Sunday, 15th December 2024

ಪರಿಸರದ ನಾಶ ಎಂದರೆ ಮನುಕುಲದ ನಾಶ !

ಗ.ನಾ.ಭಟ್ಟ

ಇಂದು ಪರಿಸರ ದಿನಾಚರಣೆ

ಪರಿಸರ ದಿನವನ್ನು ಜೂನ್ ೫ ರಂದು ಆಚರಿಸುವುದು ಈಚಿನ ವರ್ಷಗಳಲ್ಲಿ ರೂಢಿಗೆ ಬಂದ ಸಂಪ್ರದಾಯ. ನಮ್ಮ ಪರಿಸರ, ಪ್ರಕೃತಿಯನ್ನು ರಕ್ಷಿಸಬೇಕು, ಭಕ್ಷಿಸಬಾರದು ಎಂಬುದರ ಕುರಿತು ಎಲ್ಲರಲ್ಲೂ ತಿಳಿವನ್ನು ಮೂಡಿಸುವುದು ಈ ದಿನದ ಉದ್ದೇಶ. ಎಲ್ಲಾ ನಾಗರಿಕರಲ್ಲೂ, ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಪ್ರಾಮುಖ್ಯತೆಯ ಕುರಿತಾದ ಅರಿವನ್ನು ಮೂಡಿಸು ವುದು ಈ ಕಾಲಮಾನದ ಆದ್ಯತೆಯಾಗಬೇಕಾಗಿದೆ. ಈಗ ಉಳಿದಿರುವ ಪರಿಸರವನ್ನು ರಕ್ಷಿಸಿ ಕೊಳ್ಳಲು ಎಲ್ಲರೂ ಕೈಹಾಕಬೇಕು. ಆದರೆ ಪರಿಸರದ ಕುರಿತಾದ ಕಾಳಜಿಯು ಇಂದು ಘೋಷಣೆಯ ಮಟ್ಟಕ್ಕೆ ಸೀಮಿತ ವಾಗಿದೆ; ಪರಿಸರ ದಿನವನ್ನು ಆಚರಿಸುವ ಪದ್ಧತಿ ಸಾಕಷ್ಟು ಪ್ರಚಾರ ಪಡೆದಿದ್ದರೂ, ಅದನ್ನು ನಿಜಾರ್ಥದಲ್ಲಿ ಆಚರಿಸು ವವರು ಬಹಳ ಕಡಿಮೆ. ಪರಿಸರ ರಕ್ಷಣೆಯು ನಮ್ಮ ಆದ್ಯ ಕರ್ತವ್ಯವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಭೂಮಿಯು ಮನುಷ್ಯನಿಗೆ ವಾಸಯೋಗ್ಯವಾಗಿ ಉಳಿಯುವುದಿಲ್ಲ. ನಮ್ಮ ಸ್ವಾರ್ಥಕ್ಕಾಗಿಯಾದರೂ ಪರಿಸರ ರಕ್ಷಿಸು ವುದು ಮುಖ್ಯ ಎನಿಸಿದೆ. 

ಐದುನೂರು ವರ್ಷ ಹಳೆಯದಾದ ಮರವೊಂದನ್ನು ಸಸ್ಯನಾಶಕ ದ್ರವವನ್ನು ಬಳಸಿ ಕೊಂದ ಅಪರಾಧಕ್ಕಾಗಿ ಅಮೆರಿಕೆಯ ಪಾಲ್ ಕಲೆನ್ ಅನ್ನವುವವನಿಗೆ ಜಿಲ್ಲಾ ನ್ಯಾಯಾಲಯ ಒಂಭತ್ತು ವರ್ಷ ಸಜೆ ಹಾಗೂ ಒಂದು ಸಾವಿರ ಡಾಲರ್ ದಂಡ ವಿಧಿಸಿದೆ.
ಸಸ್ಯನಾಶಕವನ್ನು ಮರದ ಮೇಲೆ ಸುರಿದದ್ದುಗೊತ್ತಾದೊಡನೆಯೇ ಕಲೆನ್ನನನ್ನು ಬಂಧಿಸಲಾಗಿದೆ. ಇಪ್ಪತ್ತು ಸಾವಿರ ಡಾಲರುಗಳ ಜಾಮೀನು ಒದಗಿಸಲಾಗದ ಪ್ರಯುಕ್ತ ಅವನಿನ್ನೂ ಜೈಲಲ್ಲೇ ಇದ್ದಾನೆ. ಅಮೆರಿಕೆಯ ಟೆಕ್ಸಸ್ ರಾಜ್ಯದ ಹೌಸ್ಟನ್ ಎಂಬಲ್ಲಿ ನಡೆದ ಘಟನೆ ಇದು. ಈ ಕೃತ್ಯದಿಂದ ಆ ಹೆಮ್ಮರದ ಅರ್ಧಕ್ಕೂ ಹೆಚ್ಚು ಭಾಗ ಸತ್ತುಹೋಗಿದೆ. ಈ ಒಂದು ವರ್ಷದಲ್ಲಿ ಮರವನ್ನು ಉಳಿಸಲು ಅಗತ್ಯವಾದ ಕ್ರಮವನ್ನು ಕೈಗೊಳ್ಳುವ ಸಲುವಾಗಿ ಹೌಸ್ಟನ್ ನಗರಪಾಲಿಕೆಗೆ ಒಂದು ಲಕ್ಷಕ್ಕೂ ಹೆಚ್ಚು ಡಾಲರುಗಳ ದೇಣಿಗೆ ಬಂದಿದೆ

