Sunday, 6th October 2024

ರಾಣಾಗೆ ಭರ್ಜರಿ ಗಿಫ್ಟ್‌

ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ, ಏಕ್ ಲವ್ ಯಾ ಚಿತ್ರದ ಮೂಲಕ ಸ್ಪೆಷಲ್ ಲುಕ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಣಾಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿದೆ. ನಿರ್ದೇಶಕ ಪ್ರೇಮ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ರಾಣಾ ಅಭಿನಯದ ಮೊದಲ ಸಿನಿಮಾ ಏಕ್ ಲವ್ ಯಾ ಚಿತ್ರದ ಟೀಸರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ ನಿರ್ದೇಶಕ ಪ್ರೇಮ್. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ಇನ್ನೇನೂ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ. ಲಾಕ್‌ಡೌನ್ ನಿಂದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದ ಸಿನಿಮಾತಂಡ ಇದೀಗ ಮತ್ತೆ ಶೂಟಿಂಗ್‌ಗೆ ಆರಂಭಿಸಿದೆ.

ರೊಮ್ಯಾಂಟಿಕ್ ಲವ್ ಸ್ಟೋರಿಯ ಈ ಸಿನಿಮಾದಲ್ಲಿ ರಾಣಾ ಡಬ್ಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಣಾಗೆ ನಾಯಕಿಯಾಗಿ ರೇಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ರಚಿತಾ ರಾಮ್ ಕೂಡ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ
ಟೀಸರ್ ಸಖತ್ ರೆಸ್ಪಾನ್ಸ್‌ ಗಿಟ್ಟಿಸಿಕೊಂಡಿತ್ತು. ರಚಿತಾ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಮುಂದಿನ ವರ್ಷ ಏಕ್ ಲವ್ ಯಾ ತೆರೆಗೆ ಬರಲಿದೆ.