Sunday, 24th November 2024

ಗೆಲುವು ಗಳಿಸಲು ಸರಳ ಸೂತ್ರ

ರಂಗನಾಥ ಎನ್ ವಾಲ್ಮೀಕಿ

ಬದುಕಿನಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸುವ ತಾಳ್ಮೆೆ ನಮ್ಮಲ್ಲಿರಬೇಕು. ಸೋಲು ಗಳಿಗೆ ಹೆದರದೇ ಕುಗ್ಗದೆ ಮುನ್ನಡೆಯಬೇಕು. ಗೆಲುವು ಸಂತಸ ನೀಡಿದರೆ, ಸೋಲು ಅನುಭವ ನೀಡುತ್ತದೆ.

ಯಶಸ್ವಿ ವ್ಯಕ್ತಿಗಳು ನಮ್ಮ ಸಮಾಜಕ್ಕೆೆ ಮಾದರಿ ಎಂಬ ವಿಚಾರ ಬಹು ಮಾನ್ಯ. ಹಲವು ಯಶಸ್ವಿ ವ್ಯಕ್ತಿಗಳು ಇತರರಿಗೆ ಸ್ಪೂರ್ತಿ
ತುಂಬುತ್ತಾರೆ. ಆದರೆ ಈ ಜಗತ್ತಿನ ಬಹುತೇಕ ಎಲ್ಲಾ ಸಾಧಕರ ಜೀವನ ಯಾತ್ರೆ ಗಮನಿಸಿದಾಗ ಅವರು ತಮ್ಮ ಬದುಕಿನಲ್ಲಿ ಒಂದಲ್ಲ ಒಮ್ಮೆ ಸೋತವರೇ. ಆ ಸೋಲಿಗೆ ಅಳುಕದೆ ಮುನ್ನುಗ್ಗಿ ಸೋಲನ್ನು ಗೆಲುವಾಗಿ ಪರಿವರ್ತನೆ ಮಾಡಿಕೊಂಡರು, ಅದೇ ಅವರ ಸಾರ್ಥಕತೆ, ಅದೇ ಅವರ ಚಾಕಚಕ್ಯತೆ. ಶಿವಾಜಿ ಮಹಾರಾಜ ಸತತವಾಗಿ ಯುದ್ದದಲ್ಲಿ ಸೋತು ನಿರಾಶರಾಗಿ ಒಂದು ಕೊಠಡಿಯಲ್ಲಿ ಕುಳಿತಾಗ, ಒಂದು ಇರುವೆ ಗೋಡೆ ಎರುವುದನ್ನು ಗಮನಿಸಿದರು.

ಅದು ಹತ್ತಾರು ಬಾರಿ ಗೋಡೆಯಿಂದ ಬಿದ್ದರೂ ಪ್ರಯತ್ನ ಬಿಡದೆ, ಯತ್ನಿಸಿ, ಹಲವು ಪ್ರಯತ್ನದ ನಂತರ ಗೋಡೆ ಏರಿಯೇ
ಬಿಟ್ಟಿತು. ಇದರಿಂದ ಸ್ಫೂರ್ತಿಗೊಂಡು, ಶಿವಾಜಿ ಮಹಾರಾಜ ಖಿನ್ನತೆಯಿಂದ ಹೊರಬಂದು ಮತ್ತೆ ಯುದ್ದರಂಗದಲ್ಲಿ  ಮುನ್ನುಗ್ಗಿ ವಿಜಯಪತಾಕೆ ಹಾರಿಸಿದ್ದು ನಮ್ಮ ಕಣ್ಣು ಮುಂದಿದೆ. ಅಬ್ದುಲ್ ಕಲಾಂ ಅವರು ಬಾಲ್ಯದಲ್ಲಿ ಸಾಕಷ್ಟು ಕಷ್ಟು ಅನುಭವಿಸಿ ದವರು. ಆದರೆ ಆ ತೊಡಕುಗಳು ಅವರ ಸಾಧನೆಯ ಹಾದಿಗೆ ಅಡ್ಡವಾಗಲಿಲ್ಲ. ಪ್ರಯತ್ನ ಪಡದೇ ಪ್ರತಿಫಲ ಯಾವತ್ತೂ ಯಾರಿಗೂ ಸಿಗಲಿಲ್ಲ. ಒಂದು ಓಟದ ಸ್ಪರ್ಧೆಯಲ್ಲಿ ನೂರಾರು ಜನ ಭಾಗವಹಿಸಿದಾಗ ಬಹುಮಾನ ಸಿಗುವುದು ಕೇಲವರಿಗೆ ಮಾತ್ರ. ಪ್ರತಿಭೆ ಇದ್ದವರಿಗೆ ಮತ್ತು ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುವವರಿಗೆ. ಒಂದಲ್ಲಾ ಒಂದು ದಿನ ಯಶಸ್ಸು ದೊರೆಯು ತ್ತದೆ. ಅವರಿಗೆ ಕ್ರಮೇಣ ಬೆಲೆಯೂ ಸಿಗುತ್ತದೆ.