ಆದರೇನು? ಮರ ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ. ಆ ಮರಕ್ಕೆ ಬೇಗನೆ ಪೂರ್ಣ ಆರೋಗ್ಯ ಲಭಿಸಲೆಂದು ಹಾರೈಸಿ ಸಾವಿರಾರು ಜನ ವೃಕ್ಷಪ್ರೇಮಿಗಳು ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನಿಡುತ್ತಿದ್ದಾರೆ. ಮರಕ್ಕೆ ದೀರ್ಘಾ ಯುಸ್ಸನ್ನು ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದು ಅಮೆರಿಕದಲ್ಲಿ ಪ್ರಕಟಗೊಂಡ ಸುದ್ದಿ. ಮನುಷ್ಯನೊಬ್ಬನಿಂದ ಕೊಲೆಗೀಡಾದ ಮರವೊಂದರ ಪಾಡು ಕಂಡು ಜನಸಾಮಾನ್ಯರೂ ಮರುಗಿದ ಸನ್ನಿವೇಶ.

ಈ ಸುದ್ದಿಯೊಡನೆ ಹೋಲಿಸಲು ತಕ್ಕುದಾದ ನಮ್ಮ ದೇಶದ ಈಚಿನ ಸುದ್ದಿ ಯೊಂದು ಹೀಗಿದೆ “ಬೆಂಗಳೂರು ಮಹಾನಗರದಲ್ಲಿ ಒಂದು ಹಳೆಯ ಆಲದ ಮರ. ಅದರ ಪಕ್ಕದಲ್ಲಿಯೇ ಗಣ್ಯವ್ಯಕ್ತಿಯೊಬ್ಬರ ಮನೆ. ಆ ಮರದಿಂದ ತನಗೆ ತೊಂದರೆಯಾಗುತ್ತಿದೆ ಯೆಂದು ಪ್ರಭಾವೀ ಗಣ್ಯರ ದೂರು. ಸಂಬಂಧಪಟ್ಟ ಆಡಳಿತ ವರ್ಗದವರು ಈಗ ಆ ಮರವನ್ನು ಕಡಿದುಹಾಕಲು ಯೋಚಿಸುತ್ತಿದ್ದಾರೆ. ಇಷ್ಟರಲ್ಲಿಯೇ ಆ ಮರವನ್ನು ಕಡಿದು ಉರುಳಿಸಿದ್ದರೆ ಆಶ್ಚರ್ಯವೇನೂ ಇಲ್ಲ!” ಅಮೆರಿಕದಲ್ಲಿ ಸಾಯುತ್ತಿರುವ ಮರವನ್ನು ಉಳಿಸುವ ಸಲುವಾಗಿ ಜನರು ಪ್ರಾರ್ಥನೆ ಮಾಡುತ್ತಾರೆ. ಮಾತ್ರವಲ್ಲ ತಮ್ಮ ಕೈಲಾದುದನ್ನೆಲ್ಲ ಮಾಡುತ್ತಾರೆ. ಇದು ಕೇವಲ ಇನ್ನೂರು ವರ್ಷಗಳ ಸಂಸ್ಕೃತಿ ಹೊಂದಿರುವ ಅಮೆರಿಕ ದೇಶದಲ್ಲಿ!

ಮನೆಯ ನೋಟಕ್ಕೆ ತೊಂದರೆಯಾಗುತ್ತಿದೆ ಎಂಬುದನ್ನು ತಿಳಿಯುವ ಗೊಡವೆಗೇ ಹೋಗದೆ ಅನೇಕ ಕಾಲ ಬದುಕಬಹುದಾದ ಮರವನ್ನು ಕತ್ತರಿಸಲು ಮುಂದಾಗುತ್ತಾರೆ, ಎರಡು ಸಾವಿರ ವರ್ಷಗಳಿಗೂ ಮಿಕ್ಕ ಸಂಸ್ಕೃತಿಯ ನಮ್ಮ ದೇಶದಲ್ಲಿ!” ಮೂವತ್ತೆ ರಡು ವರ್ಷಗಳ ಹಿಂದೆ ಡಾ. ಹಾ.ಮಾ.ನಾಯಕರು ತಮ್ಮ ಸಂಪಣ ಎಂಬ ಚಿಂತನ ಪ್ರಬಂಧ ಗಳ ಚಿಕ್ಕ ಕೃತಿಯಲ್ಲಿ ಉಲ್ಲೇಖಿಸಿದ ಬರಹವಿದು. ಇದರಲ್ಲಿ ಎರಡು ದೇಶಗಳ ಭಿನ್ನವಾದ ದೃಷ್ಟಿಕೋನಗಳು ವ್ಯಕ್ತವಾಗಿವೆ.

