Sunday, 15th December 2024

ನದಿ ದಡದ ಪುರಾತನ ನಗರ

ಡಾ.ಉಮಾಮಹೇಶ್ವರಿ ಎನ್‌.

ನೆಕಾರ್ ನದಿ ದಡದಲ್ಲಿರುವ ಈ ನಗರ ಜರ್ಮನಿಯ ಪುರಾತನ ತಾಣಗಳಲ್ಲೊಂದು.

ಹೈಡೆಲ್‌ಬರ್ಗ್ ಎನ್ನುವುದು ಜರ್ಮನಿಯ ಪುರಾತನ ನಗರಗಳಂದು. ಇಲ್ಲಿನ ವಿಶ್ವವಿದ್ಯಾಲಯ ಪ್ರಸಿದ್ಧವಾಗಿದ್ದು ಜಗತ್ತಿನೆಡೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಬಾಡೆನ್- ವುಟ್ಟೆನ್‌ಬೆರ್ಗ್ ಪ್ರಾಂತ್ಯದಲ್ಲಿರುವ ಈ ನಗರದ ಜನಸಂಖ್ಯೆ ಒಂದು ಲಕ್ಷದ ಅರುವತ್ತು ಸಾವಿರದ ಆಸುಪಾಸಿನಲ್ಲಿದೆ. ಇದರಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳು.

1386ರಲ್ಲಿ ಆರಂಭಗೊಂಡ ಇಲ್ಲಿನ ವಿಶ್ವವಿದ್ಯಾಲಯ ಜರ್ಮನಿಯ ಅತಿ ಪುರಾತನ ವಿದ್ಯಾಲಯ. ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಂತಹ ಪ್ರಸಿದ್ಧ ವೈeನಿಕ ಸಂಸ್ಥೆಗಳೂ ಈ ನಗರದಲ್ಲಿವೆ. ನೆಕಾರ್ ನದಿದಂಡೆಯಲ್ಲಿರುವ ಈ ನಗರದ ಸುತ್ತಲೂ ಇರುವ ಹಸಿರು ಹೊದಿಕೆ ಹೊದ್ದ ಪರ್ವತಗಳು ಇಲ್ಲಿನ ಸೌಂದರ್ಯದ ಮೂಲ. ಕೋನಿಗ್ ಸ್ಟೂಲ, ಹೈಲಿಗೆನ್ ಬೆರ್ಗ್ ಮತ್ತು ಗೈಸ್ ಬೆರ್ಗ್ ಗಳು ಮೊದಲಾದ ಪರ್ವತಗಳು ಇಲ್ಲಿವೆ. ಮಧ್ಯ ಯುರೋಪಿನ ಹವಾಮಾನದಲ್ಲಿ ಸಾಮಾನ್ಯವಾಗಿ ಬೆಳೆಯದಂತಹ ಬಾದಾಮಿ, ಅಂಜೂರ ಮರಗಳನ್ನು ಇಲ್ಲಿ ಕಾಣಬಹುದು. ನಗರದ ಹೊರಭಾಗದಲ್ಲಿ ಕೆಲವೆಡೆ ದ್ರಾಕ್ಷಿತೋಟಗಳೂ ಇವೆ. ನೆಕಾರ್ ನದಿಯಲ್ಲಿ ದೋಣಿ ವಿಹಾರ ಕೈಗೊಳ್ಳ ಬಹುದು.

ಪುರಾತನ ಅರಮನೆ
ನಗರದ ಪುರಾತನ ಭಾಗದಿಂದ ಕಾಣಿಸುವ ಕೊನಿಗ್ ಸ್ಟೂಲ್ ಬೆಟ್ಟದಲ್ಲಿರುವ ಶಿಥಿಲವಾದ ಅರಮನೆ ಇಲ್ಲಿನ ಪ್ರಮುಖ ಆಕರ್ಷಣೆ. ಸುಮಾರು ನಾನ್ನೂರು ವರ್ಷಗಳ ಕಾಲ ಪಲಟಿ ನೇಟ್ ಪ್ರಾಂತ್ಯದ ರಾಜರನ್ನು ಚುನಾಯಿಸುವ ಅಧಿಕಾರಿಗಳ ವಾಸಸ್ಥಾನವಾಗಿತ್ತು. ಯುದ್ಧದಲ್ಲಿ ಕೆಲವು ಬಾರಿ ನಾಶವಾಗಿ ಮರು ನಿರ್ಮಾಣಗೊಂಡು, 1764ರಲ್ಲಿ ಸಿಡಿಲಿನಿಂದ ಹಾನಿ ಗೊಳಗಾದ ಈ ಸ್ಥಳ ಈಗ ಪ್ರಸಿದ್ಧ ಪ್ರವಾಸೀ ತಾಣ.

