Thursday, 12th December 2024

ಮಾನವ-ವನ್ಯಜೀವಿ ಸಂಘರ್ಷ ಮಾಧ್ಯಮಗಳ ಜವಾಬ್ದಾರಿ

ಸಂಡೆ ಸಮಯ

ಸೌರಭ ರಾವ್

ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿಯ ಡಾ.ವಿದ್ಯಾ ಆತ್ರೇಯಾ ಸಂಶೋಧನಾ ಲೇಖನವೊಂದರ ಆಧಾರದ ಮೇಲೆ
‘ಕಾನ್ಸರ್ವೇಷನ್ ಇಂಡಿಯಾ’ಗೆ ಬರೆದ ಲೇಖನದ ಭಾವಾನುವಾದ

ಮನುಷ್ಯರು ಮತ್ತು ವನ್ಯಜೀವಿಗಳು ಮುಖಾಮುಖಿಯಾಗುವ ಘಟನೆಗಳ ಬಗ್ಗೆೆ ಜನರ ಗ್ರಹಿಕೆಯನ್ನು ರೂಪಿಸುವುದರಲ್ಲಿ ಸಮೂಹ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಭಾರತದಲ್ಲಿ ಇಂತಹ ಘಟನೆಗಳಿಂದ ಎಷ್ಟೋ ಬಾರಿ ಮನುಷ್ಯರು ಮತ್ತು ವನ್ಯಜೀವಿಗಳಿಬ್ಬರಿಗೂ ಯಾವುದೇ ಹಾನಿಯುಂಟಾಗದಿದ್ದರೂ, ಅವುಗಳ ಬಗ್ಗೆ ವರದಿಗಳಲ್ಲಿ ಭೀಕರ ಚಿತ್ರಗಳನ್ನು ಬಳಸಿ ಸುದ್ದಿಯನ್ನು ಉದ್ರೇಕತೆಯಿಂದ ಬಿಂಬಿಸಲಾಗುತ್ತದೆ.

ಮಾನವ-ಚಿರತೆ ಮುಖಾಮುಖಿಯ ಸಂದರ್ಭಗಳ ಬಗೆಗಿನ ವರದಿಗಳು, ಚಿರತೆ ಜನರ ಮೇಲೆ ಮಾಡುವ ದಾಳಿ ಅಥವಾ ಜನ ಚಿರತೆ ಗಳನ್ನು ಸಾಯಿಸುವ ಬಗ್ಗೆಯೇ ಸಾಮಾನ್ಯವಾಗಿ ಕೇಂದ್ರೀಕೃತವಾಗಿರುತ್ತವೆ. ಮುಂಬಯಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಳು ಆಗಾಗ ಕಂಡುಬರುತ್ತವೆ, ಮತ್ತು ಈ ಪ್ರದೇಶಗಳಲ್ಲಿ ಹಿಂದೆ ಅವು ಜನರ
ಮೇಲೆ ದಾಳಿಮಾಡಿರುವ ಘಟನೆಗಳೂ ನಡೆದಿವೆ.

ಸಹಜವಾಗಿ, ಇದರ ಬಗ್ಗೆ ಮಾಧ್ಯಮಗಳ ಆಸಕ್ತಿ ಹರಿದಿದ್ದು ಎಷ್ಟೋ ಬಾರಿ ಚಿರತೆಗಳನ್ನು ನಕಾರಾತ್ಮಕವಾಗಿಯೇ ಬಿಂಬಿಸ ಲಾಗುತ್ತದೆ. 2011ರಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಲು, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಜೀವ ಶಾಸ್ತ್ರಜ್ಞರು, ನಾಗರೀಕ ಸಂಘಟನೆಗಳು ಮತ್ತು ಪ್ರೆೆಸ್ ಕ್ಲಬ್ಗಳ ಸಹಯೋಗದಲ್ಲಿ ಮಾಧ್ಯಮ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಸ್ಥಳೀಯ ವರದಿಗಾರರಿಗಾಗಿ ಕಾರ್ಯಾಗಾರ ಸರಣಿಯೊಂದನ್ನು ಆಯೋಜಿಸಿತ್ತು.

