*ಮುದಲ್ ವಿಜಯ್, 98440 78793
ತಳ ಸಮುದಾಯದ ಮೇಲೆ ನಡೆಯುತ್ತಿಿದ್ದ ಶೋಷಣೆ, ದೌರ್ಜನ್ಯಗಳಿಗೆ ನೊಂದು ಹೋಗಿದ್ದ ಕವಿ, ತಮ್ಮ ಕಾವ್ಯ ರಚನೆಯ ಪ್ರಾಾರಂಭದಲ್ಲಿ ಸಿಟ್ಟು, ಆಕ್ರೋೋಶಗಳಿಗೆ ಅಕ್ಷರ ರೂಪ ಕೊಟ್ಟಾಾಗ ದಲಿತ ಕವಿ ಎಂದು ಗುರುತಿಸಿಕೊಂಡಿದ್ದೇನೋ ನಿಜ. ಆದರೆ ಕಾಲ ಸರಿದಂತೆ ಅವರ ಕವಿತೆಗಳು ಜನಪರವಾದಾಗ, ಜನಪರ ಕವಿಯಾಗಿ ಎಲ್ಲರಿಗೂ ಆದರ್ಶವಾದದ್ದು ಈಗ ಇತಿಹಾಸ.
‘ಕಾವ್ಯ ಪ್ರಜ್ಞೆ ತನ್ನೆೆಲ್ಲ ಶಕ್ತಿಿ ಬಲವಾಗಿಸಿಕೊಂಡು ಬೌದ್ಧಿಿಕತೆ ತಲುಪಿದಾಗ ಹುಟ್ಟಿಿಕೊಳ್ಳುವ ಕಾವ್ಯಗಳು ಪ್ರಜ್ವಲಿಸಿ ಕತ್ತಲೆಯಲ್ಲಿ ಮುಳುಗಿರುವ ಲೋಕವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ’. ಈ ಮಾತುಗಳು ಕವಿ ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಅನ್ವಯವಾಗುತ್ತವೆ. ಹೊಲೆ ಮಾದಿಗರ ಹಾಡು ಎಂಬ ತಮ್ಮ ಕವನ ಸಂಕಲನದ ಮೂಲಕ ಒಂದು ಸಮುದಾಯದ ದನಿಯಾದ ಅವರು ದಲಿತ ವರ್ಗದ ಸಂವೇದನೆ ಶಕ್ತಿಿಯಾಗಿ ರೂಪುಗೊಂಡರು. ದಲಿತರ ಆದಿಕವಿ ಎಂಬುದಾಗಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಇತಿಹಾಸ. ಹಾಗಾಗಿ ದಲಿತ ಸಾಹಿತ್ಯದ ಹಿನ್ನೆೆಲೆ ತಿಳಿದುಕೊಳ್ಳುವ ಪಯಣದಲ್ಲಿ ಅವರ ಇರುವಿಕೆ ಮತ್ತು ಬರಹಗಳ ವಿಚಾರವಿಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂಬುದಕ್ಕೆೆ ಸಾಕ್ಷ್ಯಾಾಧಾರಗಳು ಬೇಕಾಗುವುದಿಲ್ಲ.
‘ಊರು ಸಾಗರವಾಗಿ’ ಡಾ. ಸಿದ್ಧಲಿಂಗಯ್ಯನವರ ಐದನೇ ಕವನ ಸಂಕಲನ. ಎಚ್. ಎಸ್. ಶಿವಪ್ರಕಾಶ್ ಅವರ ಮುನ್ನುಡಿ ಇದ್ದು, ಖ್ಯಾಾತ ಮಿಮರ್ಶಕ ಕುರ್ತಕೋಟಿ ಬರೆದಿರುವ ಕೆಲವು ಸಾಲು ಬೆನ್ನುಡಿಯಾಗಿವೆ. ಸುಂದರ ಮುಖಪುಟ ವಿನ್ಯಾಾಸದೊಂದಿಗೆ ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಸುಮಾರು ಎಪ್ಪತ್ತೈದು ಕವಿತೆಗಳು ಜೀವ ತಳೆದಿರುವ ಕವನ ಸಂಕಲನದ ಪ್ರಾಾರಂಭದಲ್ಲಿ ಹೆಚ್. ಎಸ್. ಶಿವಪ್ರಕಾಶ್ ಅವರು ‘ಹಿಂದೆ ಕವಿಯ ಸಹಜದನಿ ಜಲಪಾತದಂತೆ ಅಬ್ಬರಿಸುತ್ತಿಿತ್ತು.
