Sunday, 15th December 2024

ಮತ್ತೆ ಮತ್ತೆ ಷೇಕ್ಸ್’ಪಿಯರ್‌

ಗೊರೂರು ಶಿವೇಶ್

ಈ ಮಹಾ ನಾಟಕಕಾರನ ಜನ್ಮದಿನವನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿವಿಧ ರಸಗಳಿಂದ ತುಂಬಿದ ಹಲವು ನಾಟಕಗಳನ್ನು ರಚಿಸಿದ ಷೇಕ್ಸ್‌ ಪಿಯರ್, ಆಧುನಿಕ ಸಾಹಿತ್ಯದ ಮೇಲೆ, ರಂಗಭೂಮಿಯ ವಿಶೇಷ ಪರಿಣಾಮ ಬೀರಿದ್ದಾನೆ. ದೂರ ದೇಶದ ಈ ಕವಿ, ನಾಟಕಕಾರನು ಕನ್ನಡ ಗೊರೂರು ಶಿವೇಶ್ ಸಾಹಿತ್ಯದ ಮೇಲೂ ಬೀರಿದ ಪ್ರಭಾವ ಗಮನಾರ್ಹ.

ವಿಶ್ವರಂಗಭೂಮಿಯನ್ನು ತನ್ನ ಅದ್ಭುತ ನಾಟಕಗಳಿಂದ ಪರವಶಗೊಳಿಸಿದ ಕವಿ, ನಾಟಕಕಾರ ವಿಲಿಯಂ ಷೇಕ್ಸ್‌‌ಪಿಯರ್ ಜನ್ಮದಿನ ಮೊನ್ನೆ ತಾನೆ ಮುಗಿಯಿತು. ವಿಶೇಷವೆಂದರೆ ಆತನ ಮರಣ ದಿನವೂ ಏಪ್ರಿಲ್ 23 (ಎಪ್ರಿಲ್ 23, 1564- ಏಪ್ರಿಲ್ 23, 1916). ಮತ್ತು ಆ ದಿನವನ್ನು ಇಂಗ್ಲಿಷ್ ಭಾಷಾ ದಿನವನ್ನಾಗಿ ಮತ್ತು ವಿಶ್ವಪುಸ್ತಕ ದಿನವನ್ನಾಗಿ ಆಚರಿಸುತ್ತಿದ್ದೇವೆ.

ಇಂಗ್ಲೆಂಡಿನ ಸ್ಟ್ರಾಟ್‌ಫರ್ಡ್ ಎನ್ನುವ ಊರಿನಲ್ಲಿ ಜನನ. ತಂದೆ ಜಾನ್ ಷೇಕ್ಸ್‌‌ಪಿಯರ್ ಕೈಗವಸಿನ ವ್ಯಾಪಾರಿ. ತಾಯಿ ಪ್ರತಿಷ್ಠಿತ
ಕುಟುಂಬದ ಮೇರಿ ಆರ್ಡನ್. ಜಾನ್ ಆ ಊರಿನ ಮೇಯರ್ ಆದರೂ ಮುಂದೆ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಲಾರದೆ ಸಾಲ ಗಾರನಾದ. ಶಾಲಾಜೀವನವನ್ನು ಸುಸೂತ್ರವಾಗಿ ಕಳೆದ ಷೇಕ್ಸ್‌‌ಪಿಯರ್ ಕಾಲೇಜಿಗೆ ಹೋಗಲಾಗಲಿಲ್ಲ. ಆದರೆ ಆ ಊರಿನ
ಪ್ರತಿಷ್ಠಿತ ಶಾಲೆಯಲ್ಲಿ ಅತ್ಯುತ್ತಮ ಪ್ರಾಧ್ಯಾಪಕರಿಂದ ಅವನ ಶಿಕ್ಷಣವಾಯಿತು. ಅವನು ಆ ಕಾಲದಲ್ಲಿ ಕಲಿತಿದ್ದು ಅಂತರ ರಾಷ್ಟ್ರೀಯ ಭಾಷೆಯಾಗಿದ್ದ ಲ್ಯಾಟೀನ್ ಜೊತೆಗೆ ಗ್ರೀಕ್.

