Sunday, 24th November 2024

ನಿಮ್ಮ ಗಂಡನಿಗೆ ಚೂಡಾ ಅಂದ್ರೆೆ ಇಷ್ಟ

* ತಾರಾ ಸತ್ಯನಾರಾಯಣ

ನನ್ನ ಮದುವೆಯಾಗಿ ಎರಡು ತಿಂಗಳಿಗೆ ಚಿಕ್ಕಮಗಳೂರಿನಿಂದ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಿಗೆಗೆ, ಮುಖ್ಯೋೋಪಾಧ್ಯಾಾಯನಾಗಿ ವರ್ಗಾವಣೆ ಮಾಡಿದರು. ಹೈಸ್ಕೂಲ್ ಮೇಸ್ಟ್ರು ಆಗಿದ್ದ ನನಗೆ ಮುಖ್ಯೋೋಪಾಧ್ಯಾಾಯನಾಗಿ ಬಡ್ತಿಿ ಸಿಕ್ಕಿಿದ್ದರಿಂದ ವರ್ಗಾವಣೆ ಒಪ್ಪಿಿಕೊಂಡೆ. ಅಲ್ಲಿಗೆ ಹೋಗಿ ಮನೆ ಮಾಡುವವರಿಗೆ ಅಮ್ಮನ ಜೊತೆ ಚಿಕ್ಕಮಗಳೂರಿನಲ್ಲಿ ಇರುವಂತೆ ಹೆಂಡತಿಗೆ ಹೇಳಿದೆ. ಇಂಡಿಯಲ್ಲಿನ ನನ್ನ ಹಳೆಯ ಸ್ನೇಹಿತ ಸುನಿಲ್ ದೇಶಪಾಂಡೆ ನೆನಪಾಯಿತು. ನಾನು ಅವನು ಹಾಸನದಲ್ಲಿ ಒಟ್ಟಿಿಗೆ ಓದುತ್ತಿಿದ್ದೆವು. ಈಗ ಅವನ ವಿಳಾಸ, ಫೋನ್ ನಂಬರ್ ಹುಡುಕಿ, ಅವನಿಗೆ ನಾನು ಬರುವುದಾಗಿ ಫೋನ್ ಮಾಡಿ ತಿಳಿಸಿದೆ.

ತಿಳಿಸಿದಂತೆ ಶುಕ್ರವಾರ ರಾತ್ರಿಿ ಚಿಕ್ಕಮಗಳೂರಿನಿಂದ ಹೊರಟು, ಶನಿವಾರ ಬೆಳಗಿನ ಜಾವ ಬಿಜಾಪುರದಲ್ಲಿ ಇಳಿದು ನಂತರ ನನ್ನ ಸ್ನೇಹಿತ ಇರೋ ಇಂಡಿ ಬಸ್ ಹತ್ತಿಿ ಅವನ ಮನೆಗೆ ಹೋದಾಗ, ಸುಮಾರು ಬೆಳಗಿನ ಏಳು ಗಂಟೆ ಆಗಿತ್ತು. ಸುನಿಲ್‌ಗೆ ನನ್ನನ್ನು ನೋಡಿ ಸಂತೋಷವಾಯಿತು. ನಾನು ತಕ್ಷಣ ನೇರ ವಿಷಯಕ್ಕೆೆ ಬಂದೆ. ‘ಮನೆ ವಿಚಾರ ಏನು ಮಾಡಿದೆ?’ ಅವನು ‘ನೀನೇನು ಯೋಚನೆ ಮಾಡಬೇಡ. ದೇವರಹಿಪ್ಪರಗಿಯಲ್ಲಿ ನನ್ನ ಕಾಕಿ ಅಂದ್ರೆೆ ನನ್ನ ಚಿಕ್ಕಮ್ಮ ಇದ್ದಾರೆ. ಅವರಿಗೆ ಎಲ್ಲ ಹೇಳಿದ್ದೇನೆ ಅವರ ಮನೆ ಹಿಂಭಾಗದ ರೋಡಿನಲ್ಲಿ ಮುಂದಿನ ತಿಂಗಳು ಮನೆ ಖಾಲಿಯಾಗುತ್ತದೆಯಂತೆ. ಅದುವರೆಗೂ ನೀನು ನನ್ನ ಚಿಕ್ಕಮ್ಮನ ಮನೆಯಲ್ಲಿರು’ ಅಂದ. ‘ನನಗೆ ಪರಿಚಯವೇ ಇಲ್ಲ ಹೇಗಿರಲಿ?’ ಅಂದೆ. ‘ನಿನಗೆ ಮನೆ ತಾನೆ ಬೇಕು, ಸುಮ್ಮನೆ ಹೋಗು ; ಚಿಕ್ಕಮ್ಮ ನೋಡ್ಕೋೋತಾರೆ. ನಾನು ನಾಳೆ ಆಫೀಸಿನ ಕೆಲಸದ ಮೇಲೆ ಹೈದರಾಬಾದ್‌ಗೆ ಹೋಗ್ತಿಿದೀನಿ. ಬರುವುದು ಐದು ವಾರ ಆಗುತ್ತೆೆ’ ಅಂದ. ಅವನು ಹೇಳಿದ ಮೇಲೆ ಇನ್ನೇನು ಅಂದುಕೊಂಡು, ಅವರ ಮನೆ ಹುಡುಕಿಕೊಂಡು ದೇವರಹಿಪ್ಪರಗಿಗೆ ಹೋದೆ.

