ಕಾಲೇಜು ಜೀವನವೆಂದರೆ ಹಾಗೇ ಅಲ್ಲವೆ? ಒಂದು ಸುಂದರ ಗೆಳೆತನ, ಮಧುರ ಬಾಂಧವ್ಯ, ಮನದ ಮೂಲೆಯಲ್ಲೆಲ್ಲೋ ಹುಟ್ಟುವ ಪ್ರೀತಿ. ಆದರೇನು ಮಾಡುವುದು, ಪ್ರೀತಿಯ ಬೀಜಗಳು ಅದೆಷ್ಟೋ ಬಾರಿ ಹಸಿರಾಗಿ ಮೊಳಕೆಯೊಡೆಯು ವುದೇ ಇಲ್ಲ.
ಪ್ರವೀಣ್
ಪದವಿ ಕಾಲೇಜು ಮುಗಿಸಿ ಸ್ನಾತಕೋತ್ತರ ಪದವಿ ಕಾಲೇಜು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಾಗ, ಕಾಲೇಜಿನ ಬಗ್ಗೆ ಏನೊ ಹೊಸ ಕುತೂಹಲ, ಹೊಸ ಜಾಗ, ಹೊಸ ಗೆಳೆಯ ಗೆಳತಿಯರು, ಹೊಸ ತರಗತಿಗಳು. ಹೀಗೆ ಕಾಲೇಜು ದಿನಗಳು ಸಾಗುತ್ತಿರುವಾಗ ಹೊಸ ಪ್ರಪಂಚವೇ ಉದ್ಬವವಾಗುತ್ತದೆ. ಆಗ ಮನದ ಮೂಲೆಯಲ್ಲಿ ಪ್ರೀತಿ ಎಂಬ ಅಲೆಯು ಮೆಲ್ಲಗೆ ತೆವಳಲು ಆರಂಭವಾಗುತ್ತದೆ.
ಅದೇನೊ ಗೊತ್ತಿಲ್ಲ ಮೊದ ಮೊದಲು ಅವಳನ್ನ ನೋಡಿದಾಗ ಮನಸ್ಸೊಳಗೆ ಏನೊ ಒಂದು ರೀತಿಯ ಭಯ, ಮೌನ, ಗೊಂದಲ ಉಂಟಾಗುತ್ತಿತ್ತು. ಹಾಗೆ ಅವಳಲ್ಲಿ ಸಹ ಈ ರೀತಿಯ ಭಾವನೆಗಳು ಪ್ರಾರಂಭವಾದವು. ಹುಡುಗಿಯ ಸುಂದರ ನೋಟಕ್ಕೆ ಹುಡುಗ ಕವಿಯಾಗಯಾಗುತ್ತಾನೆ. ಅವಳು ನಕ್ಕಾಗ ಅರಳಿದ ಹೂವಿನ ಹಾಗೆ, ಮಾತನಾಡುವಾಗ ದಾಳಿಂಬೆ ಹಲ್ಲುಗಳ ಮುಖದಲ್ಲಿ ಮೌನ.
ಕ್ರಮೇಣ ಒಬ್ಬರಿಗೊಬ್ಬರು ಬಹಳ ಇಷ್ಟವಾಗ ತೊಡಗಿದರು. ಮುಂದೆ ಇಬ್ಬರು ತಿರುಗಾಡಿದ ಪಾರ್ಕ, ಥಿಯೇಟರ್ ಲೆಕ್ಕವಿಲ್ಲ.
ಜತೆಯಲ್ಲಿದ್ದ ಸ್ನೇೇಹಿತರು, ಕಾಲೇಜ್ ಟ್ರಿಪ್, ಎಲ್ಲರೂ ಸೇರಿದಾಗ ಪಾನಿಪುರಿ ತಿನ್ನುವುದು, ಬೈಕ್ ಸವಾರಿ, ಸಮಯದ ಅರಿವಿಲ್ಲದೆ ಮೋಬೈಲನಲ್ಲಿ ಸಂವಾದ ಮಾಡುವುದು.
ಕಾಲೇಜು ದಿನಗಳಲ್ಲಿ ಇಂತಹ ಮಧುರ ನೆನಪುಗಳು. ಆದರೆ ಕಾಲೇಜು ಮುಗಿದ ನಂತರ ಮುಂದೊಂದು ದಿನ ಇಬ್ಬರೂ ಬೇರೆ ಯಾಗುವ ಸಮಯ ಬರುತ್ತದೆ. ಹುಡುಗನ ಪ್ರೀತಿಯನ್ನು ಮನೆಯಲ್ಲಿ ಒಪ್ಪಲಿಲ್ಲ, ಹುಡುಗಿಯ ಮನೆಯವರು ಸಹ ಒಪ್ಪಲಿಲ್ಲ. ಮನೆಯ ಪರಿಸ್ಥಿತಿಗೆ ಹೊಂದುಕೊಂಡು ಹುಡುಗ ಹುಡುಗಿ ಬೇರೆಯಾದರು.
ಹೊತ್ತು ಗೊತ್ತಿಲ್ಲದೇ ಮಾತನಾಡುತ್ತಿದ್ದ, ವಾಟ್ಸಾಪ್‌ನಲ್ಲಿ ಚಾಟ್ ಮಾಡುತ್ತಿದ್ದ, ಎಷ್ಟೊಂದು ಮಧುರ ಭಾವನೆಗಳನ್ನು ಹಂಚಿ ಕೊಂಡಿದ್ದ ಇಬ್ಬರೂ ಇಂದು ಮೂಕ ವೇದನೆ ಅನುಭವಿಸತೊಡಗಿದರು. ಮನದ ನೋವನ್ನು ಹೇಳಿಕೊಳ್ಳುವ ಶಕ್ತಿ ಇಲ್ಲದಾ ಯಿತು. ಹುಡುಗನಿಗೆ ಮೌನವೇ ಆದಿಪತ್ಯ ವಹಿಸಿ ಮಾತು ಕಳೆಗುಂದಿತು.
ಕಾಲೇಜು ಮುಗಿದ ಮೇಲೆ ವರ್ಷಗಳೇ ಉರುಳಿದರೂ ಮಾತುಗಳೆ ಮೌನವಾಗವೆ. ಹುಡುಗಿಗೆ ಬೇರೆಯವರ ಜತೆ ವಿವಾಹವಾಯಿತು. ಹುಡುಗ ಜೀವನದ ಮೇಲೆ ಗಮನ ಹರಿಸಿದ. ಈಗ ಇಬ್ಬರೂ ಎಲ್ಲವನ್ನೂ ಮರೆತು ಅವರ ಪಾಡಿಗೆ ಅವರು ಜೀವನ ಸಾಗಿಸು ತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಬಿತ್ತಿರಬಹುದಾದ ಪ್ರೀತಿಯ ಬೀಜ, ಭೂತಾಯಿಯ ಒಡಲಲ್ಲಿ ಉಸಿರಿಲ್ಲದೆ ಮಲಗಿದೆ. ಜೀವನ ದಲ್ಲಿ ಯಾವುದೂ ಶಾಶ್ವತವಲ್ಲ. ಕೆಲವು ದಿನಗಳ ಸುಖಕ್ಕೆ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುವುದು ಸೂಕ್ತ ವಲ್ಲ. ಜೀವನದಲ್ಲಿ ಎದುರಾಗುವ ಇಂತಹ ಬಿಕ್ಕಟ್ಟು, ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯ ಪರಿಹಾರ ಇದ್ದೇ ಇರುತ್ತದೆ.