Sunday, 8th September 2024

ನಿನ್ನ ಪ್ರೀತಿಯ ನೆರಳಿನಲ್ಲಿ…

ಲೇ: ಎನ್.ಆರ್.ರೂಪಶ್ರೀ

ಪತ್ರಿಿಕೆಯೊಂದರಲ್ಲಿ ಬರೆದ ಅಂಕಣಗಳ ಸಂಕಲನ ಇದು. ಒಟ್ಟು ಸುಮಾರು 27 ಬರಹಗಳಿರುವ ಈ ಸಂಕಲನದ ಬಹುಪಾಲು ಬರಹಗಳು ಮನಸ್ಸಿಿನ ಭಾವನೆಗಳ ತುಡಿತದ ಕಥನಗಳೆಂದೇ ಹೇಳಬಹುದು. ‘ಈ ಬದುಕು ಬದುಕಾಗಿಯೇ ಇರಬೇಕೆಂದರೆ ಶುದ್ಧ ನಿಷ್ಕಲ್ಮಶ ಮನದ ಪ್ರೀತಿಯೊಂದು ನಮ್ಮದಾಗಬೇಕು. ಅಂತಹ ಪ್ರೀತಿಗಾಗಿಯೇ ನಾವು ಬದುಕಿನುದ್ದಕ್ಕೂ ಹಂಬಲಿಸುತ್ತಲೇ ಇರುತ್ತೇವೆ. ಈ ಹಂಬಲ ಕೆಲವೊಮ್ಮೆೆ ಈಡೇರುತ್ತದೆ, ಇನ್ನು ಕೆಲವೊಮ್ಮೆೆ ಕನಸಾಗಿಯೇ ಉಳಿಯುತ್ತದೆ. ಹಲವು ಬಾರಿ ಈ ಬದುಕಿಗೆ ಸಿಕ್ಕಿಿಯೇ ಬಿಟ್ಟಿಿತು ಎಂದುಕೊಂಡಿದ್ದು ಹಾಗ್ಹಾಾಗೇ ತಪ್ಪಿಿಸಿಕೊಂಡು ಹೋಗುತ್ತದೆ. ಇಂತಹ ಬದುಕು ಮತ್ತು ಪ್ರೀತಿಯನ್ನು ನಮ್ಮದೇ ಅನುಭವವೇನೋ ಎನ್ನುವಂತೆ ತಮ್ಮ ಆಪ್ತ ಬರಹಗಳ ಮೂಲಕ ಕಟ್ಟಿಿಕೊಡುವ ಕನ್ನಡದ ಕೆಲವೇ ಕೆಲವು ಲೇಖಕಿಯರಲ್ಲಿ ಶಿರಸಿಯ ಎನ್.ಆರ್.ರೂಪಶ್ರೀಯವರೂ ಒಬ್ಬರು. ಬದುಕಿನ ಪ್ರೀತಿಯ ಬಗ್ಗೆೆ ಯಾವುದೇ ವಯೋಮಾನದವರು ಮೆಚ್ಚಿಿಕೊಂಡು ಓದುವಂತೆ ಬರೆಯಬಹುದು ಎನ್ನುವುದನ್ನು ತಮ್ಮಬರಹಗಳ ಮೂಲಕ ತೋರಿಸಿಕೊಟ್ಟಿಿದ್ದಾಾರೆ… ಇಲ್ಲಿನ ಪ್ರತಿಯೊಂದು ಬರಹದಲ್ಲೂ ಬದುಕಿನ ಪ್ರೀತಿಯ ಘಮವಿದೆ.’ (ಬೆನ್ನುಡಿಯಿಂದ) ಯಳಗಲ್ಲಿನ ಬೆನಕ ಬುಕ್‌ಸ್‌ ಬ್ಯಾಾಂಕ್ (7338437666) ಪ್ರಕಟಿಸಿರುವ ಈ ಪುಸ್ತಕದ ಬೆಲೆ ರು.120/-

ದಲಿತ ಸಾಹಿತ್ಯ ಸಂಪುಟ – ಸಣ್ಣಕಥೆ

ಸಂ: ಡಾ ಸಣ್ಣರಾಮ

ಕಳೆದ ಮೂರು ದಶಕಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆೆ ದಲಿತ ಸಾಹಿತ್ಯ ಕೊಡುಗೆ ಗಮನಾರ್ಹ. ಈ ಸಂಕಲನದಲ್ಲಿ ದಲಿತ ಸಾಹಿತ್ಯ ಪ್ರಕಾರದಲ್ಲಿ ವಿವಿಧ ಸಂದರ್ಭಗಳಲ್ಲಿ ಪ್ರಕಟಗೊಂಡ ಸಣ್ಣಕಥೆಗಳನ್ನು ನೀಡಲಾಗಿದೆ. ದೇವನೂರ ಮಹಾದೇವ ಅವರ ‘ಅಮಾಸ’, ಬರಗೂರು ರಾಮಚಂದ್ರಪ್ಪ ಅವರ ‘ಕಪ್ಪುುನೆಲ ಕೆಂಪುಕಾಲು’ ದಿಂದ ಆರಂಭಿಸಿ, ಈಚೆಗೆ ಪ್ರಕಟಗೊಂಡ ಹಲವು ಕಥೆಗಳೂ ಇದರಲ್ಲಿವೆ. ಸಾಹಿತ್ಯ ಅಧ್ಯಯನ ದೃಷ್ಟಿಿಯಲ್ಲಿ ನೋಡಿದರೆ ಈ ಸಂಕಲನ ಬಹು ಮುಖ್ಯ. ಕನ್ನಡ ಸಾಹಿತ್ಯ ಪರಿಷತ್ತು ಇಂತಹದೊಂದು ಪ್ರಾಾತಿನಿಧಿಕ ಸಂಕಲನದಲ್ಲಿ ದಲಿತ ಸಾಹಿತ್ಯದಿಂದ ಆಯ್ದ ಸಣ್ಣಕಥೆಗಳನ್ನು ಸಂಗ್ರಹಿಸಿ ಕೊಟ್ಟಿಿರುವುದು ಮಹತ್ವದ ಹೆಜ್ಜೆೆ. ಇಂತಹ ಸಂಕಲನದಿಂದ, ಈ ಪ್ರಕಾರದ ಸಣ್ಣಕಥೆಗಳ ಬೆಳವಣಿಗೆಯನ್ನು ಅವಲೋಕಿಸಲು ಅನುಕೂಲ ಆಗುವುದು ಒಂದೆಡೆಯಾದರೆ, ಕಥೆಗಳ ವಿಷಯದ ಆಯ್ಕೆೆಯ ಪ್ರಾಾಮುಖ್ಯತೆಯನ್ನು ಅಧ್ಯಯನ ಮಾಡಲು ಸಹ ಸಹಕಾರಿ ಎನಿಸುತ್ತದೆ. ದಲಿತ ಸಾಹಿತ್ಯದ ವಿವಿಧ ಪ್ರಾಾತಿನಿಧಿಕ ಬರಹಗಳ ಸಂಕಲನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವುದು ಒಂದು ಮೈಲಿಗಲ್ಲು ಎಂದೇ ದಾಖಲಿಸಬೇಕಾಗುತ್ತದೆ. 29 ಸಣ್ಣಕಥೆಗಳನ್ನು ಹೊಂದಿರುವ ಈ ಸಂಕಲನದ ಬೆಲೆ ರು. 320/-

Leave a Reply

Your email address will not be published. Required fields are marked *

error: Content is protected !!