ನಮ್ಮಲ್ಲಿ ಮರ ಕತ್ತರಿಸುವುದು, ಕಳ್ಳಸಾಗಾಣಿಕೆ ಮಾಡುವುದು ಒಂದು ಸಾಮಾನ್ಯ ವಿಚಾರ. ಮರಗಳ ತೊಗಟೆ ತೆಗೆದು, ಚಕ್ಕೆ ಎತ್ತಿ, ಸೊಪ್ಪು ಕಿತ್ತು, ಕೊಂಬೆ ಕಡಿದು ನಿಧಾನವಾಗಿ ಮರಗಳನ್ನು ಸಾಯಿಸುವುದು ನಮ್ಮಲ್ಲಿ ಮಾಮೂಲು ವಿಷಯ. ನಿತ್ಯ ಬದುಕಿನಲ್ಲಿ ನಾವು ಯಾವುದೇ ಪಾಪಪ್ರಜ್ಞೆಯಿಲ್ಲದೆ ಸಸ್ಯ- ಗಿಡ- ಮರಗಳನ್ನು ಬಡಿ ಯುತ್ತೇವೆ, ಕಡಿಯುತ್ತೇವೆ, ಕತ್ತರಿಸಿ ವಿಗ್ರಹಗಳ ಪಾದಕ್ಕೆ ಚೆಲ್ಲುತ್ತೇವೆ. ಕೊಚ್ಚಿ ಯಜ್ಞೇಶ್ವರನಿಗೆಅರ್ಪಿಸುತ್ತೇವೆ. ಕಚ್ಚಿ ತಿನ್ನುತ್ತೇವೆ, ಕುದಿಸಿ ಕುಡಿಯುತ್ತೇವೆ.

ಸಸ್ಯ-ಗಿಡ-ಮರಗಳಿಗೂ ಪ್ರಜ್ಞೆಯಿದೆ, ಅವೂ ನೋವು- ನಲಿವನ್ನು ಅನುಭವಿಸುತ್ತವೆ ಎಂದು ಜಗದೀಶ್ ಚಂದ್ರಬೋಸ್
ಹೇಳಿ ದ್ದನ್ನು ಮರೆತುಬಿಡುತ್ತೇವೆ. ಅವಕ್ಕೂ ನೆನಪಿನ ಶಕ್ತಿಯಿದೆ; ಪರಾಗಸ್ಪರ್ಶದ ಮೂಲಕ ಅವೂ ಲೈಂಗಿಕಕ್ರಿಯೆ ನಡೆಸುತ್ತವೆ
ಅನ್ನವುದು ನಮ್ಮ ಅರಿವಿಗೇ ಬರುವುದಿಲ್ಲ. ಕೆಲವು ಗಿಡಗಳ ಎಲೆಗಳನ್ನು ಕತ್ತರಿಸಿದರೆ ಅವು ಒಂದು ವಿಶಿಷ್ಟ ಪರಿಮಳವನ್ನು
ಹೊರಕ್ಕೆ ಸೂಸಿ ಸುತ್ತಲಿನ ಸಸ್ಯಗಳಿಗೆ ಸಂದೇಶವನ್ನು ರವಾನೆ ಮಾಡುತ್ತವೆ ಅನ್ನವುದೇ ನಮಗೆ ಗೊತ್ತಿಲ್ಲ.

ಲಕ್ಷ ಲಕ್ಷ ಬೆಲೆಬಾಳುವ ಮರ
ಒಂದು ಮರದ ಬೆಲೆ ಎಷ್ಟು ಎಂದು ಕೇಳಿದರೆ ಅದರ ದಪ್ಪ, ಗಾತ್ರ, ಎತ್ತರ, ಜಾತಿ, ಅದರ ಉಪಯುಕ್ತತೆ ಮೊದಲಾದುವನ್ನು
ಪರಿಗಣಿಸಿ ಅದರ ಬೆಲೆಯನ್ನು ಕಟ್ಟುತ್ತೇವೆ. ಆದರೆ ಸಸ್ಯವಿಜ್ಞಾನಿಯೊಬ್ಬ ಹಾಗೆ ಬೆಲೆ ಕಟ್ಟುವುದಿಲ್ಲ. ಅವನ ಪ್ರಕಾರ ಅಂತಹ
ಮರವೊಂದರ ಬೆಲೆ ಹದಿನಾರು ಲಕ್ಷ ರುಪಾಯಿಗಿಂತಲೂ ಹೆಚ್ಚು. ಒಂದು ಮರ ಉತ್ಪಾದಿಸುವ ಆಮ್ಲಜನಕದ ಬೆಲೆ ಎರಡೂವರೆ ಲಕ್ಷ; ಅದು ಹೀರಿಕೊಳ್ಳುವ ಇಂಗಾಲಜನಕದ ಬೆಲೆ ಐದು ಲಕ್ಷ; ಮಣ್ಣಿನ ಸವೆತ ತಡೆಯುವುದರ ಬೆಲೆ ಎರಡೂವರೆ ಲಕ್ಷ; ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಿ ಪ್ರವಾಹವನ್ನು ತಡೆಗಟ್ಟುವುದರ ಬೆಲೆ ಮೂರು ಲಕ್ಷ; ಆಹಾರ ಮತ್ತು ಗೊಬ್ಬರದ ಬೆಲೆ ಅರ್ಧ ಲಕ್ಷ; ಪಶುಪಕ್ಷಿಗಳಿಗೆ, ಕ್ರಿಮಿಕೀಟಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡುವುದರ ಬೆಲೆ ಎರಡೂವರೆ ಲಕ್ಷ. ಇಂಥಾದ್ದು ವಿಜ್ಞಾನಿಗಳು, ಪರಿಸರತಜ್ಞರು ಹೇಳುವ ಮಾತು. ಆದರೆ ಮರವೊಂದರಿಂದ ನಮಗೇನು ಪ್ರಯೋಜನ? ಅದರಿಂದ ನಮಗೆಷ್ಟು ಲಾಭ? ಅನ್ನವುದರ ಕಡೆಯೇ ದೃಷ್ಟಿಯಿರುವ ನಮಗೆ ಇಂಥಾದ್ದೆಲ್ಲ ತಲೆಗೇ ಹೋಗುವುದಿಲ್ಲ.

