Thursday, 21st November 2024

ಹೂಮನೆಯ ತುಂಬ ಕವಿತೆಯ ಘಮಲು ಪಟ್ಟಣಶೆಟ್ಟರಿಗೆ ಎಂಬತ್ತು

* ಸಿದ್ದು ಯಾಪಲಪರವಿ

ಹಿರಿಯ ಕವಿ, ತ್ರಿಿಭಾಷಾ ಪಂಡಿತ ಪಟ್ಟಣಶೆಟ್ಟಿಿಯವರಿಗೆ ಈಗ ಎಂಬತ್ತರ ಹರೆಯ. ಈ ಭಾವಜೀವಿಗೆ ಕವಿತೆ ಎಂದರೆ ಪ್ರೀತಿ; ಸಾಕುಪ್ರಾಾಣಿಗಳೆಂದರೆ ಪ್ರಾಾಣ; ತಾಯಿ ಎಂದರೆ ಸರ್ವಸ್ವ. ಅವರನ್ನು ಹತ್ತಿಿರದಿಂದ ಕಂಡ ಶಿಷ್ಯರೊಬ್ಬರು, ಅಭಿಮಾನದಿಂದ ತಮ್ಮ ಭಾವನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾಾರೆ.

ಧಾರವಾಡದ ಹೂದೋಟದಲಿ ಅರಳಿದ ಅಸಂಖ್ಯ ಕವಿಗಳಲ್ಲಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಿ ಪ್ರಮುಖರು. ನವ್ಯದ ಸಂದರ್ಭದಲ್ಲಿ ಆರಂಭವಾದ ‘ಸಂಕ್ರಮಣ’ ಸಾಹಿತ್ಯ ಪತ್ರಿಿಕೆಯ ಸಂಪಾದಕರಲ್ಲಿ ಒಬ್ಬರು. ಮೂಲತಃ ಇಂಗ್ಲಿಿಷ್ ಸಾಹಿತ್ಯದ ವಿದ್ಯಾಾರ್ಥಿಯಾದ ಪಟ್ಟಣಶೆಟ್ಟರು ಅನಿವಾರ್ಯ ಪ್ರಸಂಗದಲ್ಲಿ ಹಿಂದಿಯಲ್ಲಿ ಸ್ನಾಾತಕೋತ್ತರ ಪಡೆದು ತ್ರಿಿಭಾಷಾ ಪಂಡಿತರಾದರು.

ಹಿಂದಿ ವಿಭಾಗದ ಮುಖ್ಯಸ್ಥರಾಗಿ, ಕನ್ನಡ ಸಾರಸ್ವತ ಲೋಕದ ದಂಡನಾಯಕರಾಗಿದ್ದ ಪಟ್ಟಣಶೆಟ್ಟಿಿಯವರು, ಎಲ್ಲ ಭಾಷೆಯ ಸಾಹಿತ್ಯದ ವಿದ್ಯಾಾರ್ಥಿಗಳ ಗಾಡ್ ಫಾದರ್. ಕನ್ನಡ, ಹಿಂದಿ ಮತ್ತು ಇಂಗ್ಲಿಿಷ್ ಭಾಷೆಯಲ್ಲಿ ಬರೆಯುತ್ತಿಿದ್ದ ವಿದ್ಯಾಾರ್ಥಿಗಳ ಪಾಲಿಗೆ ಅವರು ಮಾರ್ಗದರ್ಶಕ, ಹಿತೈಷಿ ಮತ್ತು ವಿಮರ್ಶಕರು. ಪ್ರೊೊ.ಚಂಪಾ ಮತ್ತು ಪ್ರೊೊ.ಗಿರಡ್ಡಿಿ ಅವರು ಇಂಗ್ಲಿಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪಟ್ಟಣಶೆಟ್ಟರಿಗೆ ಇಂಗ್ಲಿಿಷಿನೊಂದಿಗೆ ಹಿಂದಿ ಕಾವ್ಯದ ಸಂಪರ್ಕವೂ

