Sunday, 15th December 2024

ನಾಡು ಕಂಡಂತೆ ಕಿದ್ವಾಯಿ ಹೊಸಪರ್ವ

ಬಾಲಕೃಷ್ಣ ಎನ್‌.

ಇಡೀ ದೇಶಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನ. ಅದರಲ್ಲೂ ಸರಕಾರಿ ಆಸ್ಪತ್ರೆ ಗಳಂತೂ ಮಾಡಿದ ಸೇವೆ ಅಮೋಘ. ಆದರೆ ವಿಶ್ವಮಟ್ಟಕ್ಕೆ ಬೆಳೆದು, ಕ್ಯಾನ್ಸರ್ ರೋಗಿಗಳ ಬಾಳಲ್ಲಿ ಚೈತನ್ಯದ ದೀಪ ಬೆಳೆಗು ತ್ತಿರುವ ಏಕೈಕ ಸರಕಾರಿ ಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ.

ವಿಶ್ವದಾದ್ಯಂತ ಎಷ್ಟೋ ಉನ್ನತ ದರ್ಜೆಯ ಕ್ಯಾನ್ಸರ್ ಆಸ್ಪತ್ರೆಗಳಿವೆ. ಆದರೂ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಾಗಿ ವಿದೇಶಿಯರು ಬರುತ್ತಿರುವುದು ಅಚ್ಚರಿಯೇ ಸರಿ. ಇಂತಹ ಆಸ್ಪತ್ರೆಯಿಂದ ನಾಡಿನ ಹಿರಿಮೆ ಇನ್ನಷ್ಟು ಉನ್ನತ ಮಟ್ಟಕ್ಕೆ
ಕೊಂಡೊಯ್ಯಲಿದೆ. ವಿದೇಶದಲ್ಲಿ ಕಿದ್ವಾಯಿ ಸಂಸ್ಥೆ ಮನೆ ಮಾತಾಗಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಅನೇಕ ಬದಲಾವಣೆ ತರಲು ಬಯಸುತ್ತಿದ್ದಾರೆ ಸಂಸ್ಥೆ ನಿರ್ದೇಶಕರಾದ ಡಾ.ಸಿ.ರಾಮಚಂದ್ರ ಅವರು.

ಡಾ.ಸಿ.ರಾಮಚಂದ್ರ ಅವರು ಸಂಸ್ಥೆಗೆ ನಿರ್ದೇಶಕರಾಗಿ ನೇಮಕಗೊಂಡ ದಿನಮಾನಗಳಿಂದ ಆಸ್ಪತ್ರೆ ಹೊಸ ರೂಪ ಪಡೆದು ಖಾಸಗಿ ಆಸ್ಪತ್ರೆಗೂ ಕಮ್ಮಿಯಲ್ಲ ಎಂಬಂತೆ ಮಾರ್ಪಾಡು ಮಾಡುವಲ್ಲಿ ನಿರತರಾಗಿದ್ದಾರೆ. ಕರೋನಾ ಸಮಯದಲ್ಲಿ ರೋಗಿಗಳಿಗೆ ತೊಂದರೆಯಾಗ ಬಾರದಂತೆ 24 ಗಂಟೆ ಸೇವೆ ಸಲ್ಲಿಸಿದ ಕೀರ್ತಿ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಲಿದೆ. ವಿಶ್ವಕ್ಕೆ ಮಾದರಿ ಯಾಗಿದ್ದು, ಇಲ್ಲಿನ ನೂತನ ತಂತ್ರಜ್ಞಾನ ಹಾಗೂ ಬದಲಾದ ಆಸ್ಪತ್ರೆಯ ಸ್ವರೂಪದಿಂದ. ಇಲ್ಲಿನ ಪರಿಸರ ಸುಸಜ್ಜಿತ ಕಟ್ಟಡಗಳು, ವಾತಾವರಣ ಕೆಲವು ಖಾಸಗಿ ಆಸ್ಪತ್ರೆಗೂ ಮಿಗಿ ಲಾದುದು.