ನೆಕಾರ್ ನದಿಯಿಂದ 100 ಮೀಟರ್‌ಗಳ ಎತ್ತರದಲ್ಲಿ ನಿರ್ಮಿತವಾದ ಇದು ರೆನೈಸೆನ್ಸ್ ಕಾಲದ ಕೆಂಪುಕಲ್ಲಿನ ಸುಂದರ ಅರಮನೆ ಯಾಗಿತ್ತು. ಬೆಟ್ಟದ ಬುಡದಿಂದ ಮೇಲಕ್ಕೆ ಎರಡು ಹಂತಗಳಲ್ಲಿ ಫ್ಯೂನಿಕ್ಯುಲರ್ ರೈಲಿನಲ್ಲಿ ಪ್ರಯಾಣ. ಮೊದಲ ಹಂತ ಅತ್ಯಾಧುನಿಕವಾದ, 100 ಕ್ಕಿಂತಲೂ ಹೆಚ್ಚು ಜನರನ್ನು ಒಮ್ಮೆಲೇ ಕರೆದೊಯ್ಯುವ ಚಾಲಕ ರಹಿತ ವ್ಯವಸ್ಥೆ. ಅರಮನೆ ಹಾಗೂ ಮೊಲ್ಕೆನ್ ಕೂರ್‌ಗಳಿಗೆ ತಲುಪಿಸುತ್ತದೆ. ಎರಡೂ ಹಂತಗಳ ಟಿಕೆಟ್ ಒಟ್ಟಿಗೇ ಖರೀದಿಸಬಹುದು ಅಥವಾ ಮೊದಲನೇ ಹಂತದ ಟಿಕೆಟ್ ಖರೀದಿಸಿ ಶಿಥಿಲ ಅರಮನೆಯನ್ನು ವೀಕ್ಷಿಸಿ ತಿರುಗಿ ಬರಬಹುದು. ಕಾರು, ಬೈಕ್‌ಗಳನ್ನು ಉಪಯೋಗಿಸಿಯೂ ಮೇಲೆ ತಲುಪಬಹುದು. ಮೆಟ್ಟಲುಗಳನ್ನೇರಿ ಅಥವಾ ಪಾದಚಾರಿ ರಸ್ತೆಯನ್ನು ಬಳಸಿಯೂ ಬೆಟ್ಟವನ್ನೇರಬಹುದು.

ನಾವು ಫ್ಯೂನಿಕ್ಯುಲರ್ ರೈಲು ಹಿಡಿದೆವು. ಅರಮನೆಯ ಅವಶೇಷಗಳನ್ನು ಜನದಟ್ಟಣೆಯ ಮಧ್ಯವೇ ಹೋಗಿ ವೀಕ್ಷಿಸಿದೆವು. ಯಾವ ಮೂಲೆ ಯಲ್ಲಿ ಅರಮನೆಯ ಯಾವ ವಿಭಾಗಗಳಿದ್ದವು ಎಂಬೆಲ್ಲ ವಿವರಗಳನ್ನು ಗೈಡ್‌ನ ಮಾರ್ಗದರ್ಶನದಲ್ಲಿ ತಿಳಿದುಕೊಂಡೆವು. ಅರಮನೆಯ ವಿವಿಧ ಕೋನಗಳಿಂದ ಕಾಣಿಸುತ್ತಿದ್ದ ಕೆಳಗಿನ ನಗರ, ನೆಕಾರ್ ನದಿ, ಅದಕ್ಕೆ ಅಡ್ಡಲಾಗಿರುವ ಸೇತುವೆಗಳ ಸೌಂದರ್ಯ ಕಣ್ಣಿಗೆ ಕಟ್ಟಿ ದಂತಿದೆ.

ಇಲ್ಲಿ ಎರಡು ವಿಶೇಷವಾದ ಮ್ಯೂಸಿಯಂಗಳನ್ನು ಭೇಟಿ ಮಾಡಿದೆವು. ಒಂದು ವೈನ್ ಬ್ಯಾರೆಲ್‌ಗಳಿಗೆ ಸಂಬಂಧಿಸಿದ್ದು, ಅರಮನೆಯ ನೆಲಮಾಳಿಗೆಯಲ್ಲಿದೆ. ಇಲ್ಲಿರುವ ಓಕ್ ದಿಮ್ಮಿಗಳಿಂದ ತಯಾರಿಸಿದ ವೈನ್ ಬ್ಯಾರೆಲ್ ಗಳಲ್ಲಿ ಒಂದು ಜಗತ್ತಿನ ಅತಿದೊಡ್ಡ ಮರದ ಬ್ಯಾರೆಲ್ ಎಂದು ಪ್ರಖ್ಯಾತವಾಗಿದೆ.

