Thursday, 12th December 2024

ಟೆಡ್ಡಿಬೇರ‍್ ಹಾಡುಗಳ ಸಂಭ್ರಮ

ಹಾರರ್, ರೋಮ್ಯಾಂಟಿಕ್ ಕಥೆ ಹೊಂದಿರುವ ಟೆಡ್ಡಿಬೇರ್ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರನ್ನು ಸೆಳೆಯುತ್ತಿವೆ. ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

ಭರತ್‌ಕುಮಾರ್, ನವೀನ್ ರೆಗಟ್ಟಿ ಜಂಟಿಯಾಗಿ ಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ನವ ದಂಪತಿಗಳು ಮದುವೆಯಾದ ಬಳಿಕ ಭವ್ಯವಾದ ಬಂಗಲೆಗೆ ಹೋದಾಗ, ಅಲ್ಲಿ ವಿಶಿಷ್ಟ, ವಿಚಿತ್ರ, ವಿನೋದ ಹಾಗೂ ಭಯಾನಕವಾದ ಸನ್ನಿವೇಶಗಳು ಎದುರಾಗುತ್ತದೆ. ಅಲ್ಲಿ ನಡೆಯುವಂತ ಘಟನೆಗಳು ಯಾವ ರೀತಿ ಇರುತ್ತವೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ಸಹ ನಿರ್ಮಾಪಕ ಆರೋನ್ ಕಾರ್ತಿಕ್.

ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಪೂರಿಜಗನ್ನಾಥ್ ಅವರ ಜತೆ ಕಾರ್ಯನಿರ್ವಹಿಸಿದ ಅನುಭವವಿರುವ ಲೋಕೇಶ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಮುಗಿದಿದೆ. ಬೆಂಗಳೂರು, ಮಂಗಳೂರು, ಕುಶಾಲನಗರದಲ್ಲಿ ಶೂಟಿಂಗ್ ನಡೆಸಲಾಗಿದೆ. ಭಾರ್ಗವ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ.

ಸೈಕಾಲಜಿ ಕೌನ್ಸಿಲರ್ ಪಾತ್ರದಲ್ಲಿ ಭಾರ್ಗವ್ ಕಾಣಿಸಿಕೊಂಡಿದ್ದಾರೆ. ಲಿಖಿತಾ ಹಾಗೂ ಶೈಲಜಾ ಸಿಂಹ ನಾಯಕಿಯ ರಾಗಿ ಬಣ್ಣಹಚ್ಚಿದ್ದಾರೆ. ನಿಖಿಲ್, ವಿಘ್ನೇಶ್, ನವೀನ್ ಪಾಟೀಲ್, ಅಂಜಲಿ, ಅರವಿಂದ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಛಾಯಾಗ್ರಹಣ ಕೃಷ್ಣಸಾರಥಿ, ನಿಖಿಲ್, ಸಂಕಲನ ಕುಮಾರ್, ನಾಗರಾಜ್, ಸಂಭಾಷಣೆ ಲೋಕೇಶ್, ಅಜಿತ್, ಭಾರ್ಗವ, ಸಾಹಸ ಅಲ್ಟಿಮೇಟ್ ಶಿವು ಅವರದಾಗಿದೆ. ಆರೋನ್ ಕಾರ್ತಿಕ್ ಮೂರು ಹಾಡುಗಳಿಗೆ ಸಾಹಿತ್ಯ, ಸಂಗೀತ ನೀಡಿದ್ದಾರೆ.