Friday, 22nd November 2024

ಮಕ್ಕಳೊಂದಿಗೆ ಮರು ಓದು

ಒಮ್ಮೆ ಮಗಳು ಭೂಮಿ ಕೇಳಿದ ಒಂದು ಪ್ರಶ್ನೆ ನನಗೆ ದಿಗಿಲು ಮೂಡಿಸಿತು. ಶಿಷ್ಯೆೆಯರಿಗೆ ನೃತ್ಯ ಕಲಿಸುತ್ತಾ ‘ಸಂಚಾರಿ’ ಭಾವವನ್ನು ಕಥೆಯಂತೆ ಭಾವಿಸಿಕೊಂಡು, ಪ್ರೇಕ್ಷಕರಿಗೆ ಹೇಗೆ ಕಥೆ ಹೇಳಿದಂತೆ ನೃತ್ಯವನ್ನು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿದ್ದೆ. ಆಗ ಭೂಮಿ ಕೇಳಿದ ಪ್ರಶ್ನೆ ‘ಮಮ್ಮಿ, ನೀನು ಕಥೆ ಹೇಳಲು ಇಷ್ಟಪಡದಿದ್ದರೂ, ನೃತ್ಯದಲ್ಲಿ ಮಾತ್ರ ಕಥೆ ತರಹ ಹೇಗೆ ಅಷ್ಟು ಚೆನ್ನಾಗಿ ಮಾಡ್ತೀಯಾ? ನನಗೆ ಕಥೆ ಹೇಳಬೇಕಾದರೆ ನಿನಗೆ ಬೇಜಾರು ಬರುತ್ತಲ್ಲ, ಅದೇ ರೀತಿ ಅಲ್ಲೂ ಬೇಜಾರಾಗಲ್ವ?’

ಡಾ.ಕೆ.ಎಸ್.ಪವಿತ್ರ

ಬಾಲ್ಯದಲ್ಲಿ ಬೇರೆಲ್ಲಾ ಮಕ್ಕಳಂತೆ ಕಥೆ ಕೇಳುವುದೆಂದರೆ ನನಗೂ ಇಷ್ಟವೇ ಆಗಿತ್ತು. ಆದರೆ ಕೇಳುವುದಕ್ಕಿಂತ ಕಥೆ ಪುಸ್ತಕ
ಓದುವುದೆಂದರೆ ಮತ್ತೂ ಇಷ್ಟ. ನನ್ನದೇ ಸಹಪಾಠಿಗಳಿಗೆ ಬಹು ಇಷ್ಟವಾಗಿದ್ದ ಮಿಕ್ಕಿಮೌಸ್-ಡೊನಾಲ್ಡ್‌ ಡಕ್‌ಗಳು ನನಗೆ ಅಷ್ಟಾಗಿ ಇಷ್ಟವಾಗುತ್ತಿದಿದ್ದುದು ಆಶ್ಚರ್ಯವೇ. ನನ್ನಮ್ಮ ಕಥೆಗಳನ್ನು ಬಹಳಷ್ಟು ಹೇಳುತ್ತಿದ್ದರು. ಆದರೆ ಸ್ವಂತವಾಗಿ ಪುಸ್ತಕ ದಲ್ಲಿ ಮುಳುಗಿ ನಾನೇ ಕಥೆ ಓದುವುದು ಮತ್ತಷ್ಟು ‘ಮಜಾ’ ಎನಿಸುತ್ತಿತ್ತು.

