Thursday, 12th December 2024

ಆರ್ಗನ್‌ ಮಾಫಿಯಾದ ಆರ್‌.ಹೆಚ್‌.100

ಒಂದು ವರ್ಷದ ಹಿಂದೆಯೇ ಸೆಟ್ಟೇರಿದ್ದ ‘ಆರ್ ಹೆಚ್ 100’ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಚಿತ್ರದ ಶೀರ್ಷಿಕೆ ವಿಭಿನ್ನ ವಾಗಿದೆ.

ಅಂತೆಯೇ ಚಿತ್ರದಲ್ಲಿಯೂ ವಿಭಿನ್ನ ಕಥೆಯೂ ಇದೆಯಂತೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಗಮನಿಸಿದರೆ ಇದು ಸತ್ಯ ಅನ್ನಿಸುತ್ತದೆ. ‘ಆರ್ ಹೆಚ್ 100’ ಹಾರರ್ ಸಿನಿಮಾ ಎಂಬು ದರಲ್ಲಿ ಅನುಮಾನವೇ ಇಲ್ಲ. ಜತೆಗೆ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಮಿಳಿತವಾಗಿವೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿದ್ದು, ಸಿನಿಮಾದಲ್ಲಿ ಭಯಾನಕ ಹಾರರ್ ಸನ್ನಿವೇಶಗಳು ಇರುವುದು ಖಚಿತವಾಗುತ್ತದೆ.

ಕಗ್ಗತ್ತಲ ಕಾಡಿನಲ್ಲಿ ನಡೆಯುವ ಕಥನ ಬೆಳ್ಳಿತೆರೆಯ ಮೇಲೆ ತೆರೆದುಕೊಳ್ಳಲಿದೆ. ಅದೊಂದು ದಟ್ಟ ಕಾಡು. ಕಾನನದ ಗರ್ಭದಲ್ಲಿ ಹಲವು ವಿಚಿತ್ರ ಸಂಗತಿಗಳು ಅಡಗಿರುತ್ತವೆ. ಈ ಕಾರಣ ದಿಂದಲೇ, ಯಾರೂ ಕೂಡ ಅತ್ತ ಸುಳಿಯಲು ಭಯಪಡುತ್ತಿರುತ್ತಾರೆ. ಹೀಗಿರುವಾಗಲೇ ಕಾಲೇಜಿನ ಪ್ರಾಧ್ಯಾಪಕರೊಬ್ಬರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆ ಕಾಡಿನ ಬಗ್ಗೆ ತಿಳಿಸುತ್ತಾರೆ.

ಈ ವಿಚಾರ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಕೆರಳಿಸುತ್ತದೆ. ಹಾಗಾಗಿ ಆರು ವಿದ್ಯಾರ್ಥಿಗಳು, ಆ ಕಾಡಿನೊಳಗೆ ತೆರಳಿ ಅಲ್ಲಿನ ನಿಗೂಢತೆಯನ್ನು ಭೇದಿಸಬೇಕು ಅಂದುಕೊಂಡು, ಕಾನನದೊಳಕ್ಕೆ ಕಾಲಿಡುತ್ತಾರೆ. ಮೊದ ಮೊದಲು ಕಾಡು ಪ್ರಶಾಂತವಾಗಿ ಕಂಡರೂ, ದಿನಗಳು ಕಳೆಯುತ್ತಾ ಭಯಾನಕತೆಯ ಅನುಭವವಾಗುತ್ತಾ ಸಾಗುತ್ತದೆ.

ನಿಗೂಢತೆಗೆ ಅದೇ ಕಾರಣ ?
ಈ ದಟ್ಟ ಅರಣ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕಾರಣ ಯಾರು? ಅಲ್ಲಿ ದೆವ್ವ , ಭೂತದ ಕಾಟವಿದೆಯೆ ಎಂಬ ಕುತೂಹಲಕಾರಿ ಅಂಶಗಳು ಪ್ರೇಕ್ಷಕರನ್ನು ಕಾಡುತ್ತವಂತೆ. ಕಗ್ಗತ್ತಲಿನ ಸನ್ನಿವೇಶಗಳು ಥ್ರಿಲ್ ಎನ್ನಿಸುತ್ತವಂತೆ. ಕಾಡಿಗೆ ತೆರಳಿದ ಆರು ಜನರಲ್ಲಿ, ದಿನಕ್ಕೊಬ್ಬರಂತೆ ಕಾಣಿಯಾಗುತ್ತಿರುತ್ತಾರೆ. ಕೊನೆಗೆ ಯಾರು ಉಳಿಯುತ್ತಾರೆ.

ಯಾರು ಈ ನಿಗೂಢತೆಯನ್ನು ಭೇದಿಸುತ್ತಾರೆ ಎಂಬುದೇ ಸಸ್ಪೆನ್ಸ್. ಈ ಎಲ್ಲಾ ಘಟನೆಗಳು ನಡೆಯುತ್ತಿರುವಾಗ, ಕಾಡಿನಲ್ಲಿದ್ದ ಮಂತ್ರವಾದಿಯೊಬ್ಬ ಮುಂದಾಗುವ ಅಚಾತುರ್ಯಗಳನ್ನು ಮೊದಲೇ ಹೇಳಿರುತ್ತಾನೆ.

ಹಾಗಾದರೆ ಈ ಮಂತ್ರವಾದಿಗೂ ಇಲ್ಲಿ ನಡೆಯುವ ವಿಚಿತ್ರ ಘಟನೆಗಳಿಗೂ ಸಂಬಂಧವಿದೆಯೇ, ಇಲ್ಲಿನ ಎಲ್ಲಾ ವಿದ್ಯಮಾನ ಗಳಿಗೂ ಆತನೇ ಕಾರಣವೇ ಎಂಬುದನ್ನು ಚಿತ್ರದಲ್ಲಿಯೇ ನೋಡ ಬೇಕಂತೆ. ಶೀರ್ಷಿಕೆಯಲ್ಲಿಯೇ ಕಥೆ ‘ಆರ್ ಹೆಚ್ 100’ ಎಂಬ ಶೀರ್ಷಿಕೆ ಕುತೂಹಲ ಹುಟ್ಟಿಸು ತ್ತದೆ.

ಇದೇನಪ್ಪಾ… ಈ ರೀತಿಯ ಟೈಟಲ್ ಎಂದು ಭಾಸವಾಗಬಹುದು. ಶೀರ್ಷಿಕೆಯಲ್ಲಿಯೇ ಕಥೆಯ ಸುಳಿವು ಇದೆಯಂತೆ. ಆದರೆ ಕಥೆಯ ಗುಟ್ಟನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ ಎನ್ನುತ್ತಾರೆ ನಿರ್ದೇಶಕ ಮಹೇಶ್. ಗೌಪ್ಯವಾಗಿ ನಡೆಯುವ ಮಾಫಿಯಾದ ಕಥೆಯೇ ಈ ‘ಆರ್ ಹೆಚ್ 100’. ಅಷ್ಟಕ್ಕೂ ಹಾಗೆ ನಡೆಯುವ ಮಾಫಿಯಾ ಯಾವುದು ಎಂದರೆ ಅದು ಇನ್ನೂ ಸಸ್ಪೆನ್ಸ್ ಎನ್ನುತ್ತಾರೆ
ನಿರ್ದೇಶಕರು. ಚಿತ್ರಕ್ಕೆ ಎರಡು ಹಂತದಲ್ಲಿ ಒಟ್ಟು 38 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಬೆಂಗಳೂರು ಹಾಗೂ ಕೊಡಚಾದ್ರಿಯ ಸುಂದರ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆದಿದೆ. ಹರ್ಷಾ, ಗಣೇಶ್, ಸೋಮ್,ಚಿತ್ರಾ, ಕಾವ್ಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.