Wednesday, 11th December 2024

ಯುದ್ದದಲ್ಲಿ ರೋಬೋಟ್ ಬಳಕೆ

ಅಜಯ್ ಅಂಚೆಪಾಳ್ಯ

ದಿನನಿತ್ಯದ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ.

ಹಾಗಿರುವಾಗ, ರಕ್ಷಣೆಯ ಕ್ಷೇತ್ರದಲ್ಲಿ ಅದು ಬಳಕೆಯಾಗದೇ ಇರುತ್ತದೆಯೇ? ಹಾಗೆ ನೋಡಿದರೆ, ಹೊಸ ಹೊಸ ಸಂಶೋಧನೆಗಳು ಮೊದಲು ಯುದ್ಧ ಮತ್ತು ರಕ್ಷಣಾ ವಲಯದಲ್ಲಿ ಪ್ರಯೋಗಗೊಂಡನಂತರವೇ, ನಾಗರಿಕರ ಉಪಯೋಗಕ್ಕೆ ಲಭ್ಯವಾಗುವುದು
ಪದ್ಧತಿ.

ನಾಗರಿಕತೆಯು ರೂಪುಗೊಂಡ ಸಮಯದಿಂದಲೂ ಮನುಷ್ಯನು ಯುದ್ಧ ಮಾಡುವುದರಲ್ಲಿ ತೋರುತ್ತಿರುವ ಉತ್ಸಾಹ ಬೃಹತ್. ತಂತ್ರಜ್ಞಾನದ ಉಪಯೋಗವನ್ನು ಯುದ್ಧದಲ್ಲಿ ಉಪಯೋಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಒಂದು ದಶಕದಲ್ಲಿ, ಶೇ.30ರಷ್ಟು ಯುದ್ಧಸಂಬಂಧಿ ಚಟುವಟಿಕೆಗಳನ್ನು ರೋಬೋಟ್‌ಗಳೇ ನಡೆಸುತ್ತವೆ ಎಂದು ಯುಕೆ ಯುದ್ಧ ತಂತ್ರಜ್ಞರು ಹೇಳಿದ್ದಾರೆ. ಈಗಾ ಗಲೇ ವಿವಿಧ ಸ್ವರೂಪದ ಡ್ರೋನ್‌ಗಳು ಮತ್ತು ರೋಬೋಟ್ ನಿಯಂತ್ರಿತ ವಾಹನಗಳು ರಕ್ಷಣಾ ಪಡೆಯ ಅಸಗಳಾಗಿ ಬಿಟ್ಟಿವೆ.

ಅಪಾಯಕಾರಿ ಎನಿಸುವ ವಲಯಗಳಲ್ಲಿ ಮತ್ತು ರಹಸ್ಯವಾಗಿ ಕಾರ್ಯ ನಿರ್ವಹಿಸಲು, ಡ್ರೋನ್ ಮತ್ತು ರೋಬೋಟಿಕ್ ವಾಹನಗಳ ಬಳಕೆ ಸಾಮಾನ್ಯ ಎನಿಸಿದೆ. ಅದರಲ್ಲೂ ಮುಖ್ಯವಾಗಿ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಯುರೋಪಿಯನ್
ಮತ್ತು ಪಾಶ್ಚಾತ್ಯ ದೇಶಗಳು ಹೆಚ್ಚು ಹೆಚ್ಚು ರೋಬೋಟ್ ಮತ್ತು ಕೃತಕ ಬುದ್ಧಿಮತ್ತೆಯ ಮೊರೆ ಹೋಗುವ ಸಾಧ್ಯತೆ ಅಧಿಕ. ಯುಕೆ ಸೇನೆಯ ಶೇ.30ರಷ್ಟು ಕೆಲಸವನ್ನು ಡ್ರೋನ್ ಮತ್ತು ರೋಬೋಟ್‌ಗಳು ನಡೆಸುವಂತೆ ಈಗಾಗಲೇ ಅಲ್ಲಿ ಯೋಜನೆ ಗಳನ್ನು ತಯಾರಿಸಲಾಗುತ್ತಿದೆ. ಈ ರೀತಿಯ ಕಿಲ್ಲರ್ ರೋಬೋಟ್‌ಗಳನ್ನು ವ್ಯಾಪಕವಾಗಿ ಬಳಸುವುದರಿಂದ ಲಾಭವೂ ಹಲವು ಮತ್ತು ಯುದ್ಧ ನಡೆಸುವ ಸ್ವರೂಪವೂ ಕ್ರಮೇಣ ಬದಲಾಗುತ್ತದೆ. ಅಪಾಯಕಾರಿ ಪ್ರದೇಶಗಳಲ್ಲಿ ಬಾಂಬ್ ಎಸೆಯಲು, ಶೂಟ್ ಮಾಡಲು ಡ್ರೋನ್ ಬಳಕೆ ಒಂದು ವಿಧ ಎನಿಸಿದರೆ, ರೋಬೋಟಿಕ್ ವಾಹನಗಳು ಊಹೆಗೂ ನಿಲುಕದ ಸಾಹಸಗಳನ್ನು ಮಾಡ ಬಲ್ಲವು.

ತಂತ್ರಜ್ಞಾನದ ಬಳಕೆಯಿಂದಾಗಿ, ಯುದ್ಧದ ವಿಧಾನವು ಇನ್ನಷ್ಟು ರೂಕ್ಷ ಮತ್ತು ಪರಿಣಾಮಕಾರಿ ಎನಿಸಿದರೆ ಅಚ್ಚರಿಯಿಲ್ಲ. ಇತ್ತ ಭಯೋತ್ಪಾದಕರು ಸಹ ತಂತ್ರಜ್ಞಾ ನವನ್ನು ಬಳಸಿ, ತಮ್ಮ ಬುಡಮೇಲು ಕೃತ್ಯಗಳನ್ನು ನಡೆಸುವುದು ಸಹ ನಡೆದಿದೆ. ಮನುಷ್ಯನ ಮೂಲಭೂತ ವರ್ತನೆ ಎನಿಸಿರುವ ಯುದ್ಧ ಚಟುವಟಿಕೆಯು, ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಲ್ಲಾ, ಹೆಚ್ಚು ಹೆಚ್ಚು ತ್ವರಿತ ಎನಿಸುವುದೂ ಸಹಜ.