ಬೇಗನೆ ಕುಗ್ಗಬಾರದು

ಇತ್ತೀಚಿನ ಯುವ ಜನಾಂಗವನ್ನು ಗಮನಿಸಿದಾಗ ಅವರು ಸೋಲಿಗೆ ಬೇಗನೆ ಹೆದರುವುದು, ಕುಗ್ಗುವುದು ಕಂಡುಬರುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ಹೆದರಿ ಆತ್ಮಹತ್ಯೆೆಯಂತಹ ಕೃತ್ಯಕ್ಕೆೆ ಅಣಿಯಾಗುವರು.
ಸ್ಪರ್ಧೆಯಲ್ಲಿ ಸೋತೆವು ಎಂದು ಊಟ ನೀರು ಬಿಟ್ಟು ಉಪವಾಸ ಇರುವರು.

ಮುಂದುವರಿಯುವ ಛಲ

ಇದೇ ರೀತಿ, ವ್ಯಾಪಾರದಲ್ಲಿ ಅನುಭವಿಸಿದ ನಷ್ಟ, ಸಂಸಾರದಲ್ಲಿ ಎರಗುವ ಸಮಸ್ಯೆೆ, ಸ್ಪರ್ಧೆಯಲ್ಲಿ ಬರುವ ಸೋಲು,
ಸಂಬಂಧಿಗಳ ಟೀಕೆ, ವೃತ್ತಿಯಲ್ಲಿ ಸ್ಥಾನಮಾನಕ್ಕೆೆ ಎದುರಾಗುವ ತೊಂದರೆ, ಆರ್ಥಿಕ ಸಂಕಷ್ಟ ಇತ್ಯಾದಿಗಳು ಮನುಷ್ಯನನ್ನು
ಜರ್ಜರಿತವನ್ನಾಗಿ ಮಾಡುತ್ತೇವೆ. ನಿಜ. ಆದರೆ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣ ನಮಗೆ ಬಂದು ಬಿಟ್ಟರೆ ಸೋಲಿಗೆ ಹೆದರಬೇಕಾಗಿಲ್ಲ. ಸೋಲಿನ ಕಾರಣಗಳನ್ನು, ಸನ್ನಿವೇಶಗಳನ್ನು ವಿಶ್ಲೇಷಣೆ ಮಾಡಿ, ಆ ಸೋಲಿನ ಹೊಡೆತದಿಂದ ಹೊರಬಂದು, ಮುಂದುವರಿಯುವುದನ್ನು ನಾವು ಕಲಿಯಬೇಕು. ನಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಲು ನಾವೇ ಸಿದ್ಧರಾಗಬೇಕೇ ಹೊರತು ಬೇರಾರೂ ಬರಲಾರರು.

ಇಂದು ಗೆಲುವು ಬೇರೆಯವರ ಪಾಲಾದರೆ ಮುಂದೊಂದು ದಿನ ಅದು ದೊರಕಬಹುದು ಎಂಬ ಆಶಾವಾದ ಎಲ್ಲರಲ್ಲಿ ಇರಬೇಕು. ಹೀಗಾಗಿ ಸೋಲು ಗೆಲುವು ಎರಡನ್ನೂ ಮುಕ್ತವಾಗಿ ಸ್ವೀಕರಿಸುವ ಗುಣ ನಮ್ಮದಾಗಬೇಕು. ಯಾರಿಗೂ ಸೋಲಿಲ್ಲ. ಯಾರಿಗೂ ಅವಮಾನ ಆಗಿಲ್ಲ. ಸಂತೆಯ ಒಳಗೊಂದು ಮನೆಯ ಮಾಡಿ ಶಬ್ದಕ್ಕೆೆ ನಾಚಬಾರದು. ಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೆರೆತೊರೆಗಳಿಗೆ ಅಳುಕಬಾರದು. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಬಾರದು ಎನ್ನುವ ವಚನ ಸತ್ಯವಾದುದು. ನಮ್ಮ ಗುರಿ ಸಾಧನೆ ಕಡೆಗೆ ಇರಬೇಕು. ಇನ್ನೊಬ್ಬರನ್ನು ನೋಯಿಸುವ ದ್ವೇೇಷಿಸುವ ಕಡೆಯಲ್ಲ.