ಆದರೆ ಈಗ ಸಮನೆಲದ ಹೊಳೆಯಂತೆ ಜುಳುಜುಳು ಹರಿಯುತ್ತಾಾ ತನ್ನ ಹರಹನ್ನು ಹಿಗ್ಗಿಿಸಿಕೊಳ್ಳುತ್ತಾಾ ಮುಂದರಿದಿದೆ ಊರು ಸಾಗರವಾಗುವಂತೆ’ ಎಂಬುದಾಗಿ ಬರೆದಿದ್ದಾಾರೆ. ತುಳಿತಕ್ಕೊೊಳಗಾದ ಸಮುದಾಯದಿಂದ ಬಂದ ಕವಿಯು ಒಂದು ಕಾಲಘಟ್ಟದಲ್ಲಿ ಮೇಲ್ವರ್ಗದಿಂದ ಸಮುದಾಯಕ್ಕಾಾಗುತ್ತಿಿದ್ದ ಅನ್ಯಾಾಯ ಸಹಿಸಿಕೊಳ್ಳದೆ ಸಿಡಿದೇಳುವಾಗ ಕೋಪ, ಆಕ್ರೋೋಶದಲ್ಲಿ ಧುಮ್ಮಿಿಕ್ಕಿಿ ಹರಿಯುವ ಜಲಪಾತದಂತೆ ತಮ್ಮ ಕಾವ್ಯವನ್ನು ಭೋರ್ಗರೆಸಿದ್ದು ನಿಜ. ಈಗಿನ ಕಾಲಘಟ್ಟದ ವ್ಯವಸ್ಥೆೆ ಸ್ವರೂಪ ಬದಲಾವಣೆ ಪಥ ತುಳಿದಿರುವುದರಿಂದ ಸಹಜವಾಗಿ ಆಕ್ರೋೋಶದ ನುಡಿಗಳು ಹರಿಯುವ ನದಿಯಾಗಿ ಶಾಂತಚಿತ್ತದ ಸಾಗರದಲ್ಲಿ ಸೇರಿದೆ ಎನ್ನಬಹುದು.
ಜನಪರ ಕವಿ
ತಳಮೂಲ ಸಮುದಾಯದ ಮೇಲೆ ನಡೆಯುತ್ತಿಿದ್ದ ಶೋಷಣೆ, ದೌರ್ಜನ್ಯಗಳಿಗೆ ನೊಂದು ಹೋಗಿದ್ದ ಕವಿ, ತಮ್ಮ ಕಾವ್ಯ ರಚನೆಯ ಪ್ರಾಾರಂಭದಲ್ಲಿ ತಮ್ಮೊೊಳೊಗಿದ್ದ ಸಿಟ್ಟು, ಆಕ್ರೋೋಶಗಳಿಗೆ ಅಕ್ಷರ ರೂಪ ದಲಿತ ಕವಿ ಎಂದು ಗುರುತಿಸಿಕೊಂಡಿದ್ದೇನೋ ನಿಜ. ಆದರೆ ಕಾಲ ಸರಿದಂತೆ ಅವರ ಕವಿತೆಗಳು ಜನಪರವಾದಾಗ, ಜನಪರ ಕವಿಯಾಗಿ ಎಲ್ಲರಿಗೂ ಆದರ್ಶವಾದದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಅದಕ್ಕೆೆ ಬಹುಮುಖ್ಯ ಕಾರಣ ನಮ್ಮ ದೇಶದಲ್ಲಿ ಶೋಷಣೆ, ದೌರ್ಜನ್ಯ ಎಂಬುದು ಒಂದು ಸಮುದಾಯಕ್ಕೆೆ ಮಾತ್ರ ಸೀಮಿತವಾಗಿಲ್ಲ ಎಂಬುದು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಠಿಿಸಿದ ಇವರ ಬರಹಗಳು ವಿಶ್ಲೇಷಿಸಲ್ಪಡುತ್ತಿಿವೆ, ಸಂಶೋಧಿಸಲ್ಪಡುತ್ತಿಿವೆ. ಅಷ್ಟಕ್ಕೂ ಸಿದ್ಧಲಿಂಗಯ್ಯ ಸಾವಿರಾರು ಕವಿತೆ ರಚಿಸಿದ ಕವಿಯಲ್ಲ. ಅವರಿಂದ ಜನ್ಮತಾಳಿದ ಕವಿತೆಗಳು ಮುನ್ನೂರು ಇರಬಹುದೇನೋ, ಆದರೆ ಅವುಗಳಲ್ಲಿ ಒಬ್ಬ ನೈಜ ಕವಿ ಕಟ್ಟಿಿಕೊಡಬಹುದಾದ ಮೌಲ್ಯಯುತ ವಿಷಯಗಳು ಕಲಾತ್ಮಕವಾಗಿ ಸೃಷ್ಠಿಿಸಲ್ಪಟ್ಟಿಿವೆ.
ಇತ್ತೀಚಿನ ದಿನಗಳಲ್ಲಿ ಬದುಕಿನ ಸಾಕ್ಷಾತ್ಕಾಾರ ಸಾಧಿಸಿಕೊಂಡ ಓರ್ವ ಸಂತರಾಗಿ ಕಾಣುವ ಡಾ. ಸಿದ್ಧಲಿಂಗಯ್ಯ ರಚಿಸಿರುವ ‘ಊರು ಸಾಗರವಾಗಿ’ ಕವನ ಸಂಕಲನದ ಕವಿತೆಗಳು ಒಂದು ಸಮುದಾಯಕ್ಕೆೆ ಮಾತ್ರವಲ್ಲ, ಎಲ್ಲ ವರ್ಗದ ಶೋಷಿತ ಜನರಿಗೂ ದನಿಯಾಗಿದೆ.
ಮತ್ತೊೊಂದು ಅವರ ಕವಿತೆಗಳಲ್ಲಿ ಕಲಾತ್ಮಕತೆ, ಕಾವ್ಯಾಾತ್ಮಕದ ಸೊಗಡು ಇಲ್ಲವೆಂದು ವ್ಯಂಗ್ಯವಾಡುವ ಒಂದು ವರ್ಗವೂ ಇದೆ. ಕವಿಯ ಚಿಂತನೆಗಳನ್ನು, ಬರಹಗಳನ್ನು, ಕ್ರಾಾಂತಿ ಕಿಡಿ ಹಚ್ಚುವ ಕಾವ್ಯಗಳನ್ನು ಬೆರಗು ಕಣ್ಣುಗಳಿಂದ ನೋಡಿದರೂ ಕವಿಯ ಸಾಧನೆ ಸಹಿಸಿಕೊಳ್ಳಲಾಗದೆ ಹೊಟ್ಟೆೆಗೆ ಬೆಂಕಿ ಹಚ್ಚಿಿಕೊಂಡು ಒದ್ದಾಾಡಿದ್ದಾಾರೆ. ಅದೇನೇ ಇರಲಿ, ಕವಿಯನ್ನು ಸೃಷ್ಠಿಿಸಿದ ಕಾಲ ಎಂದಿಗೂ ನಿಲ್ಲುವುದಿಲ್ಲ. ಆದರೆ ಕವಿ ಶಾಶ್ವತವಾಗಿ ಉಳಿಯುತ್ತಾಾನೆ. ಮಳೆ ಹನಿಗಳು ಬೀಳುವಾಗ ನಾಸಿಕಕ್ಕೆೆ ಬಡಿಯುವ ಮಣ್ಣಿಿನ ವಾಸನೆಯಂತೆ, ಒಳ್ಳೆೆಯ ಕವಿತೆಗಳು ಸದಾ ಕಾಲವೂ ತನ್ನ ಪರಿಮಳ ಪಸರಿಸುತ್ತಲೇ ಇರುತ್ತವೆ. ಇದಕ್ಕೆೆ ಸಿದ್ಧಲಿಂಗಯ್ಯ ಕಾವ್ಯಗಳು ಹೊರತಲ್ಲ. ಸದಾ ಸ್ಫೂರ್ತಿಯಿಂದ, ಅದೇ ಶ್ರದ್ಧೆೆಯಿಂದ, ಪ್ರಜ್ಞೆಯಿಂದ ಕವಿ ಬರೆಯುತ್ತಲೇ ಇರಬೇಕು ಎಂದುಕೊಂಡರೂ ಅದು ಸಾಧ್ಯವಿಲ್ಲದ ಮಾತು. ವಯಸ್ಸು ಮಾಗಿದಂತೆ ಮನಸ್ಸು ಮಾಗುತ್ತದೆ, ಬಿಸಿ ರಕ್ತದ ಹರಿವು ತಣ್ಣಗಾದಾಗ ಆಕ್ರೋೋಶ ತಣ್ಣಗಾಗುತ್ತದೆ. ಸಿದ್ಧಲಿಂಗಯ್ಯನವರ ಹಿಂದಿನ ಕವನಗಳಲ್ಲಿದ್ದ ಸಿಡಿಮದ್ದು ಈಗ ಸೌಮ್ಯತೆಯಿಂದ ಸಮಾಜದ ಅಂಕುಡೊಂಕುಗಳಿಗೆ ಮರುಗುತ್ತದೆ. ಊರು ಸಾಗರವಾಗಿ ಎಂಬ ಕವಿತೆಯ ಕೆಳಗಿನ ಸಾಲುಗಳೇ ಅದಕ್ಕೆೆ ಉದಾಹರಣೆ.
‘ಬಂತು ಭೂತಳದಿಂದ ಬಂತು ನಡುಗಡಲಿಂದ
ಹೆತ್ತ ತಾಯೊಡಲಿಂದ ವಿಷದ ಜ್ವಾಾಲೆ
ತಪ್ತವಾಯಿತು ಸಪ್ತಸಾಗರ
ಮುಳುಗೇಳುತಿದೆ ಮೂರುಲೋಕ
ದೇವ ಕಿನ್ನರ
ಉರಿಯ ತಾಳದೆ ಗೋಳಾಡಿ ಸತ್ತರು
ಸ್ವರ್ಗಲೋಕವು ಸುಟ್ಟು ಬೂದಿಯಾಗಿತ್ತು
ಸೂರ್ಯೋದಯವಿಲ್ಲದೆ
ಸರ್ವೋದಯವುಂಟೆ ಅಣ್ಣ?
ಭೂಲೋಕವನ್ನೇ ಸ್ವರ್ಗದಂತೆ ಕಾಣುವ ಕವಿ, ಮನುಷ್ಯ ಸಂಬಂಧ ಕಲುಷಿತಗೊಂಡು ಮಾನವತೆ ಅವಸಾನವಾಗುವಾಗುತ್ತಿಿರುವ ಕಾಲಘಟ್ಟದಲ್ಲಿ, ಮನುಕುಲವು ದ್ವೆೆೀಷ, ಅಸೂಯೆ, ಮೋಸ, ವಂಚನೆಗಳ ಉರಿಗೆ ಗೋಳಾಡಿ ಸತ್ತಂತೆ ಭಾವಿಸಿದ್ದು, ಭುವಿಯನ್ನು ಬೆಳಗುವ ಸೂರ್ಯನೇ ಮರೆಯಾದಾಗ ಜಗದ ಉಳಿವು ಹೇಗೆ ಎಂಬ ಜಿಜ್ಞಾಾಸೆ ಈ ಕವಿತೆಯಲ್ಲಿ ಅಭಿವ್ಯಕ್ತಿಿಗೊಂಡಿದೆ. ಮನುಕುಲದ ಅಸಮಾನತೆಯನ್ನು ಬಹುವಾಗಿ ಖಂಡಿಸುವ ರೋಷಾಗ್ನಿಿಯ ಮಾಯದ ಗಾಯ ಹೊತ್ತಿಿ ಬದಲಾಗಿ ಕಿಡಿದೀಪವಾಗಿ ನ್ಯಾಾಯ ಕೇಳುತ್ತದೆ.
