Thursday, 12th December 2024

ಒಂದು ದ್ವೀಪ ಎರಡು ದೇಶ

ಬದ್ಧವೈರಿಗಳು ಈ ನೆಲದ ಮಕ್ಕಳು
* ವಸಂತ ಗ ಭಟ್ 7829492454

1919ರಲ್ಲಿ ಅಮೆರಿಕಾ ಸೇನಾಡಿಳಿತವನ್ನು ವಿರೋಧಿಸಿದ ಹೈಟಿಯ ಚಾರ್ಲೆಮಾಗ್ನೆೆ ಪೆರಲ್ಟೆೆ ಯನ್ನು ಅಮೆರಿಕನ್ನರು ಗಲ್ಲಿಗೇರಿಸಿದರು
ಹೈಟಿಯಲ್ಲಿ ಕಪ್ಪುು ಜನರ ಸೇನೆ ಕಟ್ಟಿಿ, ಸ್ವಾಾತಂತ್ರ್ಯ ಗಳಿಸಲು ನಾಂದಿ ಹಾಡಿದ ಟುಸೆ ಲು ವೇರಿಟೋ
ಹೈಟಿಗೆ ದೊರೆತ ಸಮಯದಲ್ಲಿ ನಿರ್ಮಾಣಗೊಂಡ ಬಲಾಢ್ಯ ಕೋಟೆ (1805-22)
ಕ್ಯೂಬಾದಲ್ಲಿ ಇರುವ ಟುಸೆ ಲು ವೇರಿಟೋ ಸ್ಮಾಾರಕ
2010ರ ಭೂಕಂಪದಲ್ಲಿ ಕುಸಿದು ಬಿದ್ದ ಹೈಟಿ ಅರಮನೆ
ಯುರೋಪಿಯನ್ ಸೇನೆಯನ್ನು ಚಚ್ಚುತ್ತಿಿರುವ ಹೈಟಿಯ ಜನರು

ಯುರೋಪಿಯನ್ ವಸಾಹತು ದೇಶಗಳು ಆಫ್ರಿಿಕಾ ಖಂಡದಿಂದ ಕರಿಯ ಜನಾಂಗವನ್ನು ಪಶುಗಳ ರೀತಿ ಜಗತ್ತಿಿನ ವಿವಿಧ ಮೂಲೆಗಳಿಗೆ ಸಾಗಿಸಿ, ಕಬ್ಬು ಮತ್ತು ಕಾಫಿ ಮೊದಲಾದ ಪ್ಲಾಾಂಟೇಶನ್‌ಗಳಲ್ಲಿ ದುಡಿಸಿಕೊಂಡಿದ್ದು ಇತಿಹಾಸದ ಒಂದು ಕಪ್ಪುು ಅಧ್ಯಾಾಯ. ಈ ಅಮಾನವೀಯ ಪದ್ಧತಿಯಲ್ಲಿ ನರಳಬೇಕಾದದ್ದು ದಾಖಲಾಗಿದೆ. ಕೆರಿಬಿಯನ್ ದ್ವೀಪವೊಂದರಲ್ಲಿ ಈ ರೀತಿ ಲಕ್ಷಾಾಂತರ ಸಂಖ್ಯೆೆಯಲ್ಲಿ ಸಾಗಿಸಲ್ಪಟ್ಟ ಕಪ್ಪುು ಜನರು, ತಮ್ಮನ್ನು ಮೃಗಗಳಂತೆ ಕಾಣುತ್ತಿಿದ್ದ ಯುರೋಪಿಯನ್ ಜನರ ವಿರುದ್ಧ ತಿರುಗಿ ಬಿದ್ದು, ಸ್ವಾಾತಂತ್ರ್ಯ ಗಳಿಸಿದರು. ಗುಲಾಮರೇ ಹೋರಾಡಿ, ಗುಲಾಮಗಿರಿಯಿಂದ ಹೊರಬಂದ ಜಗತ್ತಿಿನ ಮೊತ್ತ ಮೊದಲ ದೇಶ ಹೈಟಿ. ಕಳೆದ ಶತಮಾನದಲ್ಲಿ ಸಕ್ಕರೆ ಉತ್ಪಾಾದನೆಯಲ್ಲಿ ಪ್ರಮುಖ ಸ್ಥಾಾನದಲ್ಲಿದ್ದ ಹೈಟಿಯು, ಆರ್ಥಿಕ ಶಿಸ್ತನ್ನು ಪಾಲಿಸಲಾಗದೇ, ಬಲಾಢ್ಯ ದೇಶಗಳ ಕೈಗೊಂಬೆಯಾಗಿ, ಕ್ರಮೇಣ ಬಡತನದ ಪಾತಾಳಕ್ಕೆೆ ಕುಸಿದದ್ದು ಒಂದು ದುರಂತ. ಶಕ್ತಿಿಯು ಹೈಟಿಯನ್ನು ತನ್ನ ನೆರೆಯ ದೇಶದ ವಿರುದ್ಧ ಎತ್ತಿಿ ಕಟ್ಟಿಿದ್ದರಿಂದಾಗಿ, ಮತ್ತಷ್ಟು ಬಡತನಕ್ಕೆೆ ಕುಸಿದು, ಇಂದು ದಯನೀಯ ಸ್ಥಿಿತಿಯಲ್ಲಿದೆ. ಇಂದು ಆ ನೆರೆಯ ದೇಶವು ಜಗತ್ತಿಿನ ಶ್ರೀಮಂತ ದೇಶಗಳಲ್ಲಿ ಒಂದು. ಒಂದೇ ದ್ವೀಪದ ಎರಡು ರಾಷ್ಟ್ರಗಳ ವೈರುಧ್ಯದ ಚಿತ್ರಣ ಈ ಬರಹದಲ್ಲಿದೆ. ಓದಿ.

ಜಗತ್ತಿಿನ ನಾಗರಿಕತೆಯ ಪರ್ವವನ್ನು ಗಮನಿಸಿದರೆ, ಏಷಿಯ ಮತ್ತು ಆಫ್ರಿಿಕಾ ಖಂಡದ ಭೂಭಾಗಗಳಲ್ಲಿ ಬಹಳ ಹಿಂದೆಯೆ ನಾಗರಿಕತೆಯ ಉಗಮವಾಗಿದ್ದು ಗಮನಕ್ಕೆೆ ಬರುತ್ತದೆ. ನಂತರ ಅದು ಹಂತವಾಗಿ ಇತರ ಖಂಡಗಳಿಗೆ ವ್ಯಾಾಪಿಸಿತು. ಭರತಖಂಡದಲ್ಲೂ ಶ್ರೀಮಂತ ನಾಗರಿಕತೆ ಬಹು ಹಿಂದಿನಿಂದಲೇ ಸ್ಥಾಾಪಿತಗೊಂಡಿತ್ತು. ಭಾರತದ ಸಂಪತ್ತನ್ನು ದೋಚಲು ನಮ್ಮನ್ನೆೆ ಉಪಯೋಗಿಸಲು ಆಂಗ್ಲರಿಗಿದ್ದ ಒಂದು ಮುಖ್ಯ ಕಾರಣ ಇಲ್ಲಿದ್ದ ಜನಸಂಖ್ಯೆೆ ಮತ್ತು ನಾಗರಿಕತೆ. ಆದರೆ ಭೂಮಿಯ ಪಶ್ಚಿಿಮ ಭೂಭಾಗದಲ್ಲಿ ನಾಗರಿಕತೆ ಮತ್ತು ಜನ ಸಂಖ್ಯೆೆಯ ಕೊರೆತೆಯಿಂದಾಗಿ, ಯುರೋಪಿಯನ್ನರು ಆಫ್ರಿಿಕಾ ಮತ್ತು ಏಷಿಯಾದ ದೇಶಗಳಿಂದ ಕೂಲಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಜೀತಕ್ಕೆೆ ಇಟ್ಟುಕೊಳ್ಳುತ್ತಿಿದ್ದರು. ಹೀಗೆ ಫ್ರೆೆಂಚರು ಮತ್ತು ಸ್ಪಾಾನಿಷ್ ದೇಶದವರ ನಡುವೆ ಹೋದ ಕೆರಿಬಿಯನ್ ದ್ವೀಪ ಸಮೂಹದ ಒಂದು ಭೂಭಾಗ ಸಾಂತಾ ಡೊಮಿಂಗೋ.

ಈ ದ್ವೀಪವು ಈಗ ಎರಡು ರಾಷ್ಟ್ರಗಳಾಗಿ ಹಂಚಿ ಹೋಗಿದ್ದು, ಒಂದು ಜಗತ್ತಿಿನ ಅತಿ ಬಡವ ರಾಷ್ಟ್ರಗಳಲ್ಲಿ ಒಂದಾದ ಹೈಟಿಯಾದರೆ ಇನ್ನೊೊಂದು ಸಂಪತ್ಭರಿತ ರಾಷ್ಟ್ರ ಡೊಮಿನಿಕನ್ ರಿಪಬ್ಲಿಿಕ್. ಹೈಟಿಯ ಬಡತನ ಯಾವ ಮಟ್ಟಿಿಗಿದೆ ಎಂದರೆ ಅಲ್ಲಿಯ ಹಲವು ಊರುಗಳಲ್ಲಿ ಮಣ್ಣಿಿನಿಂದ ಮಾಡಿದ ಬೆರಣಿಯನ್ನು ತಿನ್ನುವ ಜನರಿದ್ದಾರೆ. ಎಲ್ಲೆಡೆಯು ಬರಡು ಭೂಮಿ, ರಾಜಧಾನಿಯಲ್ಲಿಯೆ ರಾಚುವಂತಹ ಬಡತನ, ಜಡ್ಡು ಹಿಡಿದ ಆಡಳಿತ. ಸಾಲದೆಂಬಂತೆ 2010 ರಲ್ಲಿ ನಡೆದ ಪ್ರಬಲ ಭೂಕಂಪದಲ್ಲಿ ಸುಮಾರು 2,30,000 ಜನರ ದುರ್ಮರಣ ಮತ್ತು ಆಸ್ತಿಿ ಹಾನಿ. ಆಗ ಹಾನಿಗೊಳಗಾದ ಕಟ್ಟಡಗಳನ್ನು ಸರಿ ಮಾಡಲು ಹೈಟಿಗೆ ಇನ್ನೂ ಸಂಪೂರ್ಣ ಸಾಧ್ಯವಾಗಿಲ್ಲ. ಇಂದು ಯಾವುದೇ ಸದೃಢ ಆದಾಯವಿಲ್ಲದ ಈ ದೇಶ ಒಂದು ಕಾಲದಲ್ಲಿ ಜಗತ್ತಿಿನ ಅತಿ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದಾಗಿತ್ತು ಎಂದರೆ ನೀವು ನಂಬಲೆ ಬೇಕು. 1700-1800 ರ ಸಮಯದಲ್ಲಿ ಜಗತ್ತಿಿನ ಅತಿ ಹೆಚ್ಚು ಸಕ್ಕರೆ ಉತ್ಪಾಾದಕ ದೇಶವಾಗಿದ್ದ ಪಶ್ಚಿಿಮ ಭೂಭಾಗದ ಮುತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಪ್ಪುು ಜನರ ಅದರಲ್ಲೂ ಜೀತಕ್ಕೆೆಂದು ಬಂದಿದ್ದ ಕಪ್ಪುು ಜನರು ಹೋರಾಡಿ ಸ್ವತಂತ್ರ ಪಡೆದ ಜಗತ್ತಿಿನ ಮೊದಲ ದೇಶ ಹೈಟಿ. 1804 ಜನವರಿ 1 ರಂದು ಸ್ವತಂತ್ರ ಪಡೆದ ದೇಶ ಇಂದು ಈ ರೀತಿಯಲ್ಲಿ ದಿವಾಳಿಯಾಗಲು ಕಾರಣವೇನು? ಅಮೇರಿಕದ ಫ್ಲೋೋರಿಡಾದಿಂದ ಕೇವಲ 2 ಗಂಟೆ ದೂರವಿರುವ ಈ ದೇಶ ಬಂಡವಾಳಶಾಹಿ ಜಗತ್ತಿಿನ ಕಪಿ ಮುಷ್ಟಿಿಯಲ್ಲಿ ಸಿಲುಕಿ ಹೇಗೆ ನಾಶವಾಯಿತು?

ಕೋಲಂಬಸ್ ಕಂಡು ದೇಶ
1494 ರಲ್ಲಿ ಕ್ರಿಿಸ್ಟೋೋಫರ್ ಕೋಲಂಬಸ್ ಕಂಡು ಹಿಡಿದ ಕೆರಿಬಿಯನ್ ದ್ವೀಪ ಸಮೂಹದ ಭಾಗ ಇಂದಿನ ಹೈಟಿ ದೇಶ. ಈ ಎಲ್ಲ ದ್ವೀಪಗಳನ್ನು ದಬ್ಬಾಾಳಿಕೆಯಿಂದ ವಶಕ್ಕೆೆ ತೆಗೆದುಕೊಂಡ ಕೋಲಂಬಸ್‌ನ ಸೇನೆಯ ಕ್ರಮವು, ಕ್ರಮೇಣ ಅಲ್ಲಿ ಅಂದಿನ ಅವಶ್ಯಕತೆಯಾದ ಸಕ್ಕರೆಯನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿಿತು. ಇದಕ್ಕೆೆ ಅವಶ್ಯಕವಾದಂತಹ ಕೂಲಿಯವರನ್ನು ತಮ್ಮದೇ ವಸಾಹಿತಾಗಿದ್ದ ಆಫ್ರಿಿಕಾ ದೇಶದಿಂದ ಕರೆಯಿಸಿಕೊಳ್ಳುತ್ತಿಿದ್ದರು. ಇಲ್ಲಿ ಈ ದೇಶವನ್ನು ಕಂಡು ಹಿಡಿದವರ ಬಗ್ಗೆೆ ಒಂದು ಮಾತನ್ನು ಹೇಳಲೆಬೇಕು. ವಾಸ್ತವದಲ್ಲಿ ಕೋಲಂಬಸ್ ಇವೆರೆಲ್ಲರೂ ಇತಿಹಾಸ ರೂಪಾಂತರಿಸಿದ ಕಡಲುಗಳ್ಳರು. ಇಂಗ್ಲೆೆಂಡ್, ಸ್ಪೇನ್, ಪೋರ್ಚುಗಲ್, ಫ್ರಾಾನ್‌ಸ್‌ ಮತ್ತಿಿತರ ಯೂರೋಪಿಯನ್ ದೇಶಗಳು ಕಡಲುಗಳ್ಳರ ಮುಖಾಂತರ ಸಂಪತ್ಭರಿತ ಭೂಭಾಗಗಳನ್ನು ಹುಡುಕಿ ಅವುಗಳನ್ನು ಲೂಟಿ ಮಾಡಿತ್ತಿಿದ್ದವು. ಹಾಗೆಯೇ ಲೂಟಿ ಗೊಳಗಾದ ದ್ವೀಪ, ಸಾಂತಾ ಡೊಮಿಂಗೋ.

ಅದಾಗಲೇ ಅಲ್ಲಿದ್ದ ಎಲ್ಲ ಮೂಲ ನಿವಾಸಿಗಳನ್ನು ಕೊಂದಿದ್ದ ಕಾರಣ ಅಲ್ಲಿದ್ದಿದ್ದು ಕೇವಲ ಜಿತಕ್ಕೆೆಂದು ಬಂದ ಕಪ್ಪುು ನೀಗ್ರೊೊಗಳು. ತಮ್ಮದಲ್ಲದ ದೇಶವನ್ನು ಲೂಟಿ ಮಾಡಿದರೆ ಪಾಪ ಅವರೇನು ತಾನೇ ಮಾಡಿಯಾರು ? ಮೊದಲು ಫ್ರೆೆಂಚರ ಅಧಿಪತ್ಯಕ್ಕೆೆ ಒಳಗಾಗಿದ್ದ ಸಾಂತ ಡೋಮಿಂಗೊ ದ್ವೀಪ, 1777 ರಲ್ಲಿ ಸ್ಪ್ಯಾಾನಿಷ್ ರ ನಡುವೆ ನಡೆದ ಯುದ್ಧದಲ್ಲಿ ಸೋತ ಪರಿಣಾಮ ಎರಡು ಭಾಗವಾಗಿ ಫ್ರೆೆಂಚರು ಮತ್ತು ಸ್ಪ್ಯಾಾನಿಷ್ ರ ನಡುವೆ ಹಂಚಲ್ಪಟ್ಟಿಿತು. ಒಂದು ಭಾಗ ಈಗಿನ ಹೈಟಿ ದೇಶವಾದರೆ, ಇನ್ನೊೊಂದು ಡೊಮಿನಿಕನ್ ರಿಪಬ್ಲಿಿಕ್. ಫಲವತ್ತಾಾದ ದಟ್ಟ ಕಾಡನ್ನು ಹೊಂದಿದ ಭೂ ಪ್ರದೇಶ. ಫ್ರೆೆಂಚರು ಆಳ್ವಿಿಕೆಗೆ ಒಳಗಾಗಿದ್ದ ಹೈಟಿಯಲ್ಲಿದ್ದ ಕಾಡನ್ನು ವ್ಯವಸ್ತಿಿತ ವಾಗಿ ಕಡಿದು ಕಬ್ಬು ಮತ್ತು ಕಾಫಿ ಬೆಳೆಗೆ ಶುರುವಿಟ್ಟುಕೊಂಡರು. ಫ್ರೆೆಂಚ್ ಸರಕಾರ ಹೈಟಿಯಲ್ಲಿದ್ದ ಕಾಫಿ ಮತ್ತು ಕಬ್ಬಿಿನ ಪ್ಲಾಾಂಟೇಷನ್‌ಗಳನ್ನು ಫ್ರೆೆಂಚ್ ಮಾಲೀಕರ ಆಡಳಿತಕ್ಕೆೆ ನೀಡಿತು. ಪ್ರತಿ ಮಾಲಿಕನ ಕೆಳಗೆ ನೂರಾರು ಅಥವಾ ಸಾವಿರಾರು ಕಪ್ಪುು ಜೀತದಾಳುಗಳು. ಕಬ್ಬು ಮತ್ತು ಕಾಫಿ ಬೆಳೆಯನ್ನು ಬೆಳೆಯುವುದು ಮತ್ತು ಬೆಳೆದ ಬೆಳೆಯನ್ನು ನೋಡಿಕೊಳ್ಳುವುದು ಈ ಕೂಲಿಗಳ ಕೆಲಸ. ಫ್ರೆೆಂಚರು ತಮ್ಮೆೆಲ್ಲ ವಸಹಾತುಗಳಲ್ಲೂ ಬೇರೆ ಬೇರೆ ದೇಶದ ಜೀತದಾಳುಗಳನ್ನು ನೇಮಿಸಿಕೊಂಡಿದ್ದರು.

ಈ ಕೂಲಿಗಳು ಸರಿಯಾಗಿ ಕೆಲಸಮಾಡುವಂತೆ ನೋಡಿಕೊಳ್ಳಲು ಅವರು ಬಳಸುತ್ತಿಿದ್ದ ಪ್ರಮುಖ ಅಸ್ತ್ರವೆಂದರೆ ಕಠಿಣ ಶಿಕ್ಷೆ. ಅದರನ್ವಯ ದಿನದ ಬಹುಭಾಗ ಕೆಲಸ ಮಾಡಬೇಕು, ಆ ಸಮಯದಲ್ಲಿ ಅನವಶ್ಯಕ ವಿಶ್ರಾಾಂತಿ ಅಥವಾ ಕುಂಟು ನೆಪ ಹೇಳಿ ಕೆಲಸ ನಿಲ್ಲಿಸಿದರೆ ಚಡಿ ಏಟು. ಈ ವ್ಯವಸ್ಥೆೆಯಿಂದ ಬೇಸತ್ತು ದ್ವೀಪ ಬಿಟ್ಟು ಪಲಾಯನ ಮಾಡಲು ಪ್ರಯತ್ನಪಟ್ಟರೆ ಕೈ-ಕಾಲುಗಳನ್ನು ಕಡಿದು ಬಿಡುತ್ತಿಿದ್ದರು. ಅವರುಗಳನ್ನೇ ನೋಡಿಯೇ ದ್ವೀಪ ಬಿಟ್ಟು ಪಲಾಯನ ಮಾಡವ ಯೋಚನೆ ಮಾಡುವವರ ಜಂಘಾ ಬಲವೇ ಉಡುಗಿಹೋಗುತ್ತಿಿತ್ತು. ಕೆಲವೊಂದು ಮಾಲೀಕರು ಇನ್ನೂ ಉಗ್ರ ಶಿಕ್ಷೆ ಎನ್ನುವಂತೆ ಎರಡು ಕೈಗಳನ್ನು ಎತ್ತರದ ಕೊಂಬೆಗೆ ಕಟ್ಟಿಿ ಅನ್ನ ನೀರು ಕೊಡದೆ ಸಾಯುವಂತೆ ಮಾಡುತ್ತಿಿದ್ದರು. ಸರಳವಾಗಿ ಹೇಳಬೇಕೆಂದರೆ ಒಂದು ಕಿಲೋ ಸಕ್ಕರೆಗಿದ್ದ ಮೌಲ್ಯ ಮನುಷ್ಯನ ಜೀವಕ್ಕಿಿರಲಿಲ್ಲ.

ಹೈಟಿಯಲ್ಲಿ ಕಾಫಿಯನ್ನು ಬೆಳೆಯುತ್ತಿಿದ್ದರೂ, ಕಬ್ಬು ಅಲ್ಲಿನ ಮೂಲ ಬೆಳೆ. ಇಲ್ಲಿ ಕಬ್ಬು ಬೆಳೆಯ ಬಗ್ಗೆೆ ಒಂದು ವಿಷಯವನ್ನು ಹೆಳಬೇಕು. ಕಬ್ಬಿಿನ ಎಲೆಯ ಅಂಚು ಚೂಪಾಗಿರುತ್ತದೆ. ಬೆಳೆದ ಕಬ್ಬನ್ನು ಕಟಾವು ಮಾಡುವಾಗ ಕಟಾವು ಮಾಡುವವರ ಅರಿವಿಲ್ಲದಂತೆ ಅದು ಅವರ ಕೈ ಮತ್ತಿಿತರ ಭಾಗಗಳನ್ನು ಕೊರೆಯುತ್ತದೆ. ಅದರ ಅರಿವಾಗುವುದು ಮಾಡುವಾಗ ಬೀಳುವ ಉಪ್ಪುು ಖಾರಗಳಿಂದ ಅಥವಾ ನಿದ್ದೆ ಮಾಡಿ ಎದ್ದ ತಕ್ಷಣ. ಸಾವಿರಾರು ಎಕರೆ ಪ್ರದೇಶದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಒಂದಿಲ್ಲೊಂದು ಕಡೆ ಕಟಾವು ಮಾಡುತ್ತಿಿದ್ದ ಕಪ್ಪುು ಜನರು ಅನುಭವಿಸುತ್ತಿಿದ್ದ ಯಾತನೆ ಮಾಲೀಕರು ಕೊಡುತ್ತಿಿದ್ದ ದೈಹಿಕ ಶಿಕ್ಷೆಯಷ್ಟೆೆ ಉಗ್ರವಾಗಿತ್ತು. ಇದರೊಟ್ಟಿಿಗೆ ಕಬ್ಬಿಿನ ಬುಡದಲ್ಲಿರುವ ಇರುವೆಗಳ ಕಡಿತ. ಇಷ್ಟೆೆಲ್ಲ ಯಾತನೆಗಳನ್ನು ಬಹುಕಾಲ ಸಹಿಸಿಕೊಂಡೇ ಬಂದ ಕಪ್ಪುು ಜನರ ಸಹನೆಯ ಕೋಟೆ ಹಂತ ಹಂತವಾಗಿ ಒಡೆಯಲಾರಭಿಸಿತು.

ವೂಡು ಎಂಬ ಆಫ್ರಿಿಕಾ ಜನಾಂಗ
ಆಫ್ರಿಿಕಾದ ಬುಡಕಟ್ಟು ಜನರ ಧರ್ಮ. ಆಫ್ರಿಿಕಾ ಖಂಡದ ಬೇರೆ ಬೇರೆ ಭಾಗಗಳಿಂದ ಹೈಟಿಗೆ ಜೀತಕ್ಕೆೆಂದು ಬರುತ್ತಿಿದ್ದ ಜನರನ್ನು ಒಟ್ಟುಗೂಡಿಸುತ್ತಿಿದ್ದು ಈ ಧರ್ಮದ ಆಚರಣೆ. ಮೊದಲು ಹೈಟಿಯಲ್ಲಿ ಕಪ್ಪುು ಜನರ ದಂಗೆಗೆ ಸ್ಪೂರ್ತಿ ನೀಡಿದ್ದು ಇದೇ ವೂಡು ಧರ್ಮ ಗುರು. 1788ರಲ್ಲಿ ಆ ದೇಶದಲ್ಲಿ 25,000 ಜನ ಯುರೋಪಿಯನರು ಮತ್ತು 7,00,000 ಆಫ್ರಿಿಕಾದ ಗುಲಾಮರು ಇದ್ದರು.
ಆಗಸ್‌ಟ್‌ 22, 1791. ಮೊದಲ ಬಾರಿ ಕಪ್ಪುು ಜೀತದಾಳುಗಳು ತಮ್ಮ ಮಾಲೀಕರ ಮೇಲೆ ಮಾಡಿ ಅವರನ್ನು ಕೊಚ್ಚಿಿ ಕೊಲ್ಲಲು ಶುರು ಮಾಡಿದರು. ಇಷ್ಟು ದಿನ ಅನುಭವಿಸಿದ ಯಾತನೆ, ನೋವಿಗೆ ಪ್ರತಿಕಾರವೆನ್ನುವಂತೆ ಬಹುಸಂಖ್ಯಾಾತ ಕಪ್ಪುು ಜೀತದಾಳುಗಳು ಸೇಡು ತೀರಿಸಿಕೊಳ್ಳಲಾರಂಭಿಸಿದರು. ಆರಂಭದಲ್ಲಿ ಸುಮಾರು ಸಾವರದಷ್ಟಿಿದ್ದ ಈ ಬಂಡಾಯ ಜೀತದಾಳುಗಳ ಸಂಖ್ಯೆೆ ಒಂದೆರಡು ದಿನದಲ್ಲಿ ಇಪ್ಪತ್ತು ಸಾವಿರದಷ್ಟಾಾಯಿತು. ಮಾಲೀಕರನ್ನು ಸಾಯಿಸುವುದರ ಜೊತೆಗೆ ಸಂಪತ್ಭರಿತ ಕಾಫಿ ಮತ್ತು ಕಬ್ಬು ಪ್ಲಾಾಂಟೇಷನ್‌ಗಳನ್ನು ಮತ್ತು ಕಬ್ಬನ್ನು ಅರೆಯುವ ಗಾಣಗಳನ್ನು ಸಹ ಈ ಬಂಡಾಯಗಾರರು ಸುಟ್ಟು ಭಸ್ಮ ಮಾಡಿದರು. ಜೀವಕ್ಕೆೆ ಹೆದರಿದ ಹೆಚ್ಚಿಿನ ಹೈಟಿಯ ರಾಜಧಾನಿಯ ಕಡೆ ಓಡಲಾರಂಭಿಸಿದರು. ರಕ್ಷಣೆಗಾಗಿ ಫ್ರೆೆಂಚ್ ಸರಕಾರಕ್ಕೆೆ ಮೊರೆಯಿಟ್ಟರು.

ಟುಸೆ ಲು ವೇರಿಟೋ
ಹೈಟಿಯಲ್ಲೇ ಹುಟ್ಟಿಿದ ಜೀತದಾಳುಗಳ ಮಗ ಟುಸೆ. ಬುದ್ಧಿಿವಂತ ಮತ್ತು ಸೂಕ್ಷ್ಮಗ್ರಾಾಹಿ. ಆತ ಇದ್ದ ಪ್ಲಾಾಂಟೇಷನ್ ಮಾಲಿಕನ ಉದಾರ ಬುದ್ಧಿಿಯಿಂದಾಗಿ ಆತ ಕೇವಲ ಒಬ್ಬ ಜೀತದಾಳುವಾಗದೆ ಓದು ಬರಹವನ್ನು ಕಲಿತು ಅಲ್ಲಿದ್ದ ಆಳುಗಳ ಮೇಲ್ವಿಿಚಾರಣೆಯನ್ನು ನೋಡಿಕೊಳ್ಳುತ್ತಿಿದ್ದ. ಜೀತದಾಳುಗಳು ಮಾಲೀಕರ ಮೇಲೆ ತಿರುಗಿಬಿದ್ದಾಗ ಈತ ಮೊದಲು ರಕ್ಷಿಸಿದ್ದು ತನ್ನ ಮಾಲೀಕರನ್ನು. ನಂತರದ ದಿನಗಳ ಅರಿವಿದ್ದ ಟುಸೆ ಹೋರಾಟಗಾರರ ನಾಯಕತ್ವ ವಹಿಸುಕೊಂಡು ತನ್ನೆೆಲ್ಲಾ ಕಪ್ಪುು ಬೆಂಬಲಿಗರನ್ನು ಕರೆದುಕೊಂಡು ಹೋಗಿ ದಟ್ಟ ಕಾಡುಗಳಲ್ಲಿ ಕೆಲ ಕಾಲ ಮರೆಯಾಗುತ್ತಾಾನೆ. ವಾಸ್ತವದಲ್ಲಿ ಟುಸೆಯನ್ನು ಬಿಟ್ಟರೆ, ಅಲ್ಲಿನ ಬೇರಾವುದೇ ಜೀತದಾಳುಗಳಿಗು ಮುಂದೆ ಏನು ? ಎನ್ನುವ ಅರಿವಿರುವುದಿಲ್ಲ. ಸ್ವಾಾಂತಂತ್ರ್ಯ ಅಂದರೇನು ? ಒಮ್ಮಿಿಂದೊಮ್ಮೆೆಲೆ ಸ್ವಾಾತಂತ್ರ್ಯ ಸಿಕ್ಕರೆ ಏನು ಮಾಡಬೇಕು ? ನಾವು ಮಾಲೀಕರ ಜೊತೆಗೆ ಫಲವತ್ತಾಾದ ಪ್ಲಾಾಂಟೇಷನ್‌ಗಳನ್ನು ಏತಕ್ಕಾಾಗಿ ಸುಟ್ಟೆೆವು ? ಇನ್ನೂ ಹಲವು ಪ್ರಶ್ನೆೆ ಗಳಿಗೆ ಅವರ ಬಳಿ ಉತ್ತರವೇ ಇರಲಿಲ್ಲ. ಅವರ್ಯಾರು ಜೀವನದಲ್ಲಿ ಸ್ವಾಾತಂತ್ರ್ಯವನ್ನು ಅನುಭವಿಸಿಯೇ ಇರಲಿಲ್ಲ. ಅದೊಂದು ಹೊಸ ಭಾವ.

ಅಷ್ಟರಲ್ಲಾಗಲೇ ಹೈಟಿಯನ್ನು ಸೇರಿದ ಫ್ರೆೆಂಚರ ಸೈನ್ಯ ಈ ಬಂಡಾಯಗಾರರ ಹುಟ್ಟಗಿಸಬೇಕು ಎನ್ನುವ ಉದ್ದೇಶದೊಂದಿಗೆ ಬಂದಿತ್ತು. ಆದರೆ ಅವರನ್ನೆೆಲ್ಲ ಕೊಂದರೆ ಪ್ಲಾಾಂಟೇಷನ್ ನಲ್ಲಿ ಕೆಲಸ ಮಾಡುವವರಾರು? ಹಾಗಾಗಿ ಟುಸೆ ಮುಂದಿಡುವ ಒಂದು ಒಪ್ಪಂದಕ್ಕೆೆ ಅವರು ಒಪ್ಪಲೇ ಬೇಕಾಗುತ್ತದೆ. ಆ ಒಪ್ಪಂದದ ಪ್ರಕಾರ ಪ್ಲಾಾಂಟೇಷನ್ ನ ಕಾರ್ಮಿಕರ ಜೀವನ ಮಟ್ಟವನ್ನು ಸ್ವಲ್ಪ ಮಟ್ಟಿಿಗೆ ಸುಧಾರಿಸುವುದು. ಈ ಹೋರಾಟದ ಫಲವಾಗಿ ಟುಸೆ ಜನರ ಆಶಾಕಿರಣವಾಗಿ ಹೊರ ಹೊಮ್ಮುತ್ತಾಾನೆ.

ಫ್ರೆೆಂಚ್ ಕ್ರಾಾಂತಿ
ಹೈಟಿಯಲ್ಲಿ ಇಷ್ಟೆೆಲ್ಲ ಹೋರಾಟಗಳು ನಡೆಯುತ್ತಿಿರುವಾಗಲೇ ಫ್ರಾಾನ್‌ಸ್‌‌ನಲ್ಲಿ ಕಮ್ಯುನಿಸ್‌ಟ್‌‌ರ ಕ್ರಾಾಂತಿ ಆರಂಭವಾಗಿತ್ತು. ಈ ಹೋರಾಟದ ಫಲವಾಗಿ ಜೀತಕ್ಕಿಿದ್ದ ಎಲ್ಲಾ ಕಪ್ಪುು ಜನರು ಫ್ರಾಾನ್‌ಸ್‌‌ನ ನಾಗರಿಕರಾಗುವ ಭಾಗ್ಯ ದೊರಯಿತು. ತನ್ಮೂಲಕ ಟುಸೆ ಹೈಟಿಯ ಗವನರರ್ ಆಗಿ ನೇಮಕಗೊಂಡ. ಬಂಡವಾಳಶಾಹಿ ಜಗತ್ತು ಒಮ್ಮೆೆ ಕಂಪಿಸಿತು. ಒಬ್ಬ ಕರಿಯ ಅದರಲ್ಲೂ ಜೀತದಾಳಾಗಿದ್ದ ಒಬ್ಬ ಕರಿಯ ಒಂದು ದೇಶದ ಉನ್ನತ ಹುದ್ದೆಗೆ ಏರುವುದು ಆಗಿನ ಪ್ರಬಲ ರಾಷ್ಟ್ರಗಳದ ಸ್ಪೈನ್ ಮತ್ತಿಿತರ ದೇಶಗಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಎಷ್ಟೋೋ ದಿನ ಈ ದ್ವೀಪದ ಫ್ರೆೆಂಚರು ತಮ್ಮ ಬೇರಾವ ವಸಾಹತು ದೇಶಗಳಿಗೂ ಭೇಟಿ ನೀಡದಂತೆ ನಿಷೇಧಿಸಲಾಗಿತ್ತು. ಕಾರಣ ಎಲ್ಲಿ ಅವರು ಒಬ್ಬ ನೀಗ್ರೋೋ ತಮ್ಮ ವಸಾಹತು ದ್ವೀಪದಲ್ಲಿ ಉನ್ನತ ಹುದ್ದೆಯಲ್ಲಿರುವುದನ್ನು ಅಲ್ಲಿರುವ ಕಪ್ಪುು ಜೀತದಾಳುಗಳಿಗೆ ತಿಳಿಸಿ ಅವರೂ ದಂಗೆ ಎದ್ದರೆ ಎಂಬ ಭಯ.

ಅದೇ ಸಮಯದಲ್ಲಿ ಈಜಿಪ್‌ಟ್‌‌ನ್ನು ಗೆದ್ದ ನೆಪೋಲಿಯನ್, ಫ್ರಾಾನ್‌ಸ್‌‌ನ ಅಧಿಕಾರ ಚುಕ್ಕಾಾಣಿಯನ್ನು ಹಿಡಿಯುತ್ತಾಾನೆ. ಎಲ್ಲಾ ಮುಂದುವರೆದ ದೇಶಗಳು ಅದರಲ್ಲೂ ಅಮೇರಿಕದ ಆಗಿನ ಅಧ್ಯಕ್ಷ ಥಾಮಸ್ ಜೆಫರ್ಸನ್ ಒಬ್ಬ ಕಪ್ಪುು ಸಮುದಾಯಕ್ಕೆೆ ಸೇರಿದವನನ್ನು ಒಂದು ದೇಶದ ಗವರ್ನರ್ ಆಗಿ ನೇಮಿಸಿದ್ದು ಸರಿಯಲ್ಲ ಮತ್ತು ಆತನನ್ನು ಈ ಕೂಡಲೇ ಆ ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಒತ್ತಡವನ್ನು ಆತನ ಮೇಲೆ ಹೇರುತ್ತಾಾನೆ. ಈ ಎಲ್ಲಾ ವಿಷಯಗಳ ಅರಿವಿದ್ದ ಟುಸೆ, ನೆಪೋಲಿಯನ್‌ನ್ನು ಸಂತ್ರಪ್ತಿಿ ಪಡಿಸಲು ಹಲವು ಕ್ರಮಗಳನ್ನು ಕೈಗೊಂಡರೂ, ಪ್ರಬಲ ರಾಷ್ಟ್ರಗಳ ಒತ್ತಡಕ್ಕೆೆ ಮಣಿದ ನೆಪೋಲಿಯನ್ 1802 ರಲ್ಲಿ ಟುಸೆಯನ್ನು ಬಂದಿಸಿ ಫ್ರಾಾನ್‌ಸ್‌ ನ ಬೆಟ್ಟಗಳ ನಡುವೆ ಜೈಲಿನಲ್ಲಿಡುತ್ತಾಾನೆ. ಇತ್ತ ಹೈಟಿ ಯ ಜನ ಸ್ವಾಾತಂತ್ರ್ಯ ಹೋರಾಟವನ್ನು ತೀವ್ರಗೊಳಿತ್ತಾಾರೆ. ಟುಸೆ ಬಂಧಿಯಾದ ಸುಮಾರು ಎರಡು ವರ್ಷಗಳ ನಂತರ ಅಂದರೆ 1804 ಜನವರಿ 1 ರಂದು ಫ್ರಾಾನ್‌ಸ್‌ ಸರಕಾರ ಹೈಟಿಗೆ ಸ್ವಾಾತಂತ್ರ ಘೋಷಣೆ ಮಾಡುತ್ತದೆ. ಆದರೆ ಈ ಸಂಭ್ರಮವನ್ನು ಸವಿಯಲು ಟುಸೆ ಮಾತ್ರ ಬದುಕಿರುವುದಿಲ್ಲ, ಬಂದನದಲ್ಲಿದ್ದ ಶೀತಲ ಬೆಟ್ಟಗಳ ನಡುವೆ ಅದಾಗಲೇ ಆತನ ಜೀವ ಮರಗಟ್ಟಿಿರುತ್ತದೆ. ಸ್ವಾಾತಂತ್ರ್ಯ ದೊರೆತ ಹೊಸದರಲ್ಲಿ ಹೈಟಿಯಲ್ಲಿ ನಿರ್ಮಾಣಗೊಂಡ ಲೆಫೆರರ್ ಕೋಟೆಯ ಗಾತ್ರವನ್ನು ಗಮನಿಸಿ, ಅದನ್ನು ಜಗತ್ತಿಿನ ಎಂಟನೆಯ ಅದ್ಭುತ ಎಂದೂ ಕರೆಯುವುದುಂಟು.

ಸ್ವಾತಂತ್ರ್ಯದ ನಂತರ ಅಮೆರಿಕದ ಒತ್ತಡ
1804 ರಲ್ಲೇ ಸ್ವಾಾತಂತ್ರವನ್ನು ಪಡೆದ ಒಂದು ದೇಶ ಬೆಳವಣಿಗೆಯ ಉತ್ತುಂಗದಲ್ಲಿರುವುದನ್ನು ಬಿಟ್ಟು ಇಂದು ಬಡದೇಶವಾಗಿರಲು ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣ ಇಡೀ ದ್ವೀಪವನ್ನೇ ತನ್ನದಾಗಿಸಿಕೊಳ್ಳಬೇಕು ಎಂಬ ಹೈಟಿಯನ್ನರ ದುರಾಸೆ. ಫ್ರೆೆಂಚರು ಹೈಟಿಯನ್ನರಿಗೆ ಸ್ವಾಾತಂತ್ರ್ಯವನ್ನು ಕೊಟ್ಟರೂ ದ್ವೀಪದ ಇನ್ನೊೊಂದು ಭಾಗವಾದ ಇಂದಿನ ಡೊಮಿನಿಕನ್ ರಿಪಬ್ಲಿಿಕ್‌ನ ಭಾಗವನ್ನು ಸ್ಪ್ಯಾಾನಿಷ್ ರು ಸ್ವಾಾಂತಂತ್ರ್ಯಗೊಳಿಸಿರಲಿಲ್ಲ. ಇಡೀ ಆಳಬೇಕು ಎಂಬ ಹೈಟಿಯ ಆಡಳಿತಗಾರ ಹಂಬಲದಿಂದ ಸ್ಪ್ಯಾಾನಿಷ್ ರ ಮೇಲೆ ಯುದ್ಧ ಸಾರಿದರು ಮತ್ತು ಸ್ಪ್ಯಾಾನಿಷ್ ರಿಂದ ದ್ವೀಪವನ್ನು ವಶಪಡಿಸಿಕೊಂಡರು. ಇಂದಿನ ಡೊಮಿನಿಕನ್ ರಿಪಬ್ಲಿಿಕ್, ಹೈಟಿಯ ಅಧಿಕಾರಕ್ಕೊೊಳಪಟ್ಟಿಿತು. ತಮ್ಮ ದೇಶವನ್ನು ಬಂಡಾಯದ ಮೂಲಕ ಅರ್ಧ ಸುಟ್ಟಿಿದ್ದ ಹೈಟಿಯನ್ನರಿಗೆ ಫಲವತ್ತಾಾದ ಭೂಮಿ ಮತ್ತು ಆರ್ಥಿಕತೆಯ ಅವಶ್ಯಕತೆ ಇತ್ತು. ಅದೇ ಉದ್ದೇಶವಾಗಿ ಡೊಮಿನಿಕನ್ ರಿಪಬ್ಲಿಿಕ್‌ಅನ್ನು ಬಳಸಲು ಆರಂಭಿಸಿದರು. ಆದರೆ ಭೌಗೋಳಿಕವಾಗಿ ದ್ವೀಪದ ಶೇ.60ಕ್ಕಿಿಂತ ಹೆಚ್ಚಿಿದ್ದ ಡೊಮಿನಿಕನ್ ರಿಪಬ್ಲಿಿಕನ್ನರು ಹೈಟಿಯ ಆಡಳಿತದ ವಿರುದ್ಧ ಸ್ವಾಾತಂತ್ರ್ಯ ಪಡೆದುಕೊಂಡರು.

(1844)
ಎರಡು ಸ್ವತಂತ್ರ ದೇಶಗಳಿಗೆ ಬಲಾಢ್ಯ ರಾಷ್ಟ್ರಗಳ ಕಾಟ. ಒಂದು ಕಡೆ ಅಮೇರಿಕವಾದರೆ ಇನ್ನೊೊಂದೆಡೆ ಇತರ ಯೂರೋಪಿಯನ್ ದೇಶದ ವಸಾಹತು ದ್ವೀಪಗಳು. ಈ ಎಲ್ಲ ಪ್ರಬಲ ರಾಷ್ಟ್ರಗಳು ಈ ಎರಡು ಪುಟ್ಟ ದೇಶಗಳಿಗೆ ಜಾಗತಿಕ ಮನ್ನಣೆ ಸಿಗದಂತೆ ನೋಡಿಕೊಂಡವು. ಈ ಎರಡು ದೇಶ, ಮುಖ್ಯವಾಗಿ ಹೈಟಿಯು ಯಾವುದೇ ದೇಶಕ್ಕೆೆ ತಾನು ಬೆಳೆದ ಬೆಳೆಯನ್ನು ಸಾಗಿಸದಂತೆ ಮತ್ತು ಆರ್ಥಿಕವಾಗಿ ಮುಂದುವರೆಯದಂತೆ ಬಹಳ ಎಚ್ಚರ ವಹಿಸಿದವು. ಅಮೇರಿಕವಂತೂ ಮೊದಲನೆಯ ಸಮಯದಲ್ಲಿ ಭದ್ರತೆಯ ನೆಪವೊಡ್ಡಿಿ ಎರಡೂ ದೇಶಗಳಲಲ್ಲಿ ಕೆಲ ಕಾಲ ಆಳ್ವಿಿಕೆ ನಡಿಸಿದರು. ಹೈಟಿಯನ್ನು ಆಳಿದ ಅಮೆರಿಕಾ, ಸೇನೆಗೆ ಅತ್ಯುಚ್ಚ ಅಧಿಕಾರ ನೀಡಿ, ಆ ಪುಟ್ಟ ರಾಷ್ಟ್ರದಲ್ಲಿ ಹಿಂಸೆಯ ಮಹಾಪೂರವನ್ನೇ ನಡೆಸಿದರು. (1915-1934) ಅಮೆರಿಕಾದ ದಬ್ಬಾಾಳಿಕೆಯನ್ನು ವಿರೋಧಿಸಿದ ಸ್ಥಳೀಯ ನಾಯಕ ಚಾರ್ಲೆಮಾಗ್ನೆೆ ಪೆರಲ್ಟೆೆ ಎಂಬಾತನನ್ನು ಅಮೆರಿಕನ್ನು ಕೊಂದು, ಸಾರ್ವಜನಿಕವಾಗಿ ಪ್ರದರ್ಶನಕ್ಕೆೆ ಇಟ್ಟರು. ಸೇನೆಯ ನೆರವಿನಿಂದ ಅಲ್ಲಿ ಪ್ರಬಲ ರಾಜಕೀಯ ಇಚ್ಛಾಾಶಕ್ತಿಿ ಉಗಮವಾಗದಂತೆ ನೋಡಿಕೊಂಡಿತು. ಅದರ ಮುಂದುವರೆದ ಭಾಗವೇ ಡೊಮಿನಿಕನ್ ರಿಪಬ್ಲಿಿಕ್ ಹೈಟಿಯ ಜನರ ನಡುವೆ ಬೆಳೆದಿರುವ ದ್ವೇಷ.

ಹೈಟಿಯವರು ಡೊಮಿನಿಕನ್ ರಿಪಬ್ಲಿಿಕ್ ದೇಶವನ್ನು ವಶಪಡಿಸಿಕೊಂಡು ಕೆಲ ಕಾಲ ಆಳ್ವಿಿಕೆ ನಡೆಸಿದ್ದ ಕಾರಣ ಸ್ವಾಾಭಾವಿಕವಾಗಿ ಅವರಿಗೆ ಹೈಟಿಯ ಜನರ ಮೇಲೆ ತಿರಸ್ಕಾಾರ ಮತ್ತು ಸಿಟ್ಟಿಿತ್ತು. ಇದನ್ನು ಅಮೇರಿಕ ಮತ್ತಿಿತರ ಪ್ರಬಲ ರಾಷ್ಟ್ರಗಳು ಆರದಂತೆ ನೋಡಿಕೊಂಡವು. ಯಾರು ತಮ್ಮ ಕೈಗೊಂಬೆ ಯಾಗುತ್ತಾಾರೋ ಅಂಹವರಿಗೆ ಹೆಚ್ಚೆೆಚ್ಚು ಹಣ ನೀಡಿ ದೇಶದ ಆಳ್ವಿಿಕೆ ಸಿಗುವಂತೆ ಹುನ್ನಾಾರ ನಡೆಸಿದರು. ಆ ರಾಜಕೀಯ ನಾಯಕರು ಸಹ ದ್ವೇಷವನ್ನೆೆ ರಾಜಕೀಯ ಬಳಸಿ ಮತ್ತೆೆ ಮತ್ತೆೆ ಗದ್ದುಗೆ ಏರಿದರು. ಹಾಗೆ ನೋಡಿದರೆ, ಜಗತ್ತಿಿನ ಬಹುಪಾಲು ವಸಹಾತು ಆಡಳಿತಕ್ಕೆೆ ಒಳಗಾದ ಎಲ್ಲಾಾ ದೇಶಗಳಿಗೂ ಬಿಳಿಜನರು ಮಾಡಿದ್ದು ಇದನ್ನೇ. ಭಾರತ ಮತ್ತು ಪಾಕಿಸ್ತಾಾನವೂ ಇದಕ್ಕೆೆ ಒಂದು ಉದಾಹರಣೆ. ಒಳಗೊಳಗೆ ತಂದಿಟ್ಟು ಆ ದೇಶಗಳು ಅಭಿವೃದ್ಧಿಿ ಹೊಂದದಂತೆ ನೋಡಿಕೊಳ್ಳುವುದು.

ಅಲ್ಲೂ ರಾಷ್ಟ್ರೀಯತೆ ಹುಡುಕುವ ಸಮಸ್ಯೆೆ
ಈ ಎರಡು ದೇಶಗಳು ಈ ಪರಿ ದ್ವೇಷಿಸಲು ಕೇವಲ ಇವಷ್ಟೆೆ ಕಾರಣವಲ್ಲ. ಸ್ಪ್ಯಾಾನಿಷ್‌ರು, ಫ್ರೆೆಂಚರ ರೀತಿ ಡೊಮಿನಿಕನ್ ರಿಪಬ್ಲಿಿಕ್‌ಅನ್ನು ಬರಡು ಜೀತಕ್ಕಾಾಗಿ ಆಳುಗಳನ್ನು ಆಫ್ರಿಿಕದಿಂದ ತಂದರೂ, ಅವರನ್ನು ತಕ್ಕ ಮಟ್ಟಿಿಗೆ ಸಮಾನವಾಗಿ ಕಂಡರು. ಕಪ್ಪುು ಹೆಣ್ಣುಗಳೊಂದಿಗೆ ಮದುವೆಯಾದರು. ಇದರ ಪರಿಣಾಮ ಡೊಮಿನಿಕನ್ ರಿಪಬ್ಲಿಿಕ್‌ನ ಜನ ಮೂಲ ಆಫ್ರಿಿಕಾದವರಷ್ಟು ಕಪ್ಪುು ವರ್ಣದವರಲ್ಲ. ಅಲ್ಲಿಯ ಈಗಿನ ಬಹು ಪಾಲು ಜನ ಗೋಧಿ ಅಥವಾ ಬಿಳಿ ವರ್ಣದವರು. ಹಾಗಾಗಿ ಡೊಮಿನಿಕನ್ ರಿಪಬ್ಲಿಿಕ್ ದೇಶದವರಿಗೆ ತಾವು ಹೈಟಿಯವರಿಗಿಂತ ಶ್ರೇಷ್ಠ ಎಂಬ ಭಾವನೆಯಿದೆ. ತಮ್ಮೊೊಡನೆ ಬೆರೆತ ಸ್ಪ್ಯಾಾನಿಷ್‌ರ ಮೇಲೆ ಹೆಚ್ಚಿಿನವರಿಗೆ ಕೋಪವಿಲ್ಲ. ಅದಲ್ಲದೆ ಫ್ರೆೆಂಚರು ಹೈಟಿಯ ಬಹುಪಾಲು ಭೂಮಿಯನ್ನು ಹಾಳುಗೆಡವಿದ್ದರಿಂದ ದೇಶದಲ್ಲಿ ಹೇಳಿಕೊಳ್ಳುವ ಯಾವ ಸಂಪತ್ತು ಇಲ್ಲ. ಹಾಗಾಗಿ ಸಾವಿರಾರು ಹೈಟಿಯನ್ನರು ಡೊಮಿನಿಕನ್ ರಿಪಬ್ಲಿಿಕ್ ಗೆ ವಲಸೆ ಹೋದರು. ಇದು ಕೂಡ ಡೊಮಿನಿಕನ್ ರಿಪಬ್ಲಿಿಕ್ ಜನರ ವಿರೋಧಕ್ಕೆೆ ಮುಖ್ಯ ಕಾರಣ. ತಮ್ಮ ದೇಶದ ಸಂಪತ್ತನ್ನು ಬೇರೆಯವರು ಬಳಸುವುದನ್ನು ಯಾವ ದೇಶದವರು ತಾನೇ ಸಹಿಸಿಯಾರು? ಈ ವಿರೋಧದ ಪರಮಾವಧಿ ಎನ್ನುವಂತೆ ಈಗ ಡೊಮಿನಿಕನ್ ರಿಪಬ್ಲಿಿಕ್, ನೂರು ವರ್ಷಕ್ಕೂ ಹಿಂದೆ ತಮ್ಮ ದೇಶಕ್ಕೆೆ ಬಂದ ಹೈಟಿಯನ್ನರನ್ನು ಸಹ ಹುಡುಕಿ ತೆಗೆದು, ರಾಷ್ಟ್ರೀಯತೆಯನ್ನು ಪ್ರಶ್ನಿಿಸಿ, ಹೈಟಿಗೆ ದೇಶಕ್ಕೆೆ ವಾಪಸು ಕಳುಹಿಸುತ್ತಿಿದೆ. ಅಕ್ರಮ ವಲಸೆಗಾರರನ್ನು ಹುಡುಕಿ ಅವರ ಸ್ವಂತ ದೇಶಕ್ಕೆೆ ವಾಪಸು ಕಳುಹಿಸುವ ಪ್ರಕ್ರಿಿಯೆಯ ರೀತಿ ಇದು!

ಹೈಟಿಯನ್ನು ಬರಡು ಮಾಡಿದ ಫ್ರಾಾನ್‌ಸ್‌, ಇಂದು ಜಗತ್ತಿಿನ ಒಂದು ಪ್ರಬಲ ರಾಷ್ಟ್ರ. ವಾರ್ಷಿಕ ಕೆಲವು ಲಕ್ಷ ಯುರೋಗಳನ್ನು ಹೈಟಿಗೆ ಮಾನವಿಯೆತೆಯ ಆಧಾರದಲ್ಲಿ ನೀಡಿದರೂ ಹೈಟಿಯ ಸ್ಥಿಿತಿ ಸ್ವಲ್ಪ ಮಟ್ಟಿಿಗಾದರೂ ಸುಧಾರಿಸಬಹುದು. ಹೈಟಿಯು ಇಂದು ಐಎಂಎಫ್, ಅಮೆರಿಕಾ ಮೊದಲಾದ ದೇಶಗಳ ನೆರವು ಪಡೆಯುತ್ತಿಿದೆ. ಹಸುಳೆಗಳ ಸಾವು, ರೋಗರುಜಿನ ಇಂದಿಗೂ ಹೈಟಿಯನ್ನು ಕಾಡುತ್ತಿಿದೆ. ಗುಲಾಮಗಿರಿಯನ್ನು ವಿರೋಧಿಸಿ, ಹೋರಾಟ ನಡೆಸಿ, ಸ್ವಾಾತಂತ್ರ್ಯ ಪಡೆದ ಜಗತ್ತಿಿನ ಮೊದಲ ದೇಶವು, ಶ್ರೀಮಂತ ದೇಶವೆಂದು ಒಂದು ಕಾಲದಲ್ಲಿ ಪರಿಗಣಿಸಲ್ಪಟ್ಟರೂ, ನಂತರದ ದಿನಗಳಲ್ಲಿ ಆರ್ಥಿಕ ಶಿಸ್ತನ್ನು ಪಾಲಿಸದೇ, ಪ್ರಬಲ ದೇಶಗಳ ಹಸ್ತಕ್ಷೇಪದಿಂದಾಗಿ, ಇಂದಿಗೂ ಬಡತನದಲ್ಲಿ ಕೊಳೆಯುತ್ತಿಿರುವುದು ಒಂದು ವಿಪರ್ಯಾಸ.

ಹೈಟಿ
ಜನಸಂಖ್ಯೆೆ : 1,11,23,178
ವಿಸ್ತೀರ್ಣ : 27,750 ಚದರ ಕಿಮೀ
ತಲಾ ಆದಾಯ : 1819 ಡಾಲರ್. 174ನೇ ಸ್ಥಾಾನ
ಭಾಷೆ: ಫ್ರೆೆಂಚ್

ಡೊಮೆನಿಕನ್ ರಿಪಬ್ಲಿಿಕ್
ಜನಸಂಖ್ಯೆೆ : 1,07,35,896
ವಿಸ್ತೀರ್ಣ : 48,671 ಚದರ ಕಿಮೀ
ಅಧಿಕೃತ ಭಾಷೆ : ಸ್ಪಾಾನಿಷ್
ತಲಾ ಆದಾಯ : 19,291 ಡಾಲರ್