24 ಗಂಟೆಗಳೂ ಕಾರ್ಯನಿರ್ವಹಿಸುವ ಅತ್ಯುತ್ತಮ ಗುಣಮಟ್ಟದ ಮಾಲಿಕ್ಯುಲಾರ್ ಪ್ರಯೋಗಾಲಯ ಕಿದ್ವಾಯಿ ಆಸ್ಪತ್ರೆಯಲ್ಲಿ ಆರಂಭವಾಗಲಿದೆ. ಯೂರೋಪ್ ಹೊರತುಪಡಿಸಿ ಪ್ರಪಂಚದಲ್ಲೆಲ್ಲೂ ಈ ಬಗೆಯ ಲ್ಯಾಬ್ ಇಲ್ಲ. ಇದು ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯಾಗಲಿದೆ. ಉಳಿದೆಡೆಗಳಿಗಿಂತ ಶೇಕಡಾ 80ರಷ್ಟು ಕಡಿಮೆ ವೆಚ್ಚದಲ್ಲಿ ರೋಗಿಗಳು ಈ ಪ್ರಯೋಗಾ ಲಯದಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ರೇಡಿಯೋ ಥೆರಪಿ ಯಂತ್ರವನ್ನು ಕೂಡಾ ಕಿದ್ವಾಯಿ ಆಸ್ಪತ್ರೆ ಹೊಂದಿದೆ.

ಉಳಿದೆಡೆ 10 ರಿಂದ 12 ಲಕ್ಷ ವೆಚ್ಚ ತಗಲುವ ಈ ಚಿಕಿತ್ಸಾ ವಿಧಾನವನ್ನು ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಿದೆ.
ಬಿಆರ್‌ಸಿಎ 1 ಮತ್ತು ಬಿಆರ್‌ಸಿಎ 2 ಎನ್ನುವ ಈ ಪರೀಕ್ಷೆಗಳಿಂದ ಮೂಲಕ, ಜನರು ಸ್ತನ ಕ್ಯಾನ್ಸರ್ ನಿಂದ ನರಳುವುದನ್ನು ಹಾಗೂ ಸಾಯುವುದನ್ನು ತಪ್ಪಿಸಲಿದೆ. ಈ ಎರಡು ಅತ್ಯಾಧುನಿಕ ತಂತ್ರಜ್ಞಾನಗಳು ಸರಕಾರಿ ಆಸ್ಪತ್ರೆಯಾದ ಕಿದ್ವಾಯಿಯನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯುತ್ತಿದೆ.

ಸಂಸ್ಥೆಯಲ್ಲಿ ವಿ-ಮ್ಯಾಟೆಕ್ (ಐಜಿ ಆರ್‌ಟಿ) ಆರು ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ರೆಡಿಯೋಥೆರಪಿ ಚಿಕಿತ್ಸೆ ನೀಡಲಾಗು ತ್ತಿದೆ. ಹೆಚ್ಚುವರಿಯಾಗಿ 4 ತಂತ್ರಜ್ಞಾನ ಅಳವಡಿಸಲಾಗಿದ್ದು, 72 ಕೋಟಿ ರು. ಖರ್ಚು ಮಾಡಲಾಗಿದೆ. ಇಡೀ ದೇಶದಲ್ಲೆ ಇಂತಹ ತಂತ್ರಜ್ಞಾನ ಅಳವಡಿಸಿರುವುದು ಕಿದ್ವಾಯಿ ಸಂಸ್ಥೆಯಲ್ಲಿ ಮಾತ್ರ. ವಿದೇಶಗಳಿಂದ ತಂತ್ರಜ್ಞಾನ ತರಿಸಿಕೊಳ್ಳಲಾಗಿದೆ. ಒಂದು ತಂತ್ರಜ್ಞಾನದಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಮಂದಿಗೆ ರೇಡಿಯೋಥೆರಫಿ ಮಾಡಲಾಗುತ್ತದೆ. ಹಾಗೆಯೇ ವೈಡ್ ಬೋರ್ ಸಿಎಫ್ ಸಿಮ್ಯುಲೇಟರ್ ಎಂಬ ತಂತ್ರಜ್ಞಾನಕ್ಕೆ 2.11 ಕೋಟಿ ಖರ್ಚು ಮಾಡಲಾಗಿದ್ದು, ರೋಗ ವಿಧಾನ ಪತ್ತೆ ಹಚ್ಚಲು ಬಳಸಲಾಗುತ್ತಿದೆ. ಕ್ಯಾನ್ಸರ್ ರೋಗಿಗಳೆ ಲೇಸರ್ ಥೆರಪಿ ಮಾಡಲು ಲೇಸರ್ ಎಮಿಷನ್ ಯಂತ್ರ ಅಳವಡಿಸಲಾಗಿದೆ.

