Saturday, 14th December 2024

ಹಾಡಿನ ಬಂಡಿ

ರೈತನಾಗುವೆ

ಅಪ್ಪನಂತೆ ನಾನೂ
ಒಬ್ಬ ರೈತನಾಗುವೆ
ಉತ್ತಿಬೆಳೆದು ಜನರಿಗೆ
ಅನ್ನ ನೀಡುವೆ ||

ಗೋಧಿ ಜೋಳ ರಾಗಿ
ನಾನು ಬೆಳೆಯುವೆ
ಫಸಲು ಬಂದ ಮೇಲೆ
ನಾನು ರಾಶಿ ಮಾಡುವೆ ||

ತರಕಾರಿ ಹಣ್ಣು ಕಾಳನ್ನು
ಸುತ್ತಲೂ ಬೆಳೆಸುವೆ
ಎರೆಹುಳು ಗೊಬ್ಬರಹಾಕಿ
ಫಲವತ್ತಾದ ಬೆಳೆ ಬೆಳೆಯುವೆ ||

ಮಲ್ಲಿಗೆ ಸಂಪಿಗೆ ಹೂವನ್ನು
ಹೊಲದಲಿ ಬೆಳೆಯುವೆ
ಸುಂದರವಾದ ಹೂವನ್ನು
ಅಮ್ಮನ ಕೈಯಲಿ ನೀಡುವೆ ||

ಆಡು ಮೇಕೆ ಹಸುಗಳನ್ನು
ನಾನು ಸಾಕುವೆ
ಹಾಲು ಮೊಸರು ಬೆಣ್ಣೆಯನ್ನು
ಖಷಿಯಲಿ ತಿನ್ನುವೆ ||

ರಾಮ ಶ್ಯಾಮ ರಹಿಮರಿಗೆ¯್ಲÁ
ವ್ಯವಸಾಯವ ಕಲಿಸುವೆ
ರೈತನೆ ದೇಶದ ಬೆನ್ನೆಲುಬೆಂದು
ಜಗಕೆ ಸಾರುವೆ
ಈ ಜಗಕೆ ಸಾರುವೆ…||
* ವೆಂಕಟೇಶ ಚಾಗಿ ಲಿಂಗಸುಗೂರ