ಮಾನವ-ಚಿರತೆ ಸಂಘರ್ಷವನ್ನು ಮಾಧ್ಯಮಗಳು ವಸ್ತುನಿಷ್ಠವಾದ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಾಗಾರದ ನಂತರದ ಸಮಯದಲ್ಲಿ ಮಾನವ- ವನ್ಯಜೀವಿ ಸಂಘರ್ಷದ ಬಗ್ಗೆ ಮಾಧ್ಯಮಗಳ ವರದಿಗಳು ಹಿಂದಿಗಿಂತ ಸಂವೇದನಾಶೀಲಗೊಳಸಲಾಗಿದೆಯೇ ಎಂದು ನಮ್ಮ ಸಂಶೋಧನಾ ತಂಡ ಪರಿಶೀಲಿಸಿತು. ಎರಡು ಪ್ರಮುಖ ಆಂಗ್ಲ ದಿನಪತ್ರಿಕೆಗಳಲ್ಲಿ, ಮುಂಬಯಿಯಲ್ಲಿ ಮಾನವ-ಚಿರತೆ ಮುಖಾಮುಖಿಯಾದ ವರದಿಗಳ ಶೀರ್ಷಿಕೆಗಳನ್ನು
ಹೋಲಿಸಿದಾಗ ಅವುಗಳ ಧ್ವನಿ, ವಸ್ತು-ವಿಷಯ, ಮತ್ತು ಚಿರತೆಗಳನ್ನು ಮತ್ತು ಘಟನೆಗಳನ್ನು ನಿರೂಪಿಸಿದ ಬಗೆಯನ್ನು ’ಕ್ವಾಲಿಟೆ ಟಿವ್ ಕಾಂಟೆಂಟ್ ಅನಾಲಿಸಿಸ್’ (ಕ್ಯುಸಿಎ) ಎಂಬ ವಿಧಾನದ ಮೂಲಕ ಪರಿಶೀಲಿಸಲಾಯಿತು.

ಕಾರ್ಯಾಗಾರದ ನಂತರ, ಜನರ ಮೇಲೆ ಚಿರತೆಗಳ ದಾಳಿ ನಡೆದ ಘಟನೆಗಳ ಸಂಖ್ಯೆ ಕಡಿಮೆಯಿದ್ದರೂ, ಚಿರತೆಗಳನ್ನೊಳಗೊಂಡ ವರದಿಗಳ ಸಂಖ್ಯೆಯೂ ಹೆಚ್ಚಾಗಿದ್ದು ಕಂಡುಬಂದಿತು. ಆದರೆ, ಮಾಧ್ಯಮ ವರದಿಗಳು ವಸ್ತುನಿಷ್ಠವಾಗಿ ವರದಿಗಳನ್ನು ಪ್ರಕಟಿಸಿ ದ್ದವು ಮತ್ತು ಯಾರ ಮೇಲೂ ದೋಷ ಹೊರಿಸಲು ಮುಂದಾಗದೇ, ಪರಿಸ್ಥಿತಿಗೆ ವಾಸ್ತವವಾಗಿ ಯಾವ ವಿವೇಕಯುಕ್ತ ಪರಿಹಾರ ಗಳನ್ನು ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆಗಳನ್ನು ನಡೆಸಿದ್ದವು.

ಈ ವರದಿಗಳು ಸಂವೇದನಾಶೀಲವಾಗಿ ಚಿರತೆ ದಾಳಿಗಳ ಹಿನ್ನೆಲೆ, ಸನ್ನಿವೇಶ ಮತ್ತು ಸಂದರ್ಭಗಳನ್ನು ಹಿಂದಿಗಿಂತಲೂ ಹೆಚ್ಚು ವಿವರಗಳಿಂದ ಕೂಡಿದ್ದವು. ಅವಸರದಲ್ಲಿ ಚಿರತೆಯನ್ನು ಆಕ್ರಮಣಕಾರೀ ಪ್ರಾಣಿಯೆಂದು ಬಿಂಬಿಸುವುದು ಬಹಳ ಕಮ್ಮಿ ಯಾಗಿತ್ತು. ಬದಲಾಗಿ, ಚಿರತೆಗಳ ಸೌಖ್ಯದ ಬಗ್ಗೆಯೂ ಹೆಚ್ಚು ಕಾಳಜಿ ಕಂಡುಬಂದಿತು. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆ ಪ್ರಾಕೃತಿಕವಾಗಿ, ನೈಸರ್ಗಿಕವಾಗೇ ನಡೆದುಕೊಂಡಿದೆ ಅಥವಾ ಮನುಷ್ಯರಿಂದ ಆಕ್ರಮಣಕ್ಕೆ ತುತ್ತಾಗಿವೆ ಅಥವಾ ದುರ ದೃಷ್ಟವಶಾತ್ ದುರ್ಬಲ ಸನ್ನಿವೇಶಕ್ಕೆ ಬಲಿಯಾಗಿರಬಹುದು ಎಂದು ವಸ್ತುನಿಷ್ಠವಾದ ಶೀರ್ಷಿಕೆಗಳು ಕಂಡುಬಂದವು.

ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ದಾಳಿಗಳನ್ನು ತಪ್ಪಿಸಲು ಮನುಷ್ಯರಾದ ನಾವು ಏನು ಮಾಡಬಹುದು ಎಂಬುದರ ಮೇಲೆ
ವರದಿಗಳು ಕೇಂದ್ರೀಕೃತವಾಗಿದ್ದವು. ಹೀಗಾಗಿ, ಅರಣ್ಯ ಇಲಾಖೆಗಳು, ಪರಿಣತ ಜೀವಶಾಸ್ತ್ರಜ್ಞರು ಮಾಧ್ಯಮ ಸಿಬ್ಬಂದಿಗಳ ಜೊತೆ ಸಂವಹನ ನಡೆಸುತ್ತಿದ್ದರೆ, ವಿಚಾರ ವಿನಿಮಯ ನಡೆಸಿದರೆ, ಮಾನವ-ಚಿರತೆ ಮುಖಾಮುಖಿಯಾಗುವ ಘಟನೆಗಳ ಮೇಲಿನ ವರದಿಗಳ ಮೇಲೆ ಅದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ಪುರಾವೆ ಸಿಕ್ಕಿದೆ.

ಇದರಿಂದ ವರದಿಗಳು ವೈಜ್ಞಾನಿಕವಾಗಿ ಕರಾರುವಾಕ್ಕಾಗಿರುವುದಕ್ಕೆ ಮತ್ತು ಪ್ರಚೋದನೆಗಾಗಿ ಸುದ್ದಿ ಬಿತ್ತರಿಸದೇ, ಸಂವೇದನೆ ಯನ್ನು ಕಳೆದುಕೊಳ್ಳದೇ ಮಾಧ್ಯಮಗಳು ಸ್ಪಂದಿಸುವುದಕ್ಕೆ ಅಡಿಪಾಯವಾಯಿತು. ಮತ್ತು ಪರಿಶೀಲನೆಗೆ ‘ಕ್ಯುಸಿಎ’ ಎಂಬ ವಿಧಾನ ತ್ವರಿತವಾಗಿ ಫಲಿತಾಂಶ ನೀಡುತ್ತದೆ ಮತ್ತು ಕಡಿಮೆ ಸಂಪನ್ಮೂಲಗಳನ್ನು ಬಳಸಿ ಮಾಧ್ಯಮಗಳ ಸ್ಪಂದನೆಯ, ಮಧ್ಯ ಪ್ರವೇಶದ ಪರಿಣಾಮವನ್ನು ಅಳೆಯಬಹುದು ಎಂದೂ ತಿಳಿದುಬಂದಿದೆ.

(ಜರ್ನಲ್ ಆಫ್ ಅರ್ಬನ್ ಈಕಾಲಜಿ (2017, 1-7)ಯಲ್ಲಿ From fear to understanding: changes in media representations of leopard incidences after media awareness workshops in Mumbai, India ಎಂಬ ಶೀರ್ಷಿಕೆಯಡಿಯಲ್ಲಿ ಮೂಲ ಅಧ್ಯಯನ ಪ್ರಕಟವಾಗಿತ್ತು.)