ಹಿಂದಿಯ ಸುಪ್ರಸಿದ್ಧ ಕವಿ ಹರಿವಂಶರಾಯ್ ಬಚ್ಚನ್ ಮತ್ತು ಗುಲ್ಜಾಾರ್ ಅವರ ಕವಿತೆಗಳ ಅನುಸಂಧಾನ ಪಟ್ಟಣಶೆಟ್ಟರಿಗೆ ವರವಾಯಿತು. ಸಂಕ್ರಮಣದ ತ್ರಿಿಮೂರ್ತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಭಿನ್ನ ನೆಲೆಗೆ ಕೊಂಡೊಯ್ಯಲು ಆಸ್ಥೆೆಯಿಂದ ಶ್ರಮಿಸಿದರು. ಇಂಗ್ಲಿಿಷ್ ಸಾಹಿತ್ಯದ ದಟ್ಟ ಪ್ರಭಾವದಲ್ಲಿ ಅನೇಕ ಉತ್ಕೃಷ್ಟ ಬರಹಗಾರರ ಪಡೆ ನಿರ್ಮಾಣವಾದ ಕಾಲಘಟ್ಟದಲ್ಲಿ ‘ಸಂಕ್ರಮಣ’ ಆರಂಭವಾಗಿತ್ತು. ಇಡೀ ಕರ್ನಾಟಕ ಸಂಚಾರ ಮಾಡಿ ಅನೇಕರಿಗೆ ಬರೆಯುವ ಹುಮ್ಮಸ್ಸು ಹೆಚ್ಚಿಿಸಿದ ಹೆಗ್ಗಳಿಕೆ ಪಟ್ಟಣಶೆಟ್ಟರದು.

ಪಕ್ಕಾಾ ಎಡಪಂಥೀಯ ಹೋರಾಟ ಮನೋಭಾವದ ಪ್ರೊೊ.ಚಂಪಾ ವಾಚಾಳಿಯಾದರೆ, ಪ್ರೊೊ.ಗಿರಡ್ಡಿಿ ಗೋವಿಂದರಾಜ ಅವರು ಮಧ್ಯಮ ಮಾರ್ಗದ ಸಂಯಮಿ ಮತ್ತು ತೀಕ್ಷ್ಣ ವಿಮರ್ಶಕರೂ ಹೌದು. ಆದರೆ ಶೆಟ್ಟರು ತುಂಬ, ಅತೀ ಅನಿಸುವಷ್ಟು ಭಾವ ಜೀವಿಗಳು. ಪ್ರೀತಿ, ಸ್ನೇಹ ಮತ್ತು ವಿಶ್ವಾಾಸಗಳ ಸಂಕೋಲೆಯಲ್ಲಿ ಶೆಟ್ಟರ ಸಾಹಿತ್ಯಕ ಜಗತ್ತು ಸೃಷ್ಟಿಿಯಾಯಿತು. ಬದುಕಿನ ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ಪರಿಗಣಿಸಲು ಅವರ ಬಾಲ್ಯದ ಅನುಭವಗಳೇ ಕಾರಣ ಎಂಬುದನ್ನು ಅವರನ್ನು ಹತ್ತಿಿರದಿಂದ ನೋಡಿರುವ ನಾನು ಅರ್ಥ ಮಾಡಿಕೊಂಡಿದ್ದೇನೆ. ಬಾಲ್ಯದ ಬಡತನ, ತಂದೆಯನ್ನು ಕಳೆದುಕೊಂಡ ಅನಾಥ ಭಾವ, ಕಕ್ಕುಲತೆ ಮತ್ತು ಹೋರಾಟದ ಬದುಕು ಶೆಟ್ಟರನ್ನು ಹೆಚ್ಚು ಪರಿಪಕ್ವಗೊಳಿಸಿತು. ಅದೇ ಜಾಡು ಹಿಡಿದು ಬೆಳೆದ ಅವರು ಅನೇಕರ ಪಾಲಿಗೆ ದೇವರಾಗಿ ಕಂಗೊಳಿಸಿದರು. ಸದಾ ನೂರಾರು ವಿದ್ಯಾಾರ್ಥಿಗಳ ದಂಡು ಅವರ ಸುತ್ತಲೂ ಭಾವಪೂರ್ಣ ಮಾತುಗಳ ಆಲಿಸಲು ಕಾಯುತ್ತಿಿತ್ತು. ಪ್ರತಿಯೊಂದು ಘಟನೆಗಳನ್ನು ರಸವತ್ತಾಾಗಿ, ಭಾವಪೂರ್ಣವಾಗಿ ಹೇಳುವ ಶೆಟ್ಟರ ಮಾತುಗಳಲ್ಲಿ ಕಾವ್ಯದ ರಸಗವಳ.

ಭಾಷಾ ಶುದ್ಧತೆ ಮತ್ತು ಅದರ ಸದ್ಬಳಕೆಗೆ ಹೆಚ್ಚು ಮಹತ್ವ ನೀಡಿದ ಪರಿಣಾಮವಾಗಿ ಅವರೊಬ್ಬ ಶುದ್ಧ ವಿಮರ್ಶಕರೂ ಹೌದು. ಕೃತಿಯ ಮಗ್ಗುಲುಗಳ ಮಿತಿ ಮತ್ತು ತಾಕತ್ತನ್ನು ಗಂಭೀರವಾಗಿ ಅವಲೋಕನ ಮಾಡುವ ಅವರ ಶೈಲಿಗೆ ಅವರೇ ಸಾಟಿ.

ಪ್ರೇಮಿಗಳ ಒದ್ದಾಟ
ಅವರ ‘ನೀನಾ’ ಕವನ ಸಂಕಲನದ ಪ್ರತಿಯೊಂದು ಕವಿತೆಗಳ ಜೀವದ್ರವ್ಯ ಅದಮ್ಯ ಪ್ರೀತಿ. ಆ ಕಾಲದಲ್ಲಿ ಪ್ರೇಮಿಗಳು ತಮ್ಮ ಭಾವನೆಗಳನ್ನು ಬೇಗ ಹಂಚಿಕೊಳ್ಳಲಾಗದೇ ಚಡಪಡಿಸುತ್ತಿಿದ್ದರು. ಪ್ರೀತಿಯ ತೀವ್ರ ಭಾವನಗಳ ವಿವರಣೆಯಲ್ಲೂ ಅಷ್ಟೇ ಮನ ಕಲುಕುವ ತೀವ್ರತೆ. ನೋವು, ಸಮರ್ಪಣೆ, ಸಹನೆ ಮತ್ತು ಅಸಹಾಯಕತೆಯಿಂದ ಪ್ರೇಮಿಗಳು ಒದ್ದಾಡುತ್ತಿಿದ್ದರು. ಆದರೆ ಆ ಒದ್ದಾಟಕ್ಕೆೆ ಶಬ್ದಗಳ ಜೀವ ತುಂಬಲು ಕವಿ ಅಷ್ಟೇ ಒದ್ದಾಡಬೇಕು. ಅದೊಂದು ಕೇವಲ ಪರಕಾಯ ಪ್ರವೇಶವಲ್ಲ. ಅನುಕಂಪದಾಚೆಗಿನ ದಿವ್ಯಾಾನುಭೂತಿ. ಪಟ್ಟಣಶೆಟ್ಟರ ಸಂಕಲನದ ಪ್ರೇಮಿಯ ಒದ್ದಾಟ ನೆನಪಾದರೆ ಈಗಲೂ ಕರುಳು ಕಿತ್ತಿಿ ಬರುತ್ತದೆ.

ವೈಯಕ್ತಿಿಕವಾಗಿ ನನ್ನಂತಹ ಸಾವಿರಾರು ವಿದ್ಯಾಾರ್ಥಿಗಳಿಗೆ ಓದುವ, ಬರೆಯುವ ಮತ್ತು ಬದುಕುವ ಕಲೆಯನ್ನು ಕಲಿಸಿಕೊಟ್ಟ ಸ್ನೇಹಜೀವಿ ಅವರು. ವಿದ್ಯಾಾರ್ಥಿಗಳ ವೈಯಕ್ತಿಿಕ ವಿಷಯಗಳನ್ನು ಸಮಾಧಾನದಿಂದ ಆಲಿಸಿ ಸೂಕ್ತ ಮಾರ್ಗದರ್ಶನ ಮಾಡುತ್ತಿಿದ್ದರು. ಅವರ ಸಂಪರ್ಕ ಮತ್ತು ಸಂಬಂಧ ವರ್ಗ ಕೋಣೆಯಾಚೆಗೂ ಹಬ್ಬಿಿರುತ್ತಿಿತ್ತು. ಒಬ್ಬ ಶಿಕ್ಷಕ ಅವನು ಗಳಿಸುವ ಕೀರ್ತಿ ಮತ್ತು ಅನುಬಂಧ ಎಷ್ಟೊೊಂದು ಗಾಢವಾಗಿ ಬೆಳೆಯಬಹುದು ಎಂಬುದನ್ನು ಅವರು ತಮ್ಮ ವೃತ್ತಿಿ ಬದುಕಿನುದ್ದಕ್ಕೂ ನಿರೂಪಿಸಿದರು. ವೈಯಕ್ತಿಿಕ ಬದುಕಿನ ಬದ್ಧತೆಗೆ ಹೆಚ್ಚು ಮಹತ್ವ ನೀಡುತ್ತ ಬರೆದರು. ಬದುಕು ಮತ್ತು ಬರಹದ ಸಾಮ್ಯತೆಗೂ ಅಷ್ಟೇ ಮಹತ್ವ ಕೊಟ್ಟರು.

ದೊಡ್ಡವರ ಅನೇಕ ಸಣ್ಣ ಸಂಗತಿಗಳನ್ನು ಕೇಳುವಾಗ ನಮಗೆಲ್ಲ ಪ್ರತಿಯೊಬ್ಬ ವ್ಯಕ್ತಿಿಯ ಹಿಪೋಕ್ರಸಿ ಅರ್ಥವಾಗುತ್ತಿಿತ್ತು. ವ್ಯಕ್ತಿಿಯ ಮುಖವಾಡದ ಹಿಂದೆ ಇರುವ ನಿಜ ಮುಖದ ದರ್ಶನ ಕೂಡ ಅಷ್ಟೇ ಮಹತ್ವದ್ದೆಂದು ಪಟ್ಟಣಶೆಟ್ಟರು ಅರ್ಥ ಮಾಡಿಸಿದರು. ಅನೇಕ ದೊಡ್ಡ ಮಟ್ಟದ ಬರಹಗಾರರ ವೈಯಕ್ತಿಿಕ ಬದುಕಿನ ಮಿತಿಗಳನ್ನು ಹತ್ತಿಿರದಿಂದ ನೋಡುವ ಮತ್ತು ಸಮರ್ಪಕವಾಗಿ ಗ್ರಹಿಸುವ ಅವಕಾಶ ಕಲ್ಪಿಿಸಿದರು. ಹಾಗಂತ ಬೇರೆಯವರನ್ನು ನೇರಾ ನೇರ ನೋಯಿಸಿ, ಟೀಕಿಸುವ ಸ್ವಭಾವ ಅವರದಲ್ಲ. ಎಲ್ಲದರಲ್ಲೂ ಸೂಕ್ತ ಮತ್ತು ಸೂಕ್ಷ್ಮ ನಿವೇದನೆಯ ಸಂವೇದನೆ.

ಹಿಂದಿಯ ಸಂಪರ್ಕ
ಹಿಂದಿ ಭಾಷೆಯ ಸಂಪರ್ಕದಿಂದ ಇಡೀ ದೇಶ ಸುತ್ತಿಿ ಜಗತ್ತಿಿನ ಭಿನ್ನ ಹೊಳಹುಗಳನ್ನು ಗ್ರಹಿಸಿಕೊಂಡರು. ಮೋಹನ್ ರಾಕೇಶ್ ಅವರ ಪ್ರಮುಖ ನಾಟಕಗಳನ್ನು ಅನುವಾದಿಸಿದರು. ಕನ್ನಡಕ್ಕೆೆ ಭಾಷೆಯ ಮಹತ್ವದ ಕೃತಿಗಳು ಬಂದಿದ್ದವು. ಆದರೆ ಹಿಂದಿ ಕೃತಿಗಳು ಕೇವಲ ಹೈದರಾಬಾದ್ ಕರ್ನಾಟಕ ಓದುಗರಿಗೆ ಮಾತ್ರ ಅರ್ಥವಾಗುತ್ತಿಿದ್ದ ಸಮಯದಲ್ಲಿ ಅನೇಕ ಮಹತ್ವದ ಹಿಂದಿ ಕೃತಿಗಳ ಕನ್ನಡದ ಓದುಗರಿಗೆ ತಲುಪಿಸಿದರು. ರೇಡಿಯೋ ಮಾಧ್ಯಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು. ಆಕಾಶವಾಣಿಗೆ ಅನೇಕ ನಾಟಕಗಳನ್ನು ಕನ್ನಡಕ್ಕೆೆ ಅನುವಾದಿಸಿ ಕೊಟ್ಟರು.