ಸುನಿಲ್ ಫೋನ್ ಮಾಡಿ ಹೇಳಿದ್ದರಿಂದ ನನ್ನ ಆದರದಿಂದಲೇ ಬರಮಾಡಿಕೊಂಡು, ಅವರ ಮಗಳು ಚೂಡಾಮಣಿಯನ್ನು ಪರಿಚಯ ಮಾಡಿಸಿದರು. ಅವರ ಮಗಳು, ನಾನು ಈಗ ಸೇರಿಕೊಂಡಿರುವ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿಿರುವುದೆಂದು ತಿಳಿಯಿತು. ನಂತರ ಸುನಿಲ್ ಚಿಕ್ಕಮ್ಮ ಚೂಡಾಮಣಿಗೆ ಚಾ ಮಾಡಿ ತರಲು ಹೇಳಿದರು. ‘ನೋಡ್ರಿಿ ಶ್ರೀಧರ್, ನಿಮ್ಮದು ಅದೇ ರೂಂ. ನೀವು ಹೋಗಿ ರೂಮ್ನಲ್ಲಿ ಲಗೇಜ್ ಇಟ್ಟು ಹಂಗೇ ಅಡ್ಡಾಾಗಿರೀ. ಚೂಡಾಮಣಿ ಛಾ ಮಾಡಿ ತರ್ತಾಳೆ. ನೀವು ಛಾ ಕುಡಿವಂತ್ರಿಿ’ ಅಂತ ಹೇಳಿ ಅವರು ಒಳಗೆ ಹೋದರು. ದಿನಕಳೆದಂತೆ ಆ ಹುಡುಗಿ ಆತ್ಮೀಯಳಾದಳು. ಕ್ರಮೇಣ ಪಾಠದ್ದು ಅವಳಿಗೆ ಏನಾದರು ಗೊತ್ತಾಾಗದಿದ್ದರೆ ಹೇಳಿಸಿಕೊಳ್ಳಲು ನನ್ನ ಬಳಿ ಬರುತ್ತಿಿದ್ದಳು.

ಹಿಂದಾಗಡಿ ವಿಷಯ
ಒಂದು ದಿನ ಸ್ಕೂಲ್ ಮುಗಿಸಿ ಮನೆಗೆ ಬರುತ್ತಿಿದ್ದಂತೆ ದೇಶಪಾಂಡೆ ಚಿಕ್ಕಮ್ಮ ‘ನೋಡ್ರೀ, ನಿಮಗೆ ಮನೆ ತೋರಿಸಿದ್ವಲ್ಲ, ಆ ಮನೆ ಯಜಮಾನ್ರು ಬಂದಿದ್ರು. ಆ ಮನಿ ಖಾಲಿ ಮಾಡಿದಾರಂತೆ. ನಿಮ್ಮನ್ನು ಹಿಂದಾಗಡಿಯಿಂದ ಬರ್ಲಿಕ್ಕೆೆ ಹೇಳೋದ್ರಿಿ. ನೀವು ಹಿಂದಾಗಡಿಯಿಂದ ಹೋಗ್ಬರ್ರಿಿ’ ಅಂದಾಗ ನಾನು ಮುಖ ತೊಳೆದು ತಲೆ ಬಾಚಿಕೊಂಡು ಅವರ ಮನೆಗೆ ಹೊರಟೆ. ಅವರ ಮನೆ ಬಾಗಿಲು ಹಾಕಿತ್ತು. ತಕ್ಷಣ ಆಂಟಿ ಹೇಳಿದ್ದು ನೆನಪಾಯಿತು, ಹಿಂದಗಡೆಯಿಂದ ಬರೋಕೆ ಹೇಳಿದ್ದಾರೆ ಅಂದುಕೊಂಡು, ಸುತ್ತಾಾಕಿಕೊಂಡು ಹಿತ್ತಲ ಬಾಗಿಲಿಗೆ ಬಂದು ಸ್ವಲ್ಪ ಅಂಜಿಕೊಂಡು ನಿಧಾನವಾಗಿ ಬಾಗಿಲು ಬಡಿದೆ. ಬಾಗಿಲು ತೆರೆಯಲಿಲ್ಲ ಅಕ್ಕಪಕ್ಕದ ಮನೆಯವರು ವಿಚಿತ್ರವಾಗಿ ನನ್ನ ನೋಡಿದರು.

ನನಗೆ ಕಸಿವಿಸಿಯಾಯಿತು. ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತ ಮಾಡಿಕೊಂಡು, ಮನೆಗೆ ಬಂದೆ. ಅಲ್ಲೇ ಇದ್ದ ಆಂಟಿಗೆ ಆಂಟಿ, ಅವರ ಮನೆ ಬೀಗ ಹಾಕಿದೆ. ಅಂತ ಹೇಳಿದೆ. ಅದಕ್ಕೆೆ ಆಂಟಿ, ‘ಹೌದ್ರೀ ಅದಕ್ಕಾಾ ಅವರು ಹಿಂದಗಡಿಯಿಂದ ಬರಲಿಕ್ಕೆೆ ಹೇಳಿದ್ದು’ ಅಂದರು. ‘ಆಂಟೀ, ಹಿಂದಗಡೆ ಬಾಗಿಲ ಹತ್ತಿಿರವೂ ಹೋದೆ. ಅಲ್ಲೂ ಬೀಗಹಾಕಿತ್ತು’ ಅಂತ ಹೇಳಿದ್ದೆ ತಡ, ಆಂಟಿ ಬಿದ್ದುಬಿದ್ದು ನಕ್ಕರು. ‘ಹಿಂದಗಡೆ ಅಂದ್ರೇ ಹಿತ್ಲಬಾಗಲು ಅಂತಲ್ರಿಿ….! ಸ್ವಲ್ಪ ತಡೆದು ನಿಧಾನವಾಗಿ ಹೋಗಿ ಅಂತ ಅರ್ಥ’ ಅಂದಾಗ ನಾನುಪೆದ್ದು-ಪೆದ್ದಾಗಿ ನಕ್ಕೆೆ. ಆಮೇಲೆ ರಾತ್ರಿಿ ಹೋಗಿ ಅವರನ್ನು ಕಂಡು ಮಾತಾಡಿ ಮನೆ ವ್ಯವಹಾರ ಮುಗಿಸಿಕೊಂಡು ಬಂದೆ ಅನ್ನಿಿ.

ಮನೆ ಸಿಕ್ಕಿಿದ ಕೂಡಲೇ ಊರಿಗೆ ಹೋಗಿ ಹೆಂಡತಿಯನ್ನು ಕರೆದುಕೊಂಡು ಬಂದು, ಆಂಟಿ ಮನೆಯಲ್ಲಿ ಬಿಟ್ಟು ನಾನು ಸ್ಕೂಲ್‌ಗೆ ಹೋದೆ. ಸ್ಕೂಲ್ ಮುಗಿಸಿ ಸೀದಾ ಆಂಟಿ ಮನೆಗೆ ಬಂದೆ. ಅಲ್ಲಿ ನನ್ನ ಹೆಂಡತಿ ಇರಲಿಲ್ಲ. ಅಲ್ಲಿದ್ದ ಆಂಟಿ ‘ನಿಮ್ಮ ಆಕಿ ಚಲೋತ್ನಾಾಗಿ ಮಾತಾಡ್ತಿಿದ್ರು ರೀ. ಇದ್ದಕ್ಕಿಿದ್ದ ಹಾಗೆ ಊಟವಲ್ಲೆ ಅಂತ ಜಟ್ಪಟ್ ಅಂತ ಎದ್ದು ಹೊಂಟೋದ್ರು.’ ಎಂದರು. ‘ ಯಾವಾಗ ಹೋದ್ಲು?’ ‘ಒಂದ್ ಅರ್ಧ ತಾಸು ಆದಾವ್ರಿಿ’ ಅಂದಾಗ ರೂಂ ಒಳಗೆ ಬಂದೆ. ಅಲ್ಲಿ ಟೇಬಲ್ ಮೇಲೆ ಅವಳು ಬರೆದ ಕಾಗದ ಇತ್ತು. ಅದನ್ನು ತೆಗೆದು ಓದಿದೆ. ‘ನಾನು ನಿಮಗೆ ಬೇಕಿಲ್ಲ. ಅದಕ್ಕೆೆ ನಾನು ಅಮ್ಮನ ಮನೆಗೆ ಹೋಗ್ತಾಾ ಇದೀನಿ’

ನಂಗೆ ಗಾಬರಿಯಾಗಿ, ಮನೆ ಹತ್ತಿಿರ ಇರೋ ಬಸ್ ಸ್ಟ್ಯಾಾಂಡ್ ಗೆ ಹೋದೆ. ಅವಳು ಕಂಬ ವರಗಿ ಕೊಂಡು ಮುಸುಮುಸು ಅಳುತಿದ್ದಳು. ಮನೆಗೆ ಕರೆದುಕೊಂಡು ಬಂದು, ಸೀದಾ ರೂಂಗೆ ಕರ್ಕೊಂಡು ಹೋದೆ. ‘ಯಾಕೆ ಏನಾಯಿತು?’ ಕೇಳಿದೆ. ‘ಇನ್ನೇನಾಗ್ಬೇಕು! ಮಾಡಬಾರದ್ದು ಮಾಡಿ ಏನು ಗೊತ್ತಿಿಲ್ದೆೆ ಇರೋ ತರ ಕೇಳ್ತಿಿರಲ್ಲ? ನಿಮಗೆ ನಾಚಿಕೆ ಆಗಲ್ವಾಾ?’ ಅಂದಾಗ ನನಗೂ ಕೋಪ ಬಂದು ಬೈದೆ. ಇದನ್ನು ಅವಳು ನಿರೀಕ್ಷಿಸಿರಲಿಲ್ಲ. ಜೋರಾಗಿ ಅಳೋಕೆ ಶುರುಮಾಡಿದಳು. ‘ನನ್ನಿಿಂದ ಏನು ತಪ್ಪಾಾಯ್ತು ಹೇಳು’ ಅಂದೆ. ನಿಧಾನವಾಗಿ, ಅವಳು ಬಿಕ್ಕುತ್ತ ‘ನನ್ನನ್ನು ಮದುವೆಯಾಗಿ ಮೋಸ ಮಾಡಿದ್ರಿಿ’ ಅಂದಳು. ‘ಯಾವುದ್ರಲ್ಲಿ ಮೋಸ ಮಾಡಿದ್ದೇನೆ ಹೇಳು’ ಅಂದೆ. ‘ನೀವು ಇಲ್ಲಿ ರಾತ್ರಿಿ ಚೂಡಾ ಬೇಕು ಅಂತ ಕೇಳ್ತಿಿದ್ರಂತೆ. ಅವರು ಕಳ್ಸುತ್ತಿಿದ್ರಂತೆ. ನಿಮಗೆ ಚೂಡಾ ಅಂದರೆ ತುಂಬಾ ಇಷ್ಟ ಅಂತೆ. ನಿಮಗೆ ಚೂಡಾ ಜತೆ ಚಕ್ಕಂದ ಆಡೋಕೆ ಹೇಗೆ ಮನಸು ಬಂತು?’ ಅಂದಾಗ, ಬಂದ ಕೋಪ ತಡೆದು, ಹಲ್ಲು ಕಚ್ಚಿಿಕೊಂಡು ‘ನಿಂಗ್ಯಾಾರು ಹೇಳಿದ್ರು?’ ಎಂದು ಕೇಳಿದೆ. ‘ನಾಚ್ಕೆೆ ಇಲ್ದೆೆ ಅವರಮ್ಮನೇ ಹೇಳಿದ್ರು. ತಪ್ಪುು ನಿಮ್ಮದಲ್ಲ. ಈ ಮನೆ ಸಹವಾಸ ಮಾಡ್ಸಿಿದ್ನಲ್ಲಾ, ಆ ನಿಮ್ಮ ಫ್ರೆೆಂಡು ಅವರದ್ದು.’ ಎಂದಳು.

ರಾತ್ರಿ ಚೂಡಾ ಬೇಕಂತೆ
ಅವಳನ್ನು ಕರ್ಕೊಂಡು ರೂಮಿನಿಂದ ಆಚೆ ಬಂದೆ. ಆಂಟಿ ಅಲ್ಲೇ ಕೂತಿದ್ರು. ಆಂಟಿ ಹತ್ರ ಹೋಗಿ, ‘ಆಂಟಿ, ಇವಳ ಹತ್ರ ಏನೇನ್ ಮಾತಾಡಿದ್ರೀ…?’ ಎಂದು ಕೇಳಿದೆ. ಆಂಟಿ ನಮ್ಮನ್ನ ನೋಡಿ ಗಾಬರಿಯಾದರು. ‘ಪರ್ವಾಗಿಲ್ಲ ಹೇಳಿ ಪ್ಲೀಸ್’ ಅಂದೆ. ‘ಶ್ರೀಧರ್ ಚಲೋ ಹುಡುಗ, ತುಂಬಾ ಬಿಡೆ ಮಾಡ್ಕೋೋತಾರೆ, ಚೂಡಾಮಣಿ ಶಾಲೆದಾಗಿಂದು ಏನಾದರೂ ಕೇಳಿದರೆ ಚಲೋ ಹೇಳಿಕೊಡುತ್ತಾಾರೆ. ಒಮ್ಮೊೊಮ್ಮೆೆ ರಾತ್ರಿಿ ಮೆಸ್‌ನಾಗೆ ಊಟಮಾಡಿ ಬಂದ್ಮೇಲೆ , ಚೂಡಾ ಬೇಕು ಅನ್ನೋೋರು. ನಾನು ಚೂಡಾನ್ನ ಅವರ ರೂಂಗೆ ಕಳುಹಿಸ್ತಿಿದ್ದೆ. ಅವರಿಗೆ ಚೂಡಾ ಅಂದ್ರೆೆ ಇಷ್ಟ. ಇವೆಲ್ಲಾಾ ಹೇಳಿದೆ’ ಎಂದರು. ಆಗ ನನ್ನ ಹೆಂಡತಿ ಪದ್ಮ ‘ಕೇಳಿಸಿಕೊಳ್ಳಿಿ, ಸರಿ ಕೇಳಿಸಿಕೊಳ್ಳಿಿ’ ಅಂತ ವ್ಯಂಗ್ಯವಾಗಿ ಹೇಳಿದಳು. ಆಂಟಿ ‘ಹೌದ್ರೀ ಶ್ರೀಧರ್, ನೀವು ಚೂಡಾ ಬೇಕು ಅಂತ ಕೇಳ್ತಿಿದ್ದಿದು ಖರೆ. ನಾನು ಪ್ಲೇಟ್ನಾಾಗೆ ಚೂಡಾ ಕಳಿಸ್ತಿಿದದ್ದು ಖರೆ . ನಂಗ್ ಏನಾಗೈತೆ ಸುಳ್ಳು ಹೇಳ್ಲಿಿಕ್ಕೆೆ’ ಅಂದ್ರು.

ಸಮಸ್ಯೆೆಯ ಮೂಲ ಈಗ ಗೊತ್ತಾಾಯಿತು. ‘ಆಂಟಿ ನಂಗೆ ಈಗ ಚೂಡ ಬೇಕಲ್ಲಾ!’ ಅಂದೆ. ಹೆಂಡತಿ ಪದ್ಮ ನನ್ನ ದುರುಗುಟ್ಟಿಿಕೊಂಡು ನೋಡುತ್ತಿಿದ್ದಳು. ಆಂಟಿ ‘ಆಯ್ತ್ರಿಿ’ ಅಂತ ಒಳಗೆ ಹೋಗಿ ಒಂದು ಪ್ಲೇಟಿನಲ್ಲಿ ಕಾರದ ಅವಲಕ್ಕಿಿ ಹಾಕಿಕೊಂಡು ಬಂದರು. ‘ಆಂಟಿ, ಇದಕ್ಕೆೆ ನಿಮ್ ಕಡೆ ಏನಂತೀರಿ?’ ಅಂದೆ. ‘ಇದಕ್ಕಾಾ ನಾವು ಚೂಡ ಅಂತೀವಿ’ ಅಂದ್ರು. ನಾನು ಹೆಂಡತಿ ಕಡೆಗೆ ತಿರುಗಿ, ‘ಇದೇ ಚೂಡಾನೆ ಆಂಟಿ ನನ್ನ ರೂಮಿಗೆ ಕಳಿಸ್ತಾಾ ಇದ್ದಿದ್ದು’ ಅಂತ ಅರ್ಥಪೂರ್ಣವಾಗಿ ನಕ್ಕು ಹೇಳಿದೆ. ಅವಳಿಗೂ ತನ್ನ ತಪ್ಪಿಿನ ಅರಿವಾಗಿ, ‘ಸಾರಿ ರೀ, ಇವರ ಮಗಳ ಹೆಸರು ಚೂಡಾಮಣಿ. ಇದು ಚೂಡಾ – ನಂಗೆ ಗೊತ್ತಾಾಗಲಿಲ್ಲ’ ಅಂದಾಗ, ಆಂಟಿ ಪದ್ಮ ಮಾತಾಡಿದ್ದನ್ನು ನೋಡಿ, ‘ಪದ್ಮ ಭಾಯಾರು ಏನು ಹೇಳ್ಯಿಿಕ್ ಹತ್ಯಾಾರೆ’ ಎಂದರು. ‘ಆಂಟಿ, ನಿಮ್ಮ ಭಾಷೆ ಅವಳಿಗೆ ಗೊತ್ತಾಾಗ್ಲಿಿಲ್ಲ ಅಂತ ಹೇಳ್ತಿಿದ್ದಾಳೆ’ ಅಂದೆ. ‘ಒಂದು ಊರಿಗಿಂದ ಇನ್ನೊೊಂದು ಊರಿಗೆ ಬಂದ್ರೆೆ ಭಾಷಾ ಗೊಂದಲವಾಗ್ತಾಾವ್ರಿಿ’ ಅಂದು, ‘ಆಯ್ತು ಬಿಡ್ರಿಿ ಈಗಲಾದರೂ ಊಟಕ್ಕೆೆ ಏಳಿ. ಊಟ ಮುಗಿಸ್ಕಂಡು ಹೋಗಿರಂತೆ’ ಅಂದಾಗ, ಎಲ್ಲಾ ಸಂಶಯಗಳು ಕಳೆದು ವಾತಾವರಣ ತಿಳಿಯಾಯಿತು.