Sunday, 15th December 2024

ವಯಸ್ಕರಲ್ಲಿ ಬುದ್ದಿಮಾಂದ್ಯತೆ (ಡಿಮೆನ್ಶಿಯಾ)

ಬುದ್ಧಿಮಾಂದ್ಯತೆ ಮನುಷ್ಯನ ಮೆದುಳಿನ ಒಂದು ಸ್ಥಿತಿ. ಮೆದುಳಿನ ಕಾರ್ಯವೈಖರಿಯಲ್ಲಿ ವ್ಯತ್ಯಾಸವಾದಾಗ ಮತ್ತೆ ಹಿಂದಿನಂತೆ ತನ್ನ ದೈನಂದಿನ ಕಾರ್ಯಗಳನ್ನು ನಿರ್ವಹಿಸಲಾಗದ ರೀತಿಯಲ್ಲಿ ತೊಂದರೆ ಉಂಟಾಗಾದ ಇರುವ ಸ್ಥಿತಿ. ಇದರಲ್ಲಿ ಜ್ಞಾಪಕಶಕ್ತಿ ಕಡಿಮೆಯಾಗು ವುದು, ಭಾಷೆಯ ಬಳಕೆಯಲ್ಲಿ ತೊಂದರೆಯಾಗುವುದು. ತಾರ್ಕಿಕ ಶಕ್ತಿಯಲ್ಲಿ ಕೊರತೆ, ಔದ್ಧಿಕ ಸಮನ್ವಯತೆಯ ಕೊರತೆ ಹಾಗೂ ಮಾನಸಿಕ ಸ್ಥಿತಿಗತಿಗಳಲ್ಲಿ ವ್ಯತ್ಯಾಸ ಇವೆಲ್ಲವೂ ಕೂಡ ಕಾಣಬಹುದು.

-ಡಾ.ಉಮಾಶಂಕರ್ ಆರ್. ನರರೋಗ ತಜ್ಞರು, ಬೆಂಗಳೂರು
ನ್ಯೂರೋ ಸೆಂಟರ್, ೯೮೮೦೧೫೮೭೫೮.

ಬುದ್ಧಿಮಾಂದ್ಯತೆಯು ಮೆದುಳಿನ ಹಲವಾರು ಭಾಗಗಳಲ್ಲಿ ತೊಂದರೆ ಉಂಟಾದಾಗ ಉದಾಹರಣೆಗೆ ಜ್ಞಾಪಕ ಶಕ್ತಿಯ, ಕಲಿಯುವಿಕೆಯ, ನಿರ್ಧರಿಸುವ, ತಾರ್ಕಿಕ ಯೋಚನೆಗಳ ಬಗ್ಗೆ ಸಂಬಂಧಿಸಿದ ಭಾಗಗಳ ತೊಂದರೆ ಉಂಟಾದಾಗ ಬುದ್ಧಿಮಾಂದ್ಯತೆ ಕಂಡುಬರುತ್ತದೆ.

ಆಲ್ಸೀಮರ್ ಖಾಯಿಲೆ ಬುದ್ಧಿಮಾಂದ್ಯತೆಗೆ ಪ್ರಮುಖ ಕಾರಣ. ಉಳಿದಂತೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಲೀವೈ ಬಾಡಿ ಎಂಬ ಅಂಶಗಳು ನರಕೋಶಗಳಲ್ಲಿ ತುಂಬಿಕೊಳ್ಳುವುದು, ಪಾರ್ಕಿನ್ಸನ್ ಖಾಯಿಲೆ ಜೊತೆಗೆ ಬುದ್ಧಿ ಮಾಂದ್ಯತೆ, -ಂಟೋ ಟೆಂಪೆರಲ್ ಬುದ್ಧಿಮಾಂದ್ಯತೆ ಇವು ಇನ್ನಿತರ ಕಾರಣಗಳು. ಮೇಲ್ಕಂಡ ಎ ಕಾರಣಗಳು ಕೂಡ ಸಂಪೂರ್ಣ ಗುಣಮುಖರನ್ನಾಗಿಸಲು ಸಾಧ್ಯವಾಗುವುದಿಲ್ಲ. ಮೇಲ್ಕಂಡ ಕಾರಣಗಳು ಮೆದುಳಿನ ನರಕೋಶಗಳು ನಶಿಸುವುದರಿಂದ ಉಂಟಾಗುವ ಖಾಯಿಲೆಗಳು.

ಮರೆಗುಳಿತನವೇ ಬುದ್ಧಿಮಾಂದ್ಯತೆಯೇ?: ಮರೆಗುಳಿತನ ಬುದ್ದಿಮಾಂದ್ಯತೆಯ ಒಂದು ಲಕ್ಷಣವಾದರೂ, ಇದರ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆ ಮಾಡದಿದ್ದರೆ ಬುದ್ದಿಮಾಂದ್ಯತೆ ಎಂದು ಎನ್ನಿಸಿಕೊಳ್ಳುವುದಿಲ್ಲ.

ಬುದ್ಧಿಮಾಂದ್ಯತೆಯ ಪ್ರಮುಖ ವಿಧಗಳು
೧. ಆಲ್ಸೀಮರ್ ಬುದ್ಧಿಮಾಂದ್ಯತೆ: ಇದು ಬುದ್ಧಿಮಾಂದ್ಯತೆಯ ಪ್ರಮುಖ ಕಾರಣ. ಇದರಲ್ಲಿ ಟಾವು ಹಾಗೂ ಅಮೈಲಾಯಿಡ್ ಎಂಬ ಪ್ರೊಟೀನ್ ಮೆದುಳಿನ ನರಕೋಶಗಳಲ್ಲಿ ಸಂಗ್ರಹವಾಗಿ ನರಕೋಶಗಳಿಗೆ ತೊಂದರೆ ಉಂಟುಮಾಡಿ ಮೆದುಳಿನ ಸಂವಹನ ಶಕ್ತಿಯಲ್ಲಿ ತೊಂದರೆ ಉಂಟುಮಾಡುತ್ತವೆ. ಮುಖ್ಯವಾಗಿ ಅಲ್ಪಾವಧಿ ಮರೆಗುಳಿತನ, ಗೊಂದಲ, ವ್ಯಕ್ತಿತ್ವದ ತೊಂದರೆ, ಮಾತನಾಡುವುದರಲ್ಲಿ ತೊಂದರೆ, ಹೆಸರಿಸುವುದು, ಪದಗಳನ್ನು ಹುಡುಕುವುದು, ನಡೆಯಲು ಕೂಡ ತೊಂದರೆ ಉಂಟಾಗಬಹುದು.

ಅಪರೂಪವಾಗಿ ಅನುವಂಶಿಕವಾಗಿಯೂ ಕೂಡ ಕೆಲವರಲ್ಲಿ ಕಾಣಿಸಿಕೊಳ್ಳುವುದು. ಶೇ.೬೦ ರಿಂದ ೮೦ ರೋಗಿಗಳ ಬುದ್ಧಿಮಾಂದ್ಯತೆಗೆ ಆಲ್ಸೀಮರ್
ಕಾರಣ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಅಥವಾ ರಕ್ತಸ್ರಾವ ಮೆದುಳಿನ ಹಲವಾರು ಭಾಗಗಳಲ್ಲಿ ಉಂಟಾದಾಗ ಮರೆಗುಳಿತ ಉಂಟಾಗ ಬಹುದು.

೨. ಫ್ರಾಂಟೋಟೆಂಪರಲ್ ಬುದ್ಧಿಮಾಂದ್ಯತೆ: ೪೦ ವರ್ಷದಿಂದ ೬೦ ವರ್ಷದ ಜನರಲ್ಲಿ ಕಾಣಿಸಿಕೊಳ್ಳತ್ತದೆ. ಸಾಮಾನ್ಯವಾಗಿ ಜ್ಞಾಪಕ ಶಕ್ತಿಯ ಕೊರತೆಯ ಜೊತೆಗೆ, ನಡತೆ ಹಾಗೂ ಆಹಾರ ಪದ್ದತಿಯಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುಬಹುದು. ಕೆಲವು ಕಾರಣಗಳಿಂದ ಉಂಟಾಗುವ ಬುದ್ಧಿಮಾಂದ್ಯತೆ ಯನ್ನ ಸಂಪೂರ್ಣವಾಗಿ ಗುಣಪಡಿಸಬಹುದು. ವಿಟಮಿನ್ ಬಿ೧೨ ಕಡಿಮೆಯಾಗುವುದು, ಕೆಲವು ಹಾರ್ಮೋನುಗಳ ವ್ಯತ್ಯಾಸ, ಥೈರಾಯ್ಡ್ ಖಾಯಿಲೆ, ಮೆದುಳಿನಲ್ಲಿ ನೀರು ತುಂಬಿಕೊಳ್ಳುವುದು,ಕೆಲವು ಮೆದುಳಿನ ಸೋಂಕು (ಹೆಚ್‌ಐವಿ,ಸಿಪ್ಪಿಲಿಸ್)

೩. ಬುದ್ಧಿಮಾಂದ್ಯತೆ ಪತ್ತೆಹಚ್ಚುವುದು ಹೇಗೆ?: ಜ್ಞಾಪಕ ಶಕ್ತಿಯ ಹಾಗೂ ವಯಕ್ತಿಕ ಪರೀಕ್ಷೆಯಿಂದ ಮತ್ತು ಹಲವಾರು ರಕ್ತದ ಪರೀಕ್ಷೆ ಮತ್ತೆ ಎಂಆರ್‌ಐ ಸ್ಕ್ಯಾನ್ ಮುಖಾಂತರ, ಇದು ಯಾವ ರೀತಿಯ ಬುದ್ಧಿಮಾಂದ್ಯತೆ ಮತ್ತು ಅದು ಮುಂದೆ ಸಾಗುವ ರೀತಿ ಅಥವಾ ಹಾದಿಯನ್ನ ತಿಳಿದುಕೊಳ್ಳ ಬಹುದು.

ಬುದ್ಧಿಮಾಂದ್ಯತೆ ಚಿಕಿತ್ಸೆ ಹೇಗೆ?
ಬುದ್ಧಿಮಾಂದ್ಯತೆ ತಡೆಗಟ್ಟುಲು ಮೆದುಳನ್ನು ಕ್ರಿಯಾಶೀಲವಾಗಿಟ್ಟುಕೊಳ್ಳು ವುದು. ಕೆಲವು ಔಷಧಿಗಳ ಬಳಕೆಯ ಮೇಲೆ ನಿಗಾವಹಿಸುವುದು ಇತ್ಯಾದಿ,
ಪ್ರಮುಖ ವಿಚಾರಗಳು. ಚಿಕಿತ್ಸೆಗೆ ಬಂದರೆ ಕೆಲವು ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು. ವರ್ತನೆಯ ಚಿಕಿತ್ಸೆಯಿಂದ ಹಾಗೂ ಮೆದುಳನ್ನು ಸಕ್ರಿಯಗೊಳಿಸಲು ಬೌದ್ಧಿಕ ಕಸರತ್ತುಗಳನ್ನು ಕಲಿತುಕೊಳ್ಳುವುದು ಒಟ್ಟು ಚಿಕಿತ್ಸಾ ಕ್ರಮಗಳು.

ಇತ್ತೀಚೆಗೆ ಕೆಲವು ಮಾನೋಕ್ಲೋನಲ್ ಆಂಟಿಬಾಡಿ (ಅಡುಕನು ಮಾಬ) ನಂತಹ ಔಷಧಿಗಳು ಉತ್ತಮ ಫಲಿತಾಂಶಗಳು ದೊರಕಿರುವ ಬಗ್ಗೆ ಮಾಹಿತಿ ಇದೆ.

ವಯಸ್ಕರಲ್ಲಿ ಬುದ್ಧಿಮಾಂದ್ಯತೆ ಹಿರಿಯ ನಾಗರಿಕರಲ್ಲಿ ಕಂಡು ಬರುವ ಒಂದು ಮುಖ್ಯ ಖಾಯಿಲೆ. ಜನಸಂಖ್ಯೆಯ ಸರಾಸರಿ ವಯಸ್ಸು ಹೆಚ್ಚಾದಂತೆ ಬುದ್ಧಿಮಾಂದ್ಯತೆಯ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ೬೫ ವರ್ಷ ಮೇಲ್ಪಟ್ಟ ಜನರಲ್ಲಿ ಶೇ.೧೦ ಜನರಲ್ಲಿ ಬುದ್ಧಿಮಾಂದ್ಯತೆ ಕೆಲವು ಲಕ್ಷಣಗಳು ಕಾಣಸಿಗುತ್ತವೆ. ವಯಸ್ಸು ೮೫ರ ಮೇಲ್ಪಟ್ಟಾಗ ಶೇ.೫೦ ರಷ್ಟು ಜನರಲ್ಲಿ ಬುದ್ಧಿಮಾಂದ್ಯತೆಯ ಕೆಲ ಲಕ್ಷಣಗಳು ಕಂಡುಬರುತ್ತವೆ.

ಸಮಾಜದ ಮೇಲೆ ಪರಿಣಾಮಗಳು
ಡಿಮೆನ್ಸಿಯಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವರಿಂದ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಪಾಲನಾ ಕೇಂದ್ರಗಳನ್ನು ತೆರೆಯಲು ಗಮನ ಹರಿಸಬೇಕಾದ ಅವಶ್ಯಕತೆ ಇದೆ. ಈ ರೀತಿಯ ರೋಗಿಗಳ ಆರೈಕೆಗೆ ನಮ್ಮಲ್ಲರ ಸಹಾನುಭೂತಿ ಮತ್ತು ಕಾಳಜಿ ತುಂಬಾ ಮುಖ್ಯವಾಗಿರುತ್ತದೆ.