ಗಂಭೀರವಾದದ್ದು -ತಮಾಷೆ-ನಾಟಕ-ಪ್ರೇಮಕತೆ – ಇತ್ಯಾದಿ ಇತ್ಯಾದಿ ಎಲ್ಲವನ್ನೂ ಓದುತ್ತಿದ್ದೆ. ನಾನು, ನನ್ನ ಓದಿನ ಸಂಗಾತಿ ಅಕ್ಕ ಚೈತ್ರಾ ಇಬ್ಬರೂ ‘ಜ್ಞಾನತರಂಗಿಣಿ’ ಎಂಬ ಸರ್ಕ್ಯೂಲೇಟಿಂಗ್ ಲೈಬ್ರರಿಗೆ ಸುಮಾರು 5-6 ನೇ ತರಗತಿಯಲ್ಲಿರುವಾಗಲೇ
ಓದಲು ಹೋಗುತ್ತಿ

ದ್ದೆವು. ರಜಾ ದಿನಗಳಲ್ಲಿ ಬೆಳಿಗ್ಗೆ 9ಕ್ಕೆ ಹೋಗಿ, ಎರಡು ಕಾದಂಬರಿ ಹಿಡಿದು ಬರುತ್ತಿದ್ದೆೆವು. ಒಂದೊಂದು ಪುಸ್ತಕ ಹಿಡಿದು ಕುಳಿತು ಮುಗಿಸಿ, ‘ಎಕ್ಸ್‌‌ಛೇಂಜ್’ ಮಾಡಿ ಮತ್ತೊಂದನ್ನು ಮುಗಿಸುತ್ತಿದ್ದೆೆವು. ಸಾಯಂಕಾಲದ ಹೊತ್ತಿಗೆ ಎರಡು ಪುಸ್ತಕ ಮುಗಿದಿದ್ದರೂ, ‘ಲೈಬ್ರರಿ’ ಯಲ್ಲಿ ಒಂದೇ ದಿನ ಎರಡು ಬಾರಿ ಪುಸ್ತಕ ಎರವಲು ಪಡೆಯುವ ಹಾಗಿರಲಿಲ್ಲ! ಮನೆಯಲ್ಲಿದ್ದ ಟೇಬಲಿನ ಕೆಳಗಿದ್ದ ಕಪಾಟೊಂದರಲ್ಲಿ ತಂಗಿ ಶುಭ್ರತಾಳ ಹೆಸರಿನಲ್ಲಿ ‘ಶುಭ್ರ ತರಂಗಿಣಿ’ ಎಂಬ ನನ್ನದೇ ಲೈಬ್ರರಿಯನ್ನು ಆರಂಭಿಸಿಬಿಟ್ಟಿದ್ದೆೆ.

ಮನೆಯಲ್ಲಿದ್ದ ಪುಸ್ತಕಗಳನ್ನೆಲ್ಲಾ ಸೇರಿಸಿ, ಅದಕ್ಕೊೊಂದು ‘ಇಂಡೆಕ್ಸ್‌’ ಮಾಡಿ ಬಾಗಿಲಿಗೆ ಅಂಟಿಸಿದ್ದೆ. ಅಪ್ಪ-ಅಮ್ಮ, ಅವರೇ ಕೊಡಿಸಿದ್ದ ಪುಸ್ತಕವನ್ನು ಒಮ್ಮೆ ನೋಡಬೇಕೆಂದರೂ, ಒಂದು ರೂಪಾಯಿ ‘ಛಾರ್ಜು’ ಕೊಟ್ಟೇ ನೋಡಬೇಕಿತ್ತು! ಹೊರ ಊರಿನಲ್ಲಿ ವೈದ್ಯಕೀಯ ಪದವಿಗಾಗಿ ಓದುವಾಗಲೂ ಅಷ್ಟೆ, ಮನೆಗೆ ರಜೆಗೆಂದು ಬಂದಾಕ್ಷಣ, ನಾನು ಬಂದಿರುವ ಸುದ್ದಿ ಗೊತ್ತಾಗುತ್ತಿದ್ದದ್ದು ಮೊದಲು ಇಬ್ಬರಿಗೆ, ಒಂದು ನನ್ನ ಮನೆಯ ಜನ, ಇನ್ನೊಂದು ನಮ್ಮ ಊರಿನ ಲೈಬ್ರೆರಿಯನ್‌ಗಳು!