500ಕ್ಕೂ ಹೆಚ್ಚು ಬಡ ರೋಗಿಗಳಿಗೆ ಯಶಸ್ವಿ ರೊಬಾಟಿಕ್ ಉಚಿತ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕ್ರಾಂತಿ ಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ 3ರಿಂದ 10 ಲಕ್ಷ ರು. ವೆಚ್ಚ ತಗುಲುವ ಅತ್ಯಂತ ಸಂಕೀರ್ಣ, ಕ್ಲಿಷ್ಟಕರವಾದ ರೊಬೊಟಿಕ್ ಶಸ್ತ್ರಚಿಕಿತ್ಸೆ ಬಡವರ ಪಾಲಿಗೆ ಕೈಗೆಟುಕದ ನಕ್ಷತ್ರವಾಗಿತ್ತು. ಇದನ್ನು ಮನಗಂಡ ಕಿದ್ವಾಯಿ ಸಂಸ್ಥೆ 2016ರಲ್ಲಿ 16 ಕೋಟಿ ರು. ವೆಚ್ಚದಲ್ಲಿ ರೊಬಾಟಿಕ್ ಯಂತ್ರ ಖರೀದಿಸಿ, ಶಸ್ತ್ರಚಿಕಿತ್ಸೆ ಆರಂಭಿಸಿತ್ತು. ಈವರೆಗೆ 600 ಬಡ ರೋಗಿಗಳು ಉಚಿತವಾಗಿ ಈ ಸೌಲಭ್ಯ ಪಡೆದಿದ್ದಾರೆ. ಎಪಿಎಲ್ ಕಾರ್ಡುದಾರರು ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ.

ಇನ್ನು ಮುಂದೆ ಇಲ್ಲಿ ಯಾವುದೇ ರೀತಿಯಾದ ವೈದ್ಯಕೀಯ ಕೊರತೆ ಎದುರಾಗಬಾರದೆಂದು ಹೊಸ ವರ್ಷಕ್ಕೆ ಹೊಸ ರೂಪ ಪಡೆಯುತ್ತಿದೆ ಕಿದ್ವಾಯಿ. ತಂಬಾಕು ಹಾಗೂ ಜೀವನ ಶೈಲಿ ಬದಲಾವಣೆಯಿಂದ ಕ್ಯಾನ್ಸರ್ ಮಾರಕಗಳು ಹೆಚ್ಚಾಗಿ ಕಾಡುತ್ತಿದೆ. ಶ್ವಾಸಕೋಶ, ಬೋನ್‌ಮ್ಯಾರೋ, ಸ್ತನ ಕ್ಯಾನ್ಸರ್ ಮುಂತಾದವು ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಜನರು ಜಾಗೃತಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಂಸ್ಥೆ ನಿರ್ದೇಶಕರಾದ ಡಾ.ಸಿ.ರಾಮಚಂದ್ರ ಅವರು ಸಲಹೆ ನೀಡಿದ್ದಾರೆ. 2021ಕ್ಕೆ ವಿಶ್ವ ವಿಶ್ವಕ್ಕೆ ಮಾದರಿಯಾಗಲಿರುವ ಏಕೈಕ ಸರಕಾರಿ ಆಸ್ಪತ್ರೆ ಕಿದ್ವಾಯಿ ಎಂತಲೂ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಹೊಸತು
ಅಸ್ತಿಮಜ್ಜೆ ಕಸಿ ಘಟಕ. 12 ಶಸ್ತ್ರ ಚಿಕಿತ್ಸಾ ಘಟಕ, 90

ಇಂಟೆನ್ಸೀವ್ ಕೇರ್

ಪೆಟ್ ಸ್ಕ್ಯಾನ್, ಅಡ್ವಾನ್ಸಡ್ ಮ್ಯಾಲಿಕುಲರ್ ಆಂಕಾಲಜಿ
ಇ ಆಸ್ಪತ್ರೆ, ಪೇಪರ್ ಲೆಸ್ ಯೂನಿಟ್
ಹೊರಾಂಗಣ, ಹೊರಾಂಗಣ ಸ್ವಚ್ಚತಾ ಯೂನಿಟ್
ಇನ್ಪೋಸಿಸ್ ಒಪಿಡಿ (ರಾಜ್ಯದಲ್ಲಿ ದೊಡ್ಡ ಒಪಿಡಿ ಘಟಕ)
ಪೀಡಿಯಾಟ್ರಿಕ್ ಐಸಿಯು (ಕಾಮಗಾರಿ ಪ್ರಗತಿ)
ಸೂಪರ್ ಸ್ಪೆೆಷಾಲಿಟಿ ಬ್ಲಾಕ್ ( ಹೊಸ ಯೋಜನೆ)

ಅಂಕಿ- ಅಂಶಗಳು
1,200
ಸಂಸ್ಥೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯುವ ಹೊರರೋಗಿಗಳು 1,300
ಸಂಸ್ಥೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯುವ ಒಳರೋಗಿಗಳು
72 ಸಾವಿರ ಚ.ಅಡಿಯಲ್ಲಿ ಇನ್ಫೊಸಿಸ್ ಪ್ರತಿಷ್ಠಾನದಿಂದ ನಿರ್ಮಿತವಾದ ಒಪಿಡಿ