ಗೆಲುವು ಸೋಲು ಇದ್ದದ್ದೇ

ಗೆದ್ದರೆ ಸಂಭ್ರಮಿಸೋಣ, ಸೋತರೇ ಪರಾಮರ್ಶೆ ಮಾಡಿ ಗೆದ್ದವರನ್ನು ಅಭಿನಂದಿಸೋಣ. ಸೋಲಿಗೆ ಕಾರಣ ತಿಳಿದು
ಮುಂದೊಂದು ಬಾರಿ ಗೆಲ್ಲುವ ಯತ್ನ ಮಾಡೋಣ. ಆದರೆ ಪ್ರಯತ್ನ ಮಾತ್ರ ಸತತವಾಗಿರಬೇಕು. ಎಸ್.ಪಿ ಬಾಲಸುಬ್ರಹ್ಮಣ್ಯಂ ಖ್ಯಾತ ಗಾಯಕನಾಗುವ ಮುನ್ನ ಪ್ರತಿದಿನ ಎಂಟು ಗಂಟೆ ಗಾಯನದ ಅಭ್ಯಾಸ ಮಾಡುತ್ತಿದ್ದರು. ಅದರ ಪ್ರತಿಫಲ ಅವರಿಗೆ ದೊರಕಿತು. ಸೋಲು ಗೆಲುವು ಒಂದೇ ನಾಣ್ಯದ ಎರಡೂ ಮುಖಗಳು. ಇಂಥವರ ಬದುಕನ್ನು ತಿಳಿದು ನಾವೂ ಪಾಠ ಕಲಿಯಬೇಕು.
ಬದುಕಿನಲ್ಲಿ ಎಲ್ಲವೂ ಎಲ್ಲರಿಗೂ ದೊರೆಯುವುದಿಲ್ಲ ಎಂಬ ಸತ್ಯ ಅರಿಯಬೇಕು. ಸತತ ಪ್ರಯತ್ನ ಮಾಡುತ್ತಲೇ ಇರಬೇಕು.
ನಮಗಿಂತ ನೂರೆಂಟು ಪಟ್ಟು ತೊಂದರೆ ಅನುಭವಿಸುವವರನ್ನು ಕಂಡು ಸಮಾಧಾನ ಪಡಬೇಕು. ಈ ಸಮಾಜದ ಎಲ್ಲರೂ
ಡಾಕ್ಟರ್ ಇಂಜೀನಿಯರ್ ಆಗಲು ಸಾಧ್ಯವಿಲ್ಲ. ಈ ಸಮಾಜದಲ್ಲಿ ಎಲ್ಲಾ ವೃತ್ತಿಯವರು ಇರಬೇಕು. ಅಂಕಗಳು ಕಡಿಮೆ ಬಂದಾಗ,
ಗಟ್ಟಿ ಮನಸ್ಸಿನಿಂದ ಪರಿಸ್ಥಿತಿಯನ್ನು ಎದುರಿಸಬೇಕು.