ಒಂದು ವರ್ಷದ ಅವಧಿಯಲ್ಲಿ ಸುಮಾರು ಒಂದು ನೂರು ಪುಸ್ತಕದಂತೆ  ಓದಿಯೂ, ಈಗಲೂ ಕಥೆ-ಕಾದಂಬರಿಗಳ ಓದುವ ತುಡಿತ ಮಾಯವಾಗದಿದ್ದದ್ದು ಅಚ್ಚರಿಯೇ. ಈಗ ನಾನು ಅಮ್ಮನಾದ ಮೇಲೆ ಮಕ್ಕಳಿಗೆ ಕಥೆಗಳನ್ನು ಹೇಳಬೇಕಾದ ಅನಿ ವಾರ್ಯತೆ ಹುಟ್ಟಿದ್ದು ಮಗಳು ‘ಭೂಮಿ’ ಚಿಕ್ಕವಳಿರುವಾಗ. ಯಾವ ಕಥೆ ಹೇಳಿದರೂ ಆ ಕಥೆ ಮೊದಲೇ ಅವಳಿಗೆ ಹಲವು ಮೂಲಗಳಿಂದ ಗೊತ್ತಿರುವುದು (ಅಜ್ಜಿಯಿಂದ ಕೇಳಿ, ಕಾರ್ಟೂನಿನಿಂದ ನೋಡಿ, ಅಮರ ಚಿತ್ರ ಕಥೆಯಲ್ಲಿ ಓದಿ ಇತ್ಯಾದಿ), ಕಥೆ ಹೇಳುವಾಗ ನನಗೇ ಗೊಂದಲ ಆರಂಭವಾಗಿ ಹೊಸ ಹೊಸ ರೀತಿ ಕಥೆ ಸೃಷ್ಟಿಸಿ ಬಿಡುವುದು, ಕಥೆಯನ್ನು ಹೇಳುತ್ತಾ ಅವಳಿಗೆ
ಇಷ್ಟವಾಗುತ್ತಿದ್ದರೂ, ನನಗೇ ಅಸಹನೆ ಮೊದಲಾದ ಸವಾಲುಗಳು ಎದುರಾಗತೊಡಗಿದವು.

ಮಗಳು ಕೇಳಿದ ಪ್ರಶ್ನೆ
ಇಂಥ ದಿನಗಳಲ್ಲೇ ಒಮ್ಮೆ ಮಗಳು ಭೂಮಿ ಕೇಳಿದ ಒಂದು ಪ್ರಶ್ನೆ ನನಗ ದಿಗಿಲು ಮೂಡಿಸಿದ್ದು. ಶಿಷ್ಯೆೆಯರಿಗೆ ನೃತ್ಯ ಕಲಿಸುತ್ತಾ ‘ಸಂಚಾರಿ’ ಭಾವವನ್ನು ಕಥೆಯಂತೆ ಭಾವಿಸಿಕೊಂಡು, ಪ್ರೇಕ್ಷಕರಿಗೆ ಹೇಗೆ ಕಥೆ ಹೇಳಿದಂತೆ ನೃತ್ಯವನ್ನು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿದ್ದೆ. ಆಗ ಭೂಮಿ ಕೇಳಿದ ಪ್ರಶ್ನೆ ‘ಮಮ್ಮಿ, ನೀನು ಕಥೆ ಹೇಳಲು ಇಷ್ಟಪಡದಿದ್ದರೂ, ನೃತ್ಯದಲ್ಲಿ ಮಾತ್ರ ಕಥೆ ತರಹ
ಹೇಗೆ ಅಷ್ಟು ಚೆನ್ನಾಗಿ ಮಾಡ್ತೀಯಾ? ನನಗೆ ಕಥೆ ಹೇಳಬೇಕಾದರೆ ನಿನಗೆ ಬೇಜಾರು ಬರುತ್ತಲ್ಲ, ಅದೇ ರೀತಿ ಅಲ್ಲೂ ಬೇಜಾರಾ ಗಲ್ವ?’ ನೃತ್ಯದಲ್ಲಿ ಸಂಚಾರಿಗಳನ್ನು ಸಾಹಿತ್ಯದ ಒಂದು ವಾಕ್ಯಕ್ಕೆ ದೊಡ್ಡ ಕಥೆಯಂತೆ ಮಾಡುವ ಕಲೆಯನ್ನು ಅಭ್ಯಾಸದಿಂದ ನಾನು ಕರಗತ ಮಾಡಿಕೊಂಡಿದ್ದೆೆ. ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದೆ.