ವೃಕ್ಷ ದೇವತೆಗೆ ನಮಸ್ಕಾರ
“ನಮೋ ವೃಕ್ಷೇಭ್ಯಃ; ಹರಿಕೇಶೇಭ್ಯಃ”-“ಹಸುರೆಲೆಗಳಿಂದ ಕಂಗೊಳಿಸುತ್ತಿರುವ, ವೃಕ್ಷರೂಪದ ರುದ್ರನಿಗೆ ನಮಸ್ಕಾರ; ಎಂದು ಪರಶಿವನಿಗೆ ಅವನ ಪೂಜೆಯ ಸಂದರ್ಭದಲ್ಲಿ ಅಪಾರ ಗೌರವ ಸಲ್ಲಿಸುವ ನಾವು ನಿತ್ಯಬದುಕಿನಲ್ಲಿ ಅದನ್ನು ನೆನಪಿಸಿಕೊಳ್ಳುವು ದಿಲ್ಲ. ಪ್ರಕೃತಿಯೇ ದೇವರು, ಪರಿಸರವೇ ನಮ್ಮ ಜೀವರಕ್ಷಕ ಧಾತು ಅನ್ನವುದು ನಮ್ಮ ಮನಃಪಟಲದಲ್ಲಿ ಸದಾ ನೆಲೆಸುವುದಿಲ್ಲ. ವಿಶ್ವ ಪರಿಸರ ದಿನವೆಂದರೆ ಜೂನ್ ಐದರಂದು ಎಲ್ಲೋ ಒಂದು ಗಿಡವನ್ನು ನೆಟ್ಟು ಅಥವಾ ಒಂದು ಗಿಡವನ್ನು ಯಾರಿಗೋ ಗಿಫ್ಟ್ ಕೊಟ್ಟು ಫೋಟೋ ಹೊಡೆಸಿಕೊಂಡು ಅದು ಪತ್ರಿಕೆಯಲ್ಲಿ ರಾರಾಜಿಸುವಂತೆ ಮಾಡುವುದೇ ಪರಿಸರ ದಿನವೆಂದು ಭಾವಿಸುತ್ತೇವೆ.

ನಿಜವಾದ ಪರಿಸರದ ದಿನವೆಂದರೆ, ಅದರ ಬಗೆಗಿನ ಕಾಳಜಿಯೆಂದರೆ- ಹತ್ತು ಮರಗಳನ್ನು ಕಡಿದರೆ ನೂರು ಗಿಡಗಳನ್ನು ನೆಟ್ಟು ಬೆಳೆಸುವ ಮನೋಭಾವ ಮತ್ತು ಅದರ ಬಗ್ಗೆ ತೆಗೆದುಕೊಳ್ಳುವ ಹೊಣೆಗಾರಿಕೆಯು ಪರಿಸರ ದಿನವೆನಿಸಿಕೊಳ್ಳುತ್ತದೆ. ಪರಿಸರ ದಿನವೆಂದರೆ ಬರೀ ಗಿಡಮರಗಳನ್ನು ನೆಡುವುದಲ್ಲ. ಅದರ ವ್ಯಾಪ್ತಿ ಇನ್ನೂ ಹೆಚ್ಚು. ಪರಿಸರವೂ ಕೂಡಾ ಇಂದು ವಿಜ್ಞಾನದ ಕಕ್ಷೆಗೆ ಸೇರಿದೆ. ಅದನ್ನು ಇಕಾಲಜಿ ಎಂದು ಕರೆಯುತ್ತಾರೆ. ಇಕಾಲಜಿ ಎಂದರೆ ಮನೆಯ ಅಧ್ಯಯನ ಎಂದು ಅರ್ಥ. ಭಾರತೀಯರ ವಿಶಾಲ ಕಲ್ಪನೆಯಂತೆ “ವಸುಧೈವ ಕುಟುಂಬಕಮ್” ಅಂತ ತೆಗೆದುಕೊಂಡರೆ ಇಡೀ ಭೂಮಂಡಲವೇ ನಮ್ಮ ಮನೆಯಾಗುತ್ತದೆ.

ಆಗ ಅದರ ವ್ಯಾಪ್ತಿ ಅಗಾಧವೂ, ವಿಶಾಲವೂ ಆಗುತ್ತದೆ. ಆ ನೆಲೆಯಲ್ಲಿ ಮನೆಯೇ ಒಂದು ಪರಿಸರ. ಈ ಪರಿಸರದಲ್ಲಿ ತಂದೆ-ತಾಯಿ, ಅಣ್ಣ, ತಂಗಿ, ಅಕ್ಕ, ತಮ್ಮ, ತಾತ, ಅಜ್ಜಿ ಎಲ್ಲರೂ ಸೇರುತ್ತಾರೆ. ಮನೆಯಂಗಳದಲ್ಲಿ ಇರುವ ಸಣ್ಣಪುಟ್ಟ ಗಿಡಗಳು, ಹೊ ದೋಟಗಳು, ಸೊಳ್ಳೆ, ನೊಣ, ಜಿರಳೆ, ಹಲ್ಲಿಗಳು, ನಮ್ಮ ಪ್ರೀತಿಯ ನಾಯಿ-ಬೆಕ್ಕು, ಗಾಳಿ, ಬೆಳಕು, ನೀರು, ಮಣ್ಣು, ಶಾಖ ಎಲ್ಲವೂ ಪರಿಸರಕ್ಕೇ ಸೇರಿಕೊಳ್ಳುತ್ತವೆ. ಇನ್ನೂ ವಿಸ್ತತವಾಗಿ ಯೋಚಿಸುವುದಾದರೆ ನದೀ, ಪರ್ವತ, ಸರೊವರ, ಅರಣ್ಯ, ಹುಲಿ, ಸಿಂಹ, ಆನೆ, ಜಿಂಕೆ ಎಲ್ಲವೂ ಕೂಡಾ ಪರಿಸರದ ಅವಿಭಾಜ್ಯ ಅಂಗಗಳೇ ಆಗುತ್ತವೆ. ಇಂತಹ ಪರಿಸರವನ್ನು ನಾವು ಮಲಿನ ಗೊಳ್ಳದಂತೆ ಸಂರಕ್ಷಿಸುವುದು ಹೇಗೆ? ಇದರ ಬಗ್ಗೆ ನಾವು ಯೋಚಿಸಬೇಕಿದೆ ನಾವು.

ಮೊದಲಿಗೆ ನಾವು ಯಾವ ನದಿಗಳನ್ನು ಪವಿತ್ರ, ಪರಮ ಪಾವನ ಎಂದು ಭಾವಿಸುತ್ತೇವೋ ಅಂತಹ ನದಿಗಳ ಬಗ್ಗೆ ಒಂದು ಇಣುಕು ನೋಟ ಹಾಯಿಸೋಣ. ನದಿಗಳಿಗೂ ನಮ್ಮ ಹಾಗೆಯೇ ಶೈಶವ, ಬಾಲ್ಯ, ಯೌವನ ಮತ್ತು ಮುಪ್ಪು ಎಂಬ ಅವಸ್ಥೆಗಳಿವೆ ಅನ್ನುವುದೇ ಹಲವರಿಗೆ ಗೊತ್ತಿಲ್ಲ. ನದಿ ತನ್ನ ಉಗಮಸ್ಥಾನದಿಂದ ತುಸು ದೂರದವರೆಗೆ ಮೆಲ್ಲಗೆ ಮಗುವಿನಂತೆ ಕುಣಿದು, ಕುಪ್ಪಳಿಸುತ್ತಾ ಸಣ್ಣ ತೊರೆಯಾಗಿ ಸಾಗುತ್ತದೆ. ಅನಂತರ ಬೆಳೆಯುತ್ತಾ ಅಪಾರ ಶಕ್ತಿಯೊಂದಿಗೆ ಧುಮ್ಮಿಕ್ಕುತ್ತಾ, ಆಳ ಕೊರಕಲು ಗಳನ್ನು ನಿರ್ಮಿಸುತ್ತಾ, ಕಲ್ಲುಬಂಡೆಗಳನ್ನು ಉರುಳಿಸುತ್ತಾ, ಮರಳಿನ ರಾಶಿಯನ್ನು ತಳ್ಳುತ್ತಾ ಭೋರ್ಗರೆಯುತ್ತಾ ಪ್ರವಾಹ ರೂಪದಲ್ಲಿ ಹರಿಯತೊಡಗುತ್ತದೆ.

ಇದು ಅದರ ಯೌವನಾವಸ್ಥೆ. ಅದೇ ನದಿ ಸಮತಟ್ಟಾದ ಪ್ರದೇಶವನ್ನು ತಲುಪಿದಾಗ ತನ್ನ ನಾಲ್ಕನೆಯ ಅವಸ್ಥೆಯುನ್ನು ತಲುಪುತ್ತದೆ. ಆಗ ಅದು ಗಂಭೀರವಾಗಿ ಅಸಂಖ್ಯ ಜೀವಜಂತುಗಳನ್ನು ಪೋಷಿಸುತ್ತಾ ನಿಧಾನವಾಗಿ ಹರಿಯುತ್ತಾ ಮುಪ್ಪಡರಿ ಸಮುದ್ರವನ್ನು ಸೇರುತ್ತದೆ. ಇವೇ ಅದರ ಆ ನಾಲ್ಕು ಅವಸ್ಥೆಗಳು. ಈ ಅವಸ್ಥೆಗಳ ಪರಿಚಯದಲ್ಲಿ ಒಂದು ಕಾವ್ಯಾತ್ಮಕ ಸುಂದರ ವರ್ಣನೆ ಇದೆ. ಮನಸ್ಸಿಗೆ ಮುದ ಕೊಡುವ ಆಕರ್ಷಣೆಯಿದೆ. ಆದರೆ ಅದು ಮುಖ್ಯವಲ್ಲ. ಅವುಗಳ ಹಿಂದೆ ಒಂದು ವಿಷಾದದ ಅಧ್ಯಾಯವೂ ಇದೆ.

ನೀರಿನ ಶಕ್ತಿಯ ಬಳಕೆ
ನದಿಗಳ ಯೌವನದ ಉಕ್ಕುವ ಶಕ್ತಿಗಳನ್ನು ಬಳಸಿಕೊಂಡು ನಾವು ವಿದ್ಯುದುತ್ಪಾನೆಗೆ ತೊಡಗುತ್ತೇವೆ. ನದಿಗಳಿಗೆ ಆಣೆಕಟ್ಟುಗಳನ್ನು
ನಿರ್ಮಿಸಿ ನದಿಯ ನೀರನ್ನು ಶೇಖರಿಸುತ್ತೇವೆ. ಆದರೆ ಅದರ ಅಡ್ಡಪರಿಣಾಮಗಳನ್ನು ನಾವು ಲೆಕ್ಕಿಸುವುದಿಲ್ಲ. ಆಣೆಕಟ್ಟನ್ನು
ನಿರ್ಮಿಸಿದ ಕೂಡಲೆ ನೀರಿನ ಹರಿವು ಸ್ಥಗಿತಗೊಳ್ಳುತ್ತದೆ. ವಿದ್ಯುದುತ್ಪಾದನೆಗೆ ತೊಡಗಿದ ಮೇಲಂತೂ ನೀರು ಹರಿಯುವುದೇ ಇಲ್ಲ. ನದಿಯ ಕೆಳಭಾಗದಲ್ಲಿ ಇರುವ ಜಲಚರಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತವೆ. ಆಗ ಅವು ಬದುಕುವ ಆಸೆಯನ್ನು ಬಿಡಬೇಕಾಗುತ್ತವೆ. ಅಷ್ಟು ಮಾತ್ರವಲ್ಲ.

ಸ್ವಲ್ಪವೇ ಸ್ವಲ್ಪ ಪ್ರವಹಿಸುವ ನೀರಿಗೆ ಅಲ್ಲಿಯ ಕೊಳಕನ್ನು ತಳ್ಳುವ ಶಕ್ತಿಯೇ ಇರುವುದಿಲ್ಲ. ಇಂತಹ ಅಪಾಯಗಳಿಂದ ತಪ್ಪಿಸಿ ಕೊಳ್ಳುವುದಕ್ಕೆ ಸರಕಾರವೇ ಒಂದು ಕಾನೂನನ್ನು ರಚಿಸಿದೆ. ಯಾವುದೇ ಆಣೆಕಟ್ಟನ್ನು ಕಟ್ಟುವಾಗಲೂ ಶೇ. ೩೦ರಷ್ಟು ನೀರು
ಜೀವಧಾರೆಯಾಗಿ ಸದಾಕಾಲ ಹರಿಯುವಂತೆ ನೋಡಿಕೊಳ್ಳಬೇಕು ಎಂಬುದೇ ಆ ಕಾನೂನು. ಈ ಕಾನೂನನ್ನು ಇ – ಎಂದು ಕರೆಯುತ್ತಾರೆ. ಹಾಗೆಂದರೆ ಇಕಾಲಜಿಕಲ್ ಹರಿವು ಎಂದು ಅರ್ಥ. ಇಂತಹ ಕಾನೂನುಗಳನ್ನು ಪಾಲಿಸುವವರು ಯಾರು? ಕಾನೂನನ್ನು ಉಲ್ಲಂಘಿಸಿ ನಡೆದುಕೊಳ್ಳುವುದೇ ನಮ್ಮ ಜೀವನ ಪಾಲಿಸಿ ಅಂದುಕೊಂಡಿದ್ದೇವೆ ನಾವು.

ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದೆಂದರೆ ನಮಗೆ ಸಂತಸದ ಸಂಗತಿ. ಹೆಲ್ಮೆಟ್ ಹಾಕಿಕೊಳ್ಳಿ ಎಂದರೆ ನಾವು ಹಾಕಿ ಕೊಳ್ಳುವುದಿಲ್ಲ; ಬೆಲ್ಟ್ ಕಟ್ಟಿಕೊಳ್ಳಿ ಎಂದರೆ ಅದನ್ನು ನಾವು ಕಟ್ಟಿಕೊಳ್ಳುವುದಿಲ್ಲ. ರಸ್ತೆ ನಿಯಮವನ್ನು ಪಾಲಿಸಿ ಎಂದರೆ ಅದು
ನಮ್ಮ ಗೌರವಕ್ಕೆ ಕುಂದು ಎಂದು ಭಾವಿಸುತ್ತೇವೆ. ಕಸವನ್ನು ಕಸದ ಬುಟ್ಟಿಗೇ ಎಸೆಯಿರಿ ಎಂದರೆ ಅದಾಗದು ನಮಗೆ. ಸ್ವಚ್ಛವಾದ ಜಾಗದಲ್ಳೇ ಅದನ್ನು ಎಸೆದು ಅದನ್ನು ಗಲೀಜು ಮಾಡಿದೆರೇನೇ ನಮಗೆ ಸಂತೋಷ.

ಹಲವು ರೀತಿಯ ಮಾಲಿನ್ಯ
ಇಂದು ಪರಿಸರ ಮಾಲಿನ್ಯಗಳಿಗೆ ಕೊನೆ ಮೊದಲಿಲ್ಲ. ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ, ತ್ಯಾಜ್ಯಮಾಲಿನ್ಯ
ಹೀಗೆ ಹಲವು ಮಾಲಿನ್ಯಗಳಿವೆ. ಇವನ್ನು ನಿವಾರಿಸುವಲ್ಲೂ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅವನ್ನು ಅನುಸರಿಸಿ ನಾವು ಮಾಲಿನ್ಯಗಳನ್ನು ತಡೆಗಟ್ಟಬಹುದು. ಜೊತೆಗೆ ವೈಯಕ್ತಿಕವಾಗಿಯೂ ನಾವು ಪರಿಸರಮಾಲಿನ್ಯ ನಿವಾರಣೆಗೆ ತೊಡಗ ಬಹುದು.

ಅದಕ್ಕೊಂದು ಉದಾಹರಣೆ- ಮಹಾರಾಷ್ಟ್ರದ ಅಕೋಲಾ ಎಂಬ ಸ್ಥಳದಲ್ಲಿ ಮೋರನಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ ಅಲ್ಲಿಯ ಆರು ಸಾವಿರಕ್ಕೂ ಅಧಿಕ ನಾಗರಿಕರು, ನೂರಕ್ಕೂ ಹೆಚ್ಚು ಓಉಔಗಳು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಎಲ್ಲರೂ ಸೇರಿ UZoಠಿಛಿ IZZಜಛಿಞಛ್ಞಿಠಿ ಅಭಿಯಾನದಡಿಯಲ್ಲಿ ಇಡೀ ನದಿಯನ್ನು ಸ್ವಚ್ಛಗೊಳಿಸಿದರು.

ನದಿ ಮತ್ತು ಅದರ ದಡದಲ್ಲೆಡೆ ಬಹಳಷ್ಟು ಹೊಲಸು, ಕಸಕಡ್ಡಿಗಳು ಎಲ್ಲೆಂದರಲ್ಲಿ ಚೆಲ್ಲಲಾಗಿತ್ತು. ನದಿಯ ತುಂಬಾ ಹುಲ್ಲು, ಜೊಂಡು ಬೆಳೆದಿದ್ದವು ಮತ್ತು ಇತರ ತ್ಯಾಜ್ಯಗಳು ಸೇರಿಕೊಂಡಿದ್ದವು. ಮೋರನಾ ನದಿ ಪೂರ್ಣ ಸ್ವಚ್ಛಗೊಳ್ಳುವವರೆಗೆ ಈ ಆಭಿಯಾನ ನಡೆಯಿತು. ಇದರಿಂದ ತಿಳಿದು ಬರುವುದೇನೆಂದರೆ-ವ್ಯಕ್ತಿಯೊಬ್ಬ ಅಥವಾ ಜನಸಮೂಹ ಏನನ್ನಾದರೂ ಮಾಡಲು ಸಂಕಲ್ಪತೊಟ್ಟರೆ ಯಾವುದೂ ಅಸಾಧ್ಯವಲ್ಲ ಅನ್ನವುದು. ಇಂತಹ ಸಂಕಲ್ಪಮನೋ ಭಾವ ದೇಶದೆಲ್ಲೆಡೆ ಹರಡಬೇಕಿದೆ.

ನರೇಂದ್ರ ಮೋದಿ ಪ್ರಧಾನಮಂತ್ರಿಯಾದಮೇಲೆ ದೇಶದೆಲ್ಲೆಡೆ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ನೀಡಲಾಯಿತು. ನಮಾಮಿ ಗಂಗೆ ಎಂಬ ಹೆಸರಡಿಯಲ್ಲಿ ಕಾಶೀ ಹಾಗೂ ಗಂಗಾ ನದಿಯ ಸ್ವಚ್ಛತೆಯೊಂದಿಗೆ ಆರಂಭವಾದ ಈ ಆಭಿಯಾನವು ಇಂದು ಜನರಲ್ಲಿ ಬಹುದೊಡ್ಡ ಜಾಗೃತಿಯನ್ನೇ ಮೂಡಿಸಿದೆ. ಕಸವನ್ನು ಕಸವೆಂದು ಪರಿಗಣಿಸದೆ ಅದನ್ನು ಒಂದು ಸಂಪತ್ತು ಎಂದು ಭಾವಿಸುವ ಪರಿಕಲ್ಪನೆಯೊಂದು ಆರಂಭಗೊಂಡಿತು. ಅದನ್ನೇ ಖಟ್ಝಜಿb UZoಠಿಛಿ ಎಂದು ಕರೆಯುತ್ತಾರೆ.

