*ಡಾ.ಕೆ.ಎಸ್.ಚೈತ್ರಾ
‘ಗೊಂದಲ, ನನ್ನ ಮೆದುಳಿನ ನೈತಿಕ ಎಳೆಗಳ ಸುತ್ತ ದಪ್ಪ ಮಂಜಿನ ರೀತಿಯಲ್ಲಿ ಮುಸುಕಿತ್ತು. ಈ ಮಹಿಳೆಯ ಬಗ್ಗೆೆ ನನಗೆ ಬೇಸರ, ಅಲ್ಲ ಸತ್ಯವಾಗಿ ಹೇಳಬೇಕೆಂದರೆ ದ್ವೇಷ ಮೂಡಬೇಕಿತ್ತು. ಆಕೆ ಕುಣಿದು, ಬೆರೆತು ಈಗ ಆತನ ಮಗುವನ್ನು ತನ್ನ ಹೊಟ್ಟೆೆಯಲ್ಲಿಟ್ಟು ಬೆಳೆಸುತ್ತಿಿದ್ದಳು. ಆದರೆ ಈಕೆ, ತನ್ನ ಉಬ್ಬಿಿದ ಹೊಟ್ಟೆೆಯನ್ನು ಹೆಮ್ಮೆೆಯಿಂದ ಹೊತ್ತು, ಬರಲಿರುವ ಕಂದನನ್ನು ತೂಗುವ ಹೊಂಗನಸು ಹೊಂದಿರುವ ಬೇರೆಲ್ಲ ಗರ್ಭಿಣಿ ಮಹಿಳೆಯರಂತೆಯೇ ಕಂಡಳು. ಆ ಕ್ಷಣದಲ್ಲಿ ನನಗೆ ಕ್ಯಾಾಂಪಿನಲ್ಲೇ ಇರಬೇಕಿತ್ತು ಎನಿಸಿತ್ತು; ಏಕೆಂದರೆ ಅದು ಕ್ರೂರವಾದರೂ ವೈರಿ-ಸ್ನೇಹಿತ ಯಾರೆಂದು ಖಚಿತವಾಗಿ ತಿಳಿದಿದ್ದ ಕಪ್ಪುು-ಬಿಳುಪಿನ ಜಗತ್ತಾಾಗಿತ್ತು!’
ಮಿಡ್‌ವೈಫ್ ಅಂದರೆ ಸೂಲಗಿತ್ತಿಿ ಮಹಿಳೆಯೊಬ್ಬಳ ವೃತ್ತಿಿಧರ್ಮ ಮತ್ತು ಮಾನವ ಸಹಜ ಭಾವನೆಗಳ ನಡುವಿನ ತಾಕಲಾಟವನ್ನು ಬಣ್ಣಿಿಸುವ ಸಾಲುಗಳಿವು. ಸ್ವತಃ ಅದೇ ವೃತ್ತಿಿಯಲ್ಲಿರುವ ಲೇಖಕಿ ಮ್ಯಾಾಂಡಿ ರೊಬೊತಮ್ ಅವರ ಪ್ರಪಥಮ ಕಾದಂಬರಿ, 2019ರಲ್ಲಿ ಪ್ರಕಟಿತ ‘ಜರ್ಮನ್ ಮಿಡ್‌ವೈಫ್’ ಕೃತಿ.
1944ನೇ ಇಸವಿ, ಎರಡನೇ ಮಹಾಯುದ್ಧದ ಸಮಯ. ಪ್ರಪಂಚವನ್ನೇ ತನ್ನ ಕ್ರೌೌರ್ಯದಿಂದ ನಡುಗಿಸಿದ ಹಿಟ್ಲರ್‌ನ ಆಳ್ವಿಿಕೆಯ ಕಾಲ. ಯುದ್ಧದ ಜತೆ ಆತನ ಮಹತ್ವಾಾಕಾಂಕ್ಷೆ ಮನೆಗಳನ್ನು ಉರುಳಿಸಿತ್ತು, ಮನಗಳನ್ನು ಮುರಿದಿತ್ತು, ಜನರನ್ನು ರಾತ್ರೋೋರಾತ್ರಿಿ ಇಲ್ಲವಾಗಿಸಿತ್ತು. ಆತನ ಕನಸಿನ ಸಾಮ್ರಾಾಜ್ಯ ರೈಶ್‌ನಲ್ಲಿ ಜ್ಯೂಯಿಶ್ ಜನಾಂಗದವರಿಗೆ ಸ್ಥಾಾನವಿಲ್ಲ.