ಕಥಕ್ ಎಂಬ ನೃತ್ಯಪ್ರಕಾರ ಬೆಳೆದು ಬಂದದ್ದೇ, ‘ಕಥಾಕಾರ್’ ಎಂಬ ಕಥೆ ಹೇಳುವ ಕಲಾವಿದರಿಂದ ಎಂಬ ಅರಿವೂ ನನಗಿತ್ತು. ಆದರೆ ಮಕ್ಕಳಿಗೆ ಕಥೆ ಹೇಳುವ ಬಗೆಗಿನ ನನ್ನ ಆಸಕ್ತಿ ಚಿಗುರಲು ಮಾತ್ರ ಭೂಮಿಯ ಮುಗ್ಧ, ಕುತೂಹಲದ ಪ್ರಶ್ನೆಗೆ ಮಾತ್ರ ಸಾಧ್ಯವಾಗಿತ್ತು. ನನ್ನಲ್ಲಿ ಕಥೆ ಹೇಳುವ ಆಸಕ್ತಿ ಬೆಳೆಯುವ ಮೊದಲೇ ಮಗಳು ಭೂಮಿ, ತಾನೇ ಪುಸ್ತಕ ಓದಲಾರಂಭಿಸಿದಳು. ನಾನು ಓದಿರದ ಇಂಗ್ಲಿಷ್‌ನ ಯಾವ್ಯಾವುದೋ ದಪ್ಪ ದಪ್ಪ ಕತೆ ಪುಸ್ತಕಗಳನ್ನು, ಮಾತನಾಡದೇ ಕುಳಿತು ಓದಲಾರಂಭಿಸಿಬಿಟ್ಟಳು.

ಮಗ ಭರತವರ್ಷನ ಕಥೆಯೇ ಬೇರೆ. ‘ಲಾಕ್‌ಡೌನ್’ ನ ಸಮಯ ಎಸೆದ ಹಲವು ಸವಾಲುಗಳಲ್ಲಿ ಮಗನಿಗೆ ಕಥೆ ಹೇಳಬೇಕಾದ್ದೂ ಸೇರಿತ್ತು. ಜೊತೆಗೇ ನನಗೂ ಮಕ್ಕಳೊಡನೆ ಹಳೆಯ-ಹೊಸ ಕಥೆಗಳನ್ನು ಓದುವ ಆನಂದವೂ ಸೇರಿತ್ತು. ಒಂಬತ್ತು ವರ್ಷದ ಭರತನಿಗೆ ಹೇಗಾದರೂ ಮಾಡಿ ಓದುವ ಚಟ ಹತ್ತಿಸುವ ಹಠ ನನಗೆ, ಭೂಮಿಗೆ. ಭೂಮಿ ‘ಪಂಚತಂತ್ರ’ದ ಕಥೆ ನೆನಪಿಸಿದ್ದಳು.
ವಿಷ್ಣುಶರ್ಮನೆಂಬ ಪಂಡಿತ ಅಮರಸಿಂಹನೆಂಬ ರಾಜನ ನಾಲ್ಕು ದಡ್ಡ ಮಕ್ಕಳಿಗೆ ಕಥೆ ಹೇಳಿ, ಹೇಳಿಯೇ ಬುದ್ಧಿವಂತರನ್ನಾಗಿ ಮಾಡಿದ ಕಥೆಯೇ ‘ಪಂಚತಂತ್ರ’. ಸರಿ, ಅಂತರ್ಜಾಲ ಕೆದಕಿದೆವು. ಕನ್ನಡದಲ್ಲಿ ನಮಗೆ ಕಲಿಸುವ ಆನ್‌ಲೈನ್ ಕ್ಲಾಸುಗಳು ಸಿಕ್ಕಲಿಲ್ಲ. ಆದರೆ ಸಿಕ್ಕಿದ್ದು ‘ಬ್ರಿಟಿಷ್ ಕೌನ್ಸಿಲ್’.

ಬ್ರಿಟಿಷ್ ಕೌನ್ಸಿಲ್‌ನ ಆನ್‌ಲೈನ್ ತರಗತಿ

ಬ್ರಿಟಿಷ್ ಕೌನ್ಸಿಲ್‌ನ ಭಾರತ ಶಾಖೆಯಲ್ಲಿ ಈಗ ಆನ್‌ಲೈನ್ ತರಗತಿಗಳು ಮಕ್ಕಳಿಗೆ ಜೋರಾಗಿ ಸಾಗಿವೆ. ಭಾಷೆ ಕಲಿಸುವ ತಂತ್ರವೇ ಕಥೆ ಹೇಳುವ, ಓದುವ, ನಟಿಸುವ ವಿಧಾನದ ಮೂಲಕ. ಏಳರಿಂದ ಹತ್ತು ವರ್ಷಗಳ ವಯಸ್ಸಿನ ಮಕ್ಕಳು, ಐದರಿಂದ ಆರು ಜನ ಒಬ್ಬ ‘ನಿರ್ದೇಶಕ’ (ಇನ್‌ಸ್ಟ್ರಕ್ಟರ್) ಜೊತೆ ಕುಳಿತು, ಜೂಮ್‌ನಲ್ಲಿ ಕಥೆ ಓದುತ್ತಾರೆ, ಅದರ ಬಗೆಗೆ ಮಾತನಾಡುತ್ತಾರೆ, ಇನ್ನೊಬ್ಬರ ಕಥೆ ಕೇಳುತ್ತಾರೆ, ಕಥೆಯನ್ನು ಆಧರಿಸಿ ನಾಟಕ ಮಾಡುತ್ತಾರೆ, ಬ್ರಿಟಿಷ್ ಕೌನ್ಸಿಲ್ ನ ಆನ್‌ಲೈನ್ ಲೈಬ್ರರಿಯಿಂದ ಇ-ಪುಸ್ತಕ ತೆಗೆದು ಓದುತ್ತಾರೆ, ‘ಆಡಿಯೋಬುಕ್’ ನಲ್ಲಿ ತಾವೇ ಕಥೆ ಓದುವವರಾಗುತ್ತಾರೆ.

ನಿರ್ದೇಶಕಿ ಅವರಿಗೆ ಕೊಡುವ ಸಲಹೆ ಹೀಗೆ ‘ನೀವು ಕಥೆಯನ್ನು ಮನಸ್ಸಿನಲ್ಲಿಯೇ ಓದಲಿ, ಬೇರೆಯವರಿಗೆಂದು ಹೇಳಲಿ, ಆಸಕ್ತಿ ಬಹು ಮುಖ್ಯ. ನೀವು ಓದುವ ಕಥೆಯಲ್ಲಿ ನಿಮಗೆ ಆಸಕ್ತಿಯಿದ್ದರೆ ಮಾತ್ರ, ಅದು ನಿಮಗಾಗಲಿ, ಕೇಳುವವರಿಗಾಗಲಿ ರುಚಿಸಲು ಸಾಧ್ಯ. ಕಥೆ ಹೇಳುವಾಗ ಧ್ವನಿಯ ಏರಿಳಿತ, ಭಾವನೆಗಳು, ಎಷ್ಟು ವೇಗವಾಗಿ ಓದಬೇಕು ಇವೆಲ್ಲವೂ ಗಮನದಲ್ಲಿರಲಿ’. ಸಿನಿಮಾಗಳನ್ನು ನೋಡುವುದರಿಂದ ಭಾಷೆ ಕಲಿಯಬಹುದು ಎಂಬುದು ನಮಗೆಲ್ಲರಿಗೂ ಗೊತ್ತು. ಹೊಸ ಭಾಷೆ ಕಲಿಯಬೇ ಕೆಂದರೆ ಅಥವಾ ಇಂಗ್ಲಿಷ್‌ನ ಉಚ್ಚಾರ ಕಲಿಯಬೇಕೆಂದರೆ ಆಯಾ ಭಾಷೆಯ ಸಿನಿಮಾಗಳನ್ನು ಸತತವಾಗಿ ನೋಡಿದರೆ ಸುಲಭ ವಾಗುತ್ತದೆ. ಆದರೆ ಹೊಸ ಭಾಷೆಯಲ್ಲಿ ಮಾತನಾಡುವ ಪರಿಣತಿ ಸಾಧ್ಯವಾಗುವುದು ಇನ್ನೊಬ್ಬರೊಡನೆ ಅದೇ ಭಾಷೆಯಲ್ಲಿ
ಮಾತನಾಡುವುದರಿಂದ ಮಾತ್ರ. ಈ ಸತ್ಯ ನನಗೆ ಅರ್ಥವಾದದ್ದು 9 ವರ್ಷದ ಭರತ ನೋಡುತ್ತಿದ್ದ ಇಂಗ್ಲಿಷ್ /ಕನ್ನಡ /ಹಿಂದಿ ಸಿನಿಮಾಗಳ ಕಥೆಗಳನ್ನು ಆಯಾ ಭಾಷೆಯಲ್ಲಿಯೇ ಹೇಳಲು ಅವನ ‘ಇನ್‌ಸ್ಟ್ರಕ್ಟರ್’ ಪ್ರೇರೇಪಿಸಿದಾಗ. 7 ರಿಂದ 10 ವರ್ಷದ ಮಕ್ಕಳು ತಾವು ಓದಿದ ಪುಸ್ತಕಗಳ ವಿಮರ್ಶೆಯನ್ನು ಬರೆಯುವ ಅಭ್ಯಾಸವೂ ಈ ಕೋರ್ಸಿನಲ್ಲಿದೆ. ಸಹಜವಾಗಿ ಈ ಅಧ್ಯಯನ ಕ್ಕಿರುವ ‘ರೀಡಿಂಗ್ ಫಾರ್ ಲೈಫ್’ ಎಂಬ ಶೀರ್ಷಿಕೆ ಅನ್ವರ್ಥ ಎಂದು ನನಗನ್ನಿಸುತ್ತದೆ.

‘ಲಾಕ್‌ಡೌನ್’ ಅವಧಿ ನನಗೆ ನೀಡಿದ ಜೀವನಾನುಭವಗಳಲ್ಲಿ ಒಂದು, ‘ಮಕ್ಕಳೊಡನೆ ಮರು ಓದು’. ನಾನು ಬಾಲ್ಯದಲ್ಲಿ ಓದಲಾಗದ ಇಂಗ್ಲಿಷ್ ಮಕ್ಕಳ ಪುಸ್ತಕಗಳನ್ನು ಓದಿ ಮುಗಿಸುವ ಆನಂದ. ನಮಗೆ ಮಕ್ಕಳಾಗಿ ಓದಲು ಆಗ ಲಭ್ಯವಿಲ್ಲದಿದ್ದರೂ, ಅದೇ ಮಕ್ಕಳ ಪುಸ್ತಕಗಳನ್ನು ಹಿರಿಯರಾಗಿ, ಹಲವು ದೃಷ್ಟಿಕೋನಗಳಿಂದ ನೋಡುವ ಅವಕಾಶ. ‘ಮಕ್ಕಳ ಮುಗ್ಧತೆ’ಯಿಂದ
ಅವುಗಳನ್ನು ‘ಆನಂದ’ ಕ್ಕಾಗಿಯಷ್ಟೇ ಓದುವ ಅದೃಷ್ಟ ನನಗಿಲ್ಲ. ಆದರೆ ಈಗಲೂ ಅವು ನೀಡುವ ಸಂತೋಷ ಅಪಾರವೇ. ಇಂಗ್ಲಿಷ್‌ನಲ್ಲಿ ಬಂದಿರುವ ಮಕ್ಕಳ ಪುಸ್ತಕಗಳ ವೈವಿಧ್ಯ, ಅಪಾರ ಸಂಖ್ಯೆ, ಸುಲಭ ಲಭ್ಯತೆ ನೋಡಿದರೆ ನನಗೆ ಕನ್ನಡತಿಯಾಗಿ ಅಸೂಯೆ ಎನಿಸುತ್ತದೆ.

ನಮ್ಮಲ್ಲೂ ಹೀಗಾದರೆ ಚೆನ್ನ

ಬ್ರಿಟಿಷ್ ಕೌನ್ಸಿಲ್‌ನಂತೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರಗಳು ಏಕೆ ಮಕ್ಕಳಿಗೆ ಕನ್ನಡ ಕಥೆ ಓದುವ, ಹೇಳುವ ರುಚಿ ಹತ್ತಿಸಬಾರದು ಎನಿಸುತ್ತದೆ. ಕಥೆ ಹೇಳುವ -ಕೇಳುವ -ಓದುವ ಬಗೆಗೆ ಇರುವ ನಮ್ಮ ತಂದೆ-ತಾಯಿಯರ ತಾತ್ಸಾರ, ಅದು ‘ಕನ್ನಡದ ಕಥೆ’ ಎಂದಾಕ್ಷಣ ಮತ್ತಷ್ಟು ಹೆಚ್ಚಬಹುದೇನೋ!

ಕಥೆ ಹೇಳುವುದರಿಂದ, ಕೇಳುವುದರಿಂದ ಬೆಳೆಯುವುದು ಕೇವಲ ಮಕ್ಕಳಲ್ಲ, ಹಿರಿಯರೂ ಎಂಬುದು ನನಗೀಗ ಗೊತ್ತಿದೆ. ಕಥೆ ಹೇಳುವುದು ಬರೆಹ-ನಾಟಕ-ನೃತ್ಯ-ಭಾಷೆ ಎಲ್ಲಕ್ಕೂ, ಕೊನೆಗೆ ವೃತ್ತಿಯಿಂದ ಮನೋವೈದ್ಯೆಯಾದ ನನಗೆ ಬಹುಮುಖ್ಯವಾದ
ಸಂವಹನಕ್ಕೂ ಸಂಬಂಧಿಸಿದ್ದು ಎಂಬ ಅರಿವು ಮೂಡಿದೆ. ಈಗಲೂ ಒಂಬತ್ತು ವರ್ಷದ ಭರತ ಕಥೆ ಹೇಳುವಂತೆ ಹಠ ಮಾಡು ತ್ತಾನೆ. ನಾನೊಂದು ಕಥೆ ಹೇಳಿದರೆ, ತಾನೂ ನನಗೊಂದು ಕಥೆ ಹೇಳುತ್ತಾನೆ! ಭರತನೊಂದಿಗೆ ಕಥೆ ಓದುವ ನಾನು, ಅವನಿಂದ ಕಥೆ ಹೇಳುವ ರೀತಿಯನ್ನೂ ಕಲಿಯುತ್ತಿದ್ದೇನೆ!