Thursday, 21st November 2024

ಎಡವಟ್ಟಾಯಿತೆಂದು ಎದೆಗುಂದಬೇಡಿ

* ಬಿ.ಕೆ.ಮೀನಾಕ್ಷಿ, ಮೈಸೂರು

ನಾವು ಕೆಲವರ ಮನೆಗೆ ಭೇಟಿ ನೀಡಿದಾಗ ಏನಾದರೊಂದು ಪ್ರಮಾದ ಮಾಡಿರುತ್ತೇವೆ. ತಿಳಿದು ಮಾಡುತ್ತೇವೋ ತಿಳಿಯದೆ ಮಾಡುತ್ತೇವೋ, ಅಂತೂ ಪ್ರಮಾದವಂತೂ ಗ್ಯಾಾರಂಟಿ. ಇಂತಹ ಅನೇಕ ಘಟನೆಗಳು ನಮ್ಮನ್ನು ಹೇಗೆ ಇಕ್ಕಟ್ಟಿಿಗೆ ಸಿಕ್ಕಿಿಸುತ್ತವೆಯೆಂದರೆ, ಏನಾದರೊಂದು ಸಮಜಾಯಿಷಿ ಹೇಳಿ ಬಚಾವಾಗಲು ಸಾಧ್ಯವೇ ಇಲ್ಲ. ಈ ಅಷ್ಟೆೆ. ನಮ್ಮನ್ನು ಅದೆಷ್ಟು ಸಂಕಷ್ಟಕ್ಕೆೆ ಸಿಕ್ಕಿಿಸುತ್ತವೆ ಗೊತ್ತೇ? ನಾವು ಮನೆಯಿಂದಲೇ ಅವುಗಳಿಗೆ ತಾಕೀತು ಮಾಡಿಕೊಂಡು ಬಂದಿರುತ್ತೇವೆ, ಇದನ್ನು ಅಲ್ಲಿ ಹೇಳಬಾರದು, ಅದನ್ನು ಅವರ ಮನೆಯಲ್ಲಿ ಮಾತಾಡಬಾರದು, ಯಾರು ಏನೇ ಮಾತಾಡಿಸಿದರೂ ಕೇಳಿದ್ದಕ್ಕಷ್ಟೆೆ ಉತ್ತರ ಹೇಳಿ ಸುಮ್ಮನಾಗಬೇಕು….. ಹಾಗೆ ಹೀಗೆ ಎಂದೆಲ್ಲ ಮನೆಯಲ್ಲೇ ಕಿವಿಯೂದಿ ಕರೆದುಕೊಂಡು ಬಂದಿರುತ್ತೇವೆ. ಆದರೆ ಈ ಮಕ್ಕಳು ಎಂಬ ಕೋಡಂಗಿಗಳು, ಮನೆಯಲ್ಲಿ ಎಲ್ಲದಕ್ಕೂ ಆಗಲಿ ಎಂದು ನಮ್ರವಾಗಿ ಉತ್ತರಿಸುತ್ತಾಾ ತಲೆಯಾಡಿಸಿ, ಹೋದಕಡೆ ಮಾನವನ್ನು ತೆಗೆಯುತ್ತವೆ ಅಲ್ಲವ? ಮನ ಬಂದಂತೆ ಲಂಗು ಲಗಾಮಿಲ್ಲದ ಕುದುರೆಯಾಗಿಬಿಡುತ್ತವೆ.

ಎದುರುಮನೆಯವರು ಮಗುವನ್ನು ಮನಸೋಇಚ್ಛೆೆ ಬಡಿದುಹಾಕುತ್ತಿಿದ್ದರು. ‘ಅಗ್ನಿಿಸಾಕ್ಷಿ’ ಧಾರಾವಾಹಿಯನ್ನು ಕೂಡ ತಪ್ಪಿಿಸಿಕೊಂಡು ಹಿಗ್ಗಾಾಮುಗ್ಗಾಾ ಬಾರಿಸುತ್ತಿಿದ್ದುದು ನಮ್ಮ ಮನೆಗೆ ಕೇಳಿಸುತ್ತಿಿತ್ತು. ನಾನು ಅಗ್ನಿಿಸಾಕ್ಷಿ ಬ್ರೇಕ್ ಬಂದ ಕೂಡಲೇ ಸರಸರನೆ ಅವರ ಮನೆಗೆ ನಡೆದೆ, ಕಾರಣ ಬ್ರೇಕ್ ಮುಗಿಯುವುದರೊಳಗೆ ಮತ್ತೆೆ ವಾಪಸಾಗಬೇಕಿತ್ತು. ವಿಚಾರಿಸಿದೆ, ಮತ್ತು ಸಲಹೆಯೊಂದನ್ನು ನೀಡಿದೆ. ‘ಅಯ್ಯೋ, ಯಾಕಮ್ಮಾಾ ಹೀಗೆ ಹೊಡಿತಿದ್ದೀಯಾ? ಧಾರಾವಾಹಿ ನೋಡಾದ್ಮೇಲಾದ್ರೂ ಹೊಡೀಬಾರದೆ? ನಮ್ಮೆೆನೆಗೆ ಕೂಡ ನೀನು ಹೊಡ್ಯೋೋದು, ಮಗು ಅಳೋದು ನಂಗೆ ಡೈಲಾಗೇ ಕೇಳ್ತಿಿಲ್ಲ’ ಎಂದೆ.
ಮಗುವಿನ ತಾಯಿಗೆ ಅದೆಲ್ಲಿತ್ತೋೋ ಕೋಪ, ‘ಅಯ್ಯೋ, ಹೋಗ್ರಿಿ ಆಂಟಿ ನಿಮ್ಮನೇಗೆ. ಅಗ್ನಿಿಸಾಕ್ಷಿ ಮನೆ ಹಾಳಾಯ್ತು’ ಎಂದವಳೇ ರಪ್ ಅಂತ ಬಾಗಿಲು ಹಾಕಿದಳು. ಸಧ್ಯ! ಬ್ರೇಕ್ ಮುಗಿಯಲು ಬಂದಿತ್ತು. ನಾನು ಓಡಿ ಮನೆ ತಲುಪಿ, ಸೋಫಾ ಮೇಲೆ ಪವಡಿಸಿದೆ. ಟಿ.ವಿ. ಗೆ ಕಣ್ಣು ಕೀಲಿಸಿದೆ. ಮಾರನೆ ದಿನ ಹೋಗಿ ವಿಚಾರಿಸಿದೆ ಏನಾಯಿತೆಂದು. ಅದಕ್ಕೆೆ ಅವಳ ಉತ್ತರ ‘ ಏನು ಹೇಳಬಾರದು ಏನು ಹೇಳಬೇಕು ಅಂತ್ಲೇ ಆಂಟಿ ಈ ಮಕ್ಕಳಿಗೆ. ಅಲ್ಲಾಾ ನೆನ್ನೆೆ ನಾವು ಹೊರಟಾಗಲೇ ಹೇಳಿಕೊಂಡೇ ಹೋಗಿದ್ದೇನೆ. ಏನೂ ಮಾತಾಡಬೇಡ ಅಂತ. ಮಾತಾಡಿಬಿಟ್ಟ ಕಡೆಗೂ.’‘ಏನಂದ ಮಗು?
‘ಒಂದು ಡಾಲ್ ನ ಇವನಿಗ್ಯಾಾರೋ ಗಿಫ್‌ಟ್‌ ಮಾಡಿದ್ರು.. ಅದರ ಕೈ ಮುರಿದು ಹೋಗಿ, ಚೂರು ಹಳೇದಾಗಿತ್ತು. ನಾನು ಫೆವಿಕ್ವಿಿಕ್ ಹಾಕಿ ಸರಿಮಾಡಿ ನೀಟಾಗಿ ತಗೊಂಡು ಹೋಗಿ ಅವರ ಮಗುವಿಗೆ ಖುಷಿಯಿಂದ ಕೊಟ್ಟೆೆ.’

‘ಒಳ್ಳೇದಾಯ್ತಲ್ಲ ಬಿಡು’ ಎಂದೆ. ‘ಅಷ್ಟೇ ಆಗಿದ್ರೆೆ ಸುಮ್ಮನಿರುತ್ತಿಿದ್ದೆೆ. ಆ ಮಗು ಡಾಲ್ ಜೊತೆ ಆಡುವಾಗ, ಅದೂ ಎಲ್ಲರೂ ಇರುವಾಗ, ಇವನು ನನ್ನ ಮಗನೆನಿಸಿಕೊಂಡವನು, ಅದು ನಂಗೆ ಯಾರೋ ಕೊಟ್ಟಿಿದ್ದು. ಕೈ ಮುರ್ದೋೋಗಿದ್ದಿಕ್ಕೆೆ ನಮ್ಮಮ್ಮ ನಿಂಗೆ ಕೊಟ್ರು. ಅಲ್ವಾಾ ಮಮ್ಮಿಿ? ಎಂದುಬಿಡುವುದೇ?’ ಅವಳ ಮಾನ ಹೇಗೆ ಹರಾಜಾಗಿರಬೇಡ? ಪಾಪವೆನಿಸಿ ಸಮಾಧಾನ ಮಾಡಲೂ ಏನೂ ತೋಚದೆ ಸುಮ್ಮನಾಗಿಬಿಟ್ಟೆೆ.

ಫ್ರಿಜ್‌ನಲ್ಲಿ ಹಳಸಲು ಅನ್ನ
ಇದು ಪಕ್ಕದಮನೆ ಹುಡುಗಿ ಹೇಳಿದ ಕತೆ. ‘ಆಂಟಿ, ನನ್ನ ಮಗಳು ಮನೆ ಮಾನ ಹೇಗೆ ಕಳೆದಳು ಗೊತ್ತಾಾ ಆಂಟಿ? ಇವತ್ತು ಮನೆಗೆ ಯಾರೋ ಬಂದಿದ್ರು.. ಅವರಿಗೆಲ್ಲ ಬಿಸಿಬೇಳೆಬಾತು ಮಾಡಿ ಜೊತೆಗೆ ಮೈಸೂರುಪಾಕು ಕೂಡ ಕೊಟ್ಟೆೆ. ರುಚಿಯಾಗಿ ಸವಿಸವಿದು ತಿನ್ನುತ್ತಿಿದ್ದರು.’
‘ಅದರಲ್ಲಿ ಮಾನ ಹೋಗುವಂತಾದ್ದೇನಿದೆ? ಖುಷಿಯಾಗಿ ತಿಂದಿದ್ದಾಾರೆ ಅಲ್ಲವಾ? ನೀನು ಮೊದಲೇ ಬಿಸಿಬೇಳೆಬಾತ್ ಚೆನ್ನಾಾಗಿ ಮಾಡ್ತಿಿ.’
‘ಅಯ್ಯೋ ಅದಲ್ಲ ಆಂಟಿ. ಅಮ್ಮಾಾ ನೆನ್ನೆೆ ಫ್ರಿಿಜ್ಜಲ್ಲಿಟ್ಟಿಿದ್ದಲ್ಲಾಾ ಅದೇ ಅನ್ನ ಅಲ್ವಾಾ ಇದು? ನಾನು ನೋಡ್ದೆೆ, ನೀನ್ ಫ್ರಿಿಜ್ಜಿಿಂದ ತೆಗೆದಿದ್ದನ್ನ’ ಎಂದುಬಿಟ್ಟಳು. ಬಂದವರು. ನಗುನಗುತ್ತಾಾ ಮೈಸೂರುಪಾಕು ಎಲ್ಲಿಂದ ತೆಗೆದರಮ್ಮಾಾ? ಎಂದರು. ಅದಕ್ಕವಳು ಅದನ್ನ ನೆನ್ನೆೆ ಪಕ್ಕದ ಮನೆಯವರು ನಾವ್ಯಾಾರೂ ತಿನ್ನಲಿಲ್ಲ ಅಂಕಲ್’ ಎಂದುಬಿಡೋದೆ? ನನಗೂ ತಲೆ ತಗ್ಗಿಿಸುವಂತಾಯಿತು. ಏಕೆಂದರೆ ಅದು ನಾನು ಕೊಟ್ಟ ಮೈಸೂರುಪಾಕು! ಮಾತಿನ ಭರದಲ್ಲಿ ನನ್ನ ವಿಷಯ ನನಗೇ ಹೇಳಿದ್ದು ತಿಳಿಯದೆ ನಂತರ ಪೆಕರು ಪೆಕರಾಗಿ ನೋಡುತ್ತಾಾ ನಿಂತುಬಿಟ್ಟಳು.

ಇದು ಬಿಡಿ ನನ್ನ ಮಗಳಿಗೆ ಗಣಿತ ಬಹಳ ಕಷ್ಟವಿತ್ತು. ನಮ್ಮ ಮನೆಯ ಹಿಂದೆ ಪ್ರೌೌಢಶಾಲಾ ಶಿಕ್ಷಕರಿದ್ದರು. ಗಣಿತವನ್ನು ತುಂಬಾ ಚೆನ್ನಾಾಗಿ ಹೇಳಿಕೊಡುತ್ತಿಿದ್ದರಂತೆ. ನಾನು ಅವರ ಬಳಿ ಇವಳನ್ನು ಮನೆಪಾಠಕ್ಕೆೆ ಕಳಿಸೋಣವೆಂದು ತೀರ್ಮಾನಿಸಿ ಅವರ ಮನೆಗೆ ಅದೂ ಇದೂ ವಿಷಯ ಮಾತಾಡುತ್ತಾಾ ರೇಖಾಗಣಿತ ಬೇಡ, ಬೀಜಗಣಿತವೂ ಬೇಡಾ ಎನ್ನುವಷ್ಟರಲ್ಲಿ ಆ ಮೇಷ್ಟ್ರು ನಡುಮನೆಯ ಬಾಗಿಲಲ್ಲಿ ಮಾತಾಡುತ್ತಾಾ ನಿಂತಿದ್ದ ಹೆಂಡತಿಗೆ ನಮಗೆ ಗೊತ್ತಾಾಗದಂತೆ ಕಾಫಿ ಮಾಡೆಂದು ಸಂಜ್ಞೆ ಮಾಡಿದರು. ನಾನು, ‘ಬೀಜಗಣಿತವೂ ಬೇಡ, ರೇಖಾ ಗಣಿತವೂ ಬೇಡ, ಎನ್ನತ್ತಿಿದ್ದವಳು ಕಾಫಿಯೂ ಬೇಡ’ ಎಂದುಬಿಟ್ಟೆೆ! ಅವರು ಮುಗುಳುನಗುತ್ತಾಾ ಆದರೆ ಏತಕ್ಕೆೆ ನಕ್ಕರೆಂದು ಗೊತ್ತಾಾಗದಂತೆ, ‘ಹಾಗಾದರೆ ಅಂಕಗಣಿತ ಒಂದೇ ಸಾಕಾ ಮೇಡಂ’ ಎಂದರು. ಅವರು ಸ್ವಲ್ಪ ಕಾಫಿ ತಗೋಳಿ ಎನ್ನುವ ನನಗೆ ಕಾಫಿ ಬೇಡ ಎಂದದ್ದು ತಕ್ಷಣ ಗಮನಕ್ಕೆೆ ಬಂದು, ನಾಚಿಕೆಯಾದಂತಾಗಿ ಮಾತಿನ ಭರದಲ್ಲಿ ಹೇಳಿದ ಮಾತಿಗೆ ನಾನೂ ನಕ್ಕು, ಮನೆಗೆ ಬಂದದ್ದೇ ತಡ ಮನ ಬಂದಂತೆ ನಕ್ಕೂ ನಕ್ಕೂ ಸಾಕಾದೆವು.

ಈಗ ಮೊನ್ನೆೆ ತಾನೆ ಯಾವುದೋ ಕೆಲಸದ ಮೇಲೆ ಪ್ರೆೆಸ್‌ಗೆ ಹೋಗಿದ್ದೆೆ. ನನ್ನ ತಿದ್ದುಪಡಿ ಕಾರ್ಯ ಮುಗಿಯತ್ತಾಾ ಬಂದಿತ್ತು. ‘ಮೇಡಂ ಟೀ ಕುಡಿತೀರಾ?’ ಎಂದರು. ಆಯಿತು ಎಂದೆ. ಮತ್ತೆೆ ಬೇರೆ ಬೇರೆ ಮಾತಾಡತೊಡಗಿದೆವು. ಸ್ವಲ್ಪಹೊತ್ತು ಬಿಟ್ಟು ಈ ಪುಸ್ತಕ ಮನೆಗೆ ತೆಗೆದುಕೊಂಡು ಹೋಗಿ ಓದಿ ಎಂದರು. ಸರಿ ಎಂದು ಬ್ಯಾಾಗಿಗೆ ಹಾಕಿಕೊಂಡೆ. ಆಗಲೂ ಸುಮ್ಮನೆ ಕುಳಿತಿದ್ದೆೆ. ಮೇಡಂ ನೆಕ್‌ಸ್‌‌ಟ್ ನಾನು ಫೋನ್ ಮಾಡಿದಾಗ ಬನ್ನಿಿ ಎಂದರು. ಆಯಿತು ಎಂದು ಸುಮ್ಮನೆ ಕುಳಿತಿದ್ದೆೆ. ಕಡೆಗೆ ಅವರು ಸ್ಟೀಲ್ ನೀರಿನ ಬಾಟಲಿ ತಂದರು. ನಾನದನ್ನು ಟೀ ಫ್ಲಾಾಸ್‌ಕ್‌ ಎಂದುಕೊಂಡು, ನಾನು ಸಾಮಾನ್ಯ ಟೀ ಕುಡಿಯದ ಕಾರಣ ಅವರಿಗೆ ಹೇಳಿದೆ, ‘ಟೀ ಇದ್ದರೆ ಮಾತ್ರ ಕೊಡಿ, ಇಲ್ಲದಿದ್ದರೆ ಬೇಡ’ ಎಂದೆ. ‘ಇಲ್ಲ ಮೇಡಂ ನೀರಿನ ಬಾಟಲ್’ ಎಂದರು. ಸುಮಾರು ಹೊತ್ತು ಕಳೆದ ಮೇಲೆ ಅವರೇ ಕೇಳಿದರು. ಮೇಡಂ, ನನಗೆ ಹೊರಗೆ ಚೂರು ಕೆಲಸವಿದೆ ಎಂದರು.

ನಾನು ಕೂಡ ಹೊರಟೆ ಎಂದು ಹೊರಬಂದೆ. ಅವರು ಕೂಡ ಗಾಡಿ ಕೀ ತೆಗೆದುಕೊಂಡು ಚಪ್ಪಲಿ ಹಾಕಿಕೊಂಡು ಹೊರನಡೆದರು. ನಾನು ಹತ್ತು ಹೆಜ್ಜೆೆ ಹೋಗಿದ್ದವಳು, ಕನ್ನಡಕ ನೆನಪಾಗಿ ತೆಗೆದುಕೊಂಡು ಹೋಗಲು ವಾಪಸ್ಸು ಬಂದೆ. ಅವರು ಚಪ್ಪಲಿ ಬಿಟ್ಟು, ಹೆಲ್ಮೆೆಟ್ ಎತ್ತಿಿಟ್ಟು, ಆರಾಮವಾಗಿ ಕಂಪ್ಯೂೂಟರ್ ಮುಂದೆ ಕುಳಿತಿದ್ದರು. ನನ್ನನ್ನು ನೋಡಿದವರೇ ಏನು ಮೇಡಂ? ಎಂದರು. ನನ್ನ ಕನ್ನಡಕ ತೆಗೆದುಕೊಂಡು ಥ್ಯಾಾಂಕ್‌ಸ್‌ ಹೇಳಿ ಆಚೆ ಬಂದೆ. ಬಸ್ಸಿಿನಲ್ಲಿ ಕುಳಿತವಳಿಗೆ ಎಲ್ಲವನ್ನೂ ಒಮ್ಮೆೆ ಮೆಲುಕು ಹಾಕಿದಾಗ ಆದ ಅವಮಾನ ಅಷ್ಟಿಿಟ್ಟಲ್ಲ. ನನ್ನನ್ನು ಸಾಗ ಹಾಕಲು ಟೀ ಕೇಳಿದರು, ಪುಸ್ತಕ ಕೊಟ್ಟರು, ನಾನು ಮತ್ತೆೆ ಹೇಳಿದಾಗ ಬಂದುಬಿಡಿ ಎಂದರು. ನಾನೇಕೆ ಹಾಗೆ ಖಾಲಿ ಖಾಲಿಯಾಗಿ ಕುಳಿತಿದ್ದೆೆ ಎಂದು ಅರಿವಾಗಲೇ ಇಲ್ಲ. ಇನ್ನೂ ಸ್ವಲ್ಪ ಹೊತ್ತೇನಾದರೂ ಅಲ್ಲೇ ಇದ್ದಿದ್ದರೆ…… ಅಷ್ಟೇ ನನ್ನ ಕತೆ!

ಇಂತಹ ಪ್ರಸಂಗಗಳು ಆ ಕ್ಷಣಕೆ ತಬ್ಬಿಿಬ್ಬೆೆನಿಸಿದರೂ ಆನಂತರ ಸಾಕಷ್ಟು ನಗಲು ನಮಗೆ ನಾವೇ ಸಾಮಗ್ರಿಿ ಒದಗಿಸಿಕೊಂಡಂತಾಗುತ್ತದೆ. ನಗೆಪಾಟಲಾದಾಗಲೂ ನೆನೆದು ನಗುತ್ತೇವೆ. ಇಕ್ಕಟ್ಟಿಿನ ಸಮಯಗಳೂ ಮುಂದೊಮ್ಮೆೆ ನಗಲು ನಮಗೆ ಅವಕಾಶವೊದಗಿಸಿಕೊಡುತ್ತವೆ. ಮಕ್ಕಳು ಮಾಡುವ ಅನಾಹುತಗಳು ನಮ್ಮ ಹಾಸ್ಯಕ್ಕೆೆ ಬಂದೊದಗುವ ರಸಗವಳಗಳು. ಆದ್ದರಿಂದ ಇಂತಹ ಪ್ರಸಂಗಗಳನ್ನು ಸದಾ ನೆನಪಿನ ಬುತ್ತಿಿಯಲ್ಲಿ ಜೋಪಾನವಾಗಿರಿಸಿರಿ. ಮರೆವೆಂಬ ಅಗ್ನಿಿಗೆ ಇವನ್ನೆೆಲ್ಲ ಹವಿಸ್ಸಾಾಗಿಸದಿರಿ. ಜೀವನದಲ್ಲಿ ಯಾರಾದರೂ ಏನಾದರೂ ಎಡವಟ್ಟು ಮಾಡಿದರೆ ಮಾತ್ರ, ಬಾಳರಥ ಅನುಭವಗಳ ಗಾಲಿಗಳ ಮೇಲೆ ಮುಂದಕ್ಕೆೆ ಹೋಗಲು ಆದ್ದರಿಂದ ಏನೇ ಎಡವಟ್ಟುಗಳೊದಗಿ ಬಂದರೂ ಎದೆ ಗುಂದದಿರಿ ಜೋಪಾನ!