ಸೋಲು ಒಂದು ಅನುಭವ. ಅದು ನಮ್ಮನ್ನು ಮಾನಸಿಕವಾಗಿ ಸಾಕಷ್ಟು ಗಟ್ಟಿ ಮಾಡುತ್ತೆೆ. ಮಾನಸಿಕ ಧೈರ್ಯ ತರುತ್ತೆೆ. ಹೀಗಾಗಿ
ಸದಾಕಾಲ ಧನಾತ್ಮಕವಾಗಿ ಆಲೋಚಿಸಬೇಕು. ನಿರಾಶರಾಗಬಾರದು. ಒಂದೊಮ್ಮೆ ನಿರಾಶೆಯ ಮನೋಭಾವ ಆವರಿಸಿ ಕೊಂಡಾಗ, ಯಶಸ್ಸು ಪಡೆದ ವ್ಯಕ್ತಿಗಳ ಜೀವನವನ್ನು ಗಮನಿಸಿ, ನಿರಾಶೆಯನ್ನು ಕೊಡವಿ, ಎದ್ದು ನಿಲ್ಲಬೇಕು. ಸಕಾರಾತ್ಮಕ ಸಲಹೆ ಸ್ವೀಕರಿಸೋಣ. ಇತರರು ನಮ್ಮ ಬಗ್ಗೆೆ ಇಲ್ಲ ಸಲ್ಲದ್ದನ್ನು ನಕಾರಾತ್ಮಕವಾಗಿ ನುಡಿದರೆ, ಅದಕ್ಕೆೆ ಕಿವುಡ ರಾಗಬೇಕು. ಈ ಬದುಕು ಅತಿ ಚಿಕ್ಕದು ನಾನು ಗೆದ್ದೆೆ ಎಂಬ ಅಹಂ ಬೇಡ. ಈ ಬದುಕನ್ನು ಖುಷಿಖುಷಿಯಾಗಿ ಕಳೆಯೋಣ, ಕಷ್ಟಪಟ್ಟು ದುಡಿ ಯೋಣ, ಸೋಮಾರಿ ತನ ತೊಲಗಿಸೋಣ. ಸೋಲೆ ಗೆಲುವಿನ ಸೋಪಾನ. ಸತತವಾಗಿ ಪರಿಶ್ರಮ ಹಾಕುತ್ತಲೇ ಇದ್ದರೆ, ಒಂದಲ್ಲ ಒಂದು ದಿನ ಯಶಸ್ಸು ಕಟ್ಟಿಟ್ಟ ಬುತ್ತಿ.

ಛಲಬಿಡದ ತ್ರಿವಿಕ್ರಮ
ಸೋಲನ್ನು ಸಮಚಿತ್ತದಿಂದ ಸ್ವೀಕರಿಸಿ, ಗೆಲುವನ್ನು ಸಾಧಿಸಿದ ವ್ಯಕ್ತಿಗಳಲ್ಲಿ ಅಮೆರಿಕದ ಹಿಂದಿನ ಅಧ್ಯಕ್ಷ ಅಬ್ರಾಹಂ ಲಿಂಕನ್
ಉತ್ತಮ ಉದಾಹರಣೆ. ಹಲವು ಬಾರಿ ಚುನಾವಣೆಗಳಲ್ಲಿ ಸೋತರೂ, ವೈವಾಹಿಕ ಜೀವನ ವೈಫಲ್ಯ, ವ್ಯಾಪಾರದಲ್ಲಿ ನಷ್ಟ, ಹೆಂಡತಿ ಸಾವು ಇವೂ ಯಾವು ಇವರ ಸಾಧನೆಗೆ ಅಡ್ಡಿ ಆಗಲಿಲ್ಲ. ಹಲವು ಸತತ ಸೋಲುಗಳ ನಂತರ ಅವರು ತಮ್ಮ
ನಲವತ್ತೇಳನೆಯ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದು ಇತಿಹಾಸ.

ಅಮಿತಾಭ್ ಉತ್ತಮ ಉದಾಹರಣೆ
ಖ್ಯಾತನಟ ಅಮಿತಾಭ್ ಅದೆಷ್ಟೋ ಬಾರಿ ಸೋಲು ಅನುಭವಿಸಿದ್ದರು. ಜೀವನದ ಒಂದು ಘಟ್ಟದಲ್ಲಿ ಅಪಾರ ನಷ್ಟವನ್ನೂ ಅನುಭವಿಸಿದರು. ಆದರೂ ಅವರು ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದ ಮೂಲಕ, ಅದರ ಯಶಸ್ಸಿನ ರೆಕ್ಕೆೆಯೇರಿ, ಪುನಹ ಫೀನಿಕ್‌ಸ್‌ ಪಕ್ಷಿಯಂತೆ ಎದ್ದು ಬಂದದ್ದು ಒಂದು ಪವಾಡ. ಆದರೆ ಈ ಪವಾಡ ಸಾಧ್ಯವಾಗಿದ್ದು ಅವರಲ್ಲಿದ್ದ ಆಶಾ ಭಾವನೆ, ಅವರಲ್ಲಿದ್ದ ಆತ್ಮವಿಶ್ವಾಸ, ಸೋತರೂ ಗೆಲುವನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಪರಿಶ್ರಮ. ಇಂತಹ ಸಾಧನೆ ಯಿಂದ ಮಾತ್ರ ಅವರ ಯಶಸ್ಸಿನ ಪವಾಡ ನಡೆಯಿತು.