* ಶುಭಶ್ರೀ ಪ್ರಸಾದ್, ಮಂಡ್ಯ
ರಸಋಷಿ ಕುವೆಂಪು ಅವರು ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆ ಬರೆದ ಕಥೆ ಐತಿಹಾಸಿಕವಾಗಿಯೂ ಮಹತ್ವ ಹೊಂದಿದ್ದು, ಅದೇ ವೇಳೆಯಲ್ಲಿ ಹಲವು ಹೊಸ ಹೊಳಹುಗಳನ್ನು ಹೊಂದಿದೆ. ಮಕ್ಕಳ ಕಥೆಯಾಗಿದ್ದರಿಂದ ಗುಬ್ಬಚ್ಚಿಿ ಸಂಸಾರವನ್ನು ಮೋಸಕ್ಕೆೆ ಕೆಡಹುವ ನರಿಯ ಪ್ರಸಂಗ ಮಕ್ಕಳಿಗೆ ಕುತೂಹಲವನ್ನು ಹುಟ್ಟಿಿಸುವುದರ ಜತೆ, ವೈಚಾರಿಕ ಚಿಂತನೆಗೂ ಅವಕಾಶ ಮಾಡಿಕೊಡುತ್ತದೆ. ಮಹಾಕವಿಯೊಬ್ಬ ರೂಪುಗೊಳ್ಳುವ ಮುನ್ಸೂಚನೆಯು ಈ ಮಕ್ಕಳ ಕಥೆಯಲ್ಲಿದೆ ಎಂದು ಗುರುತಿಸಿದ್ದಾಾರೆ ಲೇಖಕಿ.
ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿಿ ಸಂದು 50 ವರ್ಷಗಳಾದವು (1967) ಎನ್ನುವ ಸಂಭ್ರಮದ ಸಂದರ್ಭದಲ್ಲಿಯೇ ಗೆಳೆಯರೊಬ್ಬರು ಕುವೆಂಪು ಅವರ ‘ನರಿಗಳಿಗೇಕೆ ಕೋಡಿಲ್ಲ’ ಮಕ್ಕಳ ಕತೆಗೆ ಸರಿ ಸುಮಾರು ನೂರು ವರ್ಷಗಳಾಗಿವೆ ಎಂದರು. ಅಚ್ಚರಿ ಬೆರೆತ ಖುಷಿ. ಕುವೆಂಪು ಅವರಂತಹ ರಸಋಷಿ, ಮಹಾಕವಿಯೊಬ್ಬರು ಶತಮಾನದ ಹಿಂದೆಯೇ ಮಕ್ಕಳಿಗಾಗಿ ಒಂದು ಪುಟ್ಟ ಕತೆ ಬರೆದಿದ್ದಾರೆಂಬುದೇ ಸೋಜಿಗ ಎನಿಸಿತು.
ಈ ಕತೆಯ ವಯಸ್ಸನ್ನು ಹುಡುಕುವ ನರಹಳ್ಳಿಿಯವರು ತಮ್ಮ ಕೃತಿಯಲ್ಲಿ 50 ವರ್ಷಗಳ ಹಿಂದೆ ‘ಮಕ್ಕಳ ಪುಸ್ತಕ’ ಎಂಬ ಹೆಸರಿನಲ್ಲಿ ಹೊರಡುತ್ತಿಿದ್ದ ಮಾಸಪತ್ರಿಿಕೆಯಲ್ಲಿ ಪ್ರಕಟವಾಗಿದ ಕತೆ ಎಂಬ ಸೂಚನೆಯಿದೆ. ಈ ಸೂಚನೆಯನ್ನು ಆಧರಿಸಿದರೆ ಈ ಕತೆ ಸರಿಸುಮಾರು 1917 -18 ರ ವೇಳೆಗೆ ಪ್ರಕಟವಾಗಿರಬೇಕು. ಆಗ ಸಹಜವಾಗಿಯೇ ಇದಕ್ಕೊೊಂದು ಐತಿಹಾಸಿಕ ಮಹತ್ವ ಒದಗಿಬಿಡುತ್ತದೆ ಎಂದು ಬರೆಯುತ್ತಾಾರೆ. ಈ ಮಾಹಿತಿ ಒಂದು ಹೊಸ ಉತ್ಸಾಾಹ ತಂದಿತು.
ನವಿಲುಕಲ್ಲು ಎಂಬ ಬೆಟ್ಟದ ಮೇಲೆ ಒಂದು ಗುಬ್ಬಚ್ಚಿಿಯ ಸಂಸಾರವಿರುತ್ತೆೆ. ಹೆಣ್ಣು ಗುಬ್ಬಚ್ಚಿಿಯ ಹೆಸರು ಗುಬ್ಬಕ್ಕ, ಗಂಡು ಗುಬ್ಬಚ್ಚಿಿಯ ಹೆಸರು ಗುಬ್ಬಣ್ಣ. ಬೆಟ್ಟದ ಮೇಗಡೆ ಒಂದು ಹೆಮ್ಮರದ ನೆತ್ತಿಿಯ ಕೊಂಬೆಯ ತುದಿಯಲಿ ಗುಬ್ಬಿಿಗಳ ಸಂಸಾರ. ಗಾಳಿ ಬೀಸಿದಾಗ ಗುಬ್ಬಿಿಗೂಡು ತೊಟ್ಟಿಿಲಂತೆ ತೂಗುವುದು. ನಮ್ಮ ಮನೆಗಳಿಗೆ ಇರುವ ಹಾಗೆ ಸಿಮೆಂಟು ಇಟ್ಟಿಿಗೆಯ ಮನೆಯಲ್ಲ ಅವರದು. ಬೆಲ್ಲದ ಗೋಡೆ, ಸಕ್ಕರೆ ಬಾಗಿಲು, ಕಬ್ಬಿಿನ ಮುಚ್ಚಿಿಗೆ ಮನೆಯಂಗಳದಲಿ ಜೇನು ತುಪ್ಪದ ಸರೋವರ ಎಂದು ವರ್ಣಿಸುವ ಕತೆಗಾರ ಇವನ್ನು ಸಮೃದ್ಧಿಿಯ ಸಂಕೇತವೂ, ಸಂತಸದ ಸೂಚಕವೂ, ಮಕ್ಕಳ ರೋಚಕತೆಗೋ ಎಂಬಂತೆ ಬಳಸುತ್ತಾಾರೆ.
ಆನೆಮಳೆ
ಗುಬ್ಬಕ್ಕ ಗುಬ್ಬಣ್ಣ ಹರಕೆ ಹೊತ್ತ ಮೇಲೆ 3 ಮಕ್ಕಳಾದವು. ಹರಕೆ ತೀರಿಸಲು ಗಂಡ ಕಾಶಿಗೆ ಹೋಗುತ್ತಾಾನೆ. ಗುಬ್ಬಕ್ಕ ಒಬ್ಬಳೇ ಸಂಸಾರ ನಿಭಾಯಿಸುತ್ತಿಿರುತ್ತಾಾಳೆ. ಹೀಗಿರಲೊಂದು ದಿನ ಬಿರುಗಾಳಿ, ಆಲಿಕಲ್ಲು ಮಳೆ… ಕುವೆಂಪು ಅವರು ಮಲೆನಾಡಿನ ಮಳೆಯನ್ನು ‘ಆನೆಮಳೆ’ ಎಂದು ಪರಿಚಯಿಸುತ್ತಾಾರೆ. ಇಲ್ಲಿ ಆನೆಮಳೆ ಎಂದು ಬಳಸಿರುವುದು ಪ್ರಾಾಣಿಪ್ರಪಂಚದ ಒಂದು ಭಾಗವಾಗಿಯೇ ಆಪ್ಯಾಾಯಮಾನವಾಗುತ್ತದೆ. ಆ ಮಾರಿ ಮಳೆಗೆ ಸಿಕ್ಕಿಿಬಿದ್ದ ಹುಲಿಯಣ್ಣ, ಕರಡ್ಯಣ್ಣ ಮತ್ತು ನರಿಯಣ್ಣ ಬಹಳ ನರಳಿ ಅಶ್ರಯಕ್ಕಾಾಗಿ ಗುಬ್ಬಕ್ಕನ ಮನೆಯ ಬಾಗಿಲು ತಟ್ಟುತ್ತಾಾರೆ. ಬಲವಾದ ಬಾಗಿಲ ಸದ್ದಿಗೆ ಬೆದರಿದ ಗುಬ್ಬಕ್ಕನಿಗೆ ಅದು ದುಷ್ಕೀರ್ತಿ ಪತಾಕೆ ಹಾರಿಸಿದ್ದ ನರಿಯಣ್ಣ ಎಂದು ತಿಳಿಯುತ್ತದೆ. ಕೊನೆಗೆ ಹುಲಿ ‘ಅಕ್ಕಾಾ ಗುಬ್ಬಕ್ಕ! ನಾನು ಹುಲಿಯಣ್ಣ ಇದ್ದೇನೆ. ದಯವಿಟ್ಟು ಬಾಗಿಲು ತೆರೆ. ನಿನಗೇನು ಅಪಾಯ ಬಾರದಂತೆ ನೋಡಿಕೊಳ್ಳುತ್ತೇನೆ. ಹೆದರಬೇಡ. ನಮ್ಮ ಸಂಗಡ ಸಾಧು ಸಜ್ಜನನಾದ ಕರಡ್ಯಣ್ಣನೂ ಇದ್ದಾನೆ’ (ಪುಟ 4) ಎನ್ನುತ್ತಾಾನೆ. ಕ್ರೂರ ಮೃಗಗಳಾದ ಹುಲಿ ಕರಡಿಗಳೂ ಇಲ್ಲಿ ಸಜ್ಜನರು. ಆದರೆ ಕ್ರೂರತೆಯ ಮುಖವಾಡವಿಲ್ಲದೆಯೂ ತನ್ನ ಕುಟಿಲ ತಂತ್ರಗಳಿಂದ ಕುಕೀರ್ತಿ ಪಡೆದ ನರಿಯ, ನರಿಯಂಥ ಜನರ ಬಗೆಗೆ ಕುವೆಂಪು ಒಂದು ಸಣ್ಣ ಎಚ್ಚರಿಕೆ ನೀಡುತ್ತಾಾರೆ.
ಕೆಸರುಗಾಲಿಗೆ ಬಿಸಿನೀರು ಕೊಟ್ಟು, ಒರೆಸಿಕೊಳ್ಳಲು ಮೈವಸ್ತ್ರ ಕೊಟ್ಟು, ಊತ ಕೊಟ್ಟು, ಒಲೆಯ ಬಳಿ ಬೆಂಕಿಯ ಕಾವಿನಲ್ಲಿ ಒರಗಲು ಹುಲ್ಲಿನ ಹಾಸಿಗೆಗಳನ್ನು ಗುಬ್ಬಕ್ಕ ಕೊಡುತ್ತಾಾಳೆ.
ಇಂಥ ಮಕ್ಕಳ ಕತೆಗಳಲ್ಲಿ ವೈಚಾರಿಕತೆಗೆ ಆಸ್ಪದವೇ ಇಲ್ಲ. ಪುಟ್ಟ ಗುಬ್ಬಿಿಗೂಡಿಗೆ ಹುಲಿ, ನರಿ, ಕರಡಿ ಆಶ್ರಯಕ್ಕಾಾಗಿ ಬರುವುದು; ಹುಲ್ಲಿನ ಗೂಡಿನಲಿ ಬೆಂಕಿ ಕಾಯಿಸುವುದು; ಗೂಡಿನ ಬೆಲ್ಲದ ಗೋಡೆಗೆ ಗಾಂಧಿ, ರಾಮಕೃಷ್ಣ, ವಿವೇಕಾನಂದರ ಪಟ ತಗುಲಿ ಹಾಕುವುದು ಅಸಾಧ್ಯ ಸಂಗತಿಗಳಾದರೂ ಮಕ್ಕಳ ಮುಗ್ಧತೆಗೆ, ಕಲ್ಪನಾವಿಹಾರಕ್ಕೆೆ ನೀರೆರೆವಂತೆ ಕುವೆಂಪು ಇವುಗಳನ್ನು ಬಳಸಿಕೊಂಡಿದ್ದಾರೆ. ಈ ಯುಗದ ಮಕ್ಕಳು ಇವನ್ನೆೆಲ್ಲ ನಂಬುವುದೇ ಇಲ್ಲ. ಆದರೆ ಅಂದಿನ ಮಕ್ಕಳು ಇದನ್ನು ಕೇಳಿಯೇ ಬಾಯಲ್ಲಿ ನೀರು ಸುರಿಸುತ್ತ, ತಾವೇ ಜೇನುತುಪ್ಪದ ಕೊಳದಲ್ಲಿ ಈಜಿದಂತೆ, ಸಕ್ಕರೆ ಬಾಗಿಲಿನಿಂದ ಒಂದು ಚೂರು ಕಿತ್ತು ತಿಂದಂತೆ ಕಲ್ಪಿಿಸಿ ಸುಖಿಸುತ್ತ; ಬಿಟ್ಟ ಕಣ್ಣು ಬಿಟ್ಟಂತೆ ಅಯ್ಯೋ ಪಾಪ ಗುಬ್ಬಕ್ಕ ಎಂದು ಕಣ್ಣು ತುಂಬಿಕೊಳ್ಳುತ್ತ ಕತೆ ಕೇಳುತ್ತಿಿದ್ದಿರಬೇಕು. ನರಹಳ್ಳಿಿಯವರು ಹೇಳುವಂತೆ ಈ ಕತೆಯಲ್ಲಿನ ಗುಬ್ಬಕ್ಕನ ಮನೆಯ ಕಲ್ಪನೆಯೇ ಬೇರೆ ರೀತಿಯದು. ಹಾಗೆ ನೋಡಿದರೆ ಈ ವೈಭವೀಕರಣವೂ ಜಾನಪದ ಸಾಹಿತ್ಯದಿಂದಲೇ ಬಂದಿರುವಂಥದು. ಉತ್ಪ್ರೇಕ್ಷೆೆ ಜಾನಪದ ಸಾಹಿತ್ಯದ ಪ್ರಧಾನ ಗುಣ (ಕುವೆಂಪು ಕಥನ ಕೌತುಕ, ನರಹಳ್ಳಿಿ ಬಾಲಸುಬ್ರಹ್ಮಣ್ಯ, ಅಭಿನವ – ಬೆಂಗಳೂರು, ಮೊದಲ ಮುದ್ರಣ 2016, ಪುಟ13)
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಪ್ರಾಾಣಿಗಳ ಪ್ರಪಂಚದಲ್ಲಿಯೂ ಮಹಾತ್ಮರಿಗೆ ಸ್ಥಾಾನ ಕಲ್ಪಿಿಸಿರುವುದು. ಒಳ್ಳೆೆಯದಕ್ಕೆೆ ಸಾರ್ವತ್ರಿಿಕ ಮೌಲ್ಯ ಇರುತ್ತದೆ ಎಂಬುದಕ್ಕೆೆ ಇದೊಂದು ನಿದರ್ಶನ. ನೇರವಾಗಿ ಮಹಾತ್ಮರ ಕಥೆ ಹೇಳದೆ ಗುಬ್ಬಕ್ಕನ ಮನೆಯ ಗೋಡೆಯಲ್ಲಿ ಪಟ ಇರಿಸಿ ಮಕ್ಕಳು ಈ ಮಹಾಪುರುಷರ ಸನ್ನಿಿಧಿಯಲ್ಲಿ ಬೆಳೆದರೆ ಅವರೂ ಮಹಾತ್ಮರಾಗುತ್ತಾಾರೆ ಎಂಬು ಗುಬ್ಬಕ್ಕನ ಬಾಯಲ್ಲೇ ಹೇಳಿಸಿ ಕತೆ ಕೇಳುವ ಮಕ್ಕಳಲ್ಲಿ ಆ ಮಹಾತ್ಮರ ಬಗೆಗೆ ತಿಳುವಳಿಕೆಯ ಬೀಜ ಬಿತ್ತುವ ಕೆಲಸ ಮಾಡುತ್ತಾಾರೆ. ಇದಲ್ಲವೇ ಒಬ್ಬ ಸೂಕ್ಷ್ಮ ಮನಸ್ಶಾಾಸ್ತ್ರಜ್ಞನಿಗೆ ಇರಬೇಕಾದ ವಿವೇಕ! ಅವರು ದಾರ್ಶನಿಕ ಕವಿಯಾಗುವ ಸೂಚನೆಗಳು ಲಭ್ಯವಾಗುವುದು ಇಲ್ಲಿಯೇ. ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ ಕುವೆಂಪು ಅವರ ಸಮಗ್ರ ಸಾಹಿತ್ಯದ ಊರ್ಧ್ವಮುಖೀ ಬೆಳವಣಿಗೆಗೂ ಈ ಕತೆ ದಿಕ್ಸೂಚಿಯಾಗಿದೆ.
ಮೂರೂ ಗುಬ್ಬಚಿ ಮರಿ ಸ್ವಾಹಾ
ಮಳೆ ನಿಂತು ನಸುಕಾಯಿತು. ನರಿಗೆ ಕೂಗಿದರೂ ಕೇಳದ ಕಳ್ಳನಿದ್ರೆೆ. ಹಾಗಾಗಿ ಹುಲಿ ಕರಡಿ ಕಾಡಿಗೆ ಹೊರಟರು. ಯಾರೂ ಇರದ ಸಮಯ ನೋಡಿ ನರಿಯಣ್ಣ ಮೂರೂ ಗುಬ್ಬಚ್ಚಿಿ ಮರಿಗಳನ್ನು ನುಂಗಿ ಸಕ್ಕರೆಯ ಬಾಗಿಲನ್ನು ಮುರಿದು ಓಡಿದ. ಸಭ್ಯ ಸಮಾಜದ ಒಂದು ಒಪ್ಪಂದವನ್ನು ಮುರಿಯುವುದರ ಪ್ರತಿಮಾರೂಪಕವಾಗಿ ಬಾಗಿಲನ್ನು ಮುರಿಯುವ ಪ್ರಸಂಗವನ್ನು ಗುರುತಿಸಬಹುದು.
ಗುಬ್ಬಕ್ಕನಿಗೆ ಮಕ್ಕಳಿರದಿದ್ದು ಕಂಡು ದಿಗ್ಬ್ರಮೆ, ದುಃಖ. ಮರಿಗಳನ್ನು ತಿಂದಿದ್ದು ನರಿಯಣ್ಣ ಎಂಬುದು ತಿಳಿದು ಮೂವರೂ ನರಿಯಣ್ಣನನ್ನು ಹಿಡಿದುಕೊಳ್ಳುತ್ತಾಾನೆ. ಕರಡ್ಯಣ್ಣ ಗುದ್ದು ಹೇರುತ್ತಾಾನೆ. ಗುಬ್ಬಕ್ಕನ ಮೂರೂ ಮಕ್ಕಳು ಚೀ ಪೀ ಚೀ ಎನ್ನುತ್ತ ಹಾರಿ ಈಚೆಗೆ ಬರುತ್ತಾಾರೆ. ಆದರೆ ಮಕ್ಕಳ ಮೈ ತುಂಬ ನರಿಯಣ್ಣನ ಜೊಲ್ಲು ತುಂಬಿ ಹೋಗಿತ್ತು. ಗುಬ್ಬಕ್ಕ ಮರಿಗಳನ್ನು ಎತ್ತಿಿಕೊಂಡು ಹರ್ಷದಿಂದ ಹೋದಳು.
ತನ್ನ ಸವಿಯಾದ ಮನೆಗೆ, ಸ್ನಾಾನ ಮಾಡಿಸಿ, ಉಣ್ಣಲಿಕ್ಕಿಿ, ಮಲಗಿಸಲು! (ಪುಟ11). ಮಕ್ಕಳು ಸಿಕ್ಕ ಸಂಭ್ರಮದಲ್ಲಿ ಗುಬ್ಬಕ್ಕ ತಮಗೆ ಕೇಡು ಬಗೆದ ನರಿಯಣ್ಣನಿಗೆ ಛೀ ಥೂ ಎಂದೂ ಅನ್ನದೇ, ತನ್ನ ಮಕ್ಕಳ ಆರೈಕೆಗೆ ಮುಂದಾಗುವುದು ಹೆಣ್ಣಿಿನ ಸಾರ್ಥ್ಯಕ್ಯ ತಾಯ್ತನದಲ್ಲೇ ಎಂಬುದನ್ನು ನಿರೂಪಿಸುವ ಸಾಧನವಾಗಿ ಮತ್ತು ಮಕ್ಕಳ ಮೈ ತುಂಬ ನರಿಯಣ್ಣನ ಜೊಲ್ಲು ತುಂಬಿ ಹೋಗಿತ್ತು ಎನ್ನುವಲ್ಲಿ ಎಷ್ಟು ದಕ್ಕಿಿಸಿಕೊಂಡರೂ ಜೊಲ್ಲು ಸುರಿಸುತ್ತಲೇ ಇರುವ ನರಿಯ ದುರಾಸೆಯ ಸಂಕೇತವಾಗಿ ಚಿತ್ರಿಿಸುವ ಕುವೆಂಪು ಓರ್ವ ಸೂಕ್ಷ್ಮ ಕಲೆಗಾರನಾಗಿ ಹೊರಹೊಮ್ಮಿಿಬಿಡುತ್ತಾಾರೆ. ಕತೆಯ ಕೊನೆಯಲ್ಲಿ ಹುಲಿಯಣ್ಣನು ನರಿಯಣ್ಣನಿಗಿದ್ದ ಎರಡು ಕೋಡುಗಳನ್ನು ಶಿಕ್ಷೆಗಾಗಿ ಮುರಿದನು. ಕರಡ್ಯಣ್ಣನು ಇನ್ನು ಮೇಲೆ ನಿನ್ನ ಜಾತಿಗೆ ಕೋಡುಗಳಿರದೆ ಹೋಗಲಿ ಎಂದು ಶಾಪ ಕೊಟ್ಟನು. ಅಂದಿನಿಂದ ನರಿಯ ಜಾತಿಗೆ ಕೋಡಿಲ್ಲ (ಪುಟ11) ಎನ್ನುವುದರೊಂದಿಗೆ ಕತೆ ಕೊನೆಗೊಳ್ಳುತ್ತದೆ.
ಕೋಡು ಎನ್ನುವುದು ಪ್ರತಿಷ್ಠೆೆಯ ಸಂಕೇತ. ದುಷ್ಕಾಾರ್ಯ ಮಾಡಿದವರಿಗೆ ಕೋಡು ಹೊಂದುವ ಹಕ್ಕಿಿಲ್ಲ ಎಂದು ಪ್ರತಿಪಾದಿಸುವ ಇಲ್ಲಿನ ಪ್ರಾಾಣಿ ಪ್ರಪಂಚದಿಂದ ನಾಗರಿಕ ಸಮಾಜ ಪಾಠ ಕಲಿಯಬೇಕಿದೆ. ತಪ್ಪಿಿಗೆ ತಕ್ಕ ಶಿಕ್ಷೆಯಿಲ್ಲದುದರಿಂದಲೇ ಇಂದಿನ ಸಮಾಜದಲ್ಲಿ ಅಕೃತ್ಯಗಳು ವಿಜೃಂಭಿಸುತ್ತಿಿವೆ. ವಂಚಿಸಿದವರನ್ನು, ಅಪರಾಧ ಮಾಡಿದವರನ್ನು ಕಂಡು ದುಷ್ಟರನ್ನು ಕಂಡರೆ ದೂರ ಇರು ಎನ್ನುವಂತೆ ದೂರ ಕಾಯ್ದುಕೊಳ್ಳುವ ಹಾಗೆ ಎಚ್ಚರಿಸಲು ಸಾರ್ವಕಾಲಿಕವಾಗಿ ಉಳಿಯುವಂತಹ ಒಂದು ಶಿಕ್ಷೆಯ ಹಣೆಪಟ್ಟಿಿ ಹಾಕಿ ಮುಗ್ಧರನ್ನು ಕಾಪಾಡುವ ಒಂದು ಹೊಸ ತಂತ್ರಗಾರಿಕೆಯನ್ನು ನರಿಗಳಿಗೇಕೆ ಕೋಡಿಲ್ಲ ಕತೆ ಸಮಾಜಕ್ಕೆೆ ಕೊಡುಗೆಯಾಗಿ ನೀಡಿದೆ.
ಇಂತಹ ಒಳಹೊಳಹುಗಳಿಂದಲೇ 100 ವರ್ಷಗಳಾದರೂ ಈ ಕತೆ ತನ್ನ ಅಸ್ತಿಿತ್ವವನ್ನು ಕಾಪಾಡಿಕೊಂಡು ಬಂದಿರುವುದು.
9844498432, 9483531777