ಹೈಡೆಲ್ ಬೆರ್ಗ್ ಟುನ್ ಎಂದು ಕರೆಯಲ್ಪಡುವ ಇದು ಏಳು ಮೀಟರ್ ಎತ್ತರವಿದ್ದು ಎರಡು ಲಕ್ಷಕ್ಕೂ ಹೆಚ್ಚು ಲೀಟರ್ ಗಳಷ್ಟು ವೈನ್ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ನೆಲಮಾಳಿಗೆಯಿಂದ ಹೊರ ಬಂದಾಗ ಎಡದಲ್ಲಿರುವ ಫಾರ್ಮಸಿ ಮ್ಯೂಸಿಯಂ ತನ್ನದೇ ವೈಶಿಷ್ಟ್ಯ ಹೊಂದಿದೆ. ಹಳೆಯ ಕಾಲದಲ್ಲಿ ಸಸ್ಯಮೂಲ ಔಷಧಗಳನ್ನು ತಯಾರಿಸುತ್ತಿದ್ದ, ರೋಗಿಗಳಿಗೆ ನೀಡುತ್ತಿದ್ದುದರ ಬಗೆಗೆ ಅತಿ ವಿಸ್ತಾರವಾದ
ವಿವರಣೆಗಳನ್ನು ಹೊಂದಿತ್ತು. ಸಂಬಂಧಿತ ಪುರಾತನ ವಸ್ತುಗಳ ಸಂಗ್ರಹವೂ ಅತ್ಯಾಕರ್ಷಕವಾಗಿತ್ತು.

ಅ ಫ್ಯೂನಿಕ್ಯುಲರ್ ರೈಲು ಇವೆಲ್ಲವನ್ನೂ ನೋಡಿದ ನಂತರ ಮತ್ತೆ ಫ್ಯೂನಿಕ್ಕುಲರ್ ರೈಲು ಹತ್ತಿ ಸ್ವಲ್ಪ ಮೇಲಿರುವ ಮೊಲ್ಕೆನ್ ಕೂರ್ ನಿಲ್ದಾಣ ತಲುಪಿದೆವು. ಇಲ್ಲಿನ ನಿಲ್ದಾಣದಲ್ಲಿ ಸರತಿಯ ಸಾಲಿನಲ್ಲಿ ಮುಕ್ಕಾಲು ಗಂಟೆ ಕಾದು ಇನ್ನೊಂದು ಹಂತದ -ನಿಕ್ಯುಲರ್ ರೈಲು ಹತ್ತಿದೆವು.
ಮರದ ನಿರ್ಮಿತಿಯಾದ ಇದು ನೂರು ವರ್ಷಗಳಿಗಿಂತಲೂ ಹಳೆಯ -ನಿಕ್ಯುಲರ್ ವ್ಯವಸ್ಥೆ. ಚಾಲಕನ ಇರುವಿಕೆ ಇಲ್ಲಿ ಮುಖ್ಯ. ೧೫-೨೦ ಜನರು ಕುಳಿತುಕೊಳ್ಳಬಹುದಾದ ಬೋಗಿಯಲ್ಲಿ ಹಿಮ್ಮುಖವಾಗಿ ಕುಳಿತು ಕೆಳಗಿನ ಕಣಿವೆಯ ದೃಶ್ಯಗಳನ್ನು ಕಣ್ತುಂಬಿಕೊಂಡು ಮೇಲೇರು ವಾಗ ಮನಸ್ಸು ಶಾಲಾದಿನಗಳಿಗೆ ಹೋದದ್ದಂತೂ ನಿಜ. ಕೋನಿಗ್ ಸ್ಟೂಲ್‌ನ ನಿಲ್ದಾಣದಲ್ಲಿ ಹೊರಬರುವಾಗ ರೈಲು ಚಲನೆಗೆ ಮುಖ್ಯ ವಾದ ಚಕ್ರ ಹಾಗೂ ಇತರ ವ್ಯವಸ್ಥೆಗಳಿರುವ ಕೋಣೆಯನ್ನು ಗಾಜಿನ ಮೂಲಕ ವೀಕ್ಷಿಸುವ ಸೌಲಭ್ಯ.

ಅ ಹೈಕಿಂಗ್ ಪ್ರಿಯರ ತಾಣ ಪರ್ವತದ ತುತ್ತತುದಿಯಲ್ಲಿ ಹೈಕಿಂಗ್ ಪ್ರಿಯರಿಗೆ ವಿಪುಲ ಅವಕಾಶ. ಫೆರಿಟೇಲ್ ವಂಡರ್‌ಲ್ಯಾಂಡ್ ಮಕ್ಕಳ ಪ್ರಿಯವಾದ ತಾಣ. ಇಲ್ಲಿರುವ ಒಬ್ಸರ್ವೇಟರಿಯನ್ನೂ ವೀಕ್ಷಿಸುವುದು ಸಾಧ್ಯವಿದೆ. ಸಮಯದ ಅಭಾವದಿಂದ ನಮಗೆ ಅವಕಾಶ
ಸಿಗಲಿಲ್ಲ. ಮತ್ತೆ ಫ್ಯೂನಿಕ್ಯುಲರ್‌ ಹಿಡಿದು ಬೆಟ್ಟದ ಬುಡಕ್ಕೆ ಹಿಂದಿರುಗಿ ನಗರ ವೀಕ್ಷಣೆ ಕೈಗೊಂಡೆವು. ಹಾಗೆಯೇ ನಗರದಿಂದ ಕಾಣಿಸುವ ಹಸಿರು ಹೊದ್ದ ಬೆಟ್ಟದ ನಡುವಿನ ಅರಮನೆಯನ್ನು ದೂರದಿಂದ ನೋಡಿ ಆನಂದಿಸಿದೆವು.