‘ಆಷಾಡದ ಒಂದು ದಿನ’ ಅಂತಹ ಅಪರೂಪದ ಯಶಸ್ವಿಿ ಪ್ರಯತ್ನಗಳಲ್ಲಿ ಒಂದು. ಆರು ದಶಕಗಳ ಸಾಹಿತ್ಯ ಕೃಷಿಯಲ್ಲಿ ನಿರಂತರ ತಪಸ್ಸು, ವೈಯಕ್ತಿಿಕ ಬದುಕಿನ ಅನೇಕ ಮೆಟ್ಟಿಿ ನಿಂತು ತಮ್ಮತನ ಕಾಪಾಡಿಕೊಂಡರು. ಎಡ-ಬಲ ಸಿದ್ಧಾಾಂತಗಳ ಗೊಂದಲಕ್ಕೆೆ ಹೋಗದೆ, ವಿಭಿನ್ನ ಒಲವ ಮಾರ್ಗ. ಗೊಂದಲದ ಹೋರಾಟಗಳಿಂದ ಸದಾ ದೂರವಿದ್ದು ತಮ್ಮದೇ ಆದ ಭಾವಲೋಕದಲ್ಲಿ ಬದುಕುವ ಸೂಕ್ಷ್ಮ ಚಿಂತಕ. ಇತರರನ್ನು ಬದಲಾಯಿಸುವ ಬದಲು ನಮ್ಮನ್ನು ನಾವು ಬದಲಿಸಿಕೊಳ್ಳಬೇಕೆಂಬ ಸಿದ್ಧಾಾಂತ. ಧಾರವಾಡದ ವಿದ್ಯಾಾವರ್ಧಕ ಸಂಘದ ಎಲ್ಲ ಚಟುವಟಿಕೆಗಳನ್ನು ಕ್ರಿಿಯಾತ್ಮಕವಾಗಿ ಸಂಘಟಿಸಿ ಸಾಹಿತ್ಯ ಮಂಟಪಕ್ಕೆೆ ಹೊಸ ಆಯಾಮ ಕಲ್ಪಿಿಸಿದರು.

ಏಕಾಂತ ಬಯಸುವ ಭಾವಜೀವಿ
ಕಟ್ಟುನಿಟ್ಟಿಿನ ಜೀವನ ಶೈಲಿ. ಐಷಾರಾಮಿ ಮೋಜು ಮಸ್ತಿಿ ಸದಾ ದೂರ. ಏಕಾಂತವನ್ನು ಸದಾ ಬಯಸುವ ಭಾವಜೀವಿ. ಅದಮ್ಯ ಪ್ರಾಾಣಿ ಪ್ರೇಮಿ. ಮುದ್ದಿನ ನಾಯಿ ಮರಿಯನ್ನು ಪ್ರಾಾಣಿಯೆಂದು ಭಾವಿಸದ ಮಾತೃವಾತ್ಸಲ್ಯ. ಬೆಳ್ಳಿಿಯ ಜೊತೆ ಮಾತುಕತೆ ಮತ್ತು ಬೆಳಗಿನ ವಾಕಿಂಗ್. ಅವರ ನಾಯಿ ಮರಿ ಬೆಳ್ಳಿಿ ಅಗಲಿದಾಗಿನ ಸೂತಕ ನೋಡಿ ದಂಗಾಗಿ ಹೋಗಿದ್ದೆ. ಶೆಟ್ಟರೆಂದರೆ ಶಿಸ್ತು, ಸಮಯ ಪ್ರಜ್ಞೆ, ಪ್ರಾಾಮಾಣಿಕತೆ, ನಿಯಮಿತ ಆಹಾರ, ಸರಳ ಜೀವನಶೈಲಿ, ಬರಹದಂತೆ ಬದುಕು, ಬದುಕಿನಂತೆ ಬರಹ, ಧಾರವಾಡ ದೇಸಿ ಭಾಷೆಯಲ್ಲಿ ಬರೆದ ‘ಚಹಾದ ಜೋಡಿ ಪ್ರಜಾವಾಣಿ ಅಂಕಣ ಬರಹದಂತೆ.

