕ್ಕೆ ಕಾರಣ ಅನ್ನೊಂಗೆ ಆಯ್ತು.’

‘ಪ್ರೀತಿ ಮಾಡೋ ಮುಂಚಾನೇ ವಿಚಾರ ಮಾಡಿದ್ರೆ ಶ್ಯಾಣ ಆಗ್ತಿದ್ದೆ. ನಿನ್ನ ಜೋಡಿ ಮಾತಾಡಿ ತಲೆ ಕೆಡ್ಸಿಕೊಳ್ಳೊದುಕ್ಕಿಂತ ನಿಮ್ಮ ತಂದೆ-ತಾಯಿ ಬಳಿ ನಾನೇ ಮಾತಾಡುವೆ.’ ‘ ನಿನ್ನ ಕೈ ಮುಗಿತಿನಿ ರಮಾ, ಕಾಲ ಬೀಳು ಅಂದ್ರೆ ಕಾಲ ಬಿಳ್ತೀನಿ ಆದ್ರೆ ಈ ಸುದ್ದಿ ಅಪ್ಪನ ಹತ್ರ ಹೋದ್ರೆ ಅಪ್ಪಾ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಕಣೆ.’ ‘ಶಂಕರ್ ಅದೇನೆ ಆಗ್ಲಿ, ಬಾಳೊಂದು ಹಾಳಾದ  ಮೇಲೆ ನಾ ಬದುಕಿ ಫಲವೇನು ಅವರ ಸತ್ತ ಮ್ಯಾಲ ನಾನು ಸಾಯುವೆ. ಎರಡರಲ್ಲೊಂದು ತಿರ್ಮಾನ ಆಗ್ಲೆಬೇಕು.

ನಿನ್ನ ತಂದಿತಾಯಿಗೆ ಮಾತ್ರ ಮರ್ಯಾದೆ ಇದೆ, ಅಂದ್ರೆ ನಮಗೆ ಅದು ಇಲ್ಲಾ ಅನಕೊಂಡಿಯಾ. ಕುಲ-ಜಾತಿ ಬೇರೆಯಾದ್ರು ಮರ್ಯಾದೆ ಮಾನ ಅನ್ನೊದು ಎಲ್ಲರಿಗೂ ಅಷ್ಟೇ ಕಣೊ. ಅಡಕಿಗೆ ಹೋದ ಮಾನ ಆನೆ ಕೊಟ್ಟರು ಬಾರದು ತಿಳಿತಾ.’ ‘ಆಯ್ತು ರಮಾ, ಪ್ರೇಮವಿವಾಹ ಆಗಿ ತಂದೆ ತಾಯಿ, ಸಮಾಜದೊಂದಿಗೆ ಛೀ..ಥೊ..ಹಾಕಿಸಿಕೊಳ್ಳುವವದಕ್ಕಿಂತ ಬದುಕಿ ನರಳಿ ನರಳಿ
ಸಾಯುವದಕ್ಕಿಂತ ಸತ್ತು ಸ್ವರ್ಗ ಸೇರೋಣ ಬಾ ಕಣೆ.

ಇದ್ದೊರಾದ್ರು ಸುಖವಾಗಿರಲಿ.’  ‘ಥೂ..ಹೇಡಿ. ನಾವೇನು ಮಾಡಬಾರ್ದ ಮಾಡಿವಿ. ಎಂತಹ ಶಿವ ಪರಮಾತ್ಮನೆ ಗಂಗೆಯನ್ನು ಜಡೆಯಲ್ಲಿ ಇಟ್ಟುಕೊಂಡು ಪಾರ್ವತಿಯೊಂದಿಗೆ ಸರಸವಾಡಲಿಲ್ಲವೆ ಹುಟ್ಟಿದ ಸರ್ವ ಎಂಬತ್ತು ಲಕ್ಷ ಜೀವರಾಶಿಗಳಲ್ಲಿ
ಒಂದಲ್ಲ ಒಂದು ತಪ್ಪು ಮಾಡ್ಲೆ ಬೇಕಾಗುತ್ತೆ. ಜೀವ ಹುಟ್ಟಿರೋದೆ ಇರೋ ನಾಲ್ಕು ದಿನ ಸಂತೋಷವಾಗಿ ಬದುಕಿ ಬಾಳಿ ಸಾಧನೆ ಮಾಡೋಕೆ. ಹೇಡಿಗಳಂತೆ ಸಾಯೋದೆ ದಾರಿಯಲ್ಲ. ಸಾಯೋದು ಇದ್ದೆೆ ಇದೆ.

ಬದುಕೆಂಬ ದೋಣಿಯನ್ನು ಹುಟ್ಟುಹಾಕಿಕೊಂಡು ನಡೆಸಲಾಗದ ಅಂಬಿಗ ನೀನು, ನಿನ್ನ ಜೋಡಿ ಸಂಸಾರ ಮಾಡಿದ್ರೆ ನಾನಿದ್ರು ಸತ್ತಂಗೆ. ನಿನ್ನ ಜೋಡಿ ಮಾತಾಡೊದು ಸತ್ತ ಹೆಣದ ಮುಂದೆ ಕಿನ್ನರಿ ಬಾರಿಸೋದು ಎರಡು ಒಂದೆ. ನಿನ್ನಂತಹ ಹೇಡಿನ ಕಟ್ಟಿಕೊಂಡು ಸಾಯೋದಕ್ಕಿಂತ ನಿನ್ನಂದ ದೂರಾಗಿ ಒಬ್ಬೊಂಟಿಯಾಗಿ ಹೊಸ ಬದುಕು ಕಟ್ಟಿಕೊಳ್ಳೊದೆ ವಾಸಿ.’    ಮಾಡೋದೆಲ್ಲಾ ಮಾಡಿ  ಪ್ಪಾಯ್ತು, ಸಾರಿ ಇವೆಲ್ಲಾಾ ಗಂಡಸರಿಗೆ