ಇದ್ದವರನ್ನೇ ಕಾರಣವಿಲ್ಲದೇ ಕ್ಯಾಾಂಪ್‌ಗಳಿಗೆ ಹಾಕಿ ಇಲ್ಲವಾಗಿಸುವಾಗ, ಅಲ್ಲಿ ಹುಟ್ಟುವ ಹಸುಗೂಸುಗಳನ್ನು ಬದುಕಲು ಬಿಡುವ ಸಾಧ್ಯತೆ ಇದೆಯೇ? ಜರ್ಮನಿಯ ರಾವೆನ್‌ಸ್‌ಬ್ರಕ್ ಕ್ಯಾಾಂಪಿನಲ್ಲಿ ಕತೆಯ ನಿರೂಪಕಿ- ನಾಯಕಿ ಮತ್ತು ವೃತ್ತಿಿಯಲ್ಲಿ ಸೂಲಗಿತ್ತಿಿಯಾದ ಆಂಕೆಹಾಫ್, ರಾಜಕೀಯ ಖೈದಿ. ಆದರೆ ಅಲ್ಲಿಯೂ ಐರಿನಾ ಎಂಬ ಮಹಿಳೆಯ ಹೆರಿಗೆಯನ್ನು ಆಂಕೆ, ಮಾಡಿಸುತ್ತಾಾಳೆ. ಮಗುವಿನ ಜನನದ ಕೆಲವೇ ಗಂಟೆಗಳಲ್ಲಿ ಸೈನಿಕರಿಂದ ಅದರ ಹತ್ಯೆೆಯ ಹೃದಯವಿದ್ರಾಾವಕ, ಆದರೆ ನೈಜ ಚಿತ್ರಣದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಮಕ್ಕಳನ್ನು ಜಗತ್ತಿಿಗೆ ತರುವ ಅತ್ಯಂತ ಒಳ್ಳೆೆಯ ಕೆಲಸ ಎಂಬ ಹೆಮ್ಮೆೆ ಹೊಂದಿ ಆ ಕೆಲಸವನ್ನು ನಿಷ್ಠೆೆ-ಪ್ರಾಾಮಾಣಿಕತೆಯಿಂದ ಮಾಡುವವಳು ಆಕೆ. ಹುಟ್ಟುವ ಶಿಶುಗಳೆಲ್ಲವೂ ಯಾರಿಗಾದರೂ ಅಮೂಲ್ಯವಾಗಿಯೇ ಇರುತ್ತದೆ.
ಹೀಗಾಗಿ ನ್ಯಾಾಯಾಧೀಶರು , ತೀರ್ಪುಗಾರರು ಅಥವಾ ದೇವರಂತೆ ವರ್ತಿಸುವ ಅಧಿಕಾರ ಯಾರಿಗೂ ಇಲ್ಲ ಎಂಬುದು ಆಕೆಯ ದೃಢವಾದ ನಂಬಿಕೆ. ಹೀಗಾಗಿ ಕ್ಯಾಾಂಪಿನಲ್ಲಿದ್ದರೂ ತನ್ನ ಕೈಲಾದಷ್ಟು ನೆರವು ನೀಡುತ್ತಾಾ, ಇದಕ್ಕೆೆಲ್ಲಾಾ ಕಾರಣನಾದ ಹಿಟ್ಲರ್‌ನನ್ನು ದ್ವೇಷಿಸುತ್ತಿಿದ್ದವಳಿಗೆ ಇದ್ದಕ್ಕಿಿದ್ದಂತೆ ಅಧಿಕಾರಿಗಳಿಂದ ಕರೆ. ಕಾರಣ ಮಾತ್ರ ಅನಿರೀಕ್ಷಿತ! ಯಾರೋ ವಿಶೇಷ ಮಹಿಳೆಯ ಹೆರಿಗೆಯ ಜವಾಬ್ದಾಾರಿ ಆಕೆಯ ನಿರಾಕರಿಸುವ ಪ್ರಶ್ನೆೆಯೇ ಇಲ್ಲ – ಏಕೆಂದರೆ ಆಕೆಯ ಕುಟುಂಬದ ಸುರಕ್ಷತೆ ಅಧಿಕಾರಿಗಳ ಕೈಯ್ಯಲ್ಲಿದೆ.