ಇಂದು ಭಾರತ ಸರಕಾರವು ರಾಜ್ಯ ಸರಕಾರದ ನೆರವಿನೊಂದಿಗೆ ಖಟ್ಝಜಿb UZoಠಿಛಿ ಮತ್ತು ಔಜಿಟ್ಠಿಜಿb UZoಠಿಛಿ ನ್ನು ಸಂಗ್ರಹಿಸಲು ನೀಲಿ ಮತ್ತು ಹಸಿರು ಬಣ್ಣದ ಡಬ್ಬಗಳನ್ನು ಉಪಯೋಗಿಸುತ್ತಿದೆ. ಒಂದರಲ್ಲಿ ಹಸಿ ತ್ಯಾಜ್ಯ ಇನ್ನೊಂದರಲ್ಲಿ ಒಣ ತ್ಯಾಜ್ಯ ಸಂಗ್ರಹಿಸುವುದು ಇದರ ಉದ್ದೇಶ. ಒಣ ಕಸವನ್ನು ನೀಲಿ ಡಬ್ಬದಲ್ಲೂ ಹಸಿ ಕಸವನ್ನು ಹಸಿರು ಡಬ್ಬದಲ್ಲೂ ಹಾಕಬೇಕು ಅನ್ನುವುದು ಸರಕಾರದ ನಿರ್ದೇಶನ. ಹೀಗೆ ಈ ನಿಯಮ ಮಾಡುವುದರಲ್ಲಿಯೂ ಒಂದು ಮಥಿ ತಾರ್ಥವಿದೆ. ಹೊಲದ ಬಣ್ಣ ಹಸಿರು. ಈ ಹಸಿ ಕಸವನ್ನು ಹೊಲದ ಫಲವತ್ತತೆಗೂ ಬಳಸಬಹುದು. ಅದನ್ನು ನೆನಪಿಸಿಕೊಂಡರೆ ಯಾವ ಕಸವನ್ನು ಯಾವುದರಲ್ಲಿ ಹಾಕಬೇಕು ಎಂಬುದು ನಮಗೆ ವೇದ್ಯವಾಗುತ್ತದೆ. ಇನ್ನು ಒಣ ಕಸದ ವಿಚಾರ.

ರದ್ದಿಪೇಪರು, ಕಾಗದದ ತುಂಡುಗಳು, ಹರಿದುಹಾಕಿದ ಚೂರುಗಳು, ಗಾಜು, ಲೋಹ, ಪ್ಲಾಸ್ಟಿಕ್, ಪಾಲಿಥಿನ್, ಮುರಿದುಹೋದ ಡಬ್ಬಿ ಮೊದಲಾದವು ಒಣ ಕಸವೆನಿಸಿಕೊಳ್ಳುತ್ತವೆ. ಇವನ್ನು ನೀಲಿ ಡಬ್ಬದಲ್ಲಿ ಹಾಕಬೇಕು. ಅನಂತರ ಅವನ್ನು ಒಂದೆಡೆ ಶೇಖರಿಸಿ, ಯಂತ್ರದಲ್ಲಿ ಪರಿವರ್ತಿಸಿ ಮರುಬಳಕೆ ಮಾಡುವುದನ್ನು ಕಾಣುತ್ತೇವೆ. ಇದು ಕಸವನ್ನು ನಿರ್ಮೂಲನ ಮಾಡುವ ಮತ್ತು
ಹೊಸ ಉಪಯುಕ್ತತೆಯಲ್ಲಿ ಬಳಸುವ ಪರಿಹಾರೋಪಾಯ. ಇಂತಹವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಇದೇನೋ ಸರಿ. ನಮ್ಮ ಹೊರ ಪರಿಸರವನ್ನು ನಿಯಂತ್ರಿಸಬಹುದು. ಆದರೆ ನಮ್ಮೊಳಗಿನ ಒಳ ಪರಿಸರವನ್ನು ನಿಯಂತ್ರಿಸುವುದು ಹೇಗೆ? ಅದನ್ನು ಶುದ್ಧಿಗೊಳಿಸುವುದು ಹೇಗೆ? ಈ ವಿಚಾರವನ್ನು ಇಂದು ಅರಿಯಬೇಕಾಗಿದೆ.

ಪರಿಸರ ದಿನಾಚರಣೆಯ ನಿಜವಾದ ಉದ್ದೇಶ ಸಾರ್ಥಕವಾಗಲು, ಪ್ರಕೃತಿಯ ಕುರಿತು, ಪರಿಸರದ ಕುರಿತು ಪ್ರಾಮಾಣಿಕ ಕಾಳಜಿ
ನಮ್ಮಲ್ಲಿ ಮೂಡಿಬರಬೇಕು. ನಮ್ಮ ಮಕ್ಕಳಿಗೆ ಪರಿಸರದ, ನಿಸರ್ಗದ ಪ್ರಾಮುಖ್ಯತೆಯನ್ನು ತಿಳಿಹೇಳುವ ಕೆಲಸ ಗಂಭೀರವಾಗಿ ಆಗಬೇಕು. ಈ ಪರಿಸರ ಆರೋಗ್ಯಪೂರ್ಣವಾಗಿದ್ದರೆ ಮಾತ್ರ, ನಾವು ಅಂದರೆ ಮಾನವ ಈ ಭೂಮಿಯ ಮೇಲೆ ಬದುಕಿ ಬಾಳಬಲ್ಲ
ಎಂಬುದನ್ನು ಮಕ್ಕಳು ದೊಡ್ಡವರು ಅರಿಯಬೇಕು. ಇದೇ ಇಂದಿನ ಪರಿಸರದ ದಿನದ ಆಶಯವಾಗಬೇಕು.