* ನೀತಾ ರಾವ್
ಸಾಹಿತಿ ಚಂದ್ರಶೇಖರ ಕಂಬಾರರು 49 ವರ್ಷಗಳ ಹಿಂದೆ ರಚಿಸಿದ ‘ಕರಿಮಾಯಿ’ ಕಾದಂಬರಿಯ ಹೊಸ ಓದು, ಈಗಿನ ತಲೆಮಾರಿನ ಓದುಗರನ್ನು ಎಷ್ಟು ತಟ್ಟಬಲ್ಲದು? ಹಳೆಯ ಒಂದು ಪ್ರಮುಖ ಕಾದಂಬರಿಯ ಹೊಸ ಓದು ಇಲ್ಲಿದೆ.
1970 ರಲ್ಲಿ ‘ಕರ್ಮವೀರ’ದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ, ಚಂದ್ರಶೇಖರ ಕಂಬಾರ ವಿರಚಿತ ‘ಕರಿಮಾಯಿ’ ಸ್ವಾಾತಂತ್ರ್ಯಪೂರ್ವ ಭಾರತದ ಹಳ್ಳಿಿಯೊಂದರ ಸಾಮಾಜಿಕ ಜೀವನದ ಕಥೆ. ಬ್ರಿಿಟೀಷ್ ಆಳ್ವಿಿಕೆಯ ಆ ಕಾಲದಲ್ಲಿ ಗಾಂಧೀಜಿಯ ಪ್ರಭಾವವೂ ಜನರನ್ನು ಸ್ವಾಾತಂತ್ರ್ಯಕ್ಕೆೆ ಪ್ರೇರೇಪಿಸುತ್ತದ್ದ ಹೊತ್ತಿಿನಲ್ಲಿ ಶಿವಾಪುರ ಎಂಬ ಬೆಳಗಾವಿಯ ಸಮೀಪದ ಪುಟ್ಟ ಹಳ್ಳಿಿಯಲ್ಲಿ ಜರಗುವ ವಿದ್ಯಮಾನಗಳು ಹಳ್ಳಿಿಯ ಜನಪದರನ್ನು ಹೇಗೆ ಪೇಚಿಗೆ ಸಿಲುಕಿಸುತ್ತವೆ, ಬದಲಾವಣೆಯ ಸೋಗಿನಲ್ಲಿ ಗೌಡ ಮತ್ತು ಗುಡಸಿಕರ ಇವರಿಬ್ಬರ ಜೀವನದಲ್ಲಿ ಯಾವ ರೀತಿಯಲ್ಲಿ ಬಿರುಗಾಳಿಯನ್ನೆೆಬ್ಬಿಿಸುತ್ತವೆ ಎನ್ನುವುದನ್ನು ಬೆಳಗಾವಿಯ ಜವಾರಿ ಭಾಷೆಯಲ್ಲಿ ನಿರೂಪಿಸಲಾದ ಈ ಕಥೆಯಲ್ಲಿ ಊರದೇವತೆಯಾದ ಕರಿಮಾಯಿ ಒಂದಲ್ಲಾಾ ಒಂದು ರೀತಿಯಲ್ಲಿ ಜನರ ನಿತ್ಯಜೀವನವನ್ನು ಪ್ರಭಾವಿಸುತ್ತಲೇ ಇರುವುದು ಇಂದಿನ ದಿನಮಾನಗಳಲ್ಲಿ ನಮಗೆ ಆಶ್ಚರ್ಯವೆನಿಸಿದರೂ ಸುಳ್ಳಂತೂ ಅನಿಸುವುದಿಲ್ಲ. ಊರದೇವತೆ ಕರಿಮಾಯಿಯ ಐತಿಹ್ಯ, ಪುರಾಣವನ್ನು ಸ್ವಾಾರಸ್ಯಕರವಾಗಿ ಬಿಚ್ಚಿಿಡುವ ನಿರೂಪಕ ಶಿವಾಪುರದ ಪ್ರತಿಯೊಂದು ಚಟುವಟಿಕೆಯೂ ಹೇಗೆ ಕರಿಮಾಯಿಯ ಮಾಯೆಯ ಛಾಯೆಯಲ್ಲಿಯೇ ನಡೆಯುತ್ತದೆ ಎಂಬುದನ್ನು ಸಹಜವಾಗಿ ನಿರೂಪಿಸುತ್ತಾಾನೆ.
ಊರ ಗೌಡ ಒಳ್ಳೆೆಯ ಗುಣಗಳ ಸಂಕೇತವಾದರೆ ಬೆಳಗಾವಿಯಿಂದ ಬಂದು ಶಿವಾಪುರದಲ್ಲಿ ನೆಲೆಯೂರಲೆತ್ನಿಿಸುವ ಬಸವರಾಜು ಮತ್ತು ಚಿಮಣಾ ಕೆಟ್ಟದರ ಪ್ರತಿರೂಪವೆನಿಸುತ್ತಾಾರೆ. ಇವರಿಬ್ಬರ ಮಧ್ಯೆೆ ಮುಖ್ಯಪಾತ್ರವಾದ ವಿದ್ಯಾಾವಂತ ಯುವಕ ಗುಡಸಿಕರ, ಒಮ್ಮೆೆ ಒಳ್ಳೆೆಯವನಾಗಿ ಇನ್ನೊೊಮ್ಮೆೆ ಕೆಟ್ಟವನಾಗಿ ಆಕಡೆ ಈಕಡೆ ಜೋತಾಡುತ್ತಾಾ ಅಳ್ಳಕವಾದೊಂದು ವ್ಯಕ್ತಿಿತ್ವವನ್ನು ಪ್ರತಿಬಿಂಬಿಸುತ್ತಾಾನೆ. ಮುದುಕನಾದ ಗೌಡ ಮತ್ತು ಅವನ ಕಟ್ಟಾಾ ಬೆಂಬಲಿಗ ದತ್ತಪ್ಪ ಅವನ ಕಣ್ಣಿಿಗೆ ಹಳೇ ಹದ್ದುಗಳ ಹಾಗೆ ಕಾಣುತ್ತಾಾರೆ. ಬೆಳಗಾವಿಯಲ್ಲಿ ಕಲಿತು ಬಂದು ತನ್ನ ಊರನ್ನೂ ಅದೇ ರೀತಿ ಆಧುನಿಕವಾಗಿಸಬೇಕೆಂಬ ತನ್ನ ಹಂಬಲಕ್ಕೆೆ ಇವರಿಬ್ಬರೇ ಅಡ್ಡಿಿ ಎಂದುಕೊಂಡ ಗುಡಸಿಕರ ಹಳ್ಳಿಿಯ ಜನರ ಮನಸ್ಸನ್ನು ಬದಲಿಸಲು, ಗೆಲ್ಲಲು ಸಾಕಷ್ಟು ಪ್ರಯತ್ನ ಮಾಡಿದರೂ ಯಶಸ್ಸು ಕಾಣುವುದಿಲ್ಲ. ಸಹಜವಾಗಿಯೇ ಸಿಕ್ಕ ಊರಿನ ಸರಪಂಚನ ಪಟ್ಟ ಅವನನ್ನು ಇನ್ನಷ್ಟು ಅಧೋಗತಿಗೆ ತಳ್ಳುತ್ತದೆ. ಹಿಂದೆ ಮುಂದೆ ಗೊತ್ತಿಿಲ್ಲದೇ ಅವನಿಗೆ ಉಧೋ ಎನ್ನುವ ಅವನ ಪಟಾಲಂನ ನಾಲ್ಕು ಪಂಚಾಯತಿ ಮೆಂಬರುಗಳಿಗೆ ಚತುಷ್ಟಯರು ಎಂದು ನಾಮಕರಣ ಮಾಡುವ ನಿರೂಪಕ ಮುಂದೆ ಇಡೀ ಕಾದಂಬರಿಯಲ್ಲಿ ಅವರನ್ನು ಹಾಗೆಯೇ ಸಂಬೋಧಿಸುವುದು ಸಹಜ ವಿಡಂಬನೆಯಾಗಿದೆ.
ಕರಿಮಾಯಿ ಕಾದಂಬರಿಯ ಪ್ರತೀ ಪಾತ್ರವೂ ಒಂದೊಂದು ವೈಶಿಷ್ಟ್ಯದಿಂದ ನಮ್ಮ ಮನ ಸೆಳೆಯುತ್ತದೆ. ಬೆಳಗಾವಿಯಲ್ಲಿ ಬಿ.ಎ.ಎಲ್.ಎಲ್.ಬಿ. ಕಲಿತುಬಂದು ಶಿವಾಪುರ ಸೇರುವ ಗುಡಸ್ಯಾಾಗೋಳ ತನ್ನ ಅಡ್ಡಹೆಸರನ್ನು ಗುಡಸಿಕರ ಎಂದು ಬದಲಾಯಿಸಿಕೊಳ್ಳುವುದರಲ್ಲಿ ಕೂಡ ಹಳೆಯದನ್ನು ಧಿಕ್ಕರಿಸುವ ಧ್ವನಿ ಕಾಣಬಹುದು. ಭಯಂಕರ ಭಾಷಣ ಮಾಡಿ ಹಳ್ಳಿಿಯ ಜನರನ್ನು ಮುಂದೆ ತರುವ ಯೋಚನೆಯುಳ್ಳ ಗುಡಸಿಕರ ಬರುಬರುತ್ತ ತನ್ನ ಸ್ವಾಾರ್ಥಕ್ಕಾಾಗಿ ಏನು ಬೇಕಾದರೂ ಮಾಡಲು ತಯಾರಾಗುತ್ತಾಾನೆ. ಅದಕ್ಕೆೆ ಯಾವಾಗಲೂ ತನಗೆ ಸಾಥ್ ಕೊಡಲೆಂದು ತನ್ನ ಪಟಾಲಂಗೆ ವಿದೇಶೀ ಬ್ರ್ಯಾಾಂಡಿ, ಸಿಗರೇಟು ಮುಂತಾದವುಗಳನ್ನು ನೀಡಿ ಓಲೈಸುತ್ತಾಾನೆ. ಎಲ್ಲರೂ ಸೇರಿ ಗೌಡನ ಮಾತಿಗೆ ಕಿಮ್ಮತ್ತಿಿಲ್ಲದಂತೆ ನಡೆದುಕೊಂಡರೂ ಅವನ ಮೇಲೆ ಆರೋಪ ಹೊರಿಸಿ ಚಾರಿತ್ರ್ಯವಧೆ ಮಾಡಿದರೂ ಹಳ್ಳಿಿಯ ಜನ ಅವನ ಮಾತುಗಳನ್ನು ನಂಬದೇ ತಮ್ಮ ಗೌಡನನ್ನೇ ನಂಬುತ್ತಾಾರೆ ಎಂದು ನಿರೂಪಿಸುವಲ್ಲಿ ಲೇಖಕರು ಹಳ್ಳಿಿಯ ಜನಪದರು ಮುಗ್ಧರು ಹೌದಾದರೂ ಮೂರ್ಖರಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಧ್ವನಿಸುತ್ತಾಾರೆ.
ಹೊಸ ಜಮಾನಾದ ರೇಡವೇ (ರೇಡಿಯೋ), ಮೈಕ್, ಪೋಸ್ಟರಗಳನ್ನು ನೋಡಿ ಅವರು ಬೆರಗಾದರೂ, ಅದಕ್ಕೆೆ ಮರುಳಾಗಿ ತಮ್ಮ ನಿಯತ್ತನ್ನು ಬದಲಾಯಿಸುವುದಿಲ್ಲ. ಹಳ್ಳಿಿಯ ಪ್ರಸಂಗದ ಬದಲಾಗಿ ಹೊಸ ರೀತಿಯ ನಾಟಕ ಆಡಿಸುವ ಗುಡಸಿಕರನ ಪ್ರಯತ್ನವೂ ಯಶಸ್ಸು ಕಾಣುವುದಿಲ್ಲ. ಎಲ್ಲಕ್ಕಿಿಂತ ಹೆಚ್ಚಾಾಗಿ ಊರಲ್ಲಿ ನಿಂಗೂ ಎನ್ನುವ ಅಮಾಯಕ ಸಿಟ್ಟಿಿನಲ್ಲಿ ಮಾಡುವ ತನ್ನ ಹೆಂಡತಿ ಮತ್ತು ಅಪ್ಪನ ಜೋಡಿ ಕೊಲೆಗಳನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುವ ಗೌಡ ಮತ್ತು ದತ್ತಪ್ಪನ ಧಾಟಿ ಹೊಸ ಯುವಕ ಗುಡಸಿಕರನಿಗೆ ಒಂದಿನಿತೂ ಸರಿಯೆನಿಸುವುದಿಲ್ಲ. ಹಳ್ಳಿಿಯ ಹಳೆಯ ರೀತಿ-ರಿವಾಜುಗಳಿಗೂ, ಇಂಗ್ಲೀಷರಿಂದ ಕಲಿತ ಹೊಸ ಕಾಯಿದೆ-ಕಾನೂನುಗಳಿಗೂ ಇರುವ ವ್ಯತ್ಯಾಾಸವನ್ನು ನಾವು ಇಲ್ಲಿ ಕಾಣುತ್ತೇವಾದರೂ ಯಾವುದು ಸರಿ ಯಾವುದು ತಪ್ಪುು ಎನ್ನುವ ಗೊಂದಲದಲ್ಲಿ ಓದುಗರಾಗಿ ನಾವೂ ಬಿದ್ದುಬಿಡುತ್ತೇವೆ. ಹೊಸ ಪ್ರಜ್ಞೆಯಿಂದ ಊರಿಗೇನೂ ಒಳ್ಳೆೆಯದಾಗುವುದಿಲ್ಲ ಎನ್ನುವುದಂತೂ ಕೊನೆಗೆ ನಮಗೆ ಗೊತ್ತೇ ಆಗುತ್ತದೆ.
ಗೌಡನನ್ನು ತುಳಿಯಲು ನೋಡಿದ ಗುಡಸಿಕರ ತನ್ನ ಖೆಡ್ಡಾಾದಲ್ಲಿ ತಾನೇ ಬೀಳುತ್ತಾಾನೆ. ಹೊರಗಿನಿಂದ ಬಂದ ಬಸವರಾಜು ಮತ್ತು ಚಿಮಣಾ ಊರಿನ ವಾತಾವರಣವನ್ನು ಕೆಡೆಸುತ್ತಾಾರೆ. ಪೋಲಿಸರೆಂಬ ಇಂಗ್ಲೀಷರ ಏಜಂಟರು ಕ್ರೌೌರ್ಯಕ್ಕೆೆ ಪರ್ಯಾಾಯವಾಗಿದ್ದಾಾರೆ. ಒಟ್ಟಿಿನಲ್ಲಿ ಹೊಸತೇನೂ ಸುಖವಿಲ್ಲ ಎಂದು ನಿರೂಪಕ ಮನದಟ್ಟು ಮಾಡಿಕೊಡುತ್ತಾಾನೆ ಎನಿಸುತ್ತದೆ.
ಇನ್ನು ಹತ್ತು ವರ್ಷಗಳ ನಂತರ ಈ ಗುಡಸಿಕರ, ಗೌಡ, ದತ್ತಪ್ಪ, ಲಗಮವ್ವ ಮುಂತಾದವರೆಲ್ಲ ನೆನಪುಳಿಯುತ್ತಾಾರೋ ಇಲ್ಲವೋ ನನಗೆ ಗೊತ್ತಿಿಲ್ಲ, ಆದರೆ ಅವರಂಥ ಅನೇಕರು ಹಳೆ ಹೊಸದರ ರಾಯಭಾರಿಗಳಾಗಿ ಆಗಾಗ ಸಮಾಜದಲ್ಲಿ ಅವತರಿಸುತ್ತಿಿರುತ್ತಾಾರೆ. ಒಳ್ಳೆೆದನ್ನೇ ಮಾಡುತ್ತಿಿದ್ದೇವೆ ಎಂದು ನಂಬಿಕೊಂಡು ತಿದ್ದಲು ಬಂದ ಹೊಸಬರು ಸಮುದಾಯಕ್ಕೆೆ ಕೇಡನ್ನೇ ಮಾಡುತ್ತಿಿರುತ್ತಾಾರೆ, ಮತ್ತು ನಮ್ಮದಿನ್ನೇನೂ ನಡೆಯದು ಎಂದು ಕೈಚಲ್ಲಿ ಕುಳಿತ ಹಳಬರು ಮತ್ತೆೆ ಮತ್ತೆೆ ಪ್ರಸ್ತುತರಾಗುತ್ತಿಿರುತ್ತಾಾರೆ ಎಂದು ಸಧ್ಯ ನನಗಂತೂ ಅನಿಸುತ್ತಿಿದೆ. ಆ ದೃಷ್ಟಿಿಯಿಂದ ನನಗೆ ಕಾದಂಬರಿ ಮಹತ್ವದ್ದೆೆನಿಸಿತು.
ಅಪ್ಪಟ ಗ್ರಾಾಮೀಣ ಭಾಷೆ
ಬೆಳಗಾವಿಯವಳೇ ಆದ ನನಗೆ ಕಾದಂಬರಿಯಲ್ಲಿನ ಪಕ್ಕಾಾ ಬೆಳಗಾವಿಯ ಮರಾಠಿ ಮಿಶ್ರಿಿತ ಹಳ್ಳೀಭಾಷೆ, ಓದಿನ ಸಂಪೂರ್ಣ ಆನಂದವನ್ನು ನೀಡಿತು. ಚಿಮಣಾ ಇದು ಮರಾಠಿ ಶಬ್ದ. ಈ ಭಾಗದಲ್ಲಿ ಮೊದಲೆಂದೋ ವೇಶ್ಯೆೆಯರನ್ನು ಹಾಗೆ ಕರೆಯುತ್ತಿಿರಬಹುದು, ಪುಟ್ಟ ಮಕ್ಕಳನ್ನು ಚಿಮಣಿ ಎನ್ನುವುದನ್ನು ನಾವೂ ಚಿಕ್ಕವರಿದ್ದಾಾಗ ಕೇಳಿದ್ದೇವೆ. ಅದೇ ರೀತಿ ದಗದ (ಕೆಲಸ), ಖೂನಿ (ಕೊಲೆ), ಛೆಲೋ ಆತು (ಒಳ್ಳೆೆಯದಾಯ್ತು) ಹೀಗೆ ಟಿಪಿಕಲ್ ಬೆಳಗಾವಿ ಭಾಷೆಯಂತೂ ಬಹಳ ಖುಷಿ ಕೊಡುತ್ತದೆ.
ಕಥೆಯಲ್ಲಿ ನಾನಾ ನಮೂನೆಯ ಹತ್ತೆೆಂಟು ಉಪಕಥೆಗಳಂತೂ ಒಳ್ಳೆೆಯ ಮನರಂಜನೆಯನ್ನೊೊದಗಿಸುತ್ತವೆ. ಪ್ರಶ್ನೋೋತ್ತರ ಮಾಸ್ತರರ ಕ್ಯಾಾರೆಕ್ಟರಂತೂ ನಗಿಸಲಿಕ್ಕಾಾಗಿಯೇ ಇದ್ದಂತಿದೆ. ಸಾಲೆಯ ಮಾಸ್ತರರಿಗೆ ಆ ಹೆಸರು ಬರಲು ಕಾರಣವೆಂದರೆ ಅವರು ತಾವು ಕೇಳಿದ ಪ್ರಶ್ನೆೆಗೆ ಯಾರಿಂದಲೂ ಉತ್ತರ ನಿರೀಕ್ಷಿಸದೇ ತಾವೇ ಉತ್ತರ ಕೊಟ್ಟುಕೊಂಡು ಬಿಡುತ್ತಾಾರೆ. ಉದಾಹರಣೆಗೆ ಬೆಳಿಗ್ಗೆೆ ಬೆಳಿಗ್ಗೆೆ ಮಾಸ್ತರಿಗೆ ಯಾರಾದರೂ ಭೆಟ್ಟಿಿಯಾದರೆಂದರೆ ಮಾಸ್ತರರು ಅವರಿಗೆ, ನಮಸ್ಕಾಾರರಿ, ಹೆಂಗ ಆರಾಮ ಇದ್ದೀರಾ? ಎಂದು ಕೇಳಿ, ಆರಾಮ ಇರಬೇಕಲ್ಲ, ಮಕ ನೋಡಿದರ ತಿಳೀತೈತಿ ಎಂದು ತಾನೇ ಉತ್ತರ ಹೇಳಿಬಿಡುತ್ತಿಿದ್ದರು. ಬೆಳಿ ಚೆಲೋ ಅದಾವ್ರೆೆ? ಚೆಲೋ ಇರದೇನ್ರೀ? ಕಂಡಾಪಟಿ ಮಳಿ ಆಗೇತಿ ಹೀಗೆ ತಾನೇ ಕೇಳಿದ ಪ್ರಶ್ನೆೆಗಳಿಗೆ ತಾನೇ ಉತ್ತರಿಸೋದು. ಹಾಗಾಗಿ ಅವರಿಗೆ ಪ್ರಶ್ನೋೋತ್ತರ ಮಾಸ್ತರ ಎಂಬ ಹೆಸರು.
ಇನ್ನು ಗುಡಸಿಕರನ ಬಾಲಂಗೋಚಿಗಳಾದ ಕಳ್ಳ ಸಿದರಾಮ, ಅಂಡೂರಾಮಯ್ಯ, ಜಿಗಸೂ ಸಾತೀರ ಮತ್ತು ಆಯಿ ಮೆರೆಮಿಂಡ. ಒಟ್ಟು ಸೇರಿಸಿ ಚತುಷ್ಟಯರು ಎನ್ನುವ ದತ್ತಪ್ಪ ದಯಪಾಲಿಸಿದ್ದ ಬಿರುದನ್ನು ಹೊತ್ತ ಇವರದೂ ಒಂದೊಂದು ಕಥೆ. ಊರಿನ ನಪುಂಸಕ ನಿಂಗೂನದೂ ಒಂದು ಕಥೆ. ಹೀಗೆ ಉಪಕಥೆಗಳು ಹುಟ್ಟಿಿ ಹುಟ್ಟಿಿ ಮುಖ್ಯ ಪ್ರವಾಹ ಸೇರುವ ಕರಿಮಾಯಿ ಕಥೆ ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ. ನಡುನಡುವೆ ಕಿಸಕ್ಕನೆ ನಗುವ ಬಯಕೆ ತರಿಸುವ ನೂರಾರು ಪ್ರಸಂಗಗಳು ಇದ್ದು ಇಡೀ ಕಥೆಯು ಲವಲವಿಕೆಯಿಂದ ಕುಣಿದುಕುಪ್ಪಳಿಸುವ ಶೈಲಿಯಲ್ಲಿದೆ.
ನಾನು ತುಂಬ ನಕ್ಕ ಒಂದು ಪ್ರಸಂಗವೆಂದರೆ ಅದು ಶಿವಾಪುರದಲ್ಲಿ ಗುಡಸಿಕರನ ಮೊದಲ ಸಭೆ. ತನ್ನ ಶಿವಾಪುರವನ್ನೂ ಬೆಳಗಾವಿಯಂತೆ ಸ್ವಚ್ಛ ಮಾಡಬೇಕೆಂಬ ಮಹತ್ತರವಾದ ಆಸೆಯೊಂದಿಗೆ ಸರಪಂಚನಾದ ಗುಡಸಿಕರ ಭಾಷಣದಲ್ಲಿ ಬೆಳಗಾವಿ ನೋಡಿರಿ, ಅಲ್ಲಿನ ರಸ್ತೆೆಯ ಮೇಲೆ ತುಪ್ಪ ಬಿದ್ದರೂ ಬಳಿದುಕೊಂಡು ತಿನ್ನಬೇಕು ಅಷ್ಟು ಸ್ವಚ್ಛ ಎನ್ನುತ್ತಾಾನೆ. ಅದನ್ನು ಅಷ್ಟೇ ಸರಿಯಾಗಿ ಅನರ್ಥ ಅಥವಾ ಅಪಾರ್ಥ ಮಾಡಿಕೊಂಡ ಹಜಾಮರ ಲಗಮ ಎಂಬುವನು ಮಧ್ಯದಲ್ಲೇ ಎದ್ದುನಿಂತು, ‘ಅಲ್ಲಪಾ ಗುಡಸಿಕರ, ಬೆಳಗಾವಿ ಮಂದಿಗೇನು ಸಾಕಷ್ಟು ತುಪ್ಪ ಸಿಗತೈತಿ, ರಸ್ತಾಾದ ಮ್ಯಾಾಲೆ ಚೆಲ್ಲಿ ನೆಕ್ಕಿಿ ತಿಂತಿದ್ದಾಾರು, ನಮಗ ತಿನ್ನಾಾಕ ತುಪ್ಪಿಿಲ್ಲ ಇನ್ನ ರಸ್ತಾಾದ ಮ್ಯಾಾಲೆ ಯಾಕ ಚೆಲ್ಲೂಣು?’ ಎಂದು ಕೇಳುತ್ತಾಾನೆ. ಅಲ್ಲಲೇ ಬೆಳಗಾಂವ್ಯಾಾಗಿ ರಸ್ತಾಾ ಎಷ್ಟ ಹಸನ ಇರ್ತಾಾವಂತ ಹೇಳಾಕ ಹೇಳಿದೆ ಅಂತ ಗುಡಸಿಕರ ಹೇಳಿದರೂ ಲಗಮನ ಪ್ರಶ್ನಿಿ ಬಗೀಹರದಿಲ್ಲ.
ಹೌಂದಪಾ, ತುಪ್ಪಾಾ ಚೆಲ್ಲಿಚೆಲ್ಲಿ ನೆಕ್ಕತಾರು; ಅದಕ್ಕ ರಸ್ತಾಾ ಹಸನ ಇರ್ತಾಾವ. ನಾವ್ಯಾಾಕ ಹಂಗ ಮಾಡಬೇಕು? ಎಂದು ಇನ್ನೊೊಂದು ಮುಗ್ಧ ಪ್ರಶ್ನೆೆ ಇವನಿಗೇ ಒಗೆಯುತ್ತಾಾನೆ. ಮಿಸ್-ಇಂಟರ್‌ಪ್ರಿಿಟೇಶನ್ ಎಂದರೆ ಏನೆಂದು ತಿಳಿಸಲು ಇದನ್ನೇ ಒಳ್ಳೆೆಯ ಉದಾಹರಣೆ ಮಾಡಿಕೊಳ್ಳಬಹುದೆಂದು ನನಗೆ ತಕ್ಷಣ ಅನಿಸಿತು. ಇಲ್ಲಿ ತನ್ನ ಮುಗ್ಧತನದಿಂದ ಲಗಮ ಪ್ರಶ್ನೆೆ ಕೇಳಿದಂತೆ ಕೆಲವು ಜನ ಅತಿಬುದ್ಧಿಿವಂತಿಕೆಯಿಂದ ಬೇಕೆಂತಲೇ ಕೆಲವರ ಸ್ಟೇಟಮೆಂಟಗಳನ್ನು ಮಿಸ್-ಇಂಟರ್‌ಪ್ರಿಿಟ್ ಮಾಡುವುದು ನೆನಪಿಗೆ ಬಂದು ನಗೆ ಬಂತು.
ಈ ರೀತಿ ನಾನಾ ರೀತಿಯ ಓದುಗರನ್ನು ನಾನಾ ರೀತಿಯಾಗಿ ತಟ್ಟುವ ಗುಣಲಕ್ಷಣಗಳು ಕರಿಮಾಯಿಯಲ್ಲಿವೆ. ಕಥೆಯಲ್ಲಿ ಬರುವ ಪಾತ್ರಗಳ ಸಮಾನಾಂತರ ವ್ಯಕ್ತಿಿಗಳನ್ನೋೋ, ಅವುಗಳ ನೆರಳುಗಳನ್ನೋೋ ನಾವು ಯಾರಯಾರಲ್ಲಿಯೋ ಗುರುತಿಸಬಹುದು. ಆದರೂ ವಿಡಂಬನೆಯು ಅತ್ಯಂತ ಸಹಜವಾಗಿರುವುದರಿಂದ ಯಾರನ್ನೂ ಪ್ರಯತ್ನಪೂರ್ವಕವಾಗಿ ಗೇಲಿ ಮಾಡಿದಂತೆ ಅನಿಸುವುದೇ ಇಲ್ಲ. ಬದಲಾಗಿ ಮನುಷ್ಯ ಸ್ವಭಾವವೇ ಹೀಗಿರುತ್ತದೆ, ಅದನ್ನು ಸೂಕ್ಷ್ಮವಾಗಿ ಗುರುತಿಸಿದವರು ಮಾತ್ರ ಹೀಗೆ ಬರೆಯಲು ಸಾಧ್ಯ ಎನಿಸುತ್ತದೆ. ಒಟ್ಟಿಿನಲ್ಲಿ ಕಂಬಾರರ ‘ಕರಿಮಾಯಿ’ ಬಹಳ ದಿನಗಳ ನಂತರ ಒಂದೊಳ್ಳೆೆ ಓದನ್ನು ನೀಡಿದ್ದಕ್ಕಾಾಗಿ ಶಿವಾಪುರದ ಕರಿಮಾಯಿಗೆ ಕೈಮುಗಿಯುತ್ತ,
ಇಲ್ಲೀಗಿ ಹರ ಹರ, ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ್ಮ ಕತಿ ಸಂಪೂರ್ಣವಾಯ್ತು