ಅಂತೂ ಅಸಹಾಯಕಳಾಗಿ, ವಿವರ ತಿಳಿಯದೇ ಒಪ್ಪಿಿಕೊಂಡು ಹೊರಟವಳಿಗೆ ತಿಳಿದದ್ದು -ಆ ಮಹಿಳೆ ಇವಾಬ್ರಾಾವುನ್! ಗರ್ಭಸ್ಥ ಮಗು, ಹಿಟ್ಲರ್‌ನದ್ದು. (ಹಿಟ್ಲರ್‌ನ ದೀರ್ಘಕಾಲ ಸಂಗಾತಿಯಾಗಿದ್ದ ಇವಾಬ್ರಾಾವುನ್, ಆತನ ಕೆಲವೇ ಗಂಟೆಗಳ ಪತ್ನಿಿಯೂ ಹೌದು. ಮದುವೆಯಾದ ಸ್ವಲ್ಪ ಸಮಯದಲ್ಲೇ ಇಬ್ಬರೂ ಒಟ್ಟಿಿಗೇ ಆತ್ಮಹತ್ಯೆೆ ಮಾಡಿಕೊಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖ ಲಾಗಿದೆ. ಅವರಿಬ್ಬರ ನಡುವೆ ಇದ್ದ ಸಂಬಂಧದಿಂದ ಮಗು ಏನಾದರೂ ಎಂಬ ಲೇಖಕಿ ಕಲ್ಪನೆ ಇಲ್ಲಿನ ಕಥಾಹಂದರ.)
ಮಕ್ಕಳೆಂದರೆ ಇಷ್ಟಪಡದ ಹಿಟ್ಲರ್‌ನಿಗೆ ಈ ಮಗುವಿನ ಜನನ ಸುದ್ದಿಯಾಗುವುದು ಬೇಕಿರಲಿಲ್ಲ. ಹಾಗಾಗಿಯೇ ಹಿಟ್ಲರ್‌ನ ಮನೆಯಾದ ಬರ್ಗಾಫ್‌ಗೆ ಆಕೆಯ ಪಯಣ. ಹೆರಿಗೆಯನ್ನು ಮಾಡಿಸಬೇಕಿರುವುದರಿಂದ ಆಕೆಗೆ ವಿಶೇಷ ಸ್ವಾಾತಂತ್ರ್ಯ, ಸವಲತ್ತು ದೊರಕುತ್ತದೆ ನಿಜ; ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಲೆ ಹೋಗುವ ತಂತಿ ಮೇಲಿನ ನಡಿಗೆ. ಮನಸ್ಸಿಿನಲ್ಲಿ ಹುಟ್ಟಲಿರುವ ಮಗುವಿನ ತಂದೆಯ ಬಗ್ಗೆೆ ದ್ವೇಷ ಕುದಿಯುತ್ತಿಿದ್ದರೂ ಅದನ್ನು ಲೆಕ್ಕಿಿಸದೇ ತನ್ನ ಕರ್ತವ್ಯ ಮಾಡುವ ಆಕೆಯ ಕಾದಂಬರಿಯ ಪ್ರಮುಖ ಅಂಶ. ಎಲ್ಲಾಾ ಮಹಿಳೆಯರು ಹೆರಿಗೆಯ ಸಂದರ್ಭದಲ್ಲಿ ಸಮಾನರು; ರಾಜಕುಮಾರಿ -ಭಿಕ್ಷುಕಿ, ದೇವತೆ-ದೆವ್ವ ಎಲ್ಲರೂ ಆ ಸಮಯದಲ್ಲಿ ತಮ್ಮೊೊಳಗನ್ನು ಬಗೆಯುತ್ತಾಾರೆ. ಹುಟ್ಟು ಎಂಬುದು ಎಲ್ಲ ಪೂರ್ವಾಗ್ರಹಗಳನ್ನು ಅಳಿಸಿ ಹಾಕುತ್ತದೆ. ಇವಾ ಅಂತಹ ಸನ್ನಿಿವೇಶದಲ್ಲಿರುವ ಮಹಿಳೆ. ಹಾಗಾಗಿ ಹುಟ್ಟಲಿರುವ ಮಗು ಕೂಡಾ ಯಾರದ್ದೇ ಆಗಿದ್ದರೂ ಶುದ್ಧ ಮನದ ಮುಗ್ಧ ಕೂಸು ಎಂದು ನಂಬಿ ತನ್ನೆೆಲ್ಲಾಾ ವೈಯಕ್ತಿಿಕ ಭಾವನೆ ಬದಿಗೊತ್ತಿಿ ತಾಯಿ-ಮಗುವಿನ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಾಾಳೆ ಆಂಕೆ. ಈ ತಂದೆಯ ಸಾವಿನ ದುಃಖದ ನಡುವೆಯೇ ಅವಳನ್ನು ಜೀವಂತವಾಗಿಡುವ ಪ್ರೀತಿ, ಗೆಳೆತನ ಮಾನವ ಬದುಕಿನ ಅನೇಕ ಮಜಲುಗಳನ್ನು ಪರಿಚಯಿಸುತ್ತದೆ.