ಅವರ ಅವ್ವ ಅವರ ಜಗತ್ತು. ಅವರ ಆತ್ಮಚರಿತ್ರೆೆ ‘ಗಿರಿಜವ್ವನ ಮಗ’ ರೂಪುಗೊಳ್ಳಲು ಅವ್ವನೇ ಕಾರಣ. ಅವ್ವ ಇರದಿದ್ದರೆ ಅದೇನೋ ಶೂನ್ಯ. ಅವ್ವ ದೈಹಿಕವಾಗಿ ಹೋದರೂ ಮನದ ಮೂಲೆಯಲ್ಲಿ ಗಟ್ಟಿಿಯಾಗಿ ನೆಲೆಗೊಂಡ ಅಮರ ಚೇತನ . ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಾಮಿಗಳು ಅವರ ಪಾಲಿಗೆ ಅವ್ವನ ಪಡಿಯಚ್ಚು. ವೈಯಕ್ತಿಿಕವಾಗಿ ಬೇಸರವಾದಾಗ ಗದುಗಿನ ಗುರುಗಳ ಕಡೆ ಮುಖ ಮಾಡಿ ನೋವು ಹಂಚಿಕೊಂಡು ಹಗುರಾಗುತ್ತಿಿದ್ದರು. ದೇವರು, ಧರ್ಮ, ಯಾವುದರ ಗೊಡೆವೆಗೆ ಹೋಗದ ಅಕ್ಷರ ಲೋಕದ ಆರಾಧಕ.

ಇವರ ನೂರಾರು ಕೃತಿಗಳನ್ನು ಪ್ರಕಟಿಸುವ ಜವಾಬ್ದಾಾರಿಯನ್ನು ನಿರ್ವಹಿಸುವ ಬಾಳ ಸಂಗಾತಿ ಹೇಮಾ ಪಟ್ಟಣಶೆಟ್ಟಿಿ ಅವರ ಮೇಲೆ ಭಾವನಾತ್ಮಕವಾಗಿಯೂ ಅವಲಂಬಿತರು. ಮಗುವಿನ ನಗು, ಮನದ ತುಂಬ ಕರುಣೆ, ಬೇಗ ಕರಗುವ ಸಾತ್ವಿಿಕ ಗುಣ. ಅಧಿಕಾರ, ಹುದ್ದೆ ಸ್ಥಾಾನಮಾನಗಳ ಅಪೇಕ್ಷಿಸದ ನಿರ್ಲಿಪ್ತ ಧೋರಣೆ ಪಟ್ಟಣಶೆಟ್ಟರ ಶಕ್ತಿಿ.

ಅವರ ಆತ್ಮಚರಿತ್ರೆೆ ‘ಗಿರಿಜವ್ವನ ಮಗ’ ಧಾರವಾಡದ ಸಾಂಸ್ಕೃತಿಕ ಲೋಕದ ದಾಖಲೆ. ಸುಮಾರು ಒಂದು ಶತಮಾನದ ಸಾಂಸ್ಕೃತಿಕ ಪರಿಚಯವೂ ಅಲ್ಲಿದೆ

ಬರಹದ ಮೂಲಕ ಮಾನವೀಯ ಸಂಬಂಧದ ಮೌಲ್ಯಗಳ ನಿರೂಪಿಸುವ ಕಾವ್ಯ ಸಂತರಿಗೆ ಈಗ ಎಂಬತ್ತರ ಹರೆಯ. ಹೊಸ ಆವಿಷ್ಕಾಾರಗಳ ಅರ್ಥಮಾಡಿಕೊಂಡು ನಿರಂತರ ಬರಹದಲ್ಲಿ ತೊಡಗಿರುವ ಶೆಟ್ಟರು ಆತ್ಮಚರಿತ್ರೆೆಯ ಎರಡನೇ ಭಾಗದ ಬರಹದ ಉತ್ಸಾಾಹದಲ್ಲಿದ್ದಾರೆ.