‘ಶತಶತಮಾನ ಶೋಷಿತ ಜನಕೆ
ವಿದ್ಯಾಾವಂಚನೆ ಮಾಡಿದೆಯಲ್ಲ
ವೇದವನೋದಿದ ನಾಲಿಗೆ ಸೀಳಿ
ಕೇಳಿದ ಕಿವಿಗೆ ಸೀಸವ ಕಾಸಿ
ಘೋರ ನರಕಕೆ ತಳ್ಳಿಿದೆಯಲ್ಲ
ನ್ಯಾಾಯವೆ ತಾಯಿ ಹೇಳೆಂದೆ
ಜಾತಿ ಕಳಂಕ ಇಲ್ಲದ ಸಮತೆಯ
ಕಾಲದ ಮಾತುಗಳಂತಿರಲಿ
ಜಾತಿ ಬೆಂಕಿಗೆ ಬಲಿಯಾದವರ
ಬೂದಿಯಾದವರ ಕಥೆ ಏನೆಂದೆ
ಏಕಲವ್ಯನ ಬೆರಳೇನಾಯ್ತು
ಶಂಭುಕ ವಧೆಯು ಯಾಕಾಯ್ತು
ಮರೆವೆನೆ ಕರ್ಣನಿಗಾದವಮಾನ
ಅಜ್ಞಾಾನದ ಕಡುಕತ್ತಲೆಯಲ್ಲಿ
ಜನಗಳು ಕೊಳತದ್ದೇಕೆಂದೆ’’
ಬಹುಶಃ ಕಿಚ್ಚಿಿನಿಂದ ಸಮಾಜದ ಸಮಸ್ಯೆೆ ಸಾಧ್ಯವಿಲ್ಲ ಎಂಬ ವಿಚಾರವು ಕವಿಮನದಲ್ಲಿ ಅಂಕುರವಾಗಿರಬೇಕು. ಇಲ್ಲಿ ಕವಿ, ಡಾ. ಅಂಬೇಡ್ಕರ್ ಮಾತುಗಳನ್ನು ಉಲ್ಲೇಖಿಸಿದ್ದರೂ ಅಹಿಂಸೆಯಿಂದಲೇ ಗೆಲುವು ಎಂಬುದನ್ನು ಮನಗಂಡಿರಬೇಕೆಂಬುದಕ್ಕೆೆ ಕವಿತೆಯ ಕೆಳಗಿನ ಸಾಲುಗಳು ಸಾಕ್ಷಿ.
‘ಗತಕಾಲವನು ಅತಿಯಾಡದಿರು
ಅಂಬೇಡಕರನು ನೋಡಿ ಕಲಿ
ಕಹಿಯನು ಮರೆವುದು ಹಿತವನು ತರುವುದು
ಎಂದುಪದೇಶವ ಮಾಡಿದಳು
ಇತಿಹಾಸವನು ಮರೆಯುವ ಜನರು
ನಿರ್ಮಿಸಲಾರರು ಇತಿಹಾಸ
ಅಂಬೇಡಕರರ ಮಾತುಗಳನ್ನೆೆ
ದೇವಿಯ ಗಮನಕೆ ನಾತಂದೆ
ಅಪವಾದಗಳು ಚರಿತ್ರೆೆಯಲ್ಲ
ಜನಸಾಮಾನ್ಯರ ಬಾಳು ಚರಿತ್ರೆೆ
ಕಾಡುತಲಿರುವವು ಮೈಮನಗಳನ್ನು
ಶತಶತಮಾನದ ಗಾಯಗಳು
ಅಳಲನ್ನು ಹೊರಹಾಕುತ್ತಾಾ ಕೊನೆಗೆ ಅಸಹಾಯಕರಾಗಿ ಕವಿ ನಿಲ್ಲುವುದನ್ನು ಕೆಳಗಿನ ಸಾಲುಗಳು ಹೇಳುತ್ತವೆ.
‘ದೇವಿಯ ಬಳಿ ಇದಕುತ್ತರವಿಲ್ಲ
ಎಲ್ಲಿಗೆ ಹೋದಳೊ ನನಗರಿವಿಲ್ಲ
ಬಂಡೆಯ ಎದುರಿಗೆ ನಾನಿಂತಿದ್ದೆೆ
ದುಕ್ಕದ ಹೊರೆಯನು ಹೊತ್ತಿಿದ್ದೆೆ’’
ಅರಿವಿನ ಹಣತೆ ಎಂಬ ಕವಿತೆಯಲ್ಲಿ ಕವಿ ಒಂದು ಸಮುದಾಯಕ್ಕೆೆ ಆಗುತ್ತಿಿರುವ ಅನ್ಯಾಾಯಕ್ಕೆೆ ಬಂಡಾಯ ಏಳುವುದಿಲ್ಲ. ಬದಲಾಗಿ ಶೋಷಣೆಗೊಳಗಾದ ಜನ ಇಂದಲ್ಲ ನಾಳೆ ಎಚ್ಚರಗೊಳ್ಳುತ್ತಾಾರೆ, ಆಗ ಅವರ ಘೋಷಣೆಯ ಆರ್ಭಟಕ್ಕೆೆ ಶೋಷಣೆ ಬೇಡಿ ಕಳಚಿಕೊಂಡು ದಾಸ್ಯತನ ಅಳಿಯುತ್ತದೆ ಎಂಬ ಆಶಯ
2015 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಸಿದ್ದಲಿಂಗಯ್ಯನವರು ಸಮ್ಮೇಳನಕ್ಕೆೆ ಬಂದಿಳಿದ ಜನಸಾಗರವನ್ನು ನೋಡಿ ಕೃತಜ್ಞತಾಭಾವದೊಂದಿಗೆ ಬರೆದ ಕವಿತೆಯ ಸಾಲುಗಳನ್ನು ಓದುವಾಗ ಸಿದ್ಧಲಿಂಗಯ್ಯನವರೊಳಗಿರುವ ಮಾನವೀಯ ಗುಣವನ್ನು ಕೆಳಗಿನ ಸಾಲುಗಳ ಮೂಲಕ ವ್ಯಕ್ತಪಡಿಸುತ್ತಾಾರೆ.
‘ಗಡಿಗಳಿಂದ ಯೋಧರಂತೆ ಗುಡಿಗಳಿಂದ ದೇವರಂತೆ
ಮನೆಗಳಿಂದ ನೆಂಟರಂತೆ ಗುಡಿಸಿಲಿಂದ ಗೆಳೆಯರಂತೆ
ಊರಿನಿಂದ ಧೀರರಂತೆ ಕಾಡಿನಿಂದ ಹುಲಿಗಳಂತೆ
ಶ್ರವಣಬೆಳಗೊಳಕೆ ಬಂದ ಬಳಗ ಯಾವುದು’
ಹೀಗೆ ‘ಊರು ಸಾಗರವಾಗಿ’ ಕವನ ಸಂಕಲದಲ್ಲಿನ ಬಹುತೇಕ ಕವಿತೆಗಳು ನೊಂದವರಿಗಾಗಿ ಮರುಗುತ್ತವೆ, ಕೊರಗುತ್ತವೆ ವಿನಃ ಅಪಮಾನಗಳಿಗೆ ಸೇಡು ತೀರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಒಂದು ರೀತಿಯಲ್ಲಿ ಶಾಂತಿ ಮಂತ್ರವನ್ನು ಪ್ರಧಾನವಾಗಿಸಿಕೊಂಡು ಬರೆದಿರುವ ಇಲ್ಲಿನ ಬಹುತೇಕ ಕವಿತೆಗಳಿಂದ ಸಿದ್ದಲಿಂಗಯ್ಯನವರು ಕ್ರಾಾಂತಿಕಾರಿ ರೂಪದಿಂದ ಬುದ್ದನ ತತ್ವಗಳವನ್ನು ಆರಾಧಿಸುತ್ತಾಾ ಧ್ಯಾಾನ ಸ್ವರೂಪದಲ್ಲಿ ಪ್ರತಿಷ್ಠಾಾಪನೆಗೊಳ್ಳುತ್ತಾಾರೆ.