ಯುದ್ಧ, ಮನುಷ್ಯರಲ್ಲಿ ಇರುವ ದುಷ್ಟತನವನ್ನು ತೋರಿಸುತ್ತದೆ ಎನ್ನುವುದು ನಿಜವಾದರೂ ಒಳ್ಳೆೆಯತನವೂ ಪ್ರಕಟವಾಗುತ್ತದೆ ಎನ್ನುವುದೂ ಸತ್ಯ. ಯಾವುದೇ ಜನಾಂಗಕ್ಕೆೆ ಸೇರಿದ್ದರೂ ತಮ್ಮ ಕಷ್ಟ-ನಷ್ಟಗಳನ್ನು ಲೆಕ್ಕಿಿಸದೇ ಮಾನವೀಯ ಮೌಲ್ಯಗಳಿಗಾಗಿ ಸದ್ದಿಲ್ಲದೇ ಕೆಲಸ ಮಾಡಿದ ರೋಸಾ, ಕ್ಯಾಾಪ್ಟನ್ ಸ್ಟೆೆಂಜ್, ಕ್ರಿಿಸ್ಟಾಾ- ಪುಟ್ಟ ಪಾತ್ರಗಳಾದರೂ ಪರಿಣಾಮಕಾರಿ. ಹಾಗೆಯೇ ಹೆರಿಗೆಯಂಥ ಕಷ್ಟಕರ ಸಂದರ್ಭದಲ್ಲಿ ಮಹಿಳೆಯರು ಒಟ್ಟಾಾಗುವ, ಪರಸ್ಪರ ಪರಿ ಮನಮಿಡಿಯುತ್ತದೆ. ಕಾದಂಬರಿಯ ಮತ್ತೊೊಂದು ಪ್ರಮುಖ ಅಂಶವೆಂದರೆ ಹೆರಿಗೆಯನ್ನು ಅನುಭವಿ ಸೂಲಗಿತ್ತಿಿಯರು ಮಾಡಿಸುವ ಬಗ್ಗೆೆ ಎಲ್ಲಾಾ ವಿವರಗಳನ್ನು ವೈಜ್ಞಾಾನಿಕವಾಗಿ, ಸರಳವಾಗಿ ಲೇಖಕಿ ನೀಡಿದ್ದಾಾರೆ.
ಗರ್ಭಾವಸ್ಥೆೆಯ ವಿವಿಧ ಹಂತಗಳು, ಮಹಿಳೆಯ ದೇಹದೊಳಗೆ ಆಗುವ ಬದಲಾವಣೆಗಳನ್ನು ಗ್ರಹಿಸುವ ರೀತಿ, ಶುಚಿತ್ವದ ಮಹತ್ವ, ಹೆರಿಗೆಯ ಸಮಯದಲ್ಲಿನ ತೊಂದರೆಗಳು, ವೈದ್ಯರ ಅವಶ್ಯಕತೆ ಇವುಗಳನ್ನು ವಸ್ತುನಿಷ್ಠವಾಗಿ ವಿವರಿಸಲಾಗಿದೆ. ಇದರೊಂದಿಗೇ ಆ ಸಮಯದಲ್ಲಿ ಗರ್ಭಿಣಿಗೆ ಬೇಕಾಗುವ ಬೆಂಬಲ, ಒಳ್ಳೆೆಯದೇ ಆಗುತ್ತದೆ ಎಂಬ ಆಶ್ವಾಾಸನೆ, ನಂಬಿಕೆ ಹೀಗೆ ಮಾನಸಿಕ ಭಾವನಾತ್ಮಕ ಅಂಶಗಳನ್ನೂ ಒಳಗೊಂಡಿದೆ. ಕಲಿಕೆಯೊಂದಿಗೆ ಅನುಭವ ಹೇಗೆ ಸಂದರ್ಭವನ್ನು ಎದುರಿಸುವ ಸ್ಥೈರ್ಯವನ್ನು ನೀಡುತ್ತದೆ ಎಂಬುದಕ್ಕೆೆ ಆಂಕೆ ಉದಾಹರಣೆಯಾಗುತ್ತಾಾಳೆ.
ಇತಿಹಾಸದ ಪ್ರಸಿದ್ಧ ಘಟನೆ, ಸ್ಥಳ ಮತ್ತು ವ್ಯಕ್ತಿಿಗಳ ನಿಖರ ಚಿತ್ರಣ, ವೈಜ್ಞಾಾನಿಕ ಮಾಹಿತಿ ಜತೆ ಹೀಗಾಗಿದ್ದರೆ ಎಂಬ ಕಲ್ಪನೆಯ ಸುತ್ತ ಹೆಣೆದ, ಕುತೂಹಲ ಮೂಡಿಸುವ ಕಾದಂಬರಿ ಇದು!