Saturday, 23rd November 2024

ಸಾಮಾಜಿಕ ಜಾಲತಾಣದ ಕ್ರಾಂತಿ

ವಿವೇಕ ಪ್ರ. ಬಿರಾದಾರ

ಸಾಮಾಜಿಕ ಜಾಲತಾಣ ಜೀವನಕ್ಕೆ ಆಮ್ಲಜನಕ ಇದ್ದ ಹಾಗೆಯೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡು ಉತ್ತರ ನೀಡ ಬೇಕಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ದಿನ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ.

ಆಮ್ಲಜನಕ ಇಲ್ಲದಿದ್ದರೆ ನಮಗೆ ಹೇಗೆ ಬದುಕಲು ಅಸಾಧ್ಯವೊ ಹಾಗೆ ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಬದುಕು ಅಸಾಧ್ಯ ಅನ್ನುವ ಮಟ್ಟಿಗೆ ಇರುವ ಸ್ಥಿತಿಯನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರದ ವ್ಯಕ್ತಿಯನ್ನು ಕಾಣಲು ಅಸಾಧ್ಯ ಎನ್ನುವ ಮಟ್ಟಿಗೆ ನಾವು ಬಂದು ತಲುಪಿದ್ದೇವೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂಅನ್ನು ನೋಡಿದಾಗ ಅದರಲ್ಲಿ ಜಗತ್ತಿನ ಎಲ್ಲ ಮಾಹಿತಿಗಳು ನಮಗೆ ದೊರೆಯುತ್ತವೆ. ಅದು ಕೆಲವೊಂದು ಸಲ ಸತ್ಯವಾಗಬಹುದು ಅಥವಾ ಸುಳ್ಳು ಆಗಿರಬಹುದು. ಯುಟ್ಯೂಬ್‌ನ್ನು ತೆಗೆದುಕೊಂಡರೆ ಸಾಕಷ್ಟು ಚಾನಲ್ ‌ಗಳನ್ನು ನಾವು ನೋಡಬಹುದು, ಅದರಲ್ಲಿ ಇಂತಿಷ್ಟು ಸಬ್‌ಬ್ಸ್ಕೆ್ರೈಬ್ ಆದರೆ ಹಣವನ್ನು ಗಳಿಸುವ ಸಾಧ್ಯತೆ ಇದೆ. ಇದನ್ನು ವೃತ್ತಿಯಾಗಿಸಿಕೊಂಡವರು ಸಾಕಷ್ಟು ಜನರ ಪಾಲಿಗೆ ಇದು ಆಮ್ಲಜನಕ. ಇನ್ನೂ ವೆಬ್‌ಪೋರ್ಟಲ್, ಬ್ಲಾಗ್‌ಗಳು ಕೂಡ ನಾವು ಕಾಣಬಹುದು. ಇದು ಕೂಡ ಆಮ್ಲಜನಕವೇ!

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೋಡಿದರೆ ಆನ್‌ಲೈನ್ ಜರ್ನಲಿಸಂ/ ಸೋಶಿಯಲ್ ಮಿಡಿಯಾ ಫ್ಲಾಟ್‌ಫಾರಂ ಎಂಬ ಹೆಸರುಗಳನ್ನು ನೋಡಬಹುದು. ಮನೆಗೆ ಪತ್ರಿಕೆ ಬರುವ ಮುಂಚೆ ನಮ್ಮ ಕೈಯಲ್ಲಿ ಆನ್‌ಲೈನ್ ಪತ್ರಿಕೆ ಬಂದಿರುತ್ತದೆ. ಪತ್ರಿಕೆಗಳು ತಮ್ಮ ಪತ್ರಿಕೆಯ ಹೆಸರಿನ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್‌ ಖಾತೆಯನ್ನು ಹೊಂದಿವೆ. ಇದರಿಂದ ಮರುದಿನ ಪತ್ರಿಕೆಯಲ್ಲಿ ಬರಬೇಕಾದ ಸುದ್ದಿ ಇಂದೇ ಸಾಮಾಜಿಕ ಜಾಲತಾಣದಲ್ಲಿ ಅವರ ಪೇಜ್‌ನಲ್ಲಿ ಕಾಣಬಹುದು.

ಇದು ಕೂಡ ಅವರಿಗೆ ಲಾಭದಾಯಕ. ನ್ಯೂಸ್ ಚಾನಲ್ಸ್‌, ಮನರಂಜನಾ ಜಾನಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಗಳನ್ನು ಹೊಂದಿವೆ. ಯುಟ್ಯುಬ್‌ನಲ್ಲಿ ನ್ಯೂಸ್ ಚಾನಲ್ ಗಳು ಲೈವ್ ಆಗಿ ಬರುತ್ತವೆ. ಇದರಿಂದ ಟಿ.ಆರ್.ಪಿ. ಹೆಚ್ಚಿ ನೋಡು ಗರ ಸಂಖ್ಯೆೆ ಹೆಚ್ಚಿಸಿಕೊಂಡು ಸಬ್‌ಸ್ಕೆ್ರೈಬ್ ಹೆಚ್ಚಾಗಿ ಹಣಗಳಿಸಬಹುದು. ಮನರಂಜನಾ ಚಾನೆಲ್‌ಗಳು ಸಾಮಾಜಿಕ ಜಾಲತಾಣ ಗಳಲ್ಲಿ ಸಣ್ಣ ಸಣ್ಣ ತುಣುಕುಗಳಾಗಿ ಕಾರ್ಯಕ್ರಮಗಳನ್ನು ಹಾಕುವುದರಿಂದ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು. ಜಾಹೀರಾತು ಕ್ಷೇತ್ರದಲ್ಲೂ ಸಹ ಸಾಮಾಜಿಕ ಜಾಲತಾಣ ಆಮ್ಲಜನಕವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯ ವಿಲ್ಲ. ಇಲ್ಲಿ ಜಾಹಿರಾತು ನೀಡಿದರೆ ಹೆಚ್ಚಿನ ಜನರಿಗೆ ತಲುಪುತ್ತದೆ. ಆನ್‌ಲೈನ್ ಶಾಪಿಂಗ್ ಮಾಡಲು ಕೂಡ ಇದು ಸಹಾಯಕಾರಿ ಯಾಗಿದೆ.

ಹೀರೋ ಆದ ಹಳ್ಳಿ ಹುಡುಗ
ಹಾವೇರಿ ಜಿಲ್ಲೆಯ ಕುರಿಗಾಹಿ ಹುಡುಗ ಹನುಮಂತಪ್ಪ ಯಾರೆಂಬುವುದು ನಮಗೆ ಅರಿವಿರಲಿಲ್ಲ. ಆದರೆ ಅವನ ಒಂದು ಹಾಡು ಸಾಮಾಜಿಕ ಜಾಲತಾಣದಲ್ಲಿ ಅನಾವರಣ ಮಾಡಿದ. ಅವನ ಅದೃಷ್ಟ ಬದಲಾಯಿತು. ಸರಿಗಮಪ ಎಂಬ ಜೀ ಕನ್ನಡದ ದೊಡ್ಡ ಕಾರ್ಯಕ್ರಮದಲ್ಲಿ ಮಿಂಚಿ, ಪ್ರಸಿದ್ಧಿಯಾದ. ಸಾಮಾಜಿಕ ಜಾಲತಾಣವು ನ್ಯೂಸ್, ಮನರಂಜನೆ, ಜಾಹಿರಾತು ಮತ್ತು ಪತ್ರಿಕೋ ದ್ಯಮ ಎಲ್ಲಕ್ಷೇತ್ರಗಳಲ್ಲೂ ಇಂದು ಬೆಳೆದಿದೆ. ಆದರೆ ಪ್ರಾಥಮಿಕ ದೃಶ್ಯ ಮಾಧ್ಯಮ ಎನಿಸಿರುವ ನಾಟಕ, ಬೀದಿನಾಟಕ ಇವು ಮರೆಗೆ ಸರಿಯುತ್ತಿವೆ. ಸಾಮಾಜಿಕ ಜಾಲತಾಣವೇ ಮುಂದಿನ ಜಗತ್ತು, ಮುಂದಿನ ಹೆದ್ದಾರಿ. ಅದರಲ್ಲಿ ಯಾವುದೇ ಅನುಮಾನ ವಿಲ್ಲ.