ತನ್ನ ಹದಿನೆಂಟನೆ ವಯಸ್ಸಿನಲ್ಲಿ ತನಗಿಂತ ಒಂಬತ್ತು ವರ್ಷ ದೊಡ್ಡವಳಾದ ಆ್ಯನ್ ಹ್ಯಾತವೇಯಳನ್ನು ಮದುವೆಯಾದ. ಆಕೆಗೆ ಮಗಳು ಸೂಸಾನ್, ಅವಳಿ ಮಕ್ಕಳಾದ ಹ್ಯಾಮ್ನೇಟ್ ಮತ್ತು ಜೂಡಿತ್ 1585ರಲ್ಲಿ ಜನಿಸಿದರು. ಮುಂದೆ ಆತ ಇಂಗ್ಲೆಂಡಿಗೆ ಬಂದ. 1592 ರವರೆಗೆ ಲಾಯರ್‌ರೊಬ್ಬರನಿಗೆ ಸಹಾಯಕನಾಗಿದ್ದನೆಂದು, ಆತ ನಾಟಕಮಂದಿರದ ಹೊರಗೆ ಶ್ರೀಮಂತರ ಕುದುರೆಯನ್ನು ಕಾಯುತ್ತಿದ್ದನೆಂದು ಹೇಳುತ್ತಾರೆ.

ಅದೇ ಸುಮರಿಗೆ ಹೆನ್ರಿ-ದ-ಸಿಕ್ಸ್ತ್ ನಾಟಕವನ್ನು ರಚಿಸಿದ. ಆದರೆ ಅದೇ ಸಂದರ್ಭದಲ್ಲಿ ಹರಡಿದ ರೋಗ ಪ್ಲೇಗಿನಿಂದಾಗಿ ನಾಟಕದ ಪ್ರದರ್ಶನಕ್ಕೆ ಅಡಚಣೆಯಾಯಿತು. ಆ ಸಂದರ್ಭದಲ್ಲಿ ನಾಟಕಗಳಿಗಿಂತ ಕವನಗಳಿಗೆ ಪ್ರಾಶಸ್ತ್ಯ ಹೆಚ್ಚು. ‘ವೀನಸ್ ಅಂಡ್
ಅಡೋ ನಿಸ್ ಮತ್ತು ದ ರೇಪ್ ಆಫ್ ಉಕ್ರೀಸ್’ ಎಂಬ ಪದ್ಯಗಳನ್ನು ಬರೆದು ಕೀರ್ತಿ ಮತ್ತು ಹಣವನ್ನು ಸಂಪಾದಿಸಿದ.

ಹಲವು ನಾಟಕಗಳ ರಚನೆ
ತನ್ನ ನಿಜವಾದ ಮಾಧ್ಯಮ ನಾಟಕ ಎಂದರಿತ ಷೇಕ್ಸ್‌‌ಪಿಯರ್ ಮುಂದೆ ನಾಟಕ ಶಾಲೆಗಳು ಪುನರರಾಂಭಗೊಂಡಾಗ ಆಗಿನ
ರಾಣಿ ಎಲಿಜಬೆರ್ ಕೃಪಾಕಟಾಕ್ಷಗೊಳಗಾಗಿದ್ದ ಲಾರ್ಡ್ ಚೆಂಬರ್ಲಿನ್ಸ್ಮೆನ್ ನಾಟಕ ತಂಡದಲ್ಲಿ ಸೇರಿಕೊಂಡ. ಇದರಿಂದಾಗಿ
ಅವನ ಭಾಗ್ಯೋದಯದ ಬಾಗಿಲು ತೆರೆಯಿತು. ಅದೇ ಸಂದರ್ಭದಲ್ಲಿ ರೋಮಿಯೋ ಅಂಡ್ ಜೂಲಿಯಟ್, ಎ ಮಿಡ್ ಸಮ್ಮರ್‌ ನೈಟ್ಸ್ ಡ್ರೀಮ್, ದ ಟೇಮಿಂಗ್ ಆಫ್ ಷ್ರೂ, ದ ಮರ್ಚೆಂಟ್ ಆಫ್ ವೆನಿಸ್ ಮುಂತಾದ ನಾಟಕ ರಚಿಸಿದ. ಆ ಕಾಲದಲ್ಲಿ ನಟರ ಮತ್ತು ನಾಟಕಕಾರರ ಬಗ್ಗೆ ಪ್ರತಿಷ್ಠಿತ ವಲಯ ಗಳಲ್ಲಿ ಸದಭಿಪ್ರಾಯ ಇರಲಿಲ್ಲ. ಆದರೆ ಎಲಿಜಬೆತ್ ರಾಣಿಗೆ ಸಾಹಿತ್ಯ ಮತ್ತು ನಾಟಕಗಳಲ್ಲಿ ಇದ್ದ ವಿಶೇಷ ಆಸಕ್ತಿಯ ಪರಿಣಾಮವಾಗಿ ಉತ್ತೇಜಿತನಾದ ಷೇಕ್ಸ್‌‌ಪಿಯರ್‌ ತನ್ನ ಸಹನಟರೊಂದಿಗೆ 1599ರಲ್ಲಿ ಗ್ಲೋಬ್ ಥಿಯೇಟರ್ ತೆರೆದ.

ಆ ರಂಗಮಂದಿರದಲ್ಲಿ ಪ್ರತಿ ಆರು ತಿಂಗಳಿಗೊಂದರಂತೆ ಜೂಲಿಯಸ್ ಸೀಸರ್, ಆ್ಯಸ್ ಯು ಲೈಕ್ ಇಟ್, ಟ್ವಲ್ತ್ ನೈಟ್,
ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿರ್ಯ, ಮ್ಯಾಕ್‌ಬೆತ್ ಮುಂತಾದ ನಾಟಕಗಳು ಪ್ರದರ್ಶನಗೊಂಡವು. ಈ ನಾಟಕಗಳು ಅವನಿಗೆ ಹಣದ ಜೊತೆ ಪ್ರತಿಷ್ಠೆಯನ್ನು ತಂದವು. 1608ರ ಸುಮಾರಿಗೆ ತನ್ನ ಊರಿಗೆ ಮರಳಿದ. ಕುಟುಂಬವನ್ನು ತನ್ನ ಊರಿನಲ್ಲಿರಿಸಿ ತಾನೊಬ್ಬನೇ ನಾಟಕರಂಗದಲ್ಲಿ ಕಳೆದ ಷೇಕ್ಸ್‌‌ಪಿಯರ್‌ಗೆ ರಂಗಜೀವನ ದಣಿವನ್ನು ತಂದಿತ್ತು.

1616ರ ಏಪ್ರಿಲ್ 23 ರಂದು ಮರಣವನ್ನಪ್ಪಿದ. ಅವನ ಗೆಳೆಯ ಮತ್ತೊಬ್ಬ ಪ್ರಸಿದ್ಧ ನಾಟಕಕಾರ ಬೆನ್ಜಾನ್ಸನ್ ಕವಿ ಡ್ರೇಟನ್ರೊಂದಿಗೆ ಬೆರೆತ ಸಂದರ್ಭದಲ್ಲಿ ಅಸ್ವಸ್ಥನಾಗಿದ್ದ. ಆತ ವಿಪರೀತವಾಗಿ ಕುಡಿದ ಪರಿಣಾಮವಾಗಿ ಅಸುನೀಗಿದ ಎಂದೂ ಕೂಡಾ ಹೇಳಲಾ ಗುತ್ತದೆ. ಕನ್ನಡದಲ್ಲೂ ಷೇಕ್ಸ್‌‌ಪಿಯರ್ 38 ವಿನೋದ ಹಾಗೂ ದುರಂತ ನಾಟಕಗಳು ಮತ್ತು 154 ಸಾನೆಟ್‌ಗಳನ್ನು ರಚಿಸಿ ವಿಶ್ವ ಸಾಹಿತ್ಯ ಮತ್ತು ನಾಟಕರಂಗವನ್ನು ಶ್ರೀಮಂತಗೊಳಿಸಿದ ಷೇಕ್ಸ್‌‌ಪಿಯರ್‌ನ ಕಾವ್ಯ ಮತ್ತು ನಾಟಕಗಳು ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿದೆ.

ಕನ್ನಡದಲ್ಲೂ ಆತನ ಹಲವು ಕೃತಿಗಳು ಅನುವಾದಗೊಂಡು ಪ್ರದರ್ಶನಗೊಂಡಿವೆ. ಒಂದೇ ನಾಟಕ ವಿವಿಧ ಲೇಖಕರು ಗಳಿಂದಲೂ ಅನುವಾದಗೊಂಡಿರುವುದು ವಿಶೇಷ. ನಮ್ಮಲ್ಲಿ ಆತನ ನಾಟಕಗಳು ಮತ್ತು ಸಾನೆಟ್‌ಗಳು ಪಠ್ಯಗಳ ಭಾಗಗಳಾಗಿ
ಬಹುತೇಕ ಎಲ್ಲಾ ಅಕ್ಷರಸ್ಥರಿಗೂ ಪರಿಚಿತ. ಆತನ ಹಲವು ನಾಟಕಗಳು ಕನ್ನಡಕ್ಕೆ ಅನುವಾದಗೊಂಡು, ರೂಪಾಂತರಗೊಂಡು
ರಂಗದ ಮೇಲೆ ಪ್ರದರ್ಶಿತವಾಗಿವೆ. ಜತೆಗೆ, ಮೊದಮೊದಲಿನ ಹಲವು ನಾಟಕಗಳ ರಚನೆಗೂ ಸ್ಫೂರ್ತಿ ನೀಡಿವೆ. ಇದೇ ರೀತಿ
ಇಂಗ್ಲಿಷ್ ಭಾಷೆ ಪ್ರಾಬಲ್ಯ ಇದ್ದ ದೇಶಗಳಲ್ಲೆಲ್ಲಾ ಆತ ನಾಟಕಗಳು ವ್ಯಾಪಕವಾಗಿ ಪ್ರದರ್ಶನಗೊಂಡಿದ್ದರಿಂದ, ಆತನೊಬ್ಬ ವಿಶ್ವವ್ಯಾಪಿ ನಾಟಕಕಾರಿ, ಕವಿ.

ಷೇಕ್ಸ್‌‌ಪಿಯರ್‌ತನ್ನ ನಾಟಕದ ವಸ್ತುವಾಗಿ ಹಿಂದಿನ ನಾಟಕಗಳು, ಪುರಾಣ, ಇತಿಹಾಸದ ಭಾಗಗಳನ್ನು ಆಯ್ಕೆ ಮಾಡಿಕೊಂಡರೂ ಮನುಷ್ಯ ಜೀವನದ ವೈರುಧ್ಯಗಳನ್ನು ನೋವು, ಹತಾಶೆ, ಆಸೆ, ದುರಾಸೆ, ಪ್ರೀತಿ, ಅನುಕಂಪ, ಅಹಂಕಾರ ಮುಂತಾದ ಗುಣಾವ ಗುಣಗಳನ್ನು ತೆರೆದಿಟ್ಟ ಪರಿಣಾಮವಾಗಿ ಏಕಕಾಲಕ್ಕೆ ಪಂಡಿತ-ಪಾಮರರನ್ನು ಮೆಚ್ಚಿಸಿದೆ. ಹೀಗಾಗಿ ಸಮಾಧಿ ಬಳಿ ಇರುವ ಅವನ ವಿಗ್ರಹದ ಕೆಳಗೆ ಕೆತ್ತಿರುವ ಚರಮನುಡಿಗಳಲ್ಲಿ ‘ಬುದ್ಧಿ ಶಕ್ತಿಯಲ್ಲಿ ಸಾಕ್ರಟೀಸ್, ಕಲೆಯಲ್ಲಿ ಒಬ್ಬ ವರ್ಜಿಲ್’ ಎಂದಿದೆ.

ಜತೆಗೆ ‘ಪ್ರಿಯಮಿತ್ರ ಯೆಸುವಿನ ಆಣೆ. ಇಲ್ಲಿ ಹುದುಗಿಸಿರುವ ಮಣ್ಣನ್ನು ಅಗೆಯಬೇಡ, ಈ ಕಲ್ಲುಗಳನ್ನು ಹಾಗೆಯೇ ಉಳಿಸುವವ ನಿಗೆ ದೇವರ ಅನುಗ್ರಹವಿರಲಿ, ನನ್ನ ಎಲುಬುಗಳನ್ನು ಕದಲಿಸುವವನಿಗೆ ಶಾಪವಿರಲಿ’ ಎಂದಿದ್ದು ಸ್ವತಃ ತಾನೇ ಬರೆದಿದ್ದಾನೆ ಎಂದು ಅದರ ಸುತ್ತ ಊಹಾಪೋಹಗಳಿವೆ.

ಚಲನಚಿತ್ರ ಮಾಧ್ಯಮವು ಅವನ ಕೃತಿಗಳಿಗೆ ಉಪಕೃತವಾಗಿದೆ. ಹಿಂದಿಯ ಮಕ್ಬುಲ್, ಓಂಕಾರ ಮತ್ತು ಹೈದರ್ ಚಿತ್ರಗಳು
ಕ್ರಮವಾಗಿ ಮ್ಯಾಕ್‌ಬೆತ್, ಒಥೆಲೊ ಮತ್ತು ಹ್ಯಾಮ್ಲೆಟ್ ನಾಟಕಗಳನ್ನು ಆಧರಿಸಿದೆ . ಇತ್ತೀಚೆಗೆ ಮಲಯಾಳಂನಲ್ಲಿ ಬಿಡುಗಡೆ ಯಾಗಿರುವ ಜೋಜಿ ಸಿನಿಮಾವು ಮ್ಯಾಕ್‌ಬೆತ್ ನಾಟಕವನ್ನು ಆಧರಿಸಿದೆ. ಅವನೊಬ್ಬ ವಿಶ್ವವ್ಯಾಪಿ ನಾಟಕಕಾರ. ಅವನ ಟೇಮಿಂಗ್ ಆಫ್ ದಿ ಷೂೃ (ಗಯ್ಯಾಳಿಯನ್ನು ಸಾಧು ಮಾಡುವಿಕೆ) ಕನ್ನಡದ ನಂಜುಂಡಿಕಲ್ಯಾಣ, ಸಂಪತ್ತಿಗೆ ಸವಾಲು,
ನೀನನ್ನ ಗೆಲ್ಲಲಾರೆ ಮುಂತಾದ ಸಿನಿಮಾಗಳಿಗೂ ಹಾಗೂ ಕಾಮಿಡಿ ಆಫ್ ಎರರ್‌ನ ನಾಟಕದ ಗೊಂದಲದಿಂದಾಗಿ ಉಂಟಾಗುವ
ಹಾಸ್ಯದ ಘಟನೆಗಳು ಉಲ್ಟಾ-ಪಲ್ಟಾ, ಗೋಲ್ಮಾಲ್ ಸೀರಿಸ್ ಮುಂತಾಗಿ ನೂರಾರು ಸಿನಿಮಾಗಳಿಗೆ ಸ್ಪೂರ್ತಿ ನೀಡಿವೆ.

ಯಾವುದೇ ನಾಟಕಕಾರ, ನಾಟಕದ ಪ್ರಮುಖಘಟ್ಟ ಮತ್ತು ಅಲ್ಲಿನ ಪ್ರಮುಖಪಾತ್ರಧಾರಿಗಳ ಚಿತ್ರಣವನ್ನು ಸಮರ್ಥವಾಗಿ
ಮಾಡುವನಾದರೂ ನಿಜಕ್ಕೂ ಅವನಿಗೆ ಸವಾಲೆನಿಸುವುದು ಸಣ್ಣ ಪುಟ್ಟ ಪಾತ್ರಗಳ ಚಿತ್ರಣ ಮತ್ತು ಪ್ರಾಸಂಗಿಕವಾಗಿ ಕಥೆಯ
ಬೆಳವಣಿಗೆಗೆ ರಚಿಸಬೇಕಾದ ಸನ್ನಿವೇಶಗಳನ್ನು ಹೆಣೆಯಬೇಕಾದ ಸಂದರ್ಭ. ಷೇಕ್ಸ್‌‌ಪಿಯರ್‌ನ ಸಾಮರ್ಥ್ಯವಿರುವುದು ಅಲ್ಲಿಯೆ.
ಪ್ರತಿಯೊಂದು ಸನ್ನಿವೇಶ ಮತ್ತು ಪಾತ್ರಗಳು ನೋಡುಗರು ಮತ್ತು ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡುವು ದರಲ್ಲಿ ಅವನ ಕೌಶಲ್ಯವು ಸಾಬೀತಾಗಿದೆ.

ಇಂಗ್ಲಿಷ್ ನಿಘಂಟಿಗೆ ಸುಮಾರು ಎರಡು ಸಾವಿರ ಹೊಸ ಪದಗಳು, ನುಡಿಗಟ್ಟುಗಳನ್ನು ನೀಡಿದ ಕೀರ್ತಿ, ನಾಮಪದಗಳನ್ನು
ಕ್ರಿಯಾಪದವನ್ನಾಗಿಸಿ, ಕ್ರಿಯಾ ಪದಗಳನ್ನು ಗುಣವಾಚಕವನ್ನಾಗಿಸಿ ಭಾಷಾ ಬಳಕೆಯಲ್ಲಿ ಹೊಸ ಪ್ರಯೋಗ ಮಾಡುವು ದರಲ್ಲಿಯೂ ಆತ ಕೊಡುಗೆ ನೀಡಿದ್ದಾನೆ. ಕಳೆದ ನಾಲ್ಕು ನೂರು ವರ್ಷಗಳಿಂದ ವಿಶ್ವನಾಟಕ ಸಾರ್ವಭೌಮನಾಗಿ ಇಂದಿಗೂ ವಿಮರ್ಶಕರಿಗೆ, ಸಾಹಿತ್ಯಾಸಕ್ತರಿಗೆ, ರಂಗಪ್ರೇಮಿಗಳಿಗೆ ಆಹಾರವಾಗಿರುವ ಷೇಕ್ಸ್‌‌ಪಿಯರ್ ನಾಟಕಗಳು ಆತನ ಪ್ರಸ್ತುತತೆಯನ್ನು ಸಾರುತ್ತಾ ಮುಂದೆಯೂ ಆತನ ಸ್ಥಾನ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿವೆ.