Sunday, 22nd September 2024

ಹಬ್ಬ ಶಬ್ದ…ನಿಶ್ಶಬ್ದ

* ನಂದಿನಿ ವಿಶ್ವನಾಥ ಹೆದ್ದುರ್ಗ

ನೆರೆಮನೆಯಲ್ಲಿ ಹಸಿದ ಕೂಸಿರುವಾಗ ನಿನ್ನ ಸ್ವಂತ ಮಗುವಿಗೂ ತುತ್ತು ಕೊಡಬೇಡ ಎನ್ನುವುದು ಧರ್ಮಾತೀತವಾದ ಮಾತು…ಜಗದ ಧರ್ಮಗಳೆಲ್ಲಾ ಭಿನ್ನ ಭಿನ್ನ ಧ್ವನಿಯಲ್ಲಿ ಹೇಳಿದ್ದೂ ಇದನ್ನೇ. ಉತ್ತರದ ಊರುಗಳು ಉಕ್ಕುಕ್ಕಿಿ ಹರಿಯುತ್ತಿಿವೆ. ಸೂರು ಮಾರು ಕಳೆದುಕೊಂಡವರ ಬದುಕೆಲ್ಲಾ ನೀರೋನೀರು. ಇದು ನೆನಪಾದೊಡನೆ ಎದೆ ಕಳಕ್ಕೆೆಂದಿದ್ದು ತನಗೇ ಕೇಳುತ್ತದೆ. ಆದರೆ ಹಬ್ಬ ಬಿಟ್ಟರೆ ಅಪಶಕುನವಂತೆ. ‘ಹುಚ್ಚು ಮಳೆ ಹುಯ್ತು ಅಂತ ಹೋಟೆಲಿನ ಮಸಾಲೆದೋಸೆ ತಿನ್ನುವುದನ್ನು ಬಿಡ್ತಿಿವೇನು?’ ಎನ್ನುವ ಖ್ಯಾಾತ ಮಾತು ನೆನಪಾಯಿತಾದರೂ ಒಂದು ಪಾಯಸ, ನಾಲ್ಕು ದೀಪದಲ್ಲಿ ಹಬ್ಬ ಮುಗಿಸಿ, ಕಾಣದ ದೇವರಿಗೆ ಕಷ್ಟದಲ್ಲಿದ್ದವರ ಕೈ ಬಿಡಬೇಡ ಅಂತ ಕೇಳಿಕೊಂಡವರ ಸಾಲಿನಲ್ಲಿ ಈ ಬಾರಿ ತುಸು ಹೆಚ್ಚೇ ಮಂದಿ ಇರಬಹುದು ಅಂದಿತು ಮನಸ್ಸು.

ದೀಪಾವಳಿ ಮುಗಿದಿದೆ. ಐಕ್ಯತಾ ದಿನ, ರಾಜ್ಯೋೋತ್ಸವಗಳೂ ಒತ್ತೊೊತ್ತಾಾಗಿ ಹತ್ತಿಿರ ಬಂದು ಮುಗಿಸಿಕೊಂಡು ಹೋಗುತ್ತಿಿವೆ. ಬಲಿಯನ್ನು, ಕೃಷ್ಣನನ್ನೂ, ಲಕ್ಷ್ಮಿಿಯನ್ನೂ ನೆನೆದ ಮನಸ್ಸು ಸರದಾರ ಪಟೇಲರನ್ನೂ ನೆನೆದು, ಜಯಭಾರತಿ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎನ್ನುತ್ತಾಾ ಅಂದಂದಿನ ಕೆಲಸವನ್ನು ಅಂದಂದಿಗೆ ಅಚ್ಚುಕಟ್ಟು ಮುಗಿಸಿಬಿಡುತ್ತದೆ.

ಮೂರು ದೀಪವೋ ನೂರುದೀಪವೋ ಬೆಳಗಿಸಿ ಕ್ಲಿಿಕ್ಕಿಿಸಿ ಸ್ಟೇಟಸ್ ಅಪ್ಡೇಟ್ ಮಾಡಿ, ಮತಾಪು ಹೂಕುಂಡಗಳನ್ನು ಮಕ್ಕಳ ಕೈಯಲ್ಲಿ ಸುರ್ ಎನ್ನಿಿಸಿ ವಿಡಿಯೋ ಮಾಡಿ ‘ಸಂತೋಷವೆಂದರೆ …ಹ್ಯಾಾಪಿನೆಸ್ ಈಸ್ ..’ ಅಂತ ತಮ್ಮ ಖುಷಿಯ ವ್ಯಾಾಖ್ಯಾಾನವನ್ನು ಅಡಿ ಟಿಪ್ಪಣಿಯಿಟ್ಟು ತಮ್ಮ ಅಂಗೈಯೊಳಗಿನ ಆಯತಾಕಾರದ ಬ್ರಹ್ಮಾಾಂಡದ ಮೂಲಕ ಜಗದ ಮೂಲೆಮೂಲೆಗೂ ಕಳಿಸುವುದು ಹಬ್ಬದ ಆಚರಣೆಗಳಲ್ಲೇ ಒಂದೇನೋ ಎನಿಸುವಷ್ಟು ಸಹಜವಾಗಿದೆ, ಸಾಮಾಜಿಕ ವಾಗಿದೆ.
ಇದು ಕಾಲ ಧರ್ಮ. ಬದಲಾವಣೆ ನಮ್ಮದೇ ನಿಯಮ.

ಬುವಿಯ ಆ ಬದಿ ತಲುಪಿದ ನಮ್ಮ ಹಬ್ಬವನ್ನು ಯಾರೆಲ್ಲಾ ನೋಡಿದರೆಂದು ಹತ್ತು ನಿಮಿಷ ಬಿಟ್ಟು ಕಣ್ಣಾಾಡಿಸಿ ಒಂದು ತೃಪ್ತಿಿಯ ನಗೆ ನಕ್ಕು… ಯಾರದೋ ಲೈಕಿಗೆ , ಕಮೆಂಟಿಗೆ ಬದುಕಿನ ಕ್ಷಣ ಕ್ಷಣವನ್ನೂ ಮುಡುಪಿಟ್ಟು ಬಾಳುವ ನಮ್ಮ ಭೂತ ವರ್ತಮಾನದ ಭವಿಷ್ಯ ಸೌಖ್ಯವಾಗಿರುವ ಮಟ್ಟವೆಷ್ಟು ಎನ್ನುವ ಯೋಚನೆಯೊಂದು ಸುಳಿದು ಹೋಗುವಷ್ಟರಲ್ಲೇ, ಠಪ್ಪಂತ ಸ್ಕ್ರೀನಿನಲ್ಲಿ ಮೂಡಿದ ಇನ್ನೊೊಬ್ಬರ ಸ್ಟೇಟಸ್ಸು ನೋಡಿ ಲೈಕಿಸುವಲ್ಲಿ ಎದೆಯ ಯೋಚನೆ ತನ್ನಿಿಂತಾನೇ ಡಿಲೀಟೂ ಆಗಿರ್ತದೆ.

ಮೊಬೈಲಿನೊಳಗೆ ಹಚ್ಚಿಿಟ್ಟ ಹಣತೆಯೇ
ಎದೆಯೊಳಗಿನ ದೀಪಾವಳಿಯ ಸಂಕೇತವೇ…?
ಹಬ್ಬದ ಆಚರಣೆ ಇದ್ದಷ್ಟೂ ದಿನವೂ ಈ ಪ್ರಶ್ನೆೆ ಯಾಕೋ ಇನ್ನಿಿಲ್ಲದಂತೆ ಕಾಡುತ್ತಲೇ ಇರುತ್ತದೆ.
***
ಹಬ್ಬ ಮುಗಿದ ಮೇಲೆ ಫೋನು ನೋಡುತ್ತ ಕುಳಿತವಳಿಗೆ ಗೆಳತಿಯ ಸ್ಟೇಟಸ್ಸಿಿನಲ್ಲಿದ್ದ ಹಬ್ಬದ ಚಂದದ ದೀಪಾಲಂಕಾರ, ಆಚರಣೆ, ಅಡುಗೆ ನೋಡಿ ನಾಲ್ಕು ಪ್ರಶಂಸೆ ಮಾತಾಡುವ ಅಂತ ಕರೆ ಮಾಡಿದೆ. ಎದೆಯ ತುಂಬಾ ಸತ್ತ ಸರೋವರವನ್ನೇ ಇಟ್ಟುಕೊಂಡವಳ ಧ್ವನಿಯಲ್ಲಿ ನನ್ನ ಹೊಗಳಿಕೆಗೆ ‘ಥ್ಯಾಾಂಕ್ಯು’ ಎಂದಳು.

‘ಯಾಕೋ…’ ಎಂದೆ.

ಹಬ್ಬದ ದಿನ ಎನ್ನುವುದನ್ನೂ ನೋಡದೆ ಬಿಕ್ಕಿಿಬಿಕ್ಕಿಿ ಅತ್ತಳು.
ಯಾಕೋ ಅವಳಿಗೆ ಯಾವುದನ್ನೂ ಹೇಳಲು ಮನಸ್ಸಿಿದ್ದವಳಂತೆ ಕಾಣಲಿಲ್ಲ. ಮತ್ತೇನೂ ತೋಚದೆ ಅವಳು ಬಿಕ್ಕಿಿದ್ದನ್ನೇ ಕಿವಿ ತುಂಬಿಸಿ ಕೊಂಡು ಕೊನೆಯಲ್ಲಿ ಹೇಳಿದೆ. ‘ಎದೆ ಹಗುರಿದ್ದಾಗ ಮಾತಾಡದಿದ್ದರೂ ಸರಿಯೇ. ನೀ ದುಃಖ ಕಳೆದುಕೊಳ್ಳಬೇಕೆಂದಾಗ ಎರಡು ಕಿವಿ ಇಲ್ಲಿವೆ ಎನ್ನುವುದನ್ನು ಮಾತ್ರ ಮರೆಯಬೇಡ . ಗುಟ್ಟುಗಳನ್ನು ನನ್ನ ಕ್ರೋೋಮೋಸೋಮಿನಡಿ ಬಚ್ಚಿಿಟ್ಟುಕೊಳ್ಳುತ್ತೇನೆ…’ ಎಂದೆ.
ಸಣ್ಣಗೆ ನಕ್ಕು ಥ್ಯಾಾಂಕ್ಯು ಎಂದು ಫೋನಿಟ್ಟಳು. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕನಿಸ್ತು.
ಆದರೆ ನನ್ನ ಅಸಡಾಬಸಡಾ ಅಡುಗೆಮನೆ ಹೆಚ್ಚು ಯೋಚಿಸಲು ಪುರುಸೊತ್ತಿಿಲ್ಲದಂತೆ ನನ್ನ ಕರೆಯುತಿತ್ತು.

ಹಬ್ಬವೆಂದರೆ ಸಂಭ್ರಮ, ಸಂಪ್ರದಾಯ, ಆಚರಣೆ, ಸ್ವಚ್ಚತೆ, ಸೊಗಸು, ಅಲಂಕಾರ, ಅಡುಗೆ, ಹೊಸ ಬಟ್ಟೆೆ, ಹೊಸ ಭೇಟಿ, ಶುಭಾಶಯ… ಹೀಗೆ ಹೇಳುತ್ತಾಾ ಹೋದರೆ ಸುಂದರ ಪದಗಳು ಒಂದಕ್ಕೊೊಂದು ಸಲುಗೆ ಬೆಳೆದವರಂತೆ ಹುಟ್ಟಿಿಕ್ಕೊೊಳ್ಳುತ್ತವೆ.

ಆದರೆ…ಆಗಲೇ..
ಎದೆಯೊಳಗಿನ ಚಿಟ್ಟೆೆ ರೆಕ್ಕೆೆ ಎಳೆದವರಂತೆ ಬಡಿದುಕೊಳ್ಳಲಾರಂಭಿಸುತ್ತದೆ.
ನೆರೆಮನೆಯಲ್ಲಿ ಹಸಿದ ಕೂಸಿರುವಾಗ ನಿನ್ನ ಸ್ವಂತ ಮಗುವಿಗೂ ತುತ್ತು ಕೊಡಬೇಡ ಎನ್ನುವುದು ಧರ್ಮಾತೀತವಾದ ಮಾತು…ಜಗದ ಧರ್ಮಗಳೆಲ್ಲಾ ಭಿನ್ನ ಭಿನ್ನ ಧ್ವನಿಯಲ್ಲಿ ಹೇಳಿದ್ದೂ ಇದನ್ನೇ.
ಉತ್ತರದ ಊರುಗಳು ಉಕ್ಕುಕ್ಕಿಿ ಹರಿಯುತ್ತಿಿವೆ. ಸೂರು ಮಾರು ಕಳೆದುಕೊಂಡವರ ಬದುಕೆಲ್ಲಾ ನೀರೋನೀರು. ಇದು ನೆನಪಾದೊಡನೆ ಎದೆ ಕಳಕ್ಕೆೆಂದಿದ್ದು ತನಗೇ ಕೇಳುತ್ತದೆ. ಆದರೆ ಹಬ್ಬ ಬಿಟ್ಟರೆ ಅಪಶಕುನವಂತೆ. ‘ಹುಚ್ಚು ಮಳೆ ಹುಯ್ತು ಅಂತ ಹೋಟೆಲಿನ ಮಸಾಲೆದೋಸೆ ತಿನ್ನುವುದನ್ನು ಬಿಡ್ತಿಿವೇನು?’ ಎನ್ನುವ ಖ್ಯಾಾತ ಮಾತು ನೆನಪಾಯಿತಾದರೂ ಒಂದು ಪಾಯಸ, ನಾಲ್ಕು ದೀಪದಲ್ಲಿ ಹಬ್ಬ ಮುಗಿಸಿ, ಕಾಣದ ದೇವರಿಗೆ ಕಷ್ಟದಲ್ಲಿದ್ದವರ ಕೈ ಬಿಡಬೇಡ ಅಂತ ಕೇಳಿಕೊಂಡವರ ಸಾಲಿನಲ್ಲಿ ಈ ಬಾರಿ ತುಸು ಹೆಚ್ಚೇ ಮಂದಿ ಇರಬಹುದು ಅಂದಿತು ಮನಸ್ಸು.

ನೂರು ಮನೆಯ ನನ್ನ ಪುಟ್ಟ ಹಳ್ಳಿಿ ದಾಟಿದರೆ ಒಂದು ಸಣ್ಣ ಪಟ್ಟಣ. ದೀಪಾವಳಿ ಈ ಬಾರಿ ಇನ್ನೊೊಂದು ಸಂತೋಷ ಕೊಟ್ಟಿಿದೆ. ತರಕಾರಿ ದಿನಸಿ ಅಂಗಡಿಯಷ್ಟೇ ಅಥವಾ ಅದಕ್ಕೂ ನಾಲ್ಕು ಹೆಚ್ಚೇ ಪಟಾಕಿ ಅಂಗಡಿ ವರ್ಷ ವರ್ಷವೂ ಬರುತ್ತಿಿದ್ದದ್ದು ಇಲ್ಲಿ ವಾಡಿಕೆ. ಈ ಬಾರಿ ಬೇಕೆಂದರೂ ಬೆಳ್ಳುಳ್ಳಿಿ ಪಟಾಕಿ ಕೊಳ್ಳುವುದಕ್ಕೂ ಅಂಗಡಿ ಇಲ್ಲ!

ಎರಡು ಹೂಕುಂಡ ಖರಿದೀಸಿ ಮನೆ ಮುಂದೆ ಉರಿಸೋಣಾ ಅಂತ ಕೇಳಿದ್ರೆೆ ಪಟಾಕಿ ತರಿಸಿದ್ದೇ ‘ಕಮ್ಮಿಿ ಕಣಕ್ಕಾಾ, ಖಾಲಿ ಆಗೋಯ್ತು’ ಅಂದ ಅಂಗಡಿ ಹುಡುಗ!

ಬೌದ್ಧಿಿಕವಾಗಿ ಇನ್ನೂ ಮಧ್ಯದಲ್ಲೇ ಇರುವ ಮಧ್ಯಮ ವರ್ಗದ ಮಾಮೂಲಿ ಜನರಿರುವ ಊರಿನಲ್ಲೂ ಯಾವುದೋ ಹೊಸಬೆಳಕು ಬೆಳಗಲಾರಂಭಿಸಿದೆ. ಸಾಕಿನ್ನು ಪಟಾಕಿ…ನೆಲದ ನವುರು ಉಳಿಸುವೆಡೆಗೆ ನಮ್ಮದು ಮೊದಲ ಹೆಜ್ಜೆೆ ಅಂತ ಅವರವರೇ ತೀರ್ಮಾನಿಸಿಬಿಟ್ಟಿಿದ್ದಾರೆ. ಮೂರು ದಿನಕ್ಕೆೆ ಸಾವಿರ ಸಾವಿರ ಲಾಭ ಗಳಿಸಬಹುದಾದ ವರ್ತಕರಿಗೂ ಗುಲಾಬಿ ನೋಟಿಗಿಂತ ಮಣ್ಣಿಿನ ಬಣ್ಣವೇ ಹೆಚ್ಚು ಅನಿಸಿದ್ದು ಎಂಥ ಅಚ್ಚರಿ!

‘ಸಿಕ್ಕಿಿದ್ರೆೆ ತಕ್ಕೊೊಬೋದಿತ್ತು ಮಕ್ಕಳಿಗೆ. ಸಿಕ್ಕದೆ ಇದ್ದಿದ್ದೂ ಒಂಥರಾ ಒಳ್ಳೇದೇ ಆಯ್ತು…ಜೇಬಿನ ಆರೋಗ್ಯಕ್ಕೂ , ಜನರ ಅರೋಗ್ಯಕ್ಕೂ’ ಅಂತ ಮಾಮೂಲು ಮನುಷ್ಯನೊಬ್ಬ ಹೇಳಿದರೆ ನಮ್ಮೂರಿಗೆ ನಿಜವಾದ ದೀಪಾವಳಿ ಬಂದ ಹಾಗಲ್ಲವೇ?
ಇಲ್ಲೇ ಪಕ್ಕದ ಪುಟ್ಟ ನಗರದಂತಹ ಊರಿನಲ್ಲಿ ಹಬ್ಬ ಆದ ಮಾರನೇ ದಿನ ಊರ ಯುವಕರೆಲ್ಲಾ ಸೇರಿ ಪಟಾಕಿಯಿಂದಾದ ಕಸವನ್ನೂ, ಹಬ್ಬದ ಗೊಬ್ಬರವಾದ ಬಳಸಿ ಬಿಸಾಡಿದ ಹೂವು ತರಕಾರಿ ಹಣ್ಣುಗಳ ಕೊಳಕನ್ನೂ,ಬಾಳೆ ಕಂದು ಮಾವಿನ ತೋರಣ ಇತರೆ ಕಸವನ್ನೂ ಸ್ವಚ್ಛಗೊಳಿಸಿದರಂತೆ.

ಹಬ್ಬಕ್ಕೆೆ ಸ್ವಚ್ಛವಾಗುವ ಮನೆ, ಹಬ್ಬದ ನಂತರ ಸ್ವಚ್ಛವಾಗುವ ಊರು. ಈ ಸಮಯದಲ್ಲಿ ಒಗ್ಗೂಡುವ ಮನಸ್ಸುಗಳು. ನಿಜಕ್ಕೂ ಇದು ನಾವ್ ನಾವೇ ಮಾಡಿಕೊಂಡ ಸ್ವಚ್ಛ ಭಾರತ! ಊರ ದೀಪಾವಳಿ!

ಕಣ್ಣುದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡರಾಗೇ ಹುಟ್ತಾಾರಂತೆ ಅನ್ನುವ ಮನಸ್ಥಿಿತಿಯವರೇ ಇದ್ದ ನನ್ನ ಸುತ್ತಲಿನ ಪುಟ್ಟ ಜಗತ್ತೂ ಬದಲಾಗಿದೆ. ಹಬ್ಬದ ಹಿಂದಿನ ವಾರ ಅಚಾನಕ್ಕು ತೀರಿಕೊಂಡ ಒಬ್ಬ ಆರೋಗ್ಯವಂತರ ಕಣ್ಣು, ಕಿಡ್ನಿಿ ದಾನ ಮಾಡಿದ್ದೂ ಮಾತ್ರವಲ್ಲದೇ ಅಂಗಾಂಗ ದಾನ ಹೇಗೆ ಮತ್ತು ಏನು ಎನ್ನುವ ಕುರಿತು ಪುಸ್ತಕ ಹಂಚಿದ್ದಾರೆ. ನನ್ನ ಜಗುಲಿಯ ಟೀಪಾಯಿಯ ಮೇಲೂ ಈ ಕಿರುಪುಸ್ತಕ ಬಂದು ಕುಳಿತಿದೆ. ಈ ಮೊದಲೇ ದೇಹದಾನ ಮಾಡಬೇಕೆಂದು ಕುಟುಂಬಕ್ಕೆೆ ಹೇಳಿದ್ದರೂ ಪುಸ್ತಕ ಕೈಗೆತ್ತಿಿಕೊಂಡಿರುವೆ. ಇದರ ವ್ಯವಸ್ಥಿಿತ ರೂಪುರೇಷೆಯ ಕುರಿತು ಸಾಮಾನ್ಯರಿಗೆ ತಿಳಿಯುವಂತೆ ಬರೆಯಬೇಕಿದೆ.
ಜಗತ್ತನ್ನು ಪ್ರೀತಿಸತೊಡಗಿದರೆ ತನ್ನಿಿಂತಾನೆ ಎದೆಯ ಹಣತೆ ಬೆಳಗಿಕೊಳ್ಳುವುದರ ಕುರಿತು ಅನುಭವಿಸಿಯೇ ತಿಳಿಯಬೇಕು!

ಇನ್ನು ಕನ್ನಡಮ್ಮನ ಹಬ್ಬದ ಎರಡು ಸಂಗತಿಗಳನ್ನು ಹೇಳಲೇಬೇಕು. ಮೊನ್ನೆೆ ಮಹಾನಗರಕ್ಕೆೆ ಹೋಗಿದ್ದಾಗ ಹೀಗೇ ಹಳೆ ಗೆಳತಿಯೊಬ್ಬಳನ್ನು ಭೇಟಿ ಮಾಡಿದೆ. ಹತ್ತನೇ ತರಗತಿಯಲ್ಲಿ ಮೂರು ಬಾರಿ ನಪಾಸಾಗಿ, ಕಣ್ಣು – ಮೂಗು ಚಂದ ಇದ್ದ ಕಾರಣಕ್ಕೋೋ , ಅವರಪ್ಪನ ಬಳಿ ಇದ್ದ ದೊಡ್ಡ ಮೊತ್ತಕ್ಕೋೋ ನಗರದ ದೊಡ್ಡ ದುಡಿಮೆಯ ಎಂಜಿನಿಯರನ ಹೆಂಡತಿಯಾಗುವ ಯೋಗ ಅವಳದ್ದು.

‘ಏನೋ ತಕ್ಕಾ…ಕಾಣೇ ಕನೆ ..’
ಅಂತ ಅಪ್ಪಟ ಗ್ರಾಾಮ್ಯ ಮಾತಾಡ್ತಿಿದ್ದವಳು ಹೆಣ್ಣು ನಮ್ಮಲಕ್ಷ್ಮಿಿ ಪೂಜೆಗೆ
‘ನಾಳೆ ಧನ್ ತೆರಾಸ ಅಲ್ವಾಾ ಅದಕ್ಕೆೆ ಅಂಗಡಿ ಕ್ಲೀನ್ ನಡಿತಿದೆ’ ಅಂದಳು.
ಅವಳ ಬಾಯಲ್ಲಿ ಭೀಮನ ಅಮವಾಸ್ಯೆೆ, ಕರ್ವಾಚೌತ್ ಆಗಿ ಅರಿಷಿಣ ಪುಡಿ ಹಲ್ದಿಿ ಆಗಿ ‘ಅಬ್ಬಾಾ’ ಅನ್ನೋೋ ಉದ್ಗಾಾರ ವಾವ್ ಆಗಿದ್ದು ಕಿವಿಗೆ ಹಿತವೆನಿಸ್ತೋೋ ಇಲ್ಲ ಕನ್ನಡ ಗೊತ್ತಿಿದ್ದ ತರಕಾರಿ ಅಂಗಡಿಯವನಲ್ಲೂ ‘ಮತಲಬ್…ಮತಲಬ್’ ಅಂತ ಹರಿಯಾಣದಲ್ಲೇ ಹುಟ್ಟಿಿದವಳ ಥರ ಆಡ್ತಿಿದ್ದಿದ್ದನ್ನ ಕೇಳಿ ಹುಟ್ಟಿಿದ ದಿವಸ ತೋರಿಸಬೇಕೋ ಅನಿಸ್ತೋೋ ಗೊಂದಲ ಆಯ್ತು.
ಈ ಮಧ್ಯೆೆ ಅಮೆರಿಕಾ ಜಾತಸ್ಯನಾದ ನನ್ನ ಗೆಳೆಯನ ಮಗ ಕನ್ನಡ ರಾಜ್ಯೋೋತ್ಸವದ ದಿವಸ ‘ಕನ್ನಡ ಹಬ್ಬದ ಶುಭಾಶಯಗಳು ಆಂಟಿ…ಇನ್ ಹೆಚ್ ಹೆಚ್ ಬರೀರಿ’ ಅಂತ ಮುದ್ದಾದ ಕನ್ನಡದಲ್ಲಿ ಧ್ವನಿ ಸಂದೇಶ ಕಳಿಸಿದ.ವಿನಾಕಾರಣ ಖುಷಿ ಅನಿಸಿತು. ಸಂಭ್ರಮಕ್ಕೆೆ ಮೂಲಗಳು ಎಲ್ಲೆಲ್ಲೋ ಇರುತ್ತವೆ..ಹುಡುಕಬೇಕಷ್ಟೆೆ.ಬರುವ ಇನ್ನಷ್ಟು ಹಬ್ಬಗಳಿಗೆ ತಯಾರಾಗಬೇಕಿದೆ.ಎದೆ ಬೆಳಕಾಗುವಂತೆ ನಮ್ಮ ನಡೆಯನ್ನೂ ಬದಲಾಯಿಸಿಕೊಳ್ಳಬೇಕಿದೆ.ಇದು ಬದುಕಿನ ಹಾದಿ.ಬೆಳಕಿನ ಹಾದಿಯಾಗಿಸುವ ಕಲೆ ನಮ್ಮ ಕೈಯಲ